Site icon Vistara News

IPL 2024 : ‘ಆಲ್​ರೌಂಡರ್​’ ಪಾಂಡ್ಯ ನೇತೃತ್ವದ ಮುಂಬೈ ತಂಡವನ್ನು ಸೋಲಿಸಿದ ರಾಹುಲ್ ನಾಯಕತ್ವದ ಲಕ್ನೊ

IPL 2024

ಲಖನೌ: ಮಾರ್ಕ್​ ಸ್ಟೊಯ್ನಿಸ್ (62) ಬಾರಿಸಿದ ಅರ್ಧ ಶತಕದ ನೆರವು ಪಡೆದ ಲಕ್ನೊ ಸೂಪರ್ ಜೈಂಟ್ಸ್​ ತಂಡ ಐಪಿಎಲ್​ನ (IPL 2024) 48ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿದೆ. ಇದು ಲಕ್ನೊ ತಂಡಕ್ಕೆ 10 ಪಂದ್ಯಗಳಲ್ಲಿ 6ನೇ ಗೆಲುವಾಗಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತೇರ್ಗಡೆ ಪಡೆದುಕೊಂಡಿದೆ. ಇದೇ ವೇಳೆ ಮುಂಬೈ ತಂಡ ಹ್ಯಾಟ್ರಿಕ್​ ಸೋಲಿಗೆ ಒಳಗಾಗಿದ್ದು 9ನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಮುಂಬೈ ತಂಡ 10ರಲ್ಲಿ ಏಳು ಪಂದ್ಯಗಳನ್ನು ಸೋತು ಕೇವಲ 6 ಅಂಕಗಳನ್ನು ಹೊಂದಿದೆ.

ಇಲ್ಲಿನ ಶ್ರೀ ಅಟಲ್​ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆ. ಎಲ್​ ರಾಹುಲ್ ಬಳಗ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಮುಂಬೈ ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್ ನಷ್ಟಕ್ಕೆ 144 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಲಕ್ನೊ ತಂಡ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್​ಗೆ 145 ರನ್ ಬಾರಿಸಿ ಗೆಲುವು ಸಾಧಿಸಿತು.

ಮೊದಲು ಬ್ಯಾಟ್​ ಮಾಡಿದ ಮುಂಬೈ ತಂಡ ಆರಂಭದಿಂದಲೇ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಇಶಾನ್ ಕಿಶನ್​ 32 ರನ್ ಬಾರಿಸಿದೂ ಅವರ ಪಾಲುದಾರ ರೋಹಿತ್ ಶರ್ಮಾ 4 ರನ್​ಗಳಿಗೆ ಔಟಾದರು. ಸೂರ್ಯಕುಮಾರ್ ಯಾದವ್​ ಕೂಡ 10 ರನ್​ಗೆ ಸೀಮಿತಗೊಂಡರು. ತಿಲಕ್​ ವರ್ಮಾ 7 ರನ್ ಬಾರಿಸಿ ರನ್​ಔಟ್​ಗೆ ಬಲಿಯಾದರು. ಆಲ್​ರೌಂಡರ್​ ಎಂದೇ ಖ್ಯಾತಿ ಪಡೆದ ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ನೇಹಲ್ ವದೇರಾ (46) ರನ್ ಬಾರಿಸಿದರೆ ಟಿಮ್​ ಡೇವಿಡ್​ ಅಮೂಲ್ಯ 35 ರನ್ ಕೊಡುಗೆ ಕೊಟ್ಟರು. ಹೀಗಾಗಿ ಸ್ಪರ್ಧಾತ್ಮಕ ಮೊತ್ತ ಬಾರಿಸಿತು ಮುಂಬಯಿ.

ಇದನ್ನೂ ಓದಿ: T20 World Cup : ಈ ದಿನದಂದು ವಿಶ್ವ ಕಪ್​ಗಾಗಿ ಯುಎಸ್​ಎಗೆ ಹೊರಡಲಿದೆ ಟೀಮ್ ಇಂಡಿಯಾ

ಲಕ್ನೊ ಗೂ ಆಘಾತ

ಗುರಿ ಬೆನ್ನಟ್ಟಲು ಆರಂಭಿಸಿದ ಲಕ್ನೊ ತಂಡವೂ ಆರಂಭಿಕ ಆಘಾತ ಎದುರಿಸಿತು. ಪದಾರ್ಪಣೆ ಬ್ಯಾಟರ್ ಅರ್ಶಿನ್ ಕುಲಕರ್ಣಿ ಶೂನ್ಯಕ್ಕೆ ಔಟಾದರು. ಆದರೆ ರಾಹುಲ್​ 28 ರನ್ ಬಾರಿಸಿ ತಂಡಕ್ಕೆ ಚೈತನ್ಯ ತಂದರು. ಬಳಿಕ ಆಡಲು ಇಳಿದ ಸ್ಟೊಯ್ನಿಸ್​ ಅಗತ್ಯ ಅರ್ಧ ಶತಕ ಗಳಿಸಿದರು. ದೀಪಕ್​ ಹೂಡ 18 ರನ್ ಬಾರಿಸಿದರೆ ನಿಕೋಲಸ್ ಪೂರನ್​ 14 ರನ್ ಕೊಡುಗೆ ಕೊಟ್ಟರು. ಟರ್ನರ್​ ಹಾಗೂ ಅಯುಷ್ ಬದೋನಿ ಅನುಕ್ರಮವಾಗಿ 5 ಹಾಗೂ 6 ರನ್ ಬಾರಿಸಿದರು.

Exit mobile version