Site icon Vistara News

Radhika Merchant: ಪ್ಯಾರಿಸ್‌ಗೆ ಹೋದರೂ ಅಂಬಾನಿ ಸೊಸೆ ಕರಿಮಣಿ ಮರೆಯಲಿಲ್ಲ! ಸೋಷಿಯಲ್‌ ಮೀಡಿಯಾದಲ್ಲೀಗ ಇದೇ ಚರ್ಚೆ!

Radhika Merchant

ಮುಂಬೈ : ಮದುವೆಯಾದ ಮಹಿಳೆಯರು ಮಂಗಳಸೂತ್ರ ಧರಿಸುವುದು ಹಿಂದೂ ಸಂಸ್ಕೃತಿಯಾಗಿದೆ. ಹಾಗಾಗಿ ಆಗಿನ ಕಾಲದಲ್ಲಿ ಮದುವೆಯಾದ ಎಲ್ಲಾ ಮಹಿಳೆಯರು ಕೊರಳಿನಲ್ಲಿ ಮಂಗಳಸೂತ್ರ ಧರಿಸುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಕೆಲವು ಮಹಿಳೆಯರು ಮಂಗಳಸೂತ್ರ ಧರಿಸುವುದಿಲ್ಲ. ಫ್ಯಾಷನ್‌ ಹೆಸರಿನಲ್ಲಿ ಕೆಲವರು ಮಂಗಳಸಸೂತ್ರವನ್ನು ಕಾಲಿಗೆ ಕಟ್ಟಿಕೊಂಡಿದ್ದೂ ಇದೆ! ಅಂತಹದರಲ್ಲಿ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್ (Radhika Merchant) ಅವರು ಕೊರಳಿನಲ್ಲಿ ಮಂಗಳಸೂತ್ರ ಧರಿಸಿ ಪ್ಯಾರಿಸ್‌ನಲ್ಲಿ ಮಿಂಚಿದ್ದು ಸಾಮಾನ್ಯ ಜನರಲ್ಲಿ ಚರ್ಚೆಗೆ ಕಾರಣವಾಗಿದೆ. ಅದಕ್ಕೆ ಸಂಬಂಧಪಟ್ಟ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಕಂಡು ಹಲವರು ರಾಧಿಕಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಿಲಯನ್ಸ್ ಫೌಂಡೇಶನ್ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಡಿಯಲ್ಲಿ ಬರುವ ಇಂಡಿಯಾ ಹೌಸ್‍ಗೆ ಐಒಸಿ ಸದಸ್ಯೆಯಾದ ಅನಂತ್ ಅವರ ತಾಯಿ ನೀತಾ ಅಂಬಾನಿಯವರ ಜೊತೆ ಅವರ ಕುಟುಂಬ ಸದಸ್ಯರು 2024ರ ಪ್ಯಾರಿಸ್ ಒಲಿಂಪಿಕ್ಸ್ ವೀಕ್ಷಿಸಲು ಇಂಡಿಯಾ ಹೌಸ್‍ಗೆ ಭೇಟಿ ನೀಡಿದ್ದಾರೆ. ಆ ವೇಳೆ ನವವಿವಾಹಿತರಾದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಂಪತಿ ತಮ್ಮ ಕುಟುಂಬದ ಜೊತೆ ಇಂಡಿಯಾ ಹೌಸ್‍ಗೆ ಹೋಗಿದ್ದಾರೆ. ಅವರ ವಿಡಿಯೊಗಳು ಮತ್ತು ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ.

ಈ ವೇಳೆ ರಾಧಿಕಾ ಕಿತ್ತಳೆ ಬಣ್ಣದ ವೆಸ್ಟರ್ನ್ ಡ್ರೆಸ್ ಧರಿಸಿದ್ದರೆ, ಅನಂತ್ ಪ್ರಾಣಿಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಪ್ರಾಣಿಗಳ ಗುರುತುಗಳನ್ನು ಹೊಂದಿರುವ ಶರ್ಟ್‍ನ್ನು ಧರಿಸಿದ್ದರು. ಆದರೆ ಪ್ಯಾರಿಸ್‍ನಲ್ಲಿ ಫ್ಯಾಶನ್‍ಗಾಗಿ ರಾಧಿಕಾ ವೆಸ್ಟರ್ನ್ ಡ್ರೆಸ್ ಧರಿಸಿದ್ದರೂ ಕೂಡ ಭಾರತದ ಸಂಸ್ಕೃತಿಯನ್ನು ಮರೆಯಲಿಲ್ಲ. ಅವರು ತಮ್ಮ ಕೊರಳಿನಲ್ಲಿ ಮಂಗಳಸೂತ್ರವನ್ನು ಧರಿಸಿದ್ದರು. ಇದನ್ನು ಕಂಡು ಹಲವರು ರಾಧಿಕಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀಮಂತ ಮನೆತನದ ಸೊಸೆಯಾದರೂ ಸಂಪ್ರದಾಯವನ್ನು ಪಾಲಿಸಿದ್ದಕ್ಕೆ ಹಲವರು ರಾಧಿಕಾಳನ್ನು ಹೊಗಳಿದ್ದಾರೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಅವರ ವಿವಾಹ ಮಹೋತ್ಸವವು ಭಾರತೀಯ ಆಚರಣೆಗಳು, ಪದ್ಧತಿಗಳು ಮತ್ತು ಸಂಪ್ರದಾಯಗಳ ಬಗ್ಗೆ ಅವರ ಕುಟುಂಬಗಳಿಗೆ ಆಳವಾದ ಗೌರವವನ್ನು ಬಹಿರಂಗಪಡಿಸಿತ್ತು. ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಹಿಂದೂದೇವರ ಪೋಟೊಗಳನ್ನು ಹಾಕುವುದನ್ನು ಈ ಕುಟುಂಬ ಮರೆಯಲಿಲ್ಲ. ಹಾಗೇ ಮದುವೆಗೂ ಮುನ್ನಕುಟುಂಬದವರು ಮನೆಯಲ್ಲಿ ದೇವರ ಪೂಜೆ, ಹೋಮಗಳನ್ನು ಮಾಡಿಸಿದ್ದರು. ಅಲ್ಲದೇ ಜುಲೈ 12ರಿಂದ 14ರ ತನಕ ಆಚರಿಸಲಾದ ವಿವಾಹಮಹೋತ್ಸವದಲ್ಲಿ ಕೂಡ ಈ ಕುಟುಂಬದವರು ತಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಚಾಚು ತಪ್ಪದೇ ಪಾಲಿಸಿದ್ದಾರೆ.

ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಗೌರಿ ಖಾನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಕಿಮ್ ಕಾರ್ದಶಿಯಾನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮದುವೆಗೆ ಸಾಕ್ಷಿಯಾದರು.

ಇದನ್ನೂ ಓದಿ: ಅಮೆಜಾನ್‌ನಲ್ಲಿ 55,000 ರೂ. ಮೊಬೈಲ್ ಫೋನ್ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದು ಟೀ ಕಪ್!

ಜುಲೈ 12ರಂದು ಭವ್ಯ ಸಮಾರಂಭದೊಂದಿಗೆ ವಿವಾಹ ಮಹೋತ್ಸವ ಪ್ರಾರಂಭವಾಯಿತು, ನಂತರ ಜುಲೈ 13ರಂದು ‘ಶುಭ ಆಶೀರ್ವಾದ್’ ಸಮಾರಂಭ ನಡೆಯಿತು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಸಿದ್ಧ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು. ಜುಲೈ 14ರಂದು ನಡೆದ ನಂತರದ ಭವ್ಯ ಆರತಕ್ಷತೆಯಲ್ಲಿ ಮನರಂಜನಾ ಉದ್ಯಮದ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು.

Exit mobile version