IPL 2024 : 'ಆಲ್​ರೌಂಡರ್​' ಪಾಂಡ್ಯ ನೇತೃತ್ವದ ಮುಂಬೈ ತಂಡವನ್ನು ಸೋಲಿಸಿದ ರಾಹುಲ್ ನಾಯಕತ್ವದ ಲಕ್ನೊ - Vistara News

Latest

IPL 2024 : ‘ಆಲ್​ರೌಂಡರ್​’ ಪಾಂಡ್ಯ ನೇತೃತ್ವದ ಮುಂಬೈ ತಂಡವನ್ನು ಸೋಲಿಸಿದ ರಾಹುಲ್ ನಾಯಕತ್ವದ ಲಕ್ನೊ

IPL 2024: ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಮುಂಬೈ ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್ ನಷ್ಟಕ್ಕೆ 144 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಲಕ್ನೊ ತಂಡ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್​ಗೆ 145 ರನ್ ಬಾರಿಸಿ ಗೆಲುವು ಸಾಧಿಸಿತು.

VISTARANEWS.COM


on

IPL 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಲಖನೌ: ಮಾರ್ಕ್​ ಸ್ಟೊಯ್ನಿಸ್ (62) ಬಾರಿಸಿದ ಅರ್ಧ ಶತಕದ ನೆರವು ಪಡೆದ ಲಕ್ನೊ ಸೂಪರ್ ಜೈಂಟ್ಸ್​ ತಂಡ ಐಪಿಎಲ್​ನ (IPL 2024) 48ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿದೆ. ಇದು ಲಕ್ನೊ ತಂಡಕ್ಕೆ 10 ಪಂದ್ಯಗಳಲ್ಲಿ 6ನೇ ಗೆಲುವಾಗಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತೇರ್ಗಡೆ ಪಡೆದುಕೊಂಡಿದೆ. ಇದೇ ವೇಳೆ ಮುಂಬೈ ತಂಡ ಹ್ಯಾಟ್ರಿಕ್​ ಸೋಲಿಗೆ ಒಳಗಾಗಿದ್ದು 9ನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಮುಂಬೈ ತಂಡ 10ರಲ್ಲಿ ಏಳು ಪಂದ್ಯಗಳನ್ನು ಸೋತು ಕೇವಲ 6 ಅಂಕಗಳನ್ನು ಹೊಂದಿದೆ.

ಇಲ್ಲಿನ ಶ್ರೀ ಅಟಲ್​ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆ. ಎಲ್​ ರಾಹುಲ್ ಬಳಗ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಮುಂಬೈ ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್ ನಷ್ಟಕ್ಕೆ 144 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಲಕ್ನೊ ತಂಡ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್​ಗೆ 145 ರನ್ ಬಾರಿಸಿ ಗೆಲುವು ಸಾಧಿಸಿತು.

ಮೊದಲು ಬ್ಯಾಟ್​ ಮಾಡಿದ ಮುಂಬೈ ತಂಡ ಆರಂಭದಿಂದಲೇ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಇಶಾನ್ ಕಿಶನ್​ 32 ರನ್ ಬಾರಿಸಿದೂ ಅವರ ಪಾಲುದಾರ ರೋಹಿತ್ ಶರ್ಮಾ 4 ರನ್​ಗಳಿಗೆ ಔಟಾದರು. ಸೂರ್ಯಕುಮಾರ್ ಯಾದವ್​ ಕೂಡ 10 ರನ್​ಗೆ ಸೀಮಿತಗೊಂಡರು. ತಿಲಕ್​ ವರ್ಮಾ 7 ರನ್ ಬಾರಿಸಿ ರನ್​ಔಟ್​ಗೆ ಬಲಿಯಾದರು. ಆಲ್​ರೌಂಡರ್​ ಎಂದೇ ಖ್ಯಾತಿ ಪಡೆದ ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ನೇಹಲ್ ವದೇರಾ (46) ರನ್ ಬಾರಿಸಿದರೆ ಟಿಮ್​ ಡೇವಿಡ್​ ಅಮೂಲ್ಯ 35 ರನ್ ಕೊಡುಗೆ ಕೊಟ್ಟರು. ಹೀಗಾಗಿ ಸ್ಪರ್ಧಾತ್ಮಕ ಮೊತ್ತ ಬಾರಿಸಿತು ಮುಂಬಯಿ.

ಇದನ್ನೂ ಓದಿ: T20 World Cup : ಈ ದಿನದಂದು ವಿಶ್ವ ಕಪ್​ಗಾಗಿ ಯುಎಸ್​ಎಗೆ ಹೊರಡಲಿದೆ ಟೀಮ್ ಇಂಡಿಯಾ

ಲಕ್ನೊ ಗೂ ಆಘಾತ

ಗುರಿ ಬೆನ್ನಟ್ಟಲು ಆರಂಭಿಸಿದ ಲಕ್ನೊ ತಂಡವೂ ಆರಂಭಿಕ ಆಘಾತ ಎದುರಿಸಿತು. ಪದಾರ್ಪಣೆ ಬ್ಯಾಟರ್ ಅರ್ಶಿನ್ ಕುಲಕರ್ಣಿ ಶೂನ್ಯಕ್ಕೆ ಔಟಾದರು. ಆದರೆ ರಾಹುಲ್​ 28 ರನ್ ಬಾರಿಸಿ ತಂಡಕ್ಕೆ ಚೈತನ್ಯ ತಂದರು. ಬಳಿಕ ಆಡಲು ಇಳಿದ ಸ್ಟೊಯ್ನಿಸ್​ ಅಗತ್ಯ ಅರ್ಧ ಶತಕ ಗಳಿಸಿದರು. ದೀಪಕ್​ ಹೂಡ 18 ರನ್ ಬಾರಿಸಿದರೆ ನಿಕೋಲಸ್ ಪೂರನ್​ 14 ರನ್ ಕೊಡುಗೆ ಕೊಟ್ಟರು. ಟರ್ನರ್​ ಹಾಗೂ ಅಯುಷ್ ಬದೋನಿ ಅನುಕ್ರಮವಾಗಿ 5 ಹಾಗೂ 6 ರನ್ ಬಾರಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

ತಮಿಳುನಾಡು ರಾಜಕೀಯಕ್ಕೆ ರೋಚಕ ಟ್ವಿಸ್ಟ್‌, ದಳಪತಿ ಪ್ರಮಾಣವಚನಕ್ಕೆ ಬ್ರೇಕ್‌, ಡಿಎಂಕೆ-ಎಐಎಡಿಎಂಕೆ ಮೈತ್ರಿ ಸಾಧ್ಯತೆ

VISTARANEWS.COM


on

ತಮಿಳುನಾಡು ರಾಜಕೀಯಕ್ಕೆ ರೋಚಕ ಟ್ವಿಸ್ಟ್‌, ದಳಪತಿ ಪ್ರಮಾಣವಚನಕ್ಕೆ ಬ್ರೇಕ್‌, ಡಿಎಂಕೆ-ಎಐಎಡಿಎಂಕೆ ಮೈತ್ರಿ ಸಾಧ್ಯತೆ. ತಮಿಳು ರಾಜಕೀಯದಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್‌ ಮ್ಯಾಜಿಕ್‌ ಮಾಡಿದ್ದಾರೆ. ಯಾರೂ ಊಹಿಸದ ರೀತಿಯಲ್ಲಿ ರಾತೋರಾತ್ರಿ ರಾಜಕೀಯವಾಗಿ ಬೆಳೆದುಬಿಟ್ಟಿದ್ದಾರೆ. ಸದ್ಯ ತಮಿಳುನಾಡು ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿರುವ ಏಕೈಕ ನಾಯಕ ದಳಪತಿ. ಆದರೆ, ವಿಜಯ್‌ ಬಳಿ ಬಹುಮತಕ್ಕೆ ಬೇಕಾದಷ್ಟು ಶಾಸಕರ ಬಲ ಇಲ್ಲ. ೧೧೮ ಶಾಸಕರ ಬಲವನ್ನು ವಿಜಯ್‌ ಹೇಗೆ ಹೊಂದಿಸ್ತಾರೆ, ವಿಜಯ್‌ ಬಹುಮತಕ್ಕೆ ಸರ್ಕಸ್‌ ಮಾಡ್ತಿರುವಾಗಲೇ, ತಮಿಳು ರಾಜಕೀಯದಲ್ಲಿ ಮತ್ತೊಂದು ಸ್ಫೋಟಕ ಬೆಳವಣಿಗೆ ಆಗಬಹುದಾ? ಇಲ್ಲಿದೆ ಡೀಟೆಲ್‌ ರಿಪೋರ್ಟ್‌
ತಮಿಳುನಾಡು ರಾಜಕೀಯದಲ್ಲಿ ಕ್ಷಣ ಕ್ಷಣಕ್ಕೂ ರೋಚಕ ಟ್ವಿಸ್ಟ್‌, ವಿಜಯ್‌ ಪ್ರಮಾಣವಚನಕ್ಕೆ ಬ್ರೇಕ್‌, ಡಿಎಂಕೆ-ಎಐಎಡಿಎಂಕೆ ಮೈತ್ರಿ ಸಾಧ್ಯತೆ, ಹೌದು, ತಮಿಳುನಾಡಿನಲ್ಲಿ ಸದ್ಯ ಅತಂತ್ರ ಸ್ಥಿತಿ ಉಂಟಾಗಿದೆ. ಯಾವ ಪಕ್ಷಕ್ಕೂ ಸಂಪೂರ್ಣ ಬಹುಮತ ಇಲ್ಲ. ೨೩೪ ಸದಸ್ಯ ಬಲದ ಅಸೆಂಬ್ಲಿಯಲ್ಲಿ ಅಧಿಕಾರಕ್ಕೇರಲು ಯಾವುದೇ ಪಕ್ಷಕ್ಕೆ ೧೧೮ ಶಾಸಕರ ಬಲ ಬೇಕು. ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊಮ್ಮಿದೆ. ಆದರೆ, ಶಾಸಕರ ಬಲ ಮಾತ್ರ ೧೦೮. ಅದ್ರಲ್ಲೂ ವಿಜಯ್‌ ಒಂದು ಕ್ಷೇತ್ರ ತ್ಯಾಗ ಮಾಡಬೇಕು. ಆಗ ಟಿವಿಕೆ ಶಾಸಕರ ಸಂಖ್ಯೆ ೧೦೭. ಬಹುಮತಕ್ಕೆ ಇನ್ನೂ ೧೧ ಶಾಸಕರು ಬೇಕು. ಈ ಹನ್ನೊಂದರ ಬಿಕ್ಕಟ್ಟೇ ತಮಿಳುನಾಡಲ್ಲಿ ಬ್ರಹನ್ನಾಟಕ ಸೃಷ್ಟಿಸಿದೆ.


ಟಿವಿಕೆ ಮುಖ್ಯಸ್ಥ ವಿಜಯ್‌, ತಮಿಳುನಾಡು ರಾಜ್ಯಪಾಲರನ್ನು ಎರಡು ಸಲ ಭೇಟಿ ಮಾಡಿ, ಸರ್ಕಾರ ರಚನೆ ಹಕ್ಕು ಮಂಡಿಸಿದ್ದಾರೆ. ಎರಡೂ ಸಲವೂ, ಎಲ್ಲಾ ೧೧೮ ಶಾಸಕರ ಬೆಂಬಲದ ಪತ್ರ ನೀಡಿ ಎಂದಿದ್ದಾರೆ ಗವರ್ನರ್. ವಿಜಯ್‌ ಬಳಿ ಸದ್ಯ ಇರೋದು‌, ತನ್ನ ೧೦೭ ಶಾಸಕರು ಪ್ಲಸ್‌ ಕಾಂಗ್ರೆಸ್‌ನ ಐವರು ಶಾಸಕರು, ಒಟ್ಟು ೧೧೨ ಎಂಎಲ್‌ಎಗಳ ಬಲ. ಬಹುಮತ ಸಾಬೀತುಪಡಿಸಲು ಇನ್ನೂ ಆರು ಶಾಸಕರ ಕೊರತೆ ಟಿವಿಕೆಯನ್ನು ಕಾಡುತ್ತಿದೆ. ಹಾಗಾಗಿ, ಸದ್ಯ ವಿಜಯ್‌ ಪ್ರಮಾಣವಚನ ಸ್ವೀಕಾರ ಮಾಡುವ ಸಾಧ್ಯತೆಗಳು ಕಡಿಮೆ.
ಈ ನಡುವೆ, ತಮಿಳುನಾಡು ಪಾಲಿಟಿಕ್ಸ್‌ಗೆ ಹೊಸ ತಿರುವು ಸಿಕ್ಕಿದೆ. ವಿಜಯ್‌ ಪ್ರಮಾಣವಚನಕ್ಕೆ ಬ್ರೇಕ್‌ ಬಿದ್ದ ಬೆನ್ನಲ್ಲೇ, ಬದ್ಧ ವೈರಿಗಳಾದ ಡಿಎಂಕೆ-ಎಐಎಡಿಎಂಕೆ ನಡುವೆ ಮೈತ್ರಿಯ ಸುದ್ದಿಗಳು ಹೊರಬರುತ್ತಿವೆ. ರಾಜಕೀಯದಲ್ಲಿ ಯಾವುದೂ ಅಸಾಧ್ಯ ಇಲ್ಲ. ಬದ್ಧ ವೈರಿಗಳು ಒಂದಾದರೆ ಯಾವುದೇ ಅಶ್ಚರ್ಯ ಪಡಬೇಕಿಲ್ಲ. ಹಾಗಾಗಿ, ಡಿಎಂಕೆ-ಎಐಎಡಿಎಂಕೆ ನಡುವೆ ಮೈತ್ರಿ ತಳ್ಳಿ ಹಾಕುವ ಹಾಗಿಲ್ಲ. ಸದ್ಯ ಎರಡೂ ಪಕ್ಷಗಳು ಈ ಸುದ್ಧಿಯನ್ನು ದೃಢಪಡಿಸಿಲ್ಲ. ತಮಿಳುನಾಡಿನಲ್ಲಿ ಡಿಎಂಕೆ ೫೯ , ಎಐಎಡಿಎಂಕೆ ೪೭ ಎಂಎಲ್ಎಗಳನ್ನು ಹೊಂದಿವೆ. ಎರಡೂ ಪಕ್ಷಗಳ ಒಟ್ಟು ಬಲ ೧೦೬ ಆಗುತ್ತೆ. ಮೈತ್ರಿ ಆದ್ರೂ, ಬಹುಮತಕ್ಕೆ ಅಲ್ಲಿಯೂ ೧೨ ಶಾಸಕರ ಕೊರತೆ ಉಂಟಾಗುತ್ತೆ. ಮತ್ತೆ, ಮುಸ್ಲೀಂ ಲೀಗ್‌, ಎಡಪಕ್ಷ ಹಾಗೂ ವಿಸಿಕೆ ಬೆಂಬಲ ಅನಿವಾರ್ಯ ಆಗುತ್ತೆ.
ಇಷ್ಟೇ ಅಲ್ಲ, ಈ ಎಲ್ಲಾ ಬೆಳವಣಿಗೆ ಮಧ್ಯದಲ್ಲೇ ಅಣ್ಣಾಡಿಎಂಕೆ ಪಾರ್ಟಿ ಒಡೆಯುತ್ತಾ ಅನ್ನೋ ಅನುಮಾನ ಶುರುವಾಗಿದೆ. ಪಕ್ಷದ ಒಂದು ಬಣ, ಟಿವಿಕೆಗೆ ಬೆಂಬಲ ನೀಡಲು ಪಕ್ಷದೊಳಗೇ ರಣತಂತ್ರ ರೂಪಿಸುತ್ತಿದೆ. ಹಾಗಾಗಿ ಸಂಭಾವ್ಯ ಕುದುರೆ ವ್ಯಾಪಾರ ತಪ್ಪಿಸಲು, ಎಐಎಡಿಎಂಕೆ, ತನ್ನ ಶಾಸಕರನ್ನು ಪುದುಚೇರಿಯ ರೆಸಾರ್ಟ್‌ಗೆ ಶಿಫ್ಟ್‌ ಮಾಡುತ್ತಿದೆ. ಸುಮಾರು ೪೦ ಶಾಸಕರನ್ನು ಈಗಾಗಲೇ ಶಿಫ್ಟ್‌ ಮಾಡಲಾಗಿದೆ. ರೆಸಾರ್ಟ್‌ನಲ್ಲಿರುವ ಎಲ್ಲಾ ರೂಮ್‌ಗಳು ಬುಕ್‌ ಆಗಿವೆ.
ಮತ್ತೊಂದು ಕಡೆ, ವಿಜಯ್‌ ನೇತೃತ್ವದ ಟಿವಿಕೆಗೆ ಈ ರೀತಿಯ ಪವರ್‌ ಪಾಲಿಟಿಕ್ಸ್‌ ಸಂಪೂರ್ಣ ಹೊಸತು. ಯಾವುದೇ ರಾಜಕೀಯ ಅನುಭವ ಇಲ್ಲದ ಟಿವಿಕೆ ಮುಖ್ಯಸ್ಥ ವಿಜಯ್‌, ಹೇಗೆ ತಮಿಳುನಾಡು ಸಿಎಂ ಆಗ್ತಾರೆ, ಆದರೂ ಬಹುಮತ ಸಾಬೀತುಪಡಿಸುವಲ್ಲಿ ಸಕ್ಸಸ್‌ ಆಗ್ತಾರಾ ಅನ್ನೋದು ಸದ್ಯದ ಸಸ್ಪೆನ್ಸ್‌.

Continue Reading

Latest

ಪಶ್ಚಿಮ ಬಂಗಾಳದಲ್ಲಿ ಕೇಸರಿ ಪರ್ವ: ಯಾರಾಗಲಿದ್ದಾರೆ ʼಸಿಎಂʼ?

VISTARANEWS.COM


on

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹೊಸ ಸರ್ಕಾರ ರಚನೆ ಕಸರತ್ತುಗಳು ತೀವ್ರಗೊಳ್ಳುತ್ತಿವೆ. ಮೇ 9ರಂದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳಿವೆ. ಶನಿವಾರ ಪ್ರಮಾಣವಚನ ಸಮಾರಂಭ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಶುಕ್ರವಾರಕ್ಕೂ ಮೊದಲು ಹೊಸ ಸಿಎಂ ಹೆಸರು ಘೋಷಣೆಯಾಗಲಿದೆ. ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅಮಿತ್‌ ಶಾ ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಿರುವ ಎಲ್ಲಾ ಶಾಸಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಆ ಬಳಿಕ ಹೊಸ ಮುಖ್ಯಮಂತ್ರಿಯ ಘೋಷಣೆಯಾಗಲಿದೆ. ಮುಖ್ಯಮಂತ್ರಿ ರೇಸ್‌ನಲ್ಲಿ ಸುವೆಂದು ಅಧಿಕಾರಿ ಮುಂಚೂಣಿಯಲ್ಲಿದ್ದಾರೆ. ದಿಲೀಪ್‌ ಘೋಷ್‌, ಶಮಿಕ್‌ ಭಟ್ಟಾಚಾರ್ಯ, ರೂಪಾ ಗಂಗೂಲಿ ಹೆಸರುಗಳೂ ಕೇಳಿಬರುತ್ತಿವೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕವೂ ತಾನು ಯಾವುದೇ ಕಾರಣಕ್ಕೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎನ್ನುತ್ತಿದ್ದಾರೆ ಮಮತಾ ಬ್ಯಾನರ್ಜಿ. ಇದೇ ವೇಳೆ ಶುಕ್ರವಾರ ಪಶ್ಚಿಮ ಬಂಗಾಳ ವಿಧಾನಸಭೆ ಅವಧಿ ಮುಗಿಯಲಿದೆ. ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡಲಿ, ಕೊಡದೇ ಇರಲಿ, ಅದು ಯಾವುದೇ ಪರಿಣಾಮ ಬೀರಲ್ಲ. ಯಾಕಂದರೆ, ವಿಧಾನಸಭೆಯ ಅವಧಿ ಮುಗಿದ ಬಳಿಕ ಸಂಪೂರ್ಣ ಮಂತ್ರಿ ಮಂಡಲವೇ ಮಾಜಿ ಆಗಲಿದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ತನಕ ಕೇರ್‌ ಟೇಕರ್‌ ಆಗಿ ಮಮತಾ ಬ್ಯಾನರ್ಜಿ ಇರಬಹುದು, ಅಷ್ಟೇ. ಹಾಗಾಗಿ ಈಗ ಮಮತಾ ಬ್ಯಾನರ್ಜಿ ರಾಜೀನಾಮೆ ಪ್ರಶ್ನೆಯೇ ಅಪ್ರಸ್ತುತ.

Continue Reading

Latest

ದಳಪತಿʼ ಪಟ್ಟಾಭಿಷೇಕಕ್ಕೆ ಕ್ಷಣಗಣನೆ : ತಮಿಳುನಾಡು ರಾಜಕಾರಣದಲ್ಲಿ ಬಿರುಗಾಳಿ

VISTARANEWS.COM


on

ತಮಿಳುನಾಡಿನಲ್ಲಿ ಇದೀಗ ಹೊಸ ಶಕೆ ಆರಂಭವಾಗಲಿದೆ. ಜೆನ್‌ ಜಿ ಹಾಗೂ ಮಿಲೇನಿಯಲ್‌ ಗಳ ಫೇವರಿಟ್‌ ಜೋಸೆಫ್‌ ವಿಜಯ್‌ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ಮೇ.7 ಗುರುವಾರ ದಳಪತಿ ವಿಜಯ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ.

ಕಲರ್‌ಫುಲ್‌ ರಾಜಕಾರಣಕ್ಕೆ ಹೆಸರಾದ ದ್ರಾವಿಡ ನಾಡಿನಲ್ಲಿ ಮತ್ತೊಮ್ಮೆ ಚಿತ್ರನಟ ಸಿಎಂ ಆಗಿ ಅಧಿಕಾರದ ಗದ್ದುಗೆ ಏರಲಿದ್ದಾರೆ. 234 ಕ್ಷೇತ್ರಗಳನ್ನು ಹೊಂದಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್‌ ಅವರ ಟಿವಿಕೆ 108 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಅಗ್ರ ಸ್ಥಾನದಲ್ಲಿ ನಿಂತಿದೆ. ಆದರೆ, ಅಧಿಕಾರಕ್ಕೇರಲು ಇನ್ನೂ 10 ಸ್ಥಾನಗಳ ಕೊರತೆಯಿದ್ದು, ಕಾಂಗ್ರೆಸ್‌ ಸೇರಿದಂತೆ ವಿಸಿಕೆ, ಸಿಪಿಐ, ಸಿಪಿಎಂ ಬೆಂಬಲದೊಂದಿಗೆ ಮೈತ್ರಿ ಸರ್ಕಾರ ರಚಿಸಲು ದಳಪತಿ ಸೇನೆ ಸಿದ್ದತೆ ನಡೆಸುತ್ತಿದೆ. ಮತ್ತೊಂದೆಡೆ ಎಐಎಡಿಎಂಕೆ ಹಲವು ಶಾಸಕರು ಟಿವಿಕೆ ಗೆ ಬೆಂಬಲ ನೀಡುವ ಯೋಚನೆಯಲ್ಲಿದ್ದು, ಈ ವಿಚಾರದಲ್ಲಿ ಎಐಎಡಿಎಂಕೆ ಪಕ್ಷದಲ್ಲಿ ಸದ್ಯ ಭಿನ್ನಮತ ಕಾಣಿಸಿಕೊಂಡಿದೆ.

ಮೇ 7 ಗುರುವಾರ ದಳಪತಿ ಖ್ಯಾತಿಯ ವಿಜಯ್‌ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಜಯ್‌ ಜೊತೆಗೆ 9 ಜನ ಕ್ಯಾಬಿನೆಟ್‌ ಸಚಿವರು ಸಹ ಇದೇ ವೇಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ವಿಜಯ್‌ ಕ್ಯಾಬಿನೆಟ್‌ನಲ್ಲಿ ಕಾಂಗ್ರೆಸ್‌ ಸಹ ಸೇರಲಿದೆ ಎನ್ನಲಾಗುತ್ತಿದೆ. ಈಗಾಗಲೇ ವಿಜಯ್‌ ಪ್ರಮಾಣ ಸ್ವೀಕಾರಕ್ಕೆ ಚೆನ್ನೈನಲ್ಲಿ ಸಿದ್ಧತೆಗಳನ್ನು ಆರಂಭಿಸಲಾಗಿದೆ.

ನಿಷ್ಠಾವಂತ ಹಿರಿಯ ನಾಯಕರು ಹಾಗೂ ಹೊಸಬರ ಸಮ್ಮಿಲನದೊಂದಿಗೆ ವಿಜಯ್‌ ಅವರ ಕ್ಯಾಬಿನೆಟ್‌ ರಚನೆಯಾಗುವ ಸಾಧ್ಯತೆಯಿದೆ. ಇತ್ತೀಚೆಗೆ ಎಐಎಡಿಎಂಕೆಯಿಂದ ಉಚ್ಚಾಟನೆಗೊಂಡು ಟಿವಿಕೆ ಸೇರಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಹಿರಿಯ ನಾಯಕ ಕೆ.ಎ.ಸೆಂಗೋಟ್ಟೈಯನ್‌ ಅವರಿಗೆ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇದರ ಜೊತೆಗೆ ಜೆನ್‌ ಜಿ ಗಳ ಪ್ರತಿನಿಧಿಗಳಾಗಿ ಚುನಾವಣೆಯಲ್ಲಿ ಗೆದ್ದ ಯುವ ನಾಯಕರಿಗೆ ವಿಜಯ್‌ ಕ್ಯಾಬಿನೆಟ್‌ ನಲ್ಲಿ ಪ್ರಾಮುಖ್ಯತೆ ಸಿಗುವ ಸಾಧ್ಯತೆಯಿದೆ.

ಇದರ ಜೊತೆಗೆ ಟಿವಿಕೆ ಚುನಾವಣಾ ಪ್ರಣಾಳಿಕೆಯ ವೇಳೆ ತಮಿಳುನಾಡಿನ ಜನರಿಗೆ ಘೋಷಿಸಿರುವ ಉಚಿತ ಭರವಸೆಗಳನ್ನ ಹೇಗೆ ಜಾರಿಗೆ ತರಲಿದೆ, ಅವುಗಳಲ್ಲಿ ಯಾವುದಾದ್ರೂ ಒಂದು ಯೋಜನೆಯನ್ನು ಮೊದಲ ದಿನವೇ ಜಾರಿಗೆ ತರುತ್ತಾರಾ ಎಂಬ ಕುತೂಹಲವೂ ಇದೆ.

ಒಟ್ಟಿನಲ್ಲಿ ನಾಳೆಯ ವಿಜಯ್‌ ಪ್ರಮಾಣ ವಚನದ ಕಡೆಗೆ ತಮಿಳುನಾಡು ಸೇರಿದಂತೆ ದೇಶದ ಜನತೆಯ ದೃಷ್ಠಿ ನೆಟ್ಟಿದೆ. ವಿಜಯ್‌ ಅಧಿಕಾರ ಸ್ವೀಕರಿಸಿದ ನಂತರ ಫಸ್ಟ್‌ ಡೇ ಫಸ್ಟ್‌ ಶೋ ಹೇಗಿರಲಿದೆ ಅನ್ನೋದಕ್ಕೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.

Continue Reading

Latest

ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವುದಿಲ್ಲ ಎಂದಿದ್ದೇಕೆ ಮಮತಾ ಬ್ಯಾನರ್ಜಿ?

VISTARANEWS.COM


on

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹೀನಾಯವಾಗಿ ಸೋಲನುಭವಿಸಿದರೂ ತಾನು ಮಾತ್ರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದಾರೆ. ಇಂದು ಕೋಲ್ಕತ್ತಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಮತಾ ಬ್ಯಾನರ್ಜಿ ತಾವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ನಾವು ಪಶ್ಚಿಮ ಬಂಗಾಳದಲ್ಲಿ ಸೋತಿಲ್ಲ. ನಿಷ್ಪಕ್ಷಪಾತವಾಗಿ ಚುನಾವಣೆ ನಡೆದಿಲ್ಲ. ನ್ಯಾಯಯುತವಾಗಿ ಚುನಾವಣೆ ನಡೆದಿದ್ದರೆ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ. ಆದರೆ ಈಗ ರಾಜಭವನಕ್ಕೆ ಹೋಗುವ ಮಾತೇ ಇಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಇವಿಎಂಗಳ ಲೂಟಿ ಮಾಡಲಾಗಿದೆ. ಚುನಾವಣಾ ಆಯೋಗ ಬಿಜೆಪಿ ಜೊತೆ ಸೇರಿಕೊಂಡಿದೆ. ಆದರೆ ನೈತಿಕವಾಗಿ ನಾವು ಗೆಲುವನ್ನು ಸಾಧಿಸಿದ್ದೇವೆ ಎಂದಿದ್ದಾರೆ.

Continue Reading
Advertisement
Rakshit Shetty Richard Anthony Produce By Hombale
ದೇಶ14 hours ago

ಸುವೇಂದು ಅಧಿಕಾರಿ ಪ.ಬಂಗಾಳದ ಹೊಸ ಸಿಎಂ, ಶನಿವಾರ ಪ್ರಮಾಣವಚನ

ಪ್ರಮುಖ ಸುದ್ದಿ14 hours ago

ಹಡಗಿನಲ್ಲಿ ಹ್ಯಾಂಟವೈರಸ್‌ ದಾಂಗುಡಿ, ಕೊರೋನಾವನ್ನೂ ಮೀರಿಸುತ್ತಾ ಈ ಪಿಡುಗು?

ಕರ್ನಾಟಕ14 hours ago

ಜಿಬಿಎ ಚುನಾವಣೆಗೆ ಮುಹೂರ್ತ ಫಿಕ್ಸ್‌, ಮತದಾನ ಯಾವತ್ತು ಗೊತ್ತಾ?

ದೇಶ2 days ago

ಬಂಗಾಳದಲ್ಲಿ ಬಿಜೆಪಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ, ಯಾರ ಪಾಲಾಗಲಿದೆ ಮುಖ್ಯಮಂತ್ರಿ ಗದ್ದುಗೆ?

ರಾಜಕೀಯ2 days ago

ವಿಜಯ್‌ ಪ್ರಮಾಣವಚನಕ್ಕೆ ಬ್ರೇಕ್‌, ರಾಷ್ಟ್ರಪತಿಗೆ ಟಿವಿಕೆ ಪತ್ರಚೆನ್ನೈ

ರಾಜಕೀಯ2 days ago

ತಮಿಳುನಾಡು ರಾಜಕೀಯಕ್ಕೆ ರೋಚಕ ಟ್ವಿಸ್ಟ್‌, ದಳಪತಿ ಪ್ರಮಾಣವಚನಕ್ಕೆ ಬ್ರೇಕ್‌, ಡಿಎಂಕೆ-ಎಐಎಡಿಎಂಕೆ ಮೈತ್ರಿ ಸಾಧ್ಯತೆ

ಕ್ರೈಂ2 days ago

ಪ.ಬಂಗಾಳ ಶೂಟೌಟ್‌ಗೆ ಟ್ವಿಸ್ಟ್‌, ಅಸಲಿಗೆ ಸುವೇಂದು ಟಾರ್ಗೆಟ್‌ ಆಗಿದ್ರಾ?

ಕ್ರೈಂ2 days ago

ಪಶ್ಚಿಮ ಬಂಗಾಳದಲ್ಲಿ ರಕ್ತದೋಕುಳಿ, ಸುವೇಂದು ಅಧಿಕಾರಿ ಪಿಎ ಚಂದ್ರನಾಥ್‌ ಶೂಟೌಟ್‌‌..!

Latest3 days ago

ಪಶ್ಚಿಮ ಬಂಗಾಳದಲ್ಲಿ ಕೇಸರಿ ಪರ್ವ: ಯಾರಾಗಲಿದ್ದಾರೆ ʼಸಿಎಂʼ?

Latest3 days ago

ದಳಪತಿʼ ಪಟ್ಟಾಭಿಷೇಕಕ್ಕೆ ಕ್ಷಣಗಣನೆ : ತಮಿಳುನಾಡು ರಾಜಕಾರಣದಲ್ಲಿ ಬಿರುಗಾಳಿ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌