Site icon Vistara News

Puri Jagannath Temple: ಪುರಿ ಜಗನ್ನಾಥ ದೇವಾಲಯದ 10 ಅದ್ಭುತ ಸಂಗತಿಗಳಿವು!

Puri Jagannath Temple

ಪುರಿ ಜಗನ್ನಾಥ ದೇವಾಲಯವು (Puri Jagannath Temple) ಭಾರತದ ಅತ್ಯಂತ ಪೂಜ್ಯನೀಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಒಡಿಶಾದ ಪುರಿಯಲ್ಲಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಜಗನ್ನಾಥ ದೇವಾಲಯದಲ್ಲಿ ಭಗವಾನ್ ಕೃಷ್ಣನನ್ನು ಭಗವಾನ್ ಜಗನ್ನಾಥನ ರೂಪದಲ್ಲಿ ಪೂಜಿಸಲಾಗುತ್ತದೆ. ಇಲ್ಲಿ ಕೃಷ್ಣನು ಜಗನ್ನಾಥನ ರೂಪದಲ್ಲಿ ಸಹೋದರ ಬಲರಾಮನ ರೂಪವಾದ ಭಗವಾನ್ ಬಲಭದ್ರ ಮತ್ತು ತಂಗಿ ದೇವಿ ಸುಭದ್ರಾ ಅವರೊಂದಿಗೆ ಈ ದೇವಾಲಯದಲ್ಲಿ ನೆಲೆಸಿದ್ದಾನೆ.

ಈ ದೇವಾಲಯದಲ್ಲಿ ಹಲವು ರಹಸ್ಯಗಳು ಮತ್ತು ಪವಾಡಗಳು ನಡೆಯುತ್ತದೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಕಾರಣವಿಲ್ಲ. ಇತಿಹಾಸಕಾರರು, ವಿಜ್ಞಾನಿಗಳು, ಪುರೋಹಿತರು ಮತ್ತು ಸಾಮಾನ್ಯ ಜನರು ಈ ರಹಸ್ಯಗಳನ್ನು ಪರಿಹರಿಸಲು ಅನೇಕ ವರ್ಷಗಳಿಂದ ಶ್ರಮಿಸುತ್ತಿದ್ದಾರೆ ಆದರೆ ಇದು ಇಲ್ಲಿಯವರೆಗೆ ರಹಸ್ಯವಾಗಿ ಉಳಿದಿದೆ. ಆ ರಹಸ್ಯಗಳು ಯಾವುವು ಎಂದು ತಿಳಿಯೋಣ :-

Puri Jagannath Temple

ಧ್ವಜದ ದಿಕ್ಕು:

ಜಗನ್ನಾಥ ದೇವಾಲಯದ ಮೇಲ್ಭಾಗದಲ್ಲಿರುವ ಧ್ವಜವು ಗಾಳಿ ಬೀಸುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ ಹಾರಾಡುತ್ತದೆ. 1800 ವರ್ಷಗಳ ಹಿಂದೆ, ಅರ್ಚಕರು ಸಂಪ್ರದಾಯದ ಪ್ರಕಾರ ಧ್ವಜವನ್ನು ಬದಲಾಯಿಸುವ ಸಲುವಾಗಿ ಪ್ರತಿದಿನ ಜಗನ್ನಾಥ ದೇವಾಲಯದ ಶಿಖರದ ಮೇಲೆ ಏರುತ್ತಾರೆ. ಈ ಆಚರಣೆಯನ್ನು ಒಂದು ದಿನದ ಮಟ್ಟಿಗೆ ತಪ್ಪಿಸಿದರೆ ದೇವಾಲಯವು 18 ವರ್ಷಗಳ ಕಾಲ ಮುಚ್ಚಲ್ಪಡುತ್ತದೆ ಎಂದು ಹೇಳಲಾಗುತ್ತದೆ. ಈ ದೇವಾಲಯವು ತುಂಬಾ ಎತ್ತರವಾಗಿದೆ. ದೇವಾಲಯದ ಮೇಲೆ ಏರಲು ಯಾವುದೇ ಉಪಕರಣವನ್ನು ಬಳಸುವುದಿಲ್ಲ ಇದನ್ನು ಬರಿಗೈಯಿಂದ ನಿರ್ವಹಿಸಲಾಗುತ್ತದೆ.

ಮರದ ವಿಗ್ರಹಗಳು;

ಇಲ್ಲಿ ದೇವರ ವಿಗ್ರಹಗಳನ್ನು ಪವಿತ್ರವಾದ ಬೇವಿನ ಮರದಿಂದ ತಯಾರಿಸಲಾಗುತ್ತದೆ ಮತ್ತು ನಬಕಲೆಬರಾ ಎಂಬ ಜಗನ್ನಾಥನ ವಿಶೇಷ ಹಬ್ಬದ ಸಮಯದಲ್ಲಿ ವಿಗ್ರಹಗಳನ್ನು ಬದಲಾಯಿಸಿ ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಆಚರಣೆಯನ್ನು ಪ್ರತಿ 8, 12, ಅಥವಾ 19 ವರ್ಷಗಳಿಗೊಮ್ಮೆ ಮಾಡಲಾಗುತ್ತದೆ. ಈ ವಿಗ್ರಹ ಮಾಡಲು ಕಟ್ಟುನಿಟ್ಟಾದ ಕ್ರಮಗಳನ್ನು ಹೊಂದಿದ್ದು, ಇದಕ್ಕಾಗಿ ಪವಿತ್ರ ಬೇವಿನ ಮರಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ದ ಬಡಗಿಗಳು 21 ದಿನಗಳ ಅವಧಿಯಲ್ಲಿ ಕೆತ್ತನೆಯನ್ನು ರಹಸ್ಯವಾಗಿ ಮಾಡುತ್ತಾರೆ. ಹಳೆಯ ವಿಗ್ರಹಗಳನ್ನು ಕೊಯಿಲಿ ವೈಕುಂಠದ ಬಳಿ ಸಮಾಧಿ ಮಾಡಲಾಗಿದೆ. ಕೊನೆಯ ನಬಕಲೆಬರಾ 2015 ರಲ್ಲಿ ನಡೆಯಿತು ಮತ್ತು ಲಕ್ಷಾಂತರ ಭಕ್ತರು ಈ ಹಬ್ಬಕ್ಕೆ ಬಂದಿದ್ದರು.

Puri Jagannath Temple

ದೇವಾಲಯದ ನೆರಳು:

ದಿನದ ಯಾವುದೇ ಸಮಯದಲ್ಲಿ, ಸೂರ್ಯನ ಪ್ರಕಾಶ ಆಕಾಶದಲ್ಲಿ ಎಷ್ಟೇ ಹೆಚ್ಚಾಗಿದ್ದರೂ ಕೂಡ ದೇವಾಲಯದ ನೆರಳು ಬೀಳುವುದಿಲ್ಲ. ಅದು ವಾಸ್ತುಶಿಲ್ಪದ ಅದ್ಭುತವೇ ಅಥವಾ ಪವಾಡವೇ ಎಂಬುದು ಇನ್ನೂ ಬಗೆಹರಿದಿಲ್ಲ.

ಅಬಾಧ ಮಹಾಪ್ರಸಾದಂ:

ಮಹಾಪ್ರಸಾದವನ್ನು ಭಗವಾನ್ ಜಗನ್ನಾಥನಿಗೆ 5 ಹಂತಗಳಲ್ಲಿ ನೀಡಲಾಗುತ್ತದೆ ಮತ್ತು ಇದು 56 ರುಚಿಕರವಾದ ಭಕ್ಷ್ಯಗಳನ್ನು ಒಳಗೊಂಡಿದೆ. ಇದರಲ್ಲಿ ಎರಡು ವಿಧಗಳಿವೆ, ಸುಖಿಲಾ ಮತ್ತು ಶಂಖುಡಿ. ಸುಖಿಲಾ ಎಲ್ಲಾ ಒಣ ಮಿಠಾಯಿಗಳನ್ನು ಒಳಗೊಂಡಿದೆ ಮತ್ತು ಶಂಖುಡಿ ಅಕ್ಕಿ, ದಾಲ್ ಮತ್ತು ಇತರ ವಸ್ತುಗಳನ್ನು ಒಳಗೊಂಡಿದೆ. ಇದು ದೇವಾಲಯದ ಆವರಣದಲ್ಲಿರುವ ಆನಂದ ಬಜಾರ್‌ನ ಮಾರುಕಟ್ಟೆಯಲ್ಲಿ ಭಕ್ತರಿಗೆ ಲಭ್ಯವಿದೆ ಮತ್ತು ಇದು ದೈವಿಕ ರುಚಿಯನ್ನು ನೀಡುತ್ತದೆ.

Puri Jagannath Temple

ಮಹಾಪ್ರಸಾದದ ತಯಾರಿಕೆ:

ಮಹಾಪ್ರಸಾದವನ್ನು ಇಲ್ಲಿ ಸಾವಿರಾರು ಪುರೋಹಿತರು ತಯಾರಿಸುತ್ತಾರೆ ಮತ್ತು 7 ಮಣ್ಣಿನ ಮಡಕೆಗಳನ್ನು ಒಂದರ ಮೇಲೊಂದರಂತೆ ಇರಿಸಲಾಗುತ್ತದೆ ಮತ್ತು ಆಹಾರವನ್ನು ಸೌದೆ ಒಲೆಯ ಮೇಲೆ ಬೇಯಿಸಲಾಗುತ್ತದೆ. ಹೀಗೆ ಕಾಯಿಸಿದಾಗ ಮೇಲಿನ ಮಡಕೆಯಲ್ಲಿನ ಆಹಾರ ಮೊದಲು ಬೇಯುತ್ತದೆ. ಉಳಿದವು ನಂತರ ಬೇಯುತ್ತದೆ. ಇದು ಇಲ್ಲಿನ ಮತ್ತೊಂದು ಪವಾಡ.

Puri Jagannath Temple

ಅಲೆಗಳ ಶಬ್ದ:

ನೀವು ಒಮ್ಮೆ ದೇವಾಲಯದ ಒಳಗೆ ಕಾಲಿಟ್ಟರೆ, ಅಲ್ಲಿ ನಿಮಗೆ ಸಮುದ್ರದ ಅಲೆಗಳ ಶಬ್ದ ಕೇಳಿಸುವುದೇ ಇಲ್ಲ. ಪುರಾಣದ ಪ್ರಕಾರ, ಸುಭದ್ರಾ ದೇವಿಯು ದೇವಾಲಯವು ಪ್ರಶಾಂತತೆಯ ಸ್ಥಳವಾಗಬೇಕೆಂದು ಬಯಸಿದಳು, ಹಾಗಾಗಿ ಈ ದೇವಾಲಯದ ಒಳಗೆ ಸಮುದ್ರದ ಅಲೆಗಳ ಶಬ್ದ ಕೇಳಿಸುವುದಿಲ್ಲ ಎನ್ನಲಾಗಿದೆ.

Puri Jagannath Temple

ದೇವಾಲಯದ ಮೇಲೆ ಏನೂ ಹಾರುವುದಿಲ್ಲ:

ನೀವು ಆಕಾಶದಲ್ಲಿ ಮೇಲಕ್ಕೆ ನೋಡಿದಾಗ, ಪಕ್ಷಿಗಳು ಎತ್ತರಕ್ಕೆ ಹಾರುವುದನ್ನು ಕಾಣುತ್ತೀರಿ. ಆದರೆ ಪುರಿ ಜಗನ್ನಾಥ ದೇವಾಲಯದ ಗುಮ್ಮಟದ ಮೇಲೆ ಒಂದೇ ಒಂದು ಪಕ್ಷಿಯನ್ನು ಸಹ ನೋಡಲಾಗುವುದಿಲ್ಲ. ಯಾವುದೇ ಪಕ್ಷಿ ಗುಮ್ಮಟದ ಮೇಲೇ ಹಾರುವುದಿಲ್ಲ, ಯಾವುದೇ ವಸ್ತುವು ಹಾರುವುದಿಲ್ಲ. ಇದಕ್ಕೆ ಇನ್ನೂ ಯಾವುದೇ ತಾರ್ಕಿಕ ಸ್ಪಷ್ಟೀಕರಣ ಸಿಕ್ಕಿಲ್ಲ.

Puri Jagannath Temple

ಚಕ್ರದ ದಿಕ್ಕು:

ದೇವಾಲಯದ ಮೇಲ್ಭಾಗದಲ್ಲಿ ಅದೃಷ್ಟ ಚಕ್ರವಿದೆ. ಅದು ಸುಮಾರು ಒಂದು ಟನ್ ತೂಕವಿದೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಪುರಿಯ ಯಾವುದೇ ಸ್ಥಳದಲ್ಲಿ ನಿಂತು ಚಕ್ರವನ್ನು ಎತ್ತರದಿಂದ ಯಾವುದೇ ದಿಕ್ಕಿನಲ್ಲಿ ನೋಡಿದರೂ ವೀಕ್ಷಕರಿಗೆ ಯಾವಾಗಲೂ ಚಕ್ರವು ತನ್ನ ಕಡೆಗೆ ಮುಖ ಮಾಡಿರುವಂತೆ ಕಾಣುತ್ತದೆ. ಇನ್ನೂ ನಿಗೂಢವಾದ ವಿಚಾರವೇನೆಂದರೆ, 12ನೇ ಶತಮಾನದ ಜನರು ದೇವಾಲಯದ ಮೇಲ್ಭಾಗದಲ್ಲಿ ಇಷ್ಟು ಭಾರವಾದ ಚಕ್ರವನ್ನು ಹೇಗೆ ಹಾಕಿದರು ಎಂಬುದು!

Puri Jagannath Temple

ಪ್ರಸಾದದ ರಹಸ್ಯ:

ಪ್ರತಿವರ್ಷ ಲಕ್ಷಾಂತರ ಯಾತ್ರಾರ್ಥಿಗಳು ಈ ಪವಿತ್ರ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ರಥಯಾತ್ರೆ ಅಥವಾ ಜಗನ್ನಾಥನ ಪೂಜಾ ದಿನಗಳಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಯಾತ್ರಾರ್ಥಿಗಳು ಬರುತ್ತಾರೆ. ಆದರೆ ಪ್ರತಿದಿನ ಅಷ್ಟೇ ಪ್ರಮಾಣದಲ್ಲಿ ಪ್ರಸಾದವನ್ನು ಬೇಯಿಸಲಾಗುತ್ತದೆ. ಯಾವುದೇ ದಿನಗಳಲ್ಲಿ, ಪ್ರಸಾದವು ವ್ಯರ್ಥವಾಗುವುದಿಲ್ಲ, ಮತ್ತು ಯಾವುದೇ ಭಕ್ತರು ಪ್ರಸಾದವಿಲ್ಲದೆ ಹಿಂತಿರುಗುವುದಿಲ್ಲ.

ಇದನ್ನೂ ಓದಿ: ಕೀರ್ತಿ ಚಕ್ರ ಸ್ವೀಕರಿಸಿದ ಹುತಾತ್ಮ ಯೋಧನ ಪತ್ನಿ; ಭಾವುಕರಾದ ದ್ರೌಪದಿ ಮುರ್ಮು‌,ರಾಜನಾಥ್ ಸಿಂಗ್!

Puri Jagannath Temple

ಹಿಮ್ಮುಖ ಸಮುದ್ರದ ಗಾಳಿ:

ಇದು ಸಾಮಾನ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ಹಗಲಿನಲ್ಲಿ ಸಂಭವಿಸುವ ನೈಸರ್ಗಿಕ ವಿದ್ಯಮಾನವಾಗಿದೆ, ಗಾಳಿಯು ಸಮುದ್ರದಿಂದ ಭೂಮಿಯ ಕಡೆಗೆ ಬೀಸುತ್ತದೆ ಮತ್ತು ಸಂಜೆಯ ಸಮಯದಲ್ಲಿ ಅದು ಭೂಮಿಯಿಂದ ಸಮುದ್ರದ ಕಡೆಗೆ ಬೀಸುತ್ತದೆ. ಆದರೆ ಪುರಿಯಲ್ಲಿ, ಇದು ವಿರುದ್ಧ ರೂಪದಲ್ಲಿ ನಡೆಯುತ್ತದೆ!

Exit mobile version