ಇತ್ತೀಚಿನ ದಿನಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದೆ. ಈ ಕೋತಿಗಳು ಎಲ್ಲೆಂದರಲ್ಲಿ ಜನರ ಮೇಲೆ ದಾಳಿ ಮಾಡುತ್ತಿವೆ. ಇತ್ತೀಚೆಗಷ್ಟೇ ಮಥುರಾದಲ್ಲಿ 5 ವರ್ಷದ ಬಾಲಕನ ಮೇಲೆ ಕೋತಿಗಳು ದಾಳಿ ನಡೆಸಿದ್ದು, ಆ ವಿಡಿಯೊ ವೈರಲ್ ಆಗಿದೆ. ಅದೇ ರೀತಿ ಇದೀಗ ಕೋತಿಯೊಂದು ಹುಡುಗಿಯೊಬ್ಬಳ ಮೇಲೆ ದಾಳಿ ನಡೆಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Monkey Attack) ಆಗಿದೆ. ಇದು ಜನರ ಕಳವಳಕ್ಕೆ ಕಾರಣವಾಗಿದೆ.
ನೆಲಮಾಳಿಗೆಯಲ್ಲಿ ನಡೆದು ಬರುತ್ತಿದ್ದ ಹುಡುಗಿಯ ಮೇಲೆ ಹಿಂದಿನಿಂದ ಬಂದ ಕೋತಿಯೊಂದು ದಾಳಿ ನಡೆಸಿದೆ. ಈ ಘಟನೆ ಜುಲೈ 11ರಂದು ನಡೆದಿದೆ. ಆದರೆ ಸ್ಥಳದ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಈ ಆಘಾತಕಾರಿ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಈಗ ವೈರಲ್ ಆಗಿದೆ.
Ohh God! This looks more Scary (A Big Monkey attacked on Girl in Basement area)
— Ghar Ke Kalesh (@gharkekalesh) July 14, 2024
pic.twitter.com/Qm1Ji4t4wa
ವಿಡಿಯೊದಲ್ಲಿ, ನೆಲಮಾಳಿಗೆಯಲ್ಲಿ ನಡೆದು ಬರುತ್ತಿದ್ದ ಹುಡುಗಿಯ ಬಳಿ ಬಂದ ಕೋತಿಯೊಂದು ಇದ್ದಕ್ಕಿದ್ದಂತೆ ಅವಳ ಮೇಲೆ ದಾಳಿ ಮಾಡಿದೆ. ಹುಡುಗಿಗೆ ತುಂಬಾ ಭಯವಾಗಿದೆ. ಅದೃಷ್ಟವಶಾತ್, ಹುಡುಗಿಗೆ ಯಾವುದೇ ಗಂಭೀರ ಹಾನಿಯಾಗಲಿಲ್ಲ, ಆದರೂ ಅವಳು ಕೋತಿಗೆ ಹೆದರಿ ನಡಗುತ್ತಿರುವುದು ಕಂಡುಬಂದಿದೆ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‍ಫಾರ್ಮ್‍ನಲ್ಲಿ (ಈ ಹಿಂದೆ ಟ್ವಿಟರ್) ‘ಘರ್ ಕೆ ಕಾಲೇಶ್’ ಹ್ಯಾಂಡಲ್‍ನಲ್ಲಿ ಹಂಚಿಕೊಳ್ಳಲಾಗಿದೆ. “ನೆಲಮಾಳಿಗೆಯ ಪ್ರದೇಶದಲ್ಲಿ ದೊಡ್ಡ ಕೋತಿ ಹುಡುಗಿಯ ಮೇಲೆ ದಾಳಿ ಮಾಡಿದೆ” ಎಂದು ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೊ 89 ಸಾವಿರ ವೀಕ್ಷಣೆಗಳನ್ನು ಗಳಿಸಿದೆ.
ಸ್ಥಳೀಯ ಅಧಿಕಾರಿಗಳು ಈ ಘಟನೆಗೆ ಪ್ರತಿಕ್ರಿಯಿಸಿದ್ದು, ರಸ್ತೆಯಲ್ಲಿರುವ ಪ್ರಾಣಿಗಳ ಬಗ್ಗೆ ಜನರು ಜಾಗರೂಕರಾಗಿರುವಂತೆ ಸೂಚಿಸಿದ್ದಾರೆ. ಕೋತಿಗಳು, ಹೆಚ್ಚಾಗಿ ತಮಾಷೆಯಾಗಿ ಕಂಡರೂ, ಆಕ್ರಮಣ ಮಾಡಬಹುದು. ಒಂದು ವೇಳೆ ಅವುಗಳಿಗೆ ಹೆದರಿಸಿದೆ ಅಥವಾ ಅವುಗಳಿಗೆ ಹಸಿವಾದರೆ ಆಹಾರಕ್ಕಾಗಿ ಈ ರೀತಿ ದಾಳಿ ನಡೆಸಬಹುದು ಎಂದು ತಿಳಿಸಿದ್ದಾರೆ.
ಅಲ್ಲದೇ ವೈರಲ್ ಆದ ವಿಡಿಯೊದ ಬಗ್ಗೆ ಪ್ರಾಣಿಗಳಿಂದ ಸುರಕ್ಷಿತವಾಗಿರಲು ಮತ್ತು ಅಂತರ ಕಾಯ್ದುಕೊಳ್ಳುವ ಬಗ್ಗೆ ಆನ್‍ಲೈನ್‍ನಲ್ಲಿ ಚರ್ಚೆ ನಡೆಯುತ್ತಿದೆ. ಪ್ರಾಣಿಗಳು ದಾಳಿ ಮಾಡುವುದನ್ನು ತಪ್ಪಿಸಲು ಅವುಗಳಿಗೆ ಆಹಾರ ನೀಡುವುದು ಅಥವಾ ಅವುಗಳು ಹತ್ತಿರ ಬರುವುದನ್ನು ತಪ್ಪಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಕೋತಿಯ ದಾಳಿಗೆ ಒಳಗಾದ ಹುಡುಗಿ ಚೇತರಿಸಿಕೊಳ್ಳುತ್ತಿದ್ದಾಳೆ ಮತ್ತು ಅವಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅವಳ ಕುಟುಂಬವು ತಿಳಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ಆಸ್ತಿಗಾಗಿ ಅಕ್ಕನಿಗೆ ಕೊಡಲಿಯಿಂದ ಕೊಚ್ಚಿದ ತಮ್ಮ; ಭಯಾನಕ ವಿಡಿಯೊ
मथुरा में बंदरों का आतंक, 5 साल के मासूम बच्चे पर बंदरों ने किया अटैक, स्थानीय लोगों ने दौड़कर बचाई बच्चे की जान, लाइव घटना सीसीटीवी में कैद@dmmathura7512 pic.twitter.com/nUjbATcbd0
— Pramod Kumar (@journalistpk123) July 13, 2024
ಕೋತಿಗಳು ದಾಳಿ ನಡೆಸಿದ್ದು ಇದೇ ಮೊದಲಲ್ಲಾ. ಈ ಹಿಂದೆ ಮಥುರಾದ ವೃಂದಾವನದಲ್ಲಿ ಶುಕ್ರವಾರ ಜುಲೈ 12ರಂದು ಕಿಶನ್ ಎಂಬ 5 ವರ್ಷದ ಬಾಲಕ ಕೋತಿಗಳ ದಾಳಿಗೆ ಒಳಗಾಗಿದ್ದಾನೆ. ಮನೆಯಿಂದ ಹೊರಗೆ ಬಂದ ಬಾಲಕನ ಮೇಲೆ ಕೋತಿಗಳು ಒಟ್ಟಿಗೆ ಸೇರಿಕೊಂಡು ದಾಳಿ ಮಾಡಿ ಎಳೆದಾಡಿದ್ದವು. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.