Site icon Vistara News

Sonakshi Sinha: ನಟಿ ಸೋನಾಕ್ಷಿ ಸಿನ್ಹಾ ಐಷಾರಾಮಿ ಅಪಾರ್ಟ್‌ಮೆಂಟ್ ಹೇಗಿದೆ? ವಿಡಿಯೊ ನೋಡಿ!

Sonakshi Sinha

ಮುಂಬೈ : ಸಿನಿಮಾ ತಾರೆಯರು ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಸಿನಿಮಾ ತಾರೆಯರು ಯಾವುದೇ ಸ್ಥಳಕ್ಕೆ ಹೋದರೂ, ಯಾರನ್ನೇ ಭೇಟಿ ಮಾಡಿದರೂ, ಮನೆ ಖರೀದಿಸಿದರೂ, ತಮ್ಮ ಸಂಗಾತಿ ಜೊತೆ ಸುತ್ತಾಡಿದರೂ, ಮದುವೆ ವಿಚಾರಕ್ಕೆ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಅಂದಹಾಗೇ ಇದೀಗ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಸುದ್ದಿಯಲ್ಲಿದ್ದಾರೆ.

ನಟಿ ನಟಿ ಸೋನಾಕ್ಷಿ ಸಿನ್ಹಾ ಅವರು ಬಾಲಿವುಡ್ ಖ್ಯಾತ ನಟಿಯರಲ್ಲಿ ಒಬ್ಬರು. ಇವರು ಬಾಲಿವುಡ್‌ನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ನಟನೆಯ ಮೂಲಕ ಜನಪ್ರಿಯರಾದ ನಟಿ ಇದೀಗ ತಮ್ಮ ಮದುವೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ನಟಿ ಸೋನಾಕ್ಷಿ ಸಿನ್ಹಾ ಅವರು ಜೂನ್ 23, 2024ರಂದು ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿದೆ. ವರದಿ ಪ್ರಕಾರ ಅವರು 7 ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

ಕಳೆದ ಒಂದು ವರ್ಷದಿಂದ ಇಬ್ಬರು ಜೊತೆಯಲ್ಲಿ ವಾಸಿಸುತ್ತಿದ್ದು, ನಟಿ ಸೋನಾಕ್ಷಿ ಸಿನ್ಹಾ ಅವರು ಮುಂಬೈನಲ್ಲಿ ದೊಡ್ಡದಾದ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಮಾರ್ಚ್ 2020ರಲ್ಲಿ ಮನೆಯನ್ನು ಖರೀದಿಸಿ ನಂತರ 2023ರಲ್ಲಿ ಆ ಮನೆಗೆ ತೆರಳಿ ತಮ್ಮ ಪ್ರೇಮಿ ಜೊತೆ ಅಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ಸೋನಾಕ್ಷಿ ಸಿನ್ಹಾ ಖರೀದಿಸಿದ ಆ ಮನೆ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ನಟಿ ಸೋನಾಕ್ಷಿ ಸಿನ್ಹಾ ಅವರು ಖರೀದಿಸಿದ ಮುಂಬೈ ಮನೆ ಸಮುದ್ರಕ್ಕೆ ಮುಖ ಮಾಡಿದೆ. ಅದು 4,628 ಚದರ ಅಡಿಗಳಷ್ಟು ವಿಸ್ತಾರವಾಗಿದೆಯಂತೆ. ಮನೆಯು ಪ್ರೀಮಿಯಂ ರೆಸಿಡೆನ್ಸಿಯಲ್ ಟವರ್‌ನಲ್ಲಿ 16ನೇ ಮಹಡಿಯಲ್ಲಿದೆ.

ವರದಿಗಳ ಪ್ರಕಾರ ಅವರ ಮುಂಬೈ ಮನೆ ಮಾರುಕಟ್ಟೆ ಮೌಲ್ಯ 14 ಕೋಟಿ ರೂಪಾಯಿ. ಅವರ ಮನೆ ಕಿತ್ತಳೆ ಮತ್ತು ನೀಲಿ ಬಣ್ಣವನ್ನು ಹೊಂದಿದ್ದು, ಟೆರಾಕೋಟಾ ಲುಕ್‌ ನೀಡುತ್ತದೆ. ಮಲಗುವ ಕೋಣೆ ಸ್ಲೈಡಿಂಗ್ ವಾಲ್ ಅನ್ನು ಹೊಂದಿದ್ದು, ಅದರ ಎಲ್ಲಾ ಬದಿಯಲ್ಲಿ ನೀಲಿ ಬಣ್ಣದ ಕಪಾಟುಗಳೊಂದಿಗೆ ಮರ್ಫಿ ಬೆಡ್ ಇದೆ. ಮನೆಯ ಬಾಲ್ಕನಿಯಿಂದ ಬಾಂದ್ರಾ-ವಲ್ಲಿ ಸಮುದ್ರದ ನೋಟವನ್ನು ಸುಲಭವಾಗಿ ಆನಂದಿಸಬಹುದು. ನಾಲ್ಕು ಬೆಡ್ ರೂಮ್‌ ಅಪಾರ್ಟ್‌ಮೆಂಟ್ ಅನ್ನು 1.5 ಬೆಡ್ ರೂಮ್ ಮನೆಯನ್ನಾಗಿ ಪರಿವರ್ತಿಸಲಾಗಿದೆಯಂತೆ. ಅವರ ಮನೆಯಲ್ಲಿ ಆರ್ಟ್ ಸ್ಟುಡಿಯೋ, ಯೋಗ ಮಾಡುವುದಕ್ಕೆ ಜಾಗ ಹಾಗೂ ಡ್ರೆಸ್ಸಿಂಗ್ ರೂಮ್‌ ಕೂಡ ಇದೆಯಂತೆ. ಇನ್ನು ಇವರ ರೂಂನಲ್ಲಿರುವ ವಾಕ್ ಇನ್ ವಾರ್ಡ್‌ರೋಬ್ ತುಂಬಾ ಚೆನ್ನಾಗಿದೆ.

ಇದನ್ನೂ ಓದಿ: flight problems: ವಿಮಾನದಲ್ಲಿ ಕೈಕೊಟ್ಟ ಎಸಿ; ಸೆಕೆ ತಾಳಲಾರದೆ ಬಟ್ಟೆ ಬಿಚ್ಚಿದ ಪ್ರಯಾಣಿಕರು!

ನಟಿ ಸೋನಾಕ್ಷಿ ಸಿನ್ಹಾ ಅವರು ಪ್ರಸ್ತುತ ಸಂಜಯ್ ಲೀಲಾ ಬನ್ಸಾಲಿ ಅವರ ಚೊಚ್ಚಲ ವೆಬ್ ಸರಣಿ ಹೀರಾಮಂಡಿ ಯಶಸ್ಸಿನಲ್ಲಿ ಮುಳುಗಿದ್ದಾರೆ. ಅಲ್ಲಿ ಅವರು ವೇಶ್ಯೆಯ ಪಾತ್ರವನ್ನು ನಿರ್ವಹಿಸಿದ್ದಾರೆ.

Exit mobile version