Site icon Vistara News

NETFLIX: ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮ್ ಆಗುವ ಈ ಸಿನಿಮಾ, ಸೀರಿಸ್​ಗಳು ನಿಮ್ಮ ಮನಸ್ಸು ಗೆಲ್ಲೋದು ಗ್ಯಾರಂಟಿ

ಮುಂಬಯಿ: ಜನಪ್ರಿಯ ಒಟಿಟಿ ಫ್ಲ್ಯಾಟ್​ಫಾರ್ಮ್ ಆಗಿರುವ ನೆಟ್ ಫ್ಲಿಕ್ಸ್ ನಲ್ಲಿ (Netflix) ಏಪ್ರಿಲ್ ತಿಂಗಳಲ್ಲಿ ಹಲವು ಅತ್ಯಾಕರ್ಷಕ ಸರಣಿಗಳು, ಹಾಲಿವುಡ್ (Hollywood), ಬಾಲಿವುಡ್ (Bollywood), ಕೊರಿಯನ್ (Korean) ಸೇರಿದಂತೆ ಅನೇಕ ಚಲನಚಿತ್ರಗಳು ಸ್ಟ್ರೀಮ್ ಆಗಲಿವೆ. ಆ್ಯ ಕ್ಷನ್- ಕಾಮಿಡಿ, ಬಯೊಗ್ರಫಿಯನ್ನೊಳಗೊಂಡಿರುವ ಪ್ರಮುಖ ಚಿತ್ರಗಳಲ್ಲಿ ಈಗಾಗಲೇ ಕೆಲವು ಬಿಡುಗಡೆಯಾಗಿದ್ದು, ಇನ್ನು ಕೆಲವು ಬಿಡುಗಡೆಗೆ ಸಿದ್ಧವಾಗಿದೆ. ಅಂಥ ಕೆಲವು ಸಿನಿಮಾಗಳು ಹಾಗೂ ಹಾಗೂ ಸಿರೀಸ್​ಗಳ ವಿವರ ಇಲ್ಲಿದೆ ಓದಿ.

ದಿ ಘಾಜಿ ಅಟ್ಟ್ಯಾಕ್ (The Ghazi Attack )


ಸಂಕಲ್ಪ್ ರೆಡ್ಡಿ ನಿರ್ದೇಶನದ 2017 ರ ಈ ಚಿತ್ರ ಏಪ್ರಿಲ್ 1ರಂದು ಬಿಡುಗಡೆಯಾಗಿದೆ. ಭಾರತ- ಪಾಕಿಸ್ತಾನ ಯುದ್ಧದ ಹಿನ್ನೆಲೆಯಲ್ಲಿ 1971 ರಲ್ಲಿ ಪಾಕಿಸ್ತಾನದ ಜಲಾಂತರ್ಗಾಮಿ ಘಾಜಿ ನಿಗೂಢವಾಗಿ ಮುಳುಗಿದ ಘಟನೆಯನ್ನು ಈ ಚಿತ್ರ ಆಧರಿಸಿದೆ. ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ, ಕೆಕೆ ಮೆನನ್ ಮತ್ತು ಅತುಲ್ ಕುಲಕರ್ಣಿ ಮೊದಲಾದವರು ನಟಿಸಿದ್ದಾರೆ.

ರಿಪ್ಲಿ (Ripley)

ಏಪ್ರಿಲ್ 4ರಂದು ತೆರೆಕಾಣುವ ಈ ವೆಬ್​​ಸೀರಿಸ್​ ಚಿತ್ರ ಹೈಸ್ಮಿತ್‌ನ 1955ರ ಕ್ರೈ ಥ್ರಿಲ್ಲರ್​ ಕಾದಂಬರಿ ದಿ ಟ್ಯಾಲೆಂಟೆಡ್ ಮಿ. ರಿಪ್ಲೆಯನ್ನು ಆಧರಿಸಿದೆ. ನೆಟ್‌ಫ್ಲಿಕ್ಸ್ ಶೋ ಐರಿಶ್ ನಟ ಆಂಡ್ರ್ಯೂ ಸ್ಕಾಟ್ ಟಾಮ್ ರಿಪ್ಲೆ ಮೋಸಗಾರ-ಕಿಲ್ಲರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಸ್ಕಾಟ್ ಜೊತೆಗೆ ಜಾನಿ ಫ್ಲಿನ್, ಡಕೋಟಾ ಫಾನ್ನಿಂಗ್ ಮತ್ತು ಎಲಿಯಟ್ ಸಮ್ನರ್ ಕೂಡ ನಟಿಸಿದ್ದಾರೆ.

ಸ್ಕೂಪ್ (Scoop)

ಫಿಲಿಪ್ ಮಾರ್ಟಿನ್ ನಿರ್ದೇಶಿಸಿದ ಸ್ಕೂಪ್ ಚಿತ್ರ ಏಪ್ರಿಲ್ 5ರಂದು ತೆರೆಕಾಣಲಿದೆ. 2019 ರಿಂದ ಪ್ರಿನ್ಸ್ ಆಂಡ್ರ್ಯೂ ಅವರೊಂದಿಗೆ ಕುಖ್ಯಾತ ಸಂದರ್ಶನವನ್ನು ಇದು ಒಳಗೊಂಡಿದೆ. ಶಿಕ್ಷೆಗೊಳಗಾದ ಶಿಶುಕಾಮಿ ಜೆಫ್ರಿ ಎಪ್ಸ್ಟೀನ್ ಅವರೊಂದಿಗಿನ ಸಂಬಂಧದ ಬಗ್ಗೆ ಈ ಸರಣಿ ವಿವರಿಸುತ್ತದೆ.

ಪ್ಯಾರಾಸೈಟ್: ದಿ ಗ್ರೇ (Parasyte: The Grey)

ಜನಪ್ರಿಯ ಕೊರಿಯನ್ ಚಲನಚಿತ್ರ ಟ್ರೈನ್ ಟು ಬುಸಾನ್‌ನ ನಿರ್ಮಿಸಿರುವ ಮತ್ತೊಂದು ಸರಣಿಯು ಏಪ್ರಿಲ್ 5ರಂದು ತೆರೆಕಾಣಲಿದೆ. ಹಿತೋಷಿ ಇವಾಸಕಿಯವರ ಪ್ರೀತಿಯ ಮಂಗಾ ಸರಣಿಯ ಲೈವ್- ಆಕ್ಷನ್ ರೂಪಾಂತರವಾಗಿರುವ ಈ ಸರಣಿ ಪರಾವಲಂಬಿಗಳು ಹೇಗೆ ನಿಧಾನವಾಗಿ ನುಸುಳುತ್ತವೆ ಮತ್ತು ಮಾನವ ದೇಹವನ್ನು ನಿಯಂತ್ರಿಸುತ್ತವೆ ಎಂಬುದನ್ನು ಹೇಳುತ್ತದೆ.

ಅಮರ್ ಸಿಂಗ್ ಚಮ್ಕಿಲಾ (Amar Singh Chamkila)

ದಿವಂಗತ ಗಾಯಕ ಅಮರ್ ಸಿಂಗ್ ಚಮ್ಕಿಲಾ ಮತ್ತು ಅವರ ಪತ್ನಿ ಅಮರಜೋತ್ ಕೌರ್ ಅವರ ಜೀವನಾಧಾರಿತ ಬಯೋಪಿಕ್ ಸಿನಿಮಾವು ಏಪ್ರಿಲ್ 12ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ನಟ-ಗಾಯಕ ದಿಲ್ಜಿತ್ ದೋಸಾಂಜ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಪರಿಣಿತಿ ಚೋಪ್ರಾ ಅವರು ಪತ್ನಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

ಹೀಗೆ ಈ ತಿಂಗಳು ನೆಟ್‌ಫ್ಲಿಕ್ಸ್‌ನಲ್ಲಿ ಬರಲು ಹಲವು ಪ್ರಮುಖ ಚಿತ್ರಗಳು ಸಾಲುಗಟ್ಟಿ ನಿಂತಿವೆ. ಇದರೊಂದಿಗೆ ಘೋಸ್ಟ್‌ಬಸ್ಟರ್ಸ್: ಆಫ್ಟರ್‌ಲೈಫ್, ದಿ ಗಾಡ್‌ಫಾದರ್, ಕೀಪಿಂಗ್ ಅಪ್ ವಿತ್ ದಿ ಕಾರ್ಡಶಿಯನ್ಸ್, ದಿ ಟಿಯರ್‌ಮಿತ್ ಮತ್ತು ದಿ ಗ್ರೇಟ್ ಇಂಡಿಯನ್‌ಮ್ ಕೂಡ ತೆರೆಗೆ ಬರಲಿದೆ. ಇದರೊಂದಿಗೆ ಕಪಿಲ್ ಶರ್ಮಾ ಶೋ ಮುಂದುವರಿಯಲಿದೆ.

Exit mobile version