ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಬೆದರಿಕೆಯೊಡ್ಡಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಪದೇಪದೇ ಅತ್ಯಾಚಾರ (Sexual Abuse) ಎಸಗಿದ ಶಿಕ್ಷಕನಿಗೆ ಗುಜರಾತ್‍ನ ಆನಂದ್‍ನ ವಿಶೇಷ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ನ್ಯಾಯಾಲಯವು 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಹಾಗೇ ಅದರ ಜೊತೆಗೆ ನ್ಯಾಯಾಲಯವು 11,000 ರೂ.ಗಳ ದಂಡವನ್ನು ವಿಧಿಸಿದೆ ಮತ್ತು ಸಂತ್ರಸ್ತೆಗೆ 4 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಆದೇಶಿಸಿದೆ.
ಗುಜರಾತ್‍ನ ಆನಂದ್‍ನ ಬಕ್ರೋಲ್ ನಿವಾಸಿ ದರ್ಶನ್ ಸುತಾರ್ 2022ರಲ್ಲಿ ವಿದ್ಯಾನಗರದ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಈ ಸಮಯದಲ್ಲಿ, ಆತ 10ನೇ ತರಗತಿಯ ಕಂಪ್ಯೂಟರ್ ಬೋರ್ಡ್ ಪರೀಕ್ಷೆಯಲ್ಲಿ ಹೆಚ್ಚಿನ ಇಂಟರ್ನಲ್ ಮಾರ್ಕ್ಸ್ ನೀಡುವುದಾಗಿ ಭರವಸೆ ನೀಡಿ 14 ವರ್ಷದ ವಿದ್ಯಾರ್ಥಿನಿಯನ್ನು ಶೋಷಣೆಗೆ ಒಳಪಡಿಸಿದ್ದಾನೆ. ತನ್ನ ಬೇಡಿಕೆಗಳನ್ನು ಪಾಲಿಸದಿದ್ದರೆ ಆಕೆಯ ಪರೀಕ್ಷಾ ಪತ್ರಿಕೆಯನ್ನು ವೈಯಕ್ತಿಕವಾಗಿ ಪರಿಶೀಲಿಸಿ ಆಕೆ ಫೇಲ್ ಆಗುವಂತೆ ಮಾಡುವುದಾಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದ. ಮಾರ್ಚ್ 20, 2022 ಮತ್ತು ಮೇ 28, 2022ರ ನಡುವೆ ವಿದ್ಯಾರ್ಥಿನಿಯ ಮೇಲೆ ವಿವಿಧ ಸ್ಥಳಗಳಲ್ಲಿ ಐದು ಬಾರಿ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಅವಳನ್ನು ಮತ್ತು ಅವಳ ಕುಟುಂಬವನ್ನು ಕೊಲ್ಲುವುದಾಗಿ ಪದೇಪದೇ ಎಚ್ಚರಿಕೆ ನೀಡಿದ್ದ.
ಸಂತ್ರಸ್ತೆಯ ತಾಯಿಗೆ ಮಗಳ ನಡವಳಿಕೆಯಲ್ಲಿ ಅನುಮಾನ ಬಂದು ವಿಚಾರಿಸಿದಾಗ ಸಂತ್ರಸ್ತೆ ನಡೆದ ಘಟನೆಯನ್ನು ಬಾಯ್ಬಿಟ್ಟಿದ್ದಾಳೆ. ತಕ್ಷಣ ಆಕೆಯ ತಾಯಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಈ ದೂರಿನ ಆಧಾರದ ಮೇಲೆ ಪೊಲೀಸರು ಸುತಾರ್‌ನನ್ನು ಪೋಕ್ಸೊ ಕಾಯ್ದೆ ಮತ್ತು ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಬಂಧಿಸಿ ಕೋರ್ಟ್‌ಗೆ ಒಪ್ಪಿಸಿದ್ದರು.
ಇದನ್ನೂ ಓದಿ: ಪತ್ನಿಯ ಮರ್ಮಾಂಗದೊಳಗೆ ಲಟ್ಟಣಿಗೆ ತುರುಕಿ ಭೀಕರವಾಗಿ ಕೊಂದ ಪತಿ
ವಿಚಾರಣೆಯ ಸಮಯದಲ್ಲಿ, ಸರ್ಕಾರಿ ವಕೀಲರಾದ ಎ.ಎಸ್.ಜಡೇಜಾ ಅವರು ಬಲವಾದ ವಾದಗಳನ್ನು ಮಂಡಿಸಿದರೂ ಕೂಡ ವಿಶೇಷ ಪೋಕ್ಸೊ ನ್ಯಾಯಾಧೀಶ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ತೇಜಸ್ ದೇಸಾಯಿ ಅವರು ಸುತಾರ್‌ಗೆ ಶಿಕ್ಷೆ ವಿಧಿಸಿದ್ದಾರೆ. ನ್ಯಾಯಾಧೀಶರು ಅವನಿಗೆ 25 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 11,000 ರೂ.ಗಳ ದಂಡವನ್ನು ವಿಧಿಸಿದ್ದಾರೆ. ದಂಡವನ್ನು ಪಾವತಿಸದಿದ್ದರೆ ಮತ್ತೊಂದು ವರ್ಷ ಶಿಕ್ಷೆಗೆ ಒಳಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ನಿಯಮಗಳು, 2020 ರ ನಿಯಮ 9 (2) ರ ಅಡಿಯಲ್ಲಿ, ಸಂತ್ರಸ್ತೆಗೆ 4 ಲಕ್ಷ ರೂ.ಗಳ ಪರಿಹಾರವನ್ನು ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.