Site icon Vistara News

Lady Police Officer: ಗೂಂಡಾಗಿರಿ ಮಾಡಿದರೆ ಹುಷಾರ್‌! ಪುಂಡರಿಗೆ ಲೇಡಿ ಪೊಲೀಸ್ ವಾರ್ನಿಂಗ್‌; ವಿಡಿಯೊ ವೈರಲ್

Lady Police Officer

ಕೆಲವೊಂದು ಧಾರ್ಮಿಕ ಸ್ಥಳಗಳಲ್ಲಿ (Lady Police Officer) ಮೊಬೈಲ್ ಬಳಸಲು, ವಿಡಿಯೊ ಶೂಟ್ ಮಾಡಲು ಅನುಮತಿ ಇರುವುದಿಲ್ಲ. ಹಿಮಾಚಲ ಪ್ರದೇಶದ ಧಾರ್ಮಿಕ ಪ್ರದೇಶದಲ್ಲಿ ಪುರುಷರ ಗುಂಪೊಂದು ಅನುಮತಿಯಿಲ್ಲದೆ ಕಾರು ಚಲಾಯಿಸುತ್ತ, ಕಾರಿನ ಟಾಪ್‌ ಮೇಲಿಂದ ಕೈ ಬೀಸುತ್ತ ರೀಲ್ಸ್‌ (Reels Obesession) ಮಾಡಿದ್ದಾರೆ. ಆಗ ಮಹಿಳಾ ಪೊಲೀಸರೊಬ್ಬರು ಅವರನ್ನು ಸಖತ್ತಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ವಿಡಿಯೊವನ್ನು ‘ಘರ್ ಕೆ ಕಾಲೇಶ್’ ಎಂಬ ಹೆಸರಿನಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ವಿಡಿಯೊ ಪೊಲೀಸರು ವಾಹನವನ್ನು ನಿಲ್ಲಿಸುವ ಮೂಲಕ ಪ್ರಾರಂಭವಾಗಿದೆ. ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ತಮ್ಮ ವಾಹನವನ್ನು ನಿಲ್ಲಿಸಿ ಇನ್ನೊಂದು ಕಾರಿನಲ್ಲಿದ್ದ ಇಬ್ಬರು ಪುರುಷರು ಸನ್ ರೂಫ್‌ನಿಂದ ಹೊರಬಂದು ನಿಂತಿರುವುದನ್ನು ತೋರಿಸಿದರು. ಹಾಗೇ ಅವರ ರೀಲ್ಸ್‌ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸನ್ ರೂಫ್ ಅನ್ನು ಮುಚ್ಚಿ ಕಾರಿನೊಳಗೆ ಕುಳಿತುಕೊಳ್ಳುವಂತೆ ಅವರಿಗೆ ಪಾಠ ಹೇಳಿದ್ದಾರೆ.

ನಂತರ ಧಾರ್ಮಿಕ ಸ್ಥಳದ ಪಕ್ಕದ ಪ್ರದೇಶದಲ್ಲಿ ಶೂಟಿಂಗ್ ಮಾಡಲು ಅನುಮತಿ ನೀಡಲಾಗಿದೆಯೇ ಎಂದು ಅಧಿಕಾರಿ ಪುರುಷರ ಗುಂಪನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅವರಲ್ಲಿ ಒಬ್ಬರು ಇದು ಶೂಟಿಂಗ್ ಅಲ್ಲ ಎಂದು ಉತ್ತರಿಸಿದ್ದಾರೆ. ಆದರೆ ಅವರು ಸೋಶಿಯಲ್ ಮೀಡಿಯಾಗಳಿಗಾಗಿ ರೀಲ್ಸ್ ಮಾಡುತ್ತಿರುವುದಾಗಿ ಹೇಳಿದ್ದಾರೆ.

ನಂತರ ಈ ವಿಷಯವನ್ನು ಪರಿಶೀಲಿಸಲು ಮಹಿಳಾ ಪೊಲೀಸ್ ಜೀಪಿನಿಂದ ಕೆಳಗಿಳಿದು ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ವಿಡಿಯೊ ಮಾಡಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ತೆರೆದ ಸನ್ ರೂಫ್‌ನೊಂದಿಗೆ ಸವಾರಿ ಮಾಡುವುದು ಮಾತ್ರವಲ್ಲದೆ ನಂಬರ್ ಪ್ಲೇಟ್ ಇಲ್ಲದ ವಾಹನವನ್ನು ಓಡಿಸುವ ಮೂಲಕ ದುಷ್ಕರ್ಮಿಗಳು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಹೇಗೆ ಉಲ್ಲಂಘಿಸಿದ್ದಾರೆ ಎಂಬುದನ್ನು ಅವರು ತೋರಿಸಿದರು.

ಕರ್ತವ್ಯದಲ್ಲಿದ್ದ ಪೋಲೀಸ್ ಅಧಿಕಾರಿ ಪುರುಷರನ್ನು ತಮ್ಮ ವಾಹನದೊಳಗೆ ಕುಳಿತು ಸುರಕ್ಷಿತವಾಗಿ ಪ್ರಯಾಣಿಸುವಂತೆ ಸೂಚಿಸಿದ್ದಾರೆ. “ಗೂಂಡಾಗಿರಿ ಮಾಡಬೇಡಿ. ಇದು ಧಾರ್ಮಿಕ ಸ್ಥಳವಾಗಿದೆ. ಪವಿತ್ರ ಸ್ಥಳಕ್ಕೆ ಸಂಬಂಧಿಸಿದ ಭಾವನೆಗಳನ್ನು ನೋಯಿಸಬೇಡಿ” ಎಂದು ಅವರು ಪುಂಡು ಪುರುಷರಿಗೆ ತಿಳಿ ಹೇಳಿದ್ದಾರೆ.

ಇದನ್ನೂ ಓದಿ:  ನೀತಾ ಅಂಬಾನಿ ಪ್ರಸ್ತುತಪಡಿಸಿದ್ದಾರೆ ವಿಷ್ಣುವಿನ ‘ದಶಾವತಾರ’ದ ಚಿತ್ರಣ; ವಿಡಿಯೊ ನೋಡಿ

ಅಲ್ಲದೇ ವಿಡಿಯೊದಲ್ಲಿ, ಅವರಲ್ಲಿ ಕೆಲವರು ಪೊಲೀಸ್ ಅಧಿಕಾರಿಗೆ ಲಂಚ ನೀಡಲು ಅಥವಾ ಕೆಲವು ಪ್ರಭಾವ ಬೀರುವ ಕಾರ್ಡ್ ಅನ್ನು ಪ್ರದರ್ಶಿಸಲು ಪ್ರಯತ್ನಿಸಿದ್ದು ಕಂಡು ಬಂದಿದೆ. ಆದರೆ ಪೊಲೀಸ್ ಅಧಿಕಾರಿ ಈ ರೀತಿ ಮಾಡಿದರೆ ವಾಹನವನ್ನು ವಶಪಡಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Exit mobile version