ಸಾಮಾನ್ಯವಾಗಿ ಪ್ರೇಮಿಗಳು ಒಬ್ಬರನ್ನೊಬ್ಬರು ಪ್ರೀತಿಸಿ ಮನೆಯವರ ವಿರೋಧದಲ್ಲಿ ಮದುವೆಯಾಗಿ ನಂತರ ಮನೆಯವರು ಅವರನ್ನು ಬೇರ್ಪಡಿಸಲು ಹೋರಾಡುವಂತಹ ದೃಶ್ಯಗಳನ್ನು ನಾವು ಸಿನಿಮಾಗಳಲ್ಲಿ ನೊಡುತ್ತೇವೆ. ಆದರೆ ಇದೀಗ ಈ ದೃಶ್ಯ ರಾಜಸ್ಥಾನದ ಜಲೋರ್‌ನಲ್ಲಿ ಜನರಿಗೆ ಲೈವ್ ಆಗಿ ಕಾಣಲು ಸಿಕ್ಕಿದೆ. ರಾಜಸ್ಥಾನದ ಜಲೋರ್‌ನಲ್ಲಿ ನವವಿವಾಹಿತ ದಂಪತಿ ತಮ್ಮ ಮನೆಯವರಿಂದ ಜೀವವನ್ನು ಉಳಿಸಲು ಎಸ್‍ಪಿ ಕಚೇರಿಗೆ ಓಡಿದ್ದು ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Love Case ) ಆಗಿದೆ.
ವೈರಲ್ ವೀಡಿಯೊವನ್ನು ನೋಡಿದರೆ, ಇದು ಚಲನಚಿತ್ರದ ದೃಶ್ಯದಂತೆ ಕಾಣುತ್ತದೆ. ಇದರಲ್ಲಿ ಪ್ರೇಮ ವಿವಾಹದ ನಂತರ, ದಂಪತಿ ರಕ್ಷಣೆ ಪಡೆಯಲು ಪೊಲೀಸರ ಬಳಿಗೆ ಓಡುತ್ತಿದ್ದು, ಅವರನ್ನು ಬೆನ್ನಟ್ಟಿ ಮನೆಯವರು ಬರುತ್ತಿರುವುದು ಕಂಡುಬಂದಿದೆ. ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.
Filmy style marriage In Jalore, uttar pradesh, a loving couple got married and ran away to the SP office.#Uttarprdesh #Meerut #jalore #Lovestory pic.twitter.com/gFioeCmdm1
— Priyathosh Agnihamsa (@priyathosh6447) July 8, 2024
ವರದಿಗಳ ಪ್ರಕಾರ, ಹುಡುಗ ಮತ್ತು ಹುಡುಗಿ ಒಂದೇ ಸಮುದಾಯಕ್ಕೆ ಸೇರಿದವರು ಮತ್ತು ಹಲವು ದಿನಗಳಿಂದ ಸಂಬಂಧದಲ್ಲಿದ್ದರು. ಅವರು ಮದುವೆಯಾಗಲು ಬಯಸಿದ್ದರೂ ಕೂಡ ಅವರ ಕುಟುಂಬ ಸದಸ್ಯರು ಅದನ್ನು ವಿರೋಧಿಸಿದರು. ಇಬ್ಬರ ಕುಟುಂಬಗಳು ಅವರ ಇಚ್ಛೆಗೆ ವಿರುದ್ಧವಾಗಿ ಬೇರೆಯವರೊಂದಿಗೆ ನಿಶ್ಚಿತಾರ್ಥವನ್ನು ಏರ್ಪಡಿಸಿದ್ದರು. ಇದರಿಂದ ಬೇಸರಗೊಂಡ ಹುಡುಗ ಮತ್ತು ಹುಡುಗಿ ಮನೆಯಿಂದ ಓಡಿಹೋಗಿ ವಿವಾಹವಾದರು.
ಪ್ರೇಮ ವಿವಾಹದ ನಂತರ, ಅವರು ಕಲೆಕ್ಟರೇಟ್ ಕಚೇರಿಗೆ ಹೋದರು. ಹುಡುಗಿಯ ಕುಟುಂಬವು ಈ ಬಗ್ಗೆ ಸುದ್ದಿ ತಿಳಿದು ತಕ್ಷಣ ಕಲೆಕ್ಟರೇಟ್ ಆವರಣಕ್ಕೆ ಬಂದು ಹುಡುಗ ಮತ್ತು ಹುಡುಗಿಯನ್ನು ಸುತ್ತುವರೆದು ಹುಡುಗಿಯನ್ನು ಬಲವಂತವಾಗಿ ತಮ್ಮೊಂದಿಗೆ ಕರೆದೊಯ್ಯಲು ಪ್ರಯತ್ನಿಸಿದರು. ಆಗ ಅವರಿಂದ ತಪ್ಪಿಸಿಕೊಂಡು ಹುಡುಗ ಮತ್ತು ಹುಡುಗಿ ಎಸ್‍ಪಿ ಕಚೇರಿಯ ಕಡೆಗೆ ಓಡಿದ್ದಾರೆ.
ಇದನ್ನೂ ಓದಿ: ಗರ್ಲ್ ಫ್ರೆಂಡ್ ಮನೆಯಲ್ಲಿ ಚಕ್ಕಂದವಾಡುತ್ತಿದ್ದ ರಸಿಕ ಪತ್ನಿಯ ಕೈಗೆ ಸಿಕ್ಕಿ ಬಿದ್ದ! ಮುಂದೇನಾಯ್ತು? ವಿಡಿಯೊ ನೋಡಿ
ಕುಟುಂಬ ಸದಸ್ಯರು ಅವರನ್ನು ತಡೆಯಲು ಪ್ರಯತ್ನಿಸುತ್ತಾ ಅವರನ್ನು ಬೆನ್ನಟ್ಟಿದ್ದಾರೆ. ಆದರೆ, ಹುಡುಗ ಮತ್ತು ಹುಡುಗಿ ಎಸ್‍ಪಿ ಕಚೇರಿಯನ್ನು ತಲುಪಿ ಒಟ್ಟಿಗೆ ಉಳಿಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಮತ್ತು ಅವರು ತಮ್ಮ ಕುಟುಂಬಗಳಿಂದ ತಮ್ಮ ಜೀವಕ್ಕೆ ಭಯವಿದೆ ಎಂದು ಹೇಳಿ ರಕ್ಷಣೆಯನ್ನು ಕೋರಿದ್ದಾರೆ ಎನ್ನಲಾಗಿದೆ. ಎಸ್‍ಪಿ ಕಚೇರಿಯಲ್ಲಿ ಈ ಬಗ್ಗೆ ವಿಚಾರಣೆ ನಡೆಸಿದ ಬಳಿಕ ಹುಡುಗಿ ಸ್ವಯಂಪ್ರೇರಣೆಯಿಂದ ತನ್ನ ಹೆತ್ತವರೊಂದಿಗೆ ಮನೆಗೆ ಹೋದಳು ಎಂಬುದಾಗಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಜಲೋರ್ ಪೊಲೀಸರು ದೃಢಪಡಿಸಿದ್ದಾರೆ. ಪ್ರೇಮಿ ಈಗ ಆ ಹುಡುಗಿಯನ್ನು ಪಡೆಯುವ ಪ್ರಯತ್ನ ಮುಂದುವರಿಸಿದ್ದಾನೆ.