ಲಕ್ನೋ: ಪತಿ ಪತ್ನಿಯ ಮಾನ ರಕ್ಷಣೆ ಮಾಡುವ ರಕ್ಷಕನಾಗಿರುತ್ತಾನೆ. ಯಾಕೆಂದರೆ ತನ್ನ ಪತ್ನಿಯನ್ನು ಕಾಮುಕರ ಕೆಟ್ಟ ದೃಷ್ಟಿಯಿಂದ ಕಾಪಾಡುವುದು ಅವನ ಜವಾಬ್ದಾರಿ ಎಂದು ನಮ್ಮ ಸಮಾಜ ಭಾವಿಸಿದೆ. ಪತ್ನಿ ಕೂಡ ತನ್ನ ಪತಿ ತನ್ನ ರಕ್ಷಣೆ ಮಾಡುತ್ತಾನೆ ಎಂಬ ನಂಬಿಕೆ ಹೊಂದಿರುತ್ತಾಳೆ. ಅದನ್ನು ಉಳಿಸಿಕೊಳ್ಳುವುದು ಅವನ ಕರ್ತವ್ಯವಾಗಿದೆ. ಅಂತಹದರಲ್ಲಿ ‘ಬೇಲಿಯೇ ಎದ್ದು ಹೊಲ ಮೇದಂತೆ’ ಎಂಬಂತೆ ಇಲ್ಲೊಬ್ಬ ಪತಿ ತನ್ನ ಪತ್ನಿಗೆ ಪರಪುರುಷನೊಂದಿಗೆ ಲೈಂಗಿಕ (Sexual Abuse) ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾನೆ.
ಚೀನಾದಲ್ಲಿದ್ದಾಗ ತನ್ನ ಸ್ನೇಹಿತ ಆಫ್ರಿಕನ್ ಯುವಕನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಪತಿ ಒತ್ತಾಯಿಸಿದ್ದಾನೆ ಎಂದು ಆರೋಪಿಸಿ 40 ವರ್ಷದ ಮಹಿಳೆ ಪತಿಯ ವಿರುದ್ಧ ದೂರು ನೀಡಿದ ಘಟನೆ ಲಕ್ನೋದ ನಾಕಾದಲ್ಲಿ ನಡೆದಿದೆ. ಪತಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ, ಅಲ್ಲದೇ ಅಶ್ಲೀಲ ವಿಡಿಯೊವನ್ನು ನೋಡುವಂತೆ ಒತ್ತಾಯಿಸುವ ಮೂಲಕ ಕಿರುಕುಳ ನೀಡುತ್ತಿದ್ದ. ಮತ್ತು ಅವಳು ಅದನ್ನು ವಿರೋಧಿಸಿದಾಗ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದ ಮತ್ತು ಅವಳ ಬಳಿ ಇರುವ ಹಣವನ್ನು ಕದಿಯುತ್ತಿದ್ದ ಎಂದು ಆರೋಪಿಸಿ ಮಹಿಳೆ ತನ್ನ ಪತಿಯ ವಿರುದ್ಧ ನಾಕಾ ಪೊಲೀಸರಿಗೆ ನೀಡಿದ್ದಾಳೆ.
ಅಲ್ಲದೇ, ಮಹಿಳೆ ಚೀನಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ಸಹಾಯವನ್ನು ಕೋರಿದ್ದು ಅವರ ಸಹಾಯದಿಂದ ಆತನಿಂದ ತಪ್ಪಿಸಿಕೊಂಡು ಲಕ್ನೋಗೆ ಮರಳಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. ರಾಯಭಾರ ಕಚೇರಿಯ ಸಲಹೆಯ ಮೇರೆಗೆ, ಆಕೆ ನಾಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ವರದಿ ಪ್ರಕಾರ, ಮಹಿಳೆ 2015 ರಲ್ಲಿ ಚೀನಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್ ಗಂಜ್ ಮೂಲದ ವ್ಯಕ್ತಿಯನ್ನು ವಿವಾಹವಾದರು. ಮದುವೆಯಾದ ಮೊದಲ ವಾರದಲ್ಲೇ 15 ಲಕ್ಷ ರೂ.ಗಳ ವರದಕ್ಷಿಣೆ ನೀಡುವಂತೆ ಆಕೆಯ ಹೆತ್ತವರನ್ನು ಒತ್ತಾಯಿಸಿದ್ದಾನೆ. ನಂತರ ಆರಂಭದಲ್ಲಿ ಆತ ಏಕಾಂಗಿಯಾಗಿ ಚೀನಾಕ್ಕೆ ಮರಳಿದ್ದಾನೆ, ನಂತರ ಒಂದು ತಿಂಗಳ ನಂತರ ಮತ್ತೆ ಬಂದು ಆಕೆಗೆ ಹಿಂಸೆ ನೀಡಲು ಶುರುಮಾಡಿದ್ದಾನೆ.
ಇದನ್ನೂ ಓದಿ: ಮೈಗೆ ಟವೆಲ್ ಸುತ್ತಿಕೊಂಡು ಬೀದಿ ತುಂಬಾ ಓಡಾಡಿದ ಯುವತಿ; ನೋಡಿದ ಜನ ಸುಸ್ತು!
ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ, ಆತ ಮತ್ತೆ ವರದಕ್ಷಿಣೆ ಬೇಕೆಂದು ಕಿರುಕುಳ ನೀಡಲು ಶುರುಮಾಡಿದ್ದಾನೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ಲಕ್ನೋಗೆ ಹೋದಾಗ, ಪತಿ ಆಕೆಯ ವೀಸಾ, ವಿಮಾನ ಟಿಕೆಟ್ ಮತ್ತು 2 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾನೆ ಮತ್ತು ಮಹಿಳೆಯ 10ಲಕ್ಷ ರೂ ಮೌಲ್ಯದ ಆಭರಣಗಳನ್ನು ಕದ್ದಿದ್ದಾನೆ. ಅವಳು ಮಾರ್ಚ್ 4 ರಂದು ಅವನೊಂದಿಗೆ ಚೀನಾಕ್ಕೆ ಹೋಗಿದ್ದಾಳೆ. ಅಲ್ಲಿ ಆತನ ಹಿಂಸೆಯನ್ನು ಸಹಿಸಲಾರದೆ ಚೀನಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ಸಹಾಯದಿಂದ ಭಾರತಕ್ಕೆ ಬಂದು ಪೊಲೀಸರಿಗೆ ದೂರು ನೀಡಿದ್ದಾಳೆ.