ಬೆಂಗಳೂರು: ಕಾರು ಖರೀದಿಸಬೇಕು ಎನ್ನುವ ಯೋಚನೆ ಮಾಡುತ್ತಿದ್ದೀರಾ? ಹಾಗಿದ್ದರೆ ಮಾರುತಿ ಸುಜುಕಿಯ (Maruti Suzuki) ಕಾರುಗಳನ್ನೊಮ್ಮೆ ನೋಡಿ. ಯಾಕೆಂದರೆ ಮಾರುತಿ ಸುಜುಕಿಯು ತನ್ನ ಕೆಲವು ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ (discount) ಘೋಷಿಸಿದೆ. ಮಾರುತಿ ಸುಜುಕಿಯು ತನ್ನ ನೆಕ್ಸಾ ಶ್ರೇಣಿಯ (Nexa range) ಕಾರುಗಳ ಮೇಲೆ ವಿಶೇಷ ಕೊಡುಗೆಗಳನ್ನು ನೀಡುವ ಮೂಲಕ ಹೊಸ ಆರ್ಥಿಕ ವರ್ಷವನ್ನು ಪ್ರಾರಂಭಿಸಿದೆ. ಬಲೆನೊ (Baleno), ಫ್ರಾಂಕ್ಸ್ (Fronx) ಮತ್ತು ಜಿಮ್ನಿಯಂತಹ ( Jimny) ಮಾದರಿಯ ಕಾರುಗಳಿಗೆ ಸುಮಾರು 1.5 ಲಕ್ಷ ರೂ.ವರೆಗೆ ರಿಯಾಯಿತಿ ಘೋಷಿಸಿದೆ.
ಮಾರುತಿ ಸುಜುಕಿಯು ಘೋಷಿಸಿರುವ ಈ ರಿಯಾಯತಿಗಳಲ್ಲಿ ನಗದು ರಿಯಾಯಿತಿ, ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಗಳನ್ನು ಒಳಗೊಂಡಿದೆ.
ಕಂಪೆನಿಯು ನೀಡಿರುವ ಈ ರಿಯಾಯತಿಯು ಎಕ್ಸ್ ಎಲ್ 6 ಮತ್ತು ಪ್ರಮುಖ ಇನ್ವಿಕ್ಟೋ ಎಂಪಿವಿ ಮಾದರಿಗಳಿಗೆ ಅನ್ವಯವಾಗುವುದಿಲ್ಲ. ಅಲ್ಲದೇ ಈ ಈ ರಿಯಾಯಿತಿಯಲ್ಲಿ ಸ್ಥಳ ಮತ್ತು ರೂಪಾಂತರದ ಲಭ್ಯತೆಯ ಆಧಾರದ ಮೇಲೆ ಬದಲಾಗುತ್ತದೆ ಎಂದು ಕಂಪೆನಿ ತಿಳಿಸಿದೆ.
ಇದನ್ನೂ ಓದಿ: Share Market today: ಷೇರುದಾರರಿಗೆ ಯುಗಾದಿ ಬೆಲ್ಲ; ಸೆನ್ಸೆಕ್ಸ್ 75,000ಕ್ಕೆ ಐತಿಹಾಸಿಕ ಜಿಗಿತ
ಕಾರುಗಳ ಮೇಲಿನ ರಿಯಾಯಿತಿಗಳ ಲಭ್ಯತೆಯನ್ನು ಗ್ರಾಹಕರು ತಮ್ಮ ಹತ್ತಿರದ ಡೀಲರ್ ಗಳನ್ನು ಸಂಪರ್ಕಿಸಿ ಪರಿಶೀಲಿಸುವಂತೆ ಕಂಪೆನಿ ಹೇಳಿದೆ.
ಮಾರುತಿ ರಿಯಾಯಿತಿ ಎಷ್ಟಿದೆ?
ಮಾರುತಿ ಸುಜುಕಿ ಇಗ್ನಿಸ್‌ನ ಶ್ರೇಣಿಗಳಲ್ಲಿ ಮಾರುತಿ ಸುಜುಕಿ ಇಗ್ನಿಸ್ 58,000 ರೂ.ವರೆಗಿನ ರಿಯಾಯಿತಿಗಳನ್ನು ನೀಡುತ್ತಿದೆ. ಇದರಲ್ಲಿ 40,000 ರೂ. ನಗದು ರಿಯಾಯಿತಿ, 15,000 ರೂ. ವಿನಿಮಯ ಬೋನಸ್ ಹಾಗೂ 3,000 ರೂ. ಕಾರ್ಪೊರೇಟ್ ರಿಯಾಯಿತಿಗಳನ್ನು ಒಳಗೊಂಡಿದೆ. ಇದು ಸ್ವಯಂಚಾಲಿತ ಮತ್ತು ಹಸ್ತಚಾಲಿತ ರೂಪಾಂತರಗಳಿಗೆ ಅನ್ವಯಿಸುತ್ತದೆ.
ಮಾರುತಿ ಸುಜುಕಿ ಬಲೆನೊ:
ಮಾರುತಿ ಸುಜುಕಿ ಬಲೆನೊ ಶ್ರೇಣಿಯಲ್ಲಿ ಬಲೆನೊ ಹ್ಯಾಚ್‌ಬ್ಯಾಕ್‌ಗೆ ಮಾರುತಿ ಸುಜುಕಿ 35,000 ರೂ. ನಗದು ರಿಯಾಯಿತಿ, 15,000 ವಿನಿಮಯ ಬೋನಸ್ ಮತ್ತು 3,000 ರೂ. ಕಾರ್ಪೊರೇಟ್ ರಿಯಾಯಿತಿಯನ್ನು ನೀಡುತ್ತಿದೆ. ಸಿಎನ್ ಜಿ ರೂಪಾಂತರಗಳು ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಯನ್ನು ಇದು ಒಳಗೊಂಡಿದೆ. ಆದರೆ ಇದಕ್ಕೆ ಅತೀ ಕಡಿಮೆ ನಗದು ರಿಯಾಯಿತಿ 15,000 ರೂ. ನೀಡಲಾಗುತ್ತದೆ.
ಮಾರುತಿ ಸುಜುಕಿ ಸಿಯಾಜ್:
ಮಾರುತಿ ಸುಜುಕಿ ಸಿಯಾಜ್ ಶ್ರೇಣಿಯಲ್ಲಿ ಮಾರುತಿ ಸುಜುಕಿ 53,000 ವರೆಗಿನ ರಿಯಾಯಿತಿಗಳನ್ನು ನೀಡುತ್ತಿದೆ. ಇದರಲ್ಲಿ ಸ್ಟಿಕ್ಕರ್ ಬೆಲೆಯಲ್ಲಿ 25,000 ರೂ. ರಿಯಾಯಿತಿ, 25,000 ಎಕ್ಸ್‌ಚೇಂಜ್ ಬೋನಸ್ ಮತ್ತು 3,000 ಕಾರ್ಪೊರೇಟ್ ರಿಯಾಯಿತಿಯನ್ನು ಇದು ಒಳಗೊಂಡಿದೆ.
ಮಾರುತಿ ಸುಜುಕಿ ಗ್ರಾಂಡ್ ವಿಟಾರಾ:
ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಶ್ರೇಣಿಯಲ್ಲಿ ಗ್ರಾಂಡ್ ವಿಟಾರಾ ಮೈಲ್ಡ್ ಹೈಬ್ರಿಡ್‌ಗಾಗಿ 58,000 ರೂ. ವರೆಗಿನ ರಿಯಾಯಿತಿ ಘೋಷಿಸಲಾಗಿದೆ. ಇದರಲ್ಲಿ 25,000 ರೂ. ನಗದು ರಿಯಾಯಿತಿ, 30,000 ರೂ. ವಿನಿಮಯ ಬೋನಸ್ ಮತ್ತು 3,000 ರೂ. ವರೆಗಿನ ಕಾರ್ಪೊರೇಟ್ ಕೊಡುಗೆಗಳು ಸೇರಿವೆ. ಹೈಬ್ರಿಡ್ ರೂಪಾಂತರಗಳು 84,000 ರೂ. ವರೆಗೆ ರಿಯಾಯಿಯನ್ನು ಘೋಷಿಸಿದೆ.
ಮಾರುತಿ ಸುಜುಕಿ ಫ್ರಾಂಕ್ಸ್ :
ಮಾರುತಿ ಸುಜುಕಿ ಫ್ರಾಂಕ್ಸ್ ದಲ್ಲಿ ಫ್ರಾಂಕ್ಸ್‌ನ ಟರ್ಬೊ ಪೆಟ್ರೋಲ್ ಕಾರುಗಳಿಗೆ ನಗದು ರಿಯಾಯಿತಿ, ಪರಿಕರ ಕಿಟ್, ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ಪ್ರಯೋಜನಗಳನ್ನು ಒಳಗೊಂಡಂತೆ 68,000 ರೂ. ವರೆಗೆ ರಿಯಾಯಿತಿ ಪಡೆಯಬಹುದು.
ಮಾರುತಿ ಸುಜುಕಿ ಜಿಮ್ನಿ:
ಮಾರುತಿ ಸುಜುಕಿ ಜಿಮ್ನಿಯ ಆಲ್ಫಾ ಟ್ರಿಮ್‌ನ ಎಂವೈ 2023 ಯುನಿಟ್‌ಗಳು 1.50 ಲಕ್ಷ ರೂ. ವರೆಗೆ ರಿಯಾಯಿತಿಯನ್ನು ಹೊಂದಿದ್ದರೆ, ಜಿಮ್ನಿಯ ಹೊಸ ಎಂವೈ 2024 ಮಾದರಿಗಳು ನಗದು ರಿಯಾಯಿತಿ ಒಳಗೊಂಡಿದೆ