Site icon Vistara News

Kriti Sanon: ನಟಿ ಕೃತಿ ಸನೋನ್‌ ಡೇಟಿಂಗ್‌ ಮಾಡುತ್ತಿರುವ ಈ ಕಬೀರ್ ಬಹಿಯಾ ಯಾರು?

Kriti Sanon

ಕ್ರೂ, ಹಿರೊಪಂತಿ, ಮಿಮಿ, ದಿಲ್ವಾಲೆ, ಬರೇಲಿ ಕಿ ಬರ್ಫಿ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ (bollywood actress) ಕೃತಿ ಸನೋನ್ (Kriti Sanon) ಈಗ ಯುಕೆ ಮೂಲದ ಮಿಲಿಯನೇರ್ (UK based millionaire) ಜೊತೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ವದಂತಿಗಳು ಕೇಳಿ ಬರುತ್ತಿವೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಆಕೆಯ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾತರರಾಗಿರುತ್ತಾರೆ.

ಕಾರ್ತಿಕ್ ಆರ್ಯನ್, ಪ್ರಭಾಸ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಡೇಟಿಂಗ್‌ನಲ್ಲಿದ್ದರು ಎನ್ನುವ ವದಂತಿ ಇತ್ತಾದರೂ ಈ ಬಗ್ಗೆ ಕೃತಿ ಎಂದಿಗೂ ಪ್ರತಿಕ್ರಿಯಿಸಿರಲಿಲ್ಲ. ಇದೀಗ ಕೃತಿ ಮತ್ತೊಮ್ಮೆ ಡೇಟಿಂಗ್‌ನಲ್ಲಿರುವುದು ಸುದ್ದಿಯಾಗುತ್ತಿದ್ದಂತೆ ಆ ವ್ಯಕ್ತಿ ಯಾರು ಎನ್ನುವ ಕುತೂಹಲ ಕೃತಿ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಕಬೀರ್ ಬಹಿಯಾ ಯಾರು?

1999ರ ನವೆಂಬರ್‌ನಲ್ಲಿ ಜನಿಸಿದ ಕಬೀರ್ ಬಹಿಯಾ ಇಂಗ್ಲೆಂಡ್‌ನ ಮಿಲ್‌ಫೀಲ್ಡ್ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ ಅವರು ಯುಕೆ ಮೂಲದ ಉದ್ಯಮಿಯಾಗಿದ್ದು, ಲಂಡನ್‌ನ ರೀಜೆಂಟ್ಸ್ ಯೂನಿವರ್ಸಿಟಿಯಿಂದ ವ್ಯಾಪಾರ, ನಿರ್ವಹಣೆ, ಮಾರ್ಕೆಟಿಂಗ್ ಮತ್ತು ಸಂಬಂಧಿತ ಬೆಂಬಲ ಸೇವೆಗಳ ಕುರಿತು ಅಧ್ಯಯನ ಪೂರ್ಣಗೊಳಿಸಿದ್ದಾರೆ.


ಯುಕೆಯಲ್ಲಿ ಸೌಥಾಲ್ ಟ್ರಾವೆಲ್ ಎಂಬ ಪ್ರಮುಖ ಟ್ರಾವೆಲ್ ಕಂಪನಿಯನ್ನು ನಡೆಸುತ್ತಿರುವ ಕುಲ್ಜಿಂದರ್ ಬಹಿಯಾ ಅವರ ಮಗ ಕಬೀರ್. 2019ರ ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯ ಆಧರಿಸಿ ಹೇಳುವುದಾದರೆ ಕುಲ್ಜಿಂದರ್ ಮತ್ತು ಅವರ ಕುಟುಂಬವು 427 ಮಿಲಿಯನ್ ಪೌಂಡ್‌ಗಳ (ಸುಮಾರು 4590 ಕೋಟಿ ರೂ.) ನಿವ್ವಳ ಮೌಲ್ಯವನ್ನು ಹೊಂದಿದೆ. ಕಬೀರ್ ತನ್ನದೇ ಆದ ಟ್ರಾವೆಲ್ ಕಂಪನಿಯಾದ ವರ್ಲ್ಡ್‌ವೈಡ್ ಏವಿಯೇಷನ್ ​​ಮತ್ತು ಟೂರಿಸಂ ಲಿಮಿಟೆಡ್ ಅನ್ನು ಪ್ರಾರಂಭಿಸಿದ್ದು, 2021ರ ಜೂನ್ ನಿಂದ ಅದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಕಬೀರ್ ಉದ್ಯಮಿಯಾಗಿದ್ದರೂ ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಅವರ ನೆಚ್ಚಿನ ಫುಟ್‌ಬಾಲ್ ಕ್ಲಬ್ ಬೊರುಸ್ಸಿಯಾ ಡಾರ್ಟ್‌ಮಂಡ್ ಆಗಿದೆ. ಅವರು ಹಲವಾರು ಭಾರತೀಯ ಕ್ರಿಕೆಟಿಗರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ.

ಎಂ.ಎಸ್. ಧೋನಿ, ಹಾರ್ದಿಕ್ ಪಾಂಡ್ಯ ಅವರಿಗೂ ಪರಿಚಿತರು

ನತಾಸಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಅವರ ವಿವಾಹ ಸಮಾರಂಭದಲ್ಲಿ ಕಬೀರ್ ಭಾಗವಹಿಸಿದ್ದರು. ಅಲ್ಲದೇ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಕುಟುಂಬದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. 2024ರ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಧೋನಿ ಮತ್ತು ಅವರ ಪತ್ನಿ ಸಾಕ್ಷಿಯೊಂದಿಗೆ ಕಬೀರ್ ಕಾಣಿಸಿಕೊಂಡಿದ್ದರು. ಕಬೀರ್ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಇಬ್ಬರೂ ಕ್ರಿಕೆಟಿಗರೊಂದಿಗೆ ಅನೇಕ ಚಿತ್ರಗಳನ್ನು ಹೊಂದಿದ್ದಾರೆ.


ಕೃತಿ ಸನೋನ್ ಜೊತೆ ಡೇಟಿಂಗ್ ವದಂತಿ

ಕೃತಿ ಮತ್ತು ಕಬೀರ್ ಹೊಸ ವರ್ಷವನ್ನು ಒಟ್ಟಿಗೆ ಆಚರಿಸುತ್ತಿರುವಾಗ ಅವರ ನಡುವಿನ ಸಂಬಂಧದ ಬಗ್ಗೆ ವದಂತಿಗಳು ಪ್ರಾರಂಭವಾದವು. 2024ರ ಹೋಳಿ ಹಬ್ಬವನ್ನು ಕಬೀರ್ ಜೊತೆ ಕೃತಿ ನಡೆಸಿರುವುದಾಗಿ ಹೇಳುವ ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದು ನಟಿಯ ಅಭಿಮಾನಿಗಳು ಕುತೂಹಲ ಕೆರಳಿಸಿದೆ. ಕಬೀರ್‌ಗಿಂತ ಒಂಬತ್ತು ವರ್ಷ ಹಿರಿಯರಾದ ಕೃತಿ ತನ್ನ ಸಹೋದರಿ ನೂಪುರ್ ಮೂಲಕ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: OTT Releases: ಒಟಿಟಿಯಲ್ಲಿ ಈ ತಿಂಗಳು ಕಲ್ಕಿ, ಇಂಡಿಯನ್‌, ಟರ್ಬೊ ಜತೆಗೆ ಇನ್ಯಾವ ಹೊಸ ಚಿತ್ರ, ವೆಬ್‌ ಸಿರೀಸ್‌?

ಕೃತಿ ಸನೋನ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ವೇಳೆ ಕಬೀರ್ ಜೊತೆ ಪ್ರವಾಸ ನಡೆಸಿರುವುದಾಗಿ ಕೇಳಿ ಬಂದಾಗ ಅವರಿಬ್ಬರ ಡೇಟಿಂಗ್ ಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಸದ್ಯ ನಟಿ ಕೃತಿ ತನ್ನ ಸಹೋದರಿ ನೂಪುರ್ ಸನೋನ್ ಮತ್ತು ಸ್ನೇಹಿತರೊಂದಿಗೆ ಗ್ರೀಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದರಲ್ಲಿ ಅಭಿಮಾನಿಗಳು ಕೃತಿ ಮತ್ತು ಕಬೀರ್ ಒಟ್ಟಿಗೆ ಇರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಿದಾಡುತ್ತಿವೆ. ಇದನ್ನು ನೋಡಿರುವ ಅವರ ಅಭಿಮಾನಿಗಳು ನಟಿ ಕೃತಿ ತಮ್ಮ 34ನೇ ಹುಟ್ಟುಹಬ್ಬವನ್ನು ಕಬೀರ್ ಜೊತೆ ಆಚರಿಸಿದರು ಎಂಬುದಾಗಿ ಹೇಳುತ್ತಿದ್ದಾರೆ

Exit mobile version