Site icon Vistara News

Sexual Abuse: ಕಾಶ್ಮೀರದಲ್ಲಿ ಹಿಂದೂ ಬಾಲಕಿ ಮೇಲೆ ಅತ್ಯಾಚಾರ; ಬೃಹತ್‌ ಪ್ರತಿಭಟನೆ

Sexual Abuse


ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿರುವ ಮಾರ್ವಾದಲ್ಲಿ 15 ವರ್ಷದ ಹಿಂದೂ ಬಾಲಕಿಯ ಮೇಲೆ ಸ್ಥಳೀಯ ಯುವಕ ಅತ್ಯಾಚಾರ (Sexual Abuse) ಎಸಗಿದ್ದು, ಈ ಬಗ್ಗೆ ಅಧಿಕಾರಿಗಳು ಅತಿರೇಕವಾಗಿ ವರ್ತಿಸಿದ ಕಾರಣ ಈ ಪ್ರದೇಶದಲ್ಲಿ ಸನಾತನ ಧರ್ಮ ಸಭಾ ಸೇರಿದಂತೆ ಹಿಂದೂಗಳ ಬೃಹತ್ ಪ್ರತಿಭಟನೆಗೆ ಕಾರಣವಾಯಿತು. ಆಗಸ್ಟ್ 20ರಂದು ಘಟನೆಯ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಯನ್ನು ಪ್ರಾರಂಭಿಸಲಾಗಿದೆ. ಸ್ಟೇಷನ್ ಹೌಸ್ ಅಧಿಕಾರಿ ಜಹೀರ್ ಇಕ್ಬಾಲ್ ಅವರನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಬಂಧಿಸಲಾಗಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಂತಿಯುತವಾಗಿ ಹೋಗುತಿದ್ದ ಮಹಿಳಾ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಲು ಆದೇಶಿಸಿದ ಎಸ್ಎಚ್ಒ ಜಹೀರ್ ಇಕ್ಬಾಲ್ ಅವರು ಆರೋಪಿ ಮತ್ತು ಅವರ ಕುಟುಂಬವನ್ನು ರಕ್ಷಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪೊಲೀಸರ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ ನಂತರ, ಎಸ್ ಡಿಎಂ ಸಂತ್ರಸ್ತೆಯ ಕುಗ್ರಾಮಕ್ಕೆ ತೆರಳಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿತು. ಇದರ ನಡುವೆ ಕೋಪಗೊಂಡ ಜನರು ಆರೋಪಿಯ ಮನೆಗೆ ನುಗ್ಗಿ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಆಗ ಆರೋಪಿ ತನ್ನ ಕುಟುಂಬ ಸದಸ್ಯರೊಂದಿಗೆ ಅಲ್ಲಿಂದ ಓಡಿಹೋದನು.

9 ಮತ್ತು 10ನೇ ತರಗತಿಯ 12 ವಿದ್ಯಾರ್ಥಿಗಳಿಗೆ ಮಾರ್ವಾದಲ್ಲಿನ ತಮ್ಮ ಶಾಲೆಯನ್ನು ತಲುಪಲು ಕಾಡಿನ ಮೂಲಕ ನಡೆಯಬೇಕಾಗಿರುವುದರಿಂದ ಹಾಗೂ ಕಾಡು ಪ್ರಾಣಿಗಳಲ್ಲದೆ, ಮಾರ್ವಾದ ಕಾಡುಗಳಲ್ಲಿ ಇತರ ಸಂಭಾವ್ಯ ಅಪಾಯಗಳಿರುವ ಕಾರಣ ಆಡಳಿತವು ಇಬ್ಬರು ಶಿಕ್ಷಕರನ್ನು ಗ್ರಾಮಕ್ಕೆ ನಿಯೋಜಿಸಿದೆ ಎಂಬುದಾಗಿ ತಿಳಿದು ಬಂದಿದೆ. ಹಾಗೇ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದ 20ರಿಂದ 30 ಮಹಿಳೆಯರ ಗುಂಪನ್ನು ತಡೆದು ಸಮಾಧಾನಪಡಿಸಲಾಗಿದೆ. ಆದರೆ ಪ್ರತಿಭಟನೆಯ ವೇಳೆ ಒಬ್ಬ ಹುಡುಗಿ ಗಾಯಗೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ವಧುವಿನ ಮುಂದೆಯೇ ಆಕೆಯ ಸಹೋದರಿಗೆ ಕಿಸ್‌ ಕೊಟ್ಟ ವರ! ಮದುವೆಗೆ ಬಂದವರು ಕಕ್ಕಾಬಿಕ್ಕಿ!

ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಸನಾತನ ಧರ್ಮ ಸಭಾದ ನಿಯೋಗವು ಕಿಶ್ತ್ವಾರ್ ಜಿಲ್ಲಾಧಿಕಾರಿ ರಾಜೇಶ್ ಕುಮಾರ್ ಶಾವನ್ ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿತು. ಹಂಜೆಲ್ ಮತ್ತು ಚಂಜರ್ ಪ್ರದೇಶಗಳಲ್ಲಿನ ಹಿಂದೂ ಅಲ್ಪಸಂಖ್ಯಾತರಿಗೆ ಭದ್ರತೆ ನೀಡುವಂತೆ ಮತ್ತು ಬಾಲಕಿಯರು ಶಾಲೆಗೆ ಹೋಗಲು ಅರಣ್ಯ ಪ್ರದೇಶಗಳ ಮೂಲಕ ಹೆಚ್ಚು ದೂರ ಪ್ರಯಾಣಿಸದಂತೆ ಹೊಸ ಯೋಜನೆಯನ್ನು ಜಾರಿ ಮಾಡುವಂತೆ ಕೋರಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದೆ.

Exit mobile version