ಕರಾಚಿ: ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕೆ ಅದೆಂಥಾ ಅನಾಹುತ ನಡೆಯುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಇಲ್ಲೊಬ್ಬ ಪ್ರೀತಿಯಿಂದ ತನ್ನ ಪ್ರೇಯಸಿಗಾಗಿ ಇಟ್ಟಿದ್ದ ಬರ್ಗರ್ (Burger)ನ್ನು ತಿಂದನೆಂದು ಸ್ನೇಹಿತನನ್ನೇ ಬರ್ಬರವಾಗಿ ಕೊಲೆ (Deadly Murder) ಮಾಡಿದ್ದಾನೆ. ಪಾಕಿಸ್ತಾನದ ಕರಾಚಿಯಲ್ಲಿ ಈ ಭೀಕರ ಘಟನೆ ನಡೆದಿದ್ದು, ಸೆಶನ್ಸ್ ಕೋರ್ಟ್ ಜಡ್ಜ್ (Sessions court judge) ನ ಮಗ ಅಲಿ ಕೀರಿಯೋ ಕೊಲೆಯಾದ ದುರ್ದೈವಿ. ಕರಾಚಿಯ ಡಿಫೆನ್ಸ್ 5 ನೇ ಏರಿಯಾ (Defence Phase 5 area) ದಲ್ಲಿ ಫೆಬ್ರುವರಿ 8 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಡ್ಯಾನಿಯಲ್ ಎಂಬಾತ ಈ ದುಷ್ಕೃತ್ಯ ಎಸಗಿದ ಪಾಪಿ.
ಘಟನೆ ಕುರಿತು ಎಆರ್‌ವೈ ನ್ಯೂಸ್ ವರದಿ ಮಾಡಿದ್ದು, ಹಿರಿಯ ಪೊಲೀಸ್ ಅಧಿಕಾರಿ ನಜೀರ್ ಅಹ್ಮದ್ ಪುತ್ರ ಡ್ಯಾನಿಯಲ್‌ನ ತನ್ನ ಪ್ರೇಯಸಿ ಶಾಜಿಯಾಳನ್ನು ತನ್ನ ಮನೆಗೆ ಆಹ್ವಾನಿಸಿದ್ದ. ಈ ವೇಳೆ ಆತನ ಮನೆಯಲ್ಲಿ ಸ್ನೇಹಿತ ಅಲಿ ಕೀರಿಯೋ ಮತ್ತು ಸಹೋದರ ಅಹ್ಮೇರ್ ಕೂಡ ಇದ್ರು. ಪ್ರೇಯಸಿ ಜೊತೆ ಸುಮಧುರ ಕ್ಷಣಗಳನ್ನು ಕಳೆಯಬೇಕೆಂದು ಪ್ಲ್ಯಾನ್ ಮಾಡಿಕೊಂಡಿದ್ದ ಡ್ಯಾನಿಯಲ್ ಆಕೆಗಾಗಿ ಇಷ್ಟವಾದ ಬರ್ಗರನ್ನೂ ಆರ್ಡರ್ ಮಾಡಿದ್ದ. ಆದ್ರೆ ಕೀರಿಯೋ ಒಂದು ಬರ್ಗರ್ ಒಂದು ಭಾಗವನ್ನು ತಿಂದಿದ್ದ. ಇದನ್ನು ಕಂಡ ಡ್ಯಾನಿಯಲ್ ಕೀರಿಯೋ ಮೇಲೆ ಕೆಂಡವಾಗಿದ್ದ.
ಕೀರಿಯೋ ಮೇಲೆ ತೀವ್ರ ಕೋಪಗೊಂಡ ಡ್ಯಾನಿಯಲ್ ಆತನ ವಿರುದ್ಧ ಕೂಗಾಡಲು ಶುರು ಮಾಡಿದ್ದ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಮಾರಾಮಾರಿ ನಡೆದಿತ್ತು. ಜಗಳ ತಾರಕಕ್ಕೇರುತ್ತಿದ್ದಂತೆ ಡ್ಯಾನಿಯಲ್ ಅಲ್ಲೇ ಇದ್ದ ಗಾರ್ಡ್‌ನ ಬಂದೂಕು ಕಿತ್ತು ಕೀರಿಯೋ ಮೇಲೆ ಏಕಾಏಕಿ ಗುಂಡು ಹಾರಿದ್ದಾನೆ. ಗಂಭೀರವಾಗಿ ಗಾಯಗೊಂಡ ಕೀರಿಯೋ ಆಸ್ಪತ್ರೆಗೆ ತಲುಪುವ ಮುನ್ನವೇ ಕೊನೆಯುಸಿರೆಳೆದಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ: Fire Tragedy: ಹೋಟೆಲ್‌ನಲ್ಲಿ ಭೀಕರ ಅಗ್ನಿ ದುರಂತ; 6 ಮಂದಿ ಸಾವು
ಇನ್ನು ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ತನಿಖಾಧಿಕಾರಿ ತಮ್ಮ ತನಿಖಾ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದ್ದು, ಡ್ಯಾನಿಯಲ್ ನಜೀರ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಇಂಥ ಘೋರ ಕೃತ್ಯ ಎಸಗಿರೋ ಡ್ಯಾನಿಯಲ್‌ಗೆಎ ಕೋರ್ಟ್ ಯಾವ ಶಿಕ್ಷೆ ವಿಧಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ವರ್ಷ ಕರಾಚಿಯಲ್ಲಿ ಬರೋಬ್ಬರಿ 56 ದರೋಡೆ ಪ್ರಕರಣಗಳು ದಾಖಲಾಗಿದ್ದು, ಸುಮಾರು 200ಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ವರ್ಷ 25 ಪ್ರಕರಣಗಳಲ್ಲಿ 110ಕ್ಕೂ ಅಧಿಕ ಜನ ಬಲಿಯಾದ್ದರು ಎಂದು ವರದಿಯಾಗಿದೆ.