ಲಖನೌ: ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ 17 ವರ್ಷದ ಬಾಲಕಿಯೊಬ್ಬಳನ್ನು ಮೂರು ದಿನಗಳ ಕಾಲ ಒತ್ತೆಯಾಳಾಗಿ ಇರಿಸಿ, ಅತ್ಯಾಚಾರ ಎಸಗಿದ (Physical Abuse) ಘಟನೆ ಲಖೀಂಪುರದಲ್ಲಿ ನಡೆದಿದೆ. ಕ್ರೂರಿ ಆಕೆಯ ಮುಖದ ಮೇಲೆ ಬಿಸಿ ಕಬ್ಬಿಣದ ರಾಡ್ನಿಂದ ತನ್ನ ಹೆಸರನ್ನು ಬರೆದಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 19 ರಂದು, 21 ವರ್ಷದ ಯುವಕ ಈ ಕೆಲಸ ಮಾಡಿದ್ದಾರೆ. ತನ್ನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ಆಕೆಯನ್ನು ಬಲವಂತವಾಗಿ ತನ್ನ ಮನೆಗೆ ಕರೆಯೊಯ್ದಿದ್ದ. ಅವಳನ್ನು ಮೂರು ದಿನಗಳ ಕಾಲ ಅಲ್ಲಿ ಬಂಧಿಯಾಗಿಟ್ಟು ಹಲ್ಲೆ ಹಾಗೂ ಅತ್ಯಾಚಾರ ಮಾಡಿದ್ದ.
ನಾನು ಏಪ್ರಿಲ್ 19 ರಂದು ಮನೆಗೆ ಸಾಮಗ್ರಿ ಖರೀದಿಸಲು ಅಂಗಡಿಗೆ ಹೋಗಿದ್ದೆ. ಅವನು ನನ್ನನ್ನು ಒತ್ತಾಯಪೂರ್ವಕವಾಗಿ ಮನೆಗೆ ಕರೆದೊಯ್ದಿದ್ದ. ಅಲ್ಲಿ ತಪ್ಪು ಕೆಲಸಗಳನ್ನು ಮಾಡಿದನು. ನಂತರ ಅವನು ನನ್ನ ಮುಖವನ್ನು ರಾಡ್ ನಿಂದ ಸುಟ್ಟು ತನ್ನ ಹೆಸರನ್ನು ಬರೆದನು, ಅವನ ಸಹೋದರಿ ಮತ್ತು ತಾಯಿ ನನ್ನನ್ನು ಹಿಡಿದುಕೊಂಡಿದ್ದರು. ನಾನು ಕೂಗುತ್ತಲೇ ಇದ್ದೆ, ಆದರೆ ಯಾರೂ ನಮ್ಮನ್ನು ರಕ್ಷಿಸಲು ಬರಲಿಲ್ಲ” ಎಂದು ಬಾಲಕಿ ತಿಳಿಸಿದ್ದಾರೆ.
ಬಾಲಕಿ ಹೇಗೋ ಸೆರೆಯಿಂದ ತಪ್ಪಿಸಿಕೊಂಡು ಏಪ್ರಿಲ್ 21ರಂದು ಮನೆಗೆ ಹಿಂದಿರುಗಿದ್ದಳು. ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ, ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Pakistan Spy: ATS ಭರ್ಜರಿ ಕಾರ್ಯಾಚರಣೆ; ಪಾಕಿಸ್ತಾನ ಗೂಢಾಚಾರ ಅರೆಸ್ಟ್
ಆರಂಭದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 343 (ಅಕ್ರಮ ಬಂಧನ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಮತ್ತು 504 (ಉದ್ದೇಶಪೂರ್ವಕ ಅವಮಾನ) ಮತ್ತು ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ನಿಬಂಧನೆಗಳನ್ನು ಸೇರಿಸಲಾಯಿತು.