Site icon Vistara News

Rihanna Crop Over: ʼಊರ ಹಬ್ಬʼದಲ್ಲಿ ʼನಗ್ನ ಉಡುಗೆʼ ಧರಿಸಿ ಸಂಚಲನ ಮೂಡಿಸಿದ ರಿಹಾನ್ನಾ!

Crop Over Festival


ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕಿ ರಿಹಾನ್ನಾ ತನ್ನ ತಾಯ್ನಾಡಿನ ಉತ್ಸವವಾದ ಕ್ರಾಪ್ ಓವರ್ ಫೆಸ್ಟಿವಲ್‍ (Crop Over Festival)ನಲ್ಲಿ ಅನೇಕ ಬಾರಿ ವಿಶೇಷ ಶೈಲಿಯಲ್ಲಿ ಕಾಣಿಸಿಕೊಂಡಿದ್ದರೂ, ಈ ವರ್ಷ ಮಾತ್ರ ಅವರು ಬಹಳ ವಿಭಿನ್ನವಾಗಿ ಕಾಣಿಸಿಕೊಂಡು ಜನರ ಗಮನ ಸೆಳೆದಿದ್ದಾರೆ. ಅವರು ಕ್ರಾಪ್ ಆಫ್ ಫೆಸ್ಟಿವಲ್‍ಗಾಗಿ ಬೆಜೆಲ್ಡ್ ಕಾಸ್ಟ್ಯೂಮ್ ಬಾಡಿ ಸೂಟ್‍ನಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದಾರೆ. ಈ ಉಡುಗೆಯಲ್ಲಿ ಮಿಂಚಿದ ರಿಹಾನ್ನಾ ಕೆರಿಬಿಯನ್ ದೇವತೆಯಂತೆ ಕಾಣಿಸಿದ್ದಾರೆ. ಅವರ ಈ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಿಹಾನ್ನಾ ತನ್ನ ಚರ್ಮದ ಹೊಳಪನ್ನು ತೋರಿಸಲು ನಗ್ನ ಬಾಡಿ ಸೂಟ್ ಅನ್ನು ಆರಿಸಿಕೊಂಡಿದ್ದಾರೆ. ರಿಹಾನ್ನಾ ಚರ್ಮದ ಹೊಳಪು ನೋಡಿದವರಿಗೆ ಅಸೂಯೆ ಮೂಡುವುದು ಖಂಡಿತ. ಇನ್ನು ಅವರು ಧರಿಸಿದ ಈ ವಿಶಿಷ್ಟ ಬಾಡಿ ಸೂಟ್ ಅನ್ನು ಕೆಂಪು, ಹಳದಿ ಮತ್ತು ಬಿಳಿ ಬಣ್ಣವನ್ನು ಒಳಗೊಂಡ ವಿವಿಧ ಬಣ್ಣಗಳಲ್ಲಿ ಅಲಂಕರಿಸಿದ ಸ್ಟೋನ್ ವರ್ಕ್‍ನಿಂದ ಅಲಂಕರಿಸಲಾಗಿದೆ.

ಹಾಗೇ ಅಧರಿಸಿದ ಆಭರಣಗಳು ಮತ್ತು ಕಿರೀಟವನ್ನು ಸಹ ಅದೇ ಬಣ್ಣದ ಸ್ಟೋನ್‍ಗಳಿಂದ ರೆಡಿ ಮಾಡಲಾಗಿದೆ. ಹಾಗೇ ನಿಯಾನ್, ಕಿತ್ತಳೆ ಮತ್ತು ಫುಶಿಯಾ ಬಣ್ಣಗಳನ್ನು ಹೊಂದಿರುವ ಚಿನ್ನದ ಹೊಳಪಿನ ಚಪ್ಪಲಿಗಳು ಮತ್ತು ತನ್ನ ಬೆನ್ನಿಗೆ ಬಣ್ಣ ಬಣ್ಣದ ಗರಿಗಳಿಂದ ತಯಾರಿಸಿದ ರೆಕ್ಕೆಗಳನ್ನು ಧರಿಸಿ ಅವರು ತನ್ನ ನೋಟವನ್ನು ಹೆಚ್ಚು ಆಕರ್ಷಕವಾಗಿ ಮಾಡಿದ್ದಾರೆ.

ಅಲ್ಲದೇ ಮೇಕಪ್‍ಗಾಗಿ, ಅವರು ಗಾಢ ಬಣ್ಣದ ಲಿಪ್ ಲೈನರ್ ಜೊತೆಗೆ ತಿಳಿ ಬಣ್ಣದ ಲಿಪ್ ಶೇಡ್, ಹೈಲೈಟರ್ ಬದಲಿಗೆ ಗ್ಲಿಟರ್ಸ್ , ಐಲೈನರ್ ನೊಂದಿಗೆ ಬೂದು ಬಣ್ಣದ ಐಶಾಡೋವನ್ನು ಹಚ್ಚಿದ್ದಾರೆ. ಹಾಗೇ ಅವರು ತನ್ನ ಸಂಪೂರ್ಣ ನೋಟವನ್ನು ಪ್ರದರ್ಶಿಸಲು ತನ್ನ ಗುಂಗುರು ಕೂದಲನ್ನು ಬಿಟ್ಟಿದ್ದಾರೆ.

ಕ್ರಾಪ್ ಓವರ್ ಫೆಸ್ಟಿವಲ್
ಕ್ರಾಪ್ ಓವರ್ ಫೆಸ್ಟಿವಲ್ ಒಂದು ಬಾರ್ಬಾಡಿಯನ್‍ನಲ್ಲಿ ನಡೆಯುವ ಒಂದು ಸಾಂಪ್ರದಾಯಿಕ ಆಚರಣೆಯಾಗಿದ್ದು, ಇದು 1940 ರ ದಶಕದಲ್ಲಿ ಪ್ರಾರಂಭವಾಗಿದೆ. ಈ ರೋಮಾಂಚಕ ಆಚರಣೆಯಲ್ಲಿ ಮಾಸ್ಕ್ವಾರೆಡ್ ಬ್ಯಾಂಡ್ ಗಳು(Masquerade Bands) ಸಕ್ವಿನ್ (sequin )ಧರಿಸಿದ ಉತ್ಸಾಹಿಗಳು, ವರ್ಣರಂಜಿತ ಗರಿಗಳು, ಪ್ರಕಾಶಮಾನವಾದ ಉಚ್ಚಾರಣೆಗಳು, ಆ ವರ್ಷದ ಕೊನೆಯಲ್ಲಿ ಬೆಳೆದ ಬೆಳೆಗಳನ್ನು ಮೆರವಣಿಗೆಯ ಮೂಲಕ ಪ್ರದರ್ಶಿಸುತ್ತಾರೆ.

Exit mobile version