Sonakshi Sinha: ನಟಿ ಸೋನಾಕ್ಷಿ ಸಿನ್ಹಾ ಐಷಾರಾಮಿ ಅಪಾರ್ಟ್‌ಮೆಂಟ್ ಹೇಗಿದೆ? ವಿಡಿಯೊ ನೋಡಿ! - Vistara News

Latest

Sonakshi Sinha: ನಟಿ ಸೋನಾಕ್ಷಿ ಸಿನ್ಹಾ ಐಷಾರಾಮಿ ಅಪಾರ್ಟ್‌ಮೆಂಟ್ ಹೇಗಿದೆ? ವಿಡಿಯೊ ನೋಡಿ!

Sonakshi Sinha: ಸಿನಿಮಾ ನಟಿಯರು ಎಂದಾಕ್ಷಣ ಜನರಿಗೆ ಕುತೂಹಲವಿರುತ್ತದೆ. ಅವರು ಉಂಡಿದ್ದು, ತಿಂದಿದ್ದು, ಮುಖಕ್ಕೆ ಹಚ್ಚಿಕೊಳ್ಳುವ ಮೇಕಪ್ ತನಕನೂ ಕುತೂಹಲದಿಂದ ಗಮನಿಸುವ ಮಂದಿ ಇದ್ದಾರೆ. ಸಿನಿಮಾ ಮಂದಿ ಏನೇ ಮಾಡಿದರೂ ಸುದ್ದಿಯಾಗುತ್ತದೆ. ಇತ್ತೀಚೆಗೆ ಹೀರಾಮಂಡಿಯಲ್ಲಿ ಅಭಿನಯಿಸಿ ಎಲ್ಲರ ಗಮನಸೆಳೆದ ನಟಿ ಸೋನಾಕ್ಷಿ ಸಿನ್ಹಾ ಸುದ್ದಿಯಲ್ಲಿದ್ದಾರೆ. ಅವರು 7 ವರ್ಷಗಳಿಂದ ಸಂಬಂಧದಲ್ಲಿದ್ದ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಲಿದ್ದಾರೆ. ಇದರ ಮಧ್ಯೆ ಈಗ ಎಲ್ಲರ ಕುತೂಹಲ ಕೆರಳಿಸಿದ್ದು ಸೋನಾಕ್ಷಿ ಸಿನ್ಹಾ ಅವರ ಮನೆ!

VISTARANEWS.COM


on

Sonakshi Sinha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ : ಸಿನಿಮಾ ತಾರೆಯರು ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಸಿನಿಮಾ ತಾರೆಯರು ಯಾವುದೇ ಸ್ಥಳಕ್ಕೆ ಹೋದರೂ, ಯಾರನ್ನೇ ಭೇಟಿ ಮಾಡಿದರೂ, ಮನೆ ಖರೀದಿಸಿದರೂ, ತಮ್ಮ ಸಂಗಾತಿ ಜೊತೆ ಸುತ್ತಾಡಿದರೂ, ಮದುವೆ ವಿಚಾರಕ್ಕೆ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಅಂದಹಾಗೇ ಇದೀಗ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಸುದ್ದಿಯಲ್ಲಿದ್ದಾರೆ.

ನಟಿ ನಟಿ ಸೋನಾಕ್ಷಿ ಸಿನ್ಹಾ ಅವರು ಬಾಲಿವುಡ್ ಖ್ಯಾತ ನಟಿಯರಲ್ಲಿ ಒಬ್ಬರು. ಇವರು ಬಾಲಿವುಡ್‌ನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ನಟನೆಯ ಮೂಲಕ ಜನಪ್ರಿಯರಾದ ನಟಿ ಇದೀಗ ತಮ್ಮ ಮದುವೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ನಟಿ ಸೋನಾಕ್ಷಿ ಸಿನ್ಹಾ ಅವರು ಜೂನ್ 23, 2024ರಂದು ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿದೆ. ವರದಿ ಪ್ರಕಾರ ಅವರು 7 ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

Sonakshi Sinha

ಕಳೆದ ಒಂದು ವರ್ಷದಿಂದ ಇಬ್ಬರು ಜೊತೆಯಲ್ಲಿ ವಾಸಿಸುತ್ತಿದ್ದು, ನಟಿ ಸೋನಾಕ್ಷಿ ಸಿನ್ಹಾ ಅವರು ಮುಂಬೈನಲ್ಲಿ ದೊಡ್ಡದಾದ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಮಾರ್ಚ್ 2020ರಲ್ಲಿ ಮನೆಯನ್ನು ಖರೀದಿಸಿ ನಂತರ 2023ರಲ್ಲಿ ಆ ಮನೆಗೆ ತೆರಳಿ ತಮ್ಮ ಪ್ರೇಮಿ ಜೊತೆ ಅಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ಸೋನಾಕ್ಷಿ ಸಿನ್ಹಾ ಖರೀದಿಸಿದ ಆ ಮನೆ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ನಟಿ ಸೋನಾಕ್ಷಿ ಸಿನ್ಹಾ ಅವರು ಖರೀದಿಸಿದ ಮುಂಬೈ ಮನೆ ಸಮುದ್ರಕ್ಕೆ ಮುಖ ಮಾಡಿದೆ. ಅದು 4,628 ಚದರ ಅಡಿಗಳಷ್ಟು ವಿಸ್ತಾರವಾಗಿದೆಯಂತೆ. ಮನೆಯು ಪ್ರೀಮಿಯಂ ರೆಸಿಡೆನ್ಸಿಯಲ್ ಟವರ್‌ನಲ್ಲಿ 16ನೇ ಮಹಡಿಯಲ್ಲಿದೆ.

Sonakshi Sinha

ವರದಿಗಳ ಪ್ರಕಾರ ಅವರ ಮುಂಬೈ ಮನೆ ಮಾರುಕಟ್ಟೆ ಮೌಲ್ಯ 14 ಕೋಟಿ ರೂಪಾಯಿ. ಅವರ ಮನೆ ಕಿತ್ತಳೆ ಮತ್ತು ನೀಲಿ ಬಣ್ಣವನ್ನು ಹೊಂದಿದ್ದು, ಟೆರಾಕೋಟಾ ಲುಕ್‌ ನೀಡುತ್ತದೆ. ಮಲಗುವ ಕೋಣೆ ಸ್ಲೈಡಿಂಗ್ ವಾಲ್ ಅನ್ನು ಹೊಂದಿದ್ದು, ಅದರ ಎಲ್ಲಾ ಬದಿಯಲ್ಲಿ ನೀಲಿ ಬಣ್ಣದ ಕಪಾಟುಗಳೊಂದಿಗೆ ಮರ್ಫಿ ಬೆಡ್ ಇದೆ. ಮನೆಯ ಬಾಲ್ಕನಿಯಿಂದ ಬಾಂದ್ರಾ-ವಲ್ಲಿ ಸಮುದ್ರದ ನೋಟವನ್ನು ಸುಲಭವಾಗಿ ಆನಂದಿಸಬಹುದು. ನಾಲ್ಕು ಬೆಡ್ ರೂಮ್‌ ಅಪಾರ್ಟ್‌ಮೆಂಟ್ ಅನ್ನು 1.5 ಬೆಡ್ ರೂಮ್ ಮನೆಯನ್ನಾಗಿ ಪರಿವರ್ತಿಸಲಾಗಿದೆಯಂತೆ. ಅವರ ಮನೆಯಲ್ಲಿ ಆರ್ಟ್ ಸ್ಟುಡಿಯೋ, ಯೋಗ ಮಾಡುವುದಕ್ಕೆ ಜಾಗ ಹಾಗೂ ಡ್ರೆಸ್ಸಿಂಗ್ ರೂಮ್‌ ಕೂಡ ಇದೆಯಂತೆ. ಇನ್ನು ಇವರ ರೂಂನಲ್ಲಿರುವ ವಾಕ್ ಇನ್ ವಾರ್ಡ್‌ರೋಬ್ ತುಂಬಾ ಚೆನ್ನಾಗಿದೆ.

ಇದನ್ನೂ ಓದಿ: flight problems: ವಿಮಾನದಲ್ಲಿ ಕೈಕೊಟ್ಟ ಎಸಿ; ಸೆಕೆ ತಾಳಲಾರದೆ ಬಟ್ಟೆ ಬಿಚ್ಚಿದ ಪ್ರಯಾಣಿಕರು!

ನಟಿ ಸೋನಾಕ್ಷಿ ಸಿನ್ಹಾ ಅವರು ಪ್ರಸ್ತುತ ಸಂಜಯ್ ಲೀಲಾ ಬನ್ಸಾಲಿ ಅವರ ಚೊಚ್ಚಲ ವೆಬ್ ಸರಣಿ ಹೀರಾಮಂಡಿ ಯಶಸ್ಸಿನಲ್ಲಿ ಮುಳುಗಿದ್ದಾರೆ. ಅಲ್ಲಿ ಅವರು ವೇಶ್ಯೆಯ ಪಾತ್ರವನ್ನು ನಿರ್ವಹಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತಂತ್ರಜ್ಞಾನ

Gemini Mobile App: ಕನ್ನಡ ಸೇರಿದಂತೆ 9 ಭಾರತೀಯ ಭಾಷೆಗಳಲ್ಲಿ ಗೂಗಲ್ ಜೆಮಿನಿ ಆ್ಯಪ್; ಏನಿದರ ಉಪಯೋಗ?

ಗೂಗಲ್ ತನ್ನ ಬಳಕೆದಾರರಿಗೆ ಜೆಮಿನಿ ಅಪ್ಲಿಕೇಶನ್ ಮತ್ತು ಜೆಮಿನಿ ಅಡ್ವಾನ್ಸ್ಡ್ ಎಂಬ ಎರಡೂ ಅಪ್ಲಿಕೇಶನ್ ಗಳನ್ನು (Gemini Mobile App) ಒಂಬತ್ತು ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಿದೆ. ಇದರಿಂದ ಹೆಚ್ಚಿನ ಜನರು ತಮ್ಮ ಆದ್ಯತೆಯ ಭಾಷೆಯಲ್ಲಿ ಮಾಹಿತಿಯನ್ನು ಪಡೆಯಲು ಸಹಾಯ ಮಾಡುತ್ತದೆ.

VISTARANEWS.COM


on

By

Gemini Mobile App
Koo

ಗೂಗಲ್ (google) ಕೃತಕ ಬುದ್ಧಿಮತ್ತೆಯಿಂದ (AI) ಕಾರ್ಯನಿರ್ವಹಿಸುವ ಚಾಟ್ ಬಾಟ್ ಜೆಮಿನಿ ಮೊಬೈಲ್ ಅಪ್ಲಿಕೇಶನ್ (Gemini Mobile App) ಅನ್ನು ಇಂಗ್ಲಿಷ್ (English) ಮತ್ತು ಒಂಬತ್ತು ಭಾರತೀಯ ಭಾಷೆಗಳಲ್ಲಿ (Indian languages) ಬಿಡುಗಡೆ ಮಾಡಿದೆ. ಈ ಕುರಿತು ಕಂಪನಿಯು ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿಕೆ ನೀಡಿದ್ದು, ಇದು ಗೂಗಲ್‌ನ ಅತ್ಯಂತ ಸಮರ್ಥ ಎಐ ಮಾದರಿಯಾಗಿದೆ.

ಬಳಕೆದಾರರಿಗೆ ಜೆಮಿನಿ ಅಪ್ಲಿಕೇಶನ್ ಮತ್ತು ಜೆಮಿನಿ ಅಡ್ವಾನ್ಸ್ಡ್ ಈ ಎರಡೂ ಅಪ್ಲಿಕೇಶನ್‌ಗಳು ಒಂಬತ್ತು ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತವೆ. ಇದರಿಂದ ಹೆಚ್ಚಿನ ಜನರು ತಮ್ಮ ಆದ್ಯತೆಯ ಭಾಷೆಯಲ್ಲಿ ಮಾಹಿತಿಯನ್ನು ಪ್ರವೇಶಿಸಲು ಮತ್ತು ಕಾರ್ಯಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ.

ಹಿಂದಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಲಭ್ಯವಿದ್ದು, ಗೂಗಲ್ ಈ ಒಂಬತ್ತು ಸ್ಥಳೀಯ ಭಾಷೆಗಳನ್ನು ಜೆಮಿನಿ ಅಡ್ವಾನ್ಸ್‌ಡ್‌ಗೆ ಸಂಯೋಜಿಸುತ್ತದೆ.
ಇದಲ್ಲದೆ, ಗೂಗಲ್ ಜೆಮಿನಿ ಅಡ್ವಾನ್ಸ್‌ಡ್‌ನಲ್ಲಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇದರಲ್ಲಿ ಹೊಸ ಡೇಟಾ ವಿಶ್ಲೇಷಣೆ ಸಾಮರ್ಥ್ಯಗಳು, ಫೈಲ್ ಅಪ್‌ಲೋಡ್‌ಗಳು ಮತ್ತು ಇಂಗ್ಲಿಷ್‌ನಲ್ಲಿ ಗೂಗಲ್ ಸಂದೇಶಗಳಲ್ಲಿ ಜೆಮಿನಿಯೊಂದಿಗೆ ಚಾಟ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ಭಾರತ ಮಾತ್ರವಲ್ಲದೆ ಟರ್ಕಿ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿಯೂ ಜೆಮಿನಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ.


ಈ ಕುರಿತು ಸುಂದರ್ ಪಿಚೈ ಹೇಳಿದ್ದೇನು?

ಗೂಗಲ್ ಸಿಇಒ ಸುಂದರ್ ಪಿಚೈ ಎಕ್ಸ್ ನಲ್ಲಿ ಇದರ ಬಿಡುಗಡೆಯನ್ನು ಘೋಷಿಸಿ, ಅಪ್ಲಿಕೇಶನ್ ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಲು, ಟೈಪ್ ಮಾಡಲು, ಮಾತನಾಡಲು ಅಥವಾ ಚಿತ್ರವನ್ನು ಸೇರಿಸಲು ಅನುಮತಿಸುತ್ತದೆ. ಅದನ್ನು ಹೇಗೆ ಬದಲಾಯಿಸುವುದು ಎಂಬುದರ ಕುರಿತು ಸೂಚನೆಗಳಿಗಾಗಿ ಫ್ಲಾಟ್ ಟೈರ್‌ನ ಚಿತ್ರವನ್ನು ತೆಗೆದುಕೊಳ್ಳಿ ಅಥವಾ ಪರಿಪೂರ್ಣವಾದ ಟಿಪ್ಪಣಿಯನ್ನು ಬರೆಯಲು ಸಹಾಯ ಪಡೆಯಿರಿ ಎಂದು ಹೇಳಿದ್ದಾರೆ.


ಸಾಧ್ಯತೆಗಳಿಗೆ ಅಂತ್ಯವಿಲ್ಲ. ಇದು ನಿಜವಾದ ಸಂಭಾಷಣಾಶೀಲ, ಮಲ್ಟಿಮೋಡಲ್ ಮತ್ತು ಸಹಾಯಕ ಎಐ ಸಹಾಯಕವನ್ನು ನಿರ್ಮಿಸುವ ನಮ್ಮ ಪ್ರಯಾಣದಲ್ಲಿ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Smartphone Charging Tips: ನಿಮ್ಮ ಸ್ಮಾರ್ಟ್ ಪೋನ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಹೀಗೆ ಮಾಡಿ

ಜೆಮಿನಿಗೆ ಹೇಗೆ ಪ್ರವೇಶಿಸುವುದು?

ಜೆಮಿನಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಅಥವಾ ಗೂಗಲ್ ಅಸಿಸ್ಟೆಂಟ್ ಮೂಲಕ ಆಯ್ಕೆ ಮಾಡಿ. ಅನಂತರ ಕಾರ್ನರ್ ಸ್ವೈಪ್ ಮಾಡುವ ಮೂಲಕ, ಆಯ್ದ ಫೋನ್‌ಗಳಲ್ಲಿ ಪವರ್ ಬಟನ್ ಒತ್ತಿ ಅಥವಾ “ಹೇ ಗೂಗಲ್” ಎಂದು ಹೇಳುವ ಮೂಲಕ ಜೆಮಿನಿ ಬಳಸಬಹುದು.

ಐಒಎಸ್ ನಲ್ಲಿ, ಜೆಮಿನಿ ಪ್ರವೇಶವು ಗೂಗಲ್ ಅಪ್ಲಿಕೇಶನ್‌ನಿಂದ ನೇರವಾಗಿ ಸಿಗುತ್ತದೆ. ಜೆಮಿನಿ ಟಾಗಲ್ ಅನ್ನು ಟ್ಯಾಪ್ ಮಾಡಿ ಮತ್ತು ಚಾಟ್ ಮಾಡಲು ಪ್ರಾರಂಭಿಸಬೇಕು.

Continue Reading

Latest

Job News: ಕೇಂದ್ರ ಸರ್ಕಾರದಿಂದ ‘ಎಲೆಕ್ಟ್ರಾನಿಕ್’ ಯೋಜನೆ;‌ 5 ವರ್ಷಗಳಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿ!

Job News: ಕೇಂದ್ರ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು (Electronic Manufacturing) ದ್ವಿಗುಣಗೊಳಿಸುವ ಸಾಧ್ಯತೆ ಇದೆ. ಆ ಮೂಲಕ ಯುವ ಜನತೆಗೆ ಬೃಹತ್ ಉದ್ಯೋಗವಕಾಶವನ್ನು ಕಲ್ಪಿಸಲಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಕೇಂದ್ರ ಸರ್ಕಾರವು ಎಲೆಕ್ಟ್ರಾನಿಕ್ ಉತ್ಪಾದನಾ ವಲಯದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆ ರೂಪಿಸುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತದ ಎಲೆಕ್ಟ್ರಾನಿಕ್ ಉತ್ಪಾದನಾ ವಲಯದ ಉದ್ಯೋಗಿಗಳನ್ನು 25 ಲಕ್ಷದಿಂದ ಸುಮಾರು 50 ಲಕ್ಷಕ್ಕೆ ದ್ವಿಗುಣಗೊಳಿಸುವ ಗುರಿ ಸರ್ಕಾರಕ್ಕಿದೆ.

VISTARANEWS.COM


on

Job News
Koo

ನವದೆಹಲಿ: ದೇಶದಲ್ಲಿ ಯುವ ಜನರ (Job News) ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಮುಖ್ಯವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಗಳ ಪ್ರಕಾರ, ಕೇಂದ್ರ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಗುರಿ ಹೊಂದಿದೆ. ಆ ಮೂಲಕ ಬೃಹತ್ ಉದ್ಯೋಗವಕಾಶವನ್ನು ಕಲ್ಪಿಸಲಿದೆ.

ದೇಶದ ಪ್ರಸ್ತುತ ಎಲೆಕ್ಟ್ರಾನಿಕ್ ರಫ್ತು 125-130 ಬಿಲಿಯನ್ ಡಾಲರ್‌ ಆಗಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತದ ಎಲೆಕ್ಟ್ರಾನಿಕ್ ಉತ್ಪಾದನೆಯು 250 ಶತಕೋಟಿ ಡಾಲರ್‌ ತಲುಪುವ ಸಾಧ್ಯತೆ ಎಂದು ಸಚಿವಾಲಯದ ಮೂಲಗಳಿಂದ ತಿಳಿದುಬಂದಿದೆ. ಹಾಗೆಯೇ, ಪ್ರಸ್ತುತ ಎಲೆಕ್ಟ್ರಾನಿಕ್ ಉದ್ಯಮದಲ್ಲಿ 25 ಲಕ್ಷ ಮಂದಿ ಉದ್ಯೋಗಿಗಳಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಾನಿಕ್ ಉತ್ಪಾದನಾ ವಲಯದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆ ರೂಪಿಸುತ್ತಿದೆ. ಆ ಮೂಲಕ ಮುಂದಿನ ಐದು ವರ್ಷಗಳಲ್ಲಿ ಭಾರತದ ಎಲೆಕ್ಟ್ರಾನಿಕ್ ಉತ್ಪಾದನಾ ವಲಯದ ಉದ್ಯೋಗಿಗಳನ್ನು 25 ಲಕ್ಷದಿಂದ ಸುಮಾರು 50 ಲಕ್ಷಕ್ಕೆ ದ್ವಿಗುಣಗೊಳಿಸುವ ಗುರಿ ಸರ್ಕಾರಕ್ಕಿದೆ ಎನ್ನಲಾಗಿದೆ.

“ಡಿಜಿಟಲ್ ತಂತ್ರಜ್ಞಾನಕ್ಕೆ ಸೇವೆಗಳನ್ನು ಒದಗಿಸುವಲ್ಲಿ ನಮ್ಮ ಗಮನವು ಒಂದೇ ಆಗಿರುತ್ತದೆ. ನಮ್ಮ ಗಮನ ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ಹೆಚ್ಚಿಸುವುದರ ಮೇಲೆ ಇದೆ. ಆ ಗಮನ ನಿಖರವಾಗಿರುತ್ತದೆ. ಮತ್ತು ಆ ಗುರಿಯನ್ನು ವೇಗವಾಗಿ ತಲುಪುತ್ತೇವೆ” ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಭಾರತವು ಈಗಾಗಲೇ ಆಮದು ಪರ್ಯಾಯವನ್ನು ಬಿಟ್ಟು ಸ್ವಾವಲಂಬಿಯಾಗಿ ಇರಲು ಪ್ರಯತ್ನಿಸುತ್ತಿದೆ, ಮೊಬೈಲ್ ಪೋನ್ ಗಳಂತಹ ಕೆಲವು ವಿಭಾಗಗಳನ್ನು ರಫ್ತು ಮಾಡುವ ಹಂತಕ್ಕೆ ಬಂದಿದೆ. ಆದರೆ ಲ್ಯಾಪ್ ಟಾಪ್‌ಗಳಿಗೆ ಸಂಬಂಧಿಸಿದಂತೆ ಭಾರತವು ಅದನ್ನು ನಮ್ಮಲ್ಲೇ ಉತ್ಪಾದಿಸುವ ಹಂತದಲ್ಲಿದೆ. ಕೇಂದ್ರ ಸರ್ಕಾರವು ವಿವಿಧ ಪ್ರೋತ್ಸಾಹ ಯೋಜನೆಗಳ ಮೂಲಕ ದೇಶಿಯ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾರ 760 ಶತಕೋಟಿ ರೂಪಾಯಿಗಳ ಹಣಕಾಸಿನ ವೆಚ್ಚವನ್ನು ಎಲೆಕ್ಟ್ರಾನಿಕ್ ಉದ್ಯೋಗಿಗಳ ಬದ್ಧತೆಗೆ ವಿನಿಯೋಗಿಸುತ್ತಿದೆ. ನಿರುದ್ಯೋಗ ನಿವಾರಣೆಯ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ಚೀನಾ ಮತ್ತು ಹಾಂಗ್‌ಕಾಂಗ್ ದೇಶಗಳು ಭಾರತದಿಂದ ಕ್ರಮವಾಗಿ 44 ಪ್ರತಿಶತ ಮತ್ತು 16 ಪ್ರತಿಶತದಷ್ಟು ಒಟ್ಟು ಎಲೆಕ್ಟ್ರಾನಿಕ್ ಸಾಧನಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಮತ್ತೊಂದೆಡೆ ಭಾರತದಿಂದ ತಯಾರಿಸಿದ ಮೊಬೈಲ್ ಪೋನ್‌ಗಳು ಮತ್ತು ಎಲೆಕ್ಟ್ರಾನಿಕ್ ನಿಯಂತ್ರಣ ಘಟಕಗಳು ಯುನೈಟೆಡ್ ಸ್ಟೇಟ್ಸ್ ಮತ್ತು ಯುಎಇ ಹೆಚ್ಚು ರಪ್ತಾಗುತ್ತಿದೆ.

ಇದನ್ನೂ ಓದಿ: NEET UG 2024: ಮಗಳ ಜೊತೆ ಸೇರಿ ನೀಟ್ ಯುಜಿ ಪರೀಕ್ಷೆ ಬರೆದು ಪಾಸಾದ ಅಪ್ಪ!

ಭಾರತದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನಾ ವಲಯದ ಪರಿವರ್ತನೆಯಿಂದ ಭಾರತವು ಜಾಗತಿಕ ಎಲೆಕ್ಟ್ರಾನಿಕ್ ಉತ್ಪಾದನಾ ಕೇಂದ್ರವಾಗಿ ಸ್ಥಾನ ಪಡೆಯಲಿದೆ. ಇದರಿಂದ ದೇಶದ ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ತಾಂತ್ರಿಕ ಆವಿಷ್ಕಾರ ಬಲಗೊಳ್ಳಲಿದೆ, ಅದಕ್ಕಾಗಿ ಭಾರತ ವಿವಿಧ ಯೋಜನೆಗಳನ್ನು ಪ್ರಕಟಿಸುತ್ತಿದೆ. ಇದಲ್ಲದೇ ದೇಶದಲ್ಲಿ ಸುಸ್ಥಿರ ಅರೆವಾಹಕ ಮತ್ತು ಪ್ರದರ್ಶನ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯೊಂದಿಗೆ 10 ಶತಕೋಟಿ ಡಾಲರ್‌ ಪ್ರೋತ್ಸಾಹಕ ವೆಚ್ಚದೊಂದಿಗೆ ಸರ್ಕಾರವು ಸೆಮಿಕಾನ್ ಇಂಡಿಯಾ ಕಾರ್ಯಕ್ರಮನ್ನು ಪರಿಚಯಿಸಿದೆ.

Continue Reading

Latest

Viral News: 20 ತಿಂಗಳ ಮಗುವಿಗೆ ಸಿಗರೇಟ್ ಸೇದಿಸಲು, ಮದ್ಯ ಕುಡಿಸಲು ಯತ್ನಿಸಿದ ತಾಯಿ!

Viral News: ಮನೆಯ ಮೊದಲ ಪಾಠಶಾಲೆ ಜನನಿ ತಾನೇ ಮೊದಲು ಗುರು ಈ ವಾಕ್ಯವನ್ನು ಕೇಳದೇ ಇದ್ದವರು ಇರಲಿಕ್ಕಿಲ್ಲವೇನೋ. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಈ ವಾಕ್ಯ ಚಿರಪರಿಚಿತ. ಯಾಕೆಂದರೆ ಶಾಲೆಯ ಗೋಡೆಯ ಮೇಲೆ ಈ ವಾಕ್ಯದ ಬೋರ್ಡ್‌ಗಳನ್ನು ಅಂದಿನ ಶಿಕ್ಷಕರು ಹಾಕಿರುತ್ತಿದ್ದರು. ಆದರೆ ಈಗ ಆಗಿನ ಶಿಕ್ಷಣವೂ ಇಲ್ಲ, ಆ ತರಹದ ಶಿಕ್ಷಕರೂ ಇಲ್ಲ ಎನ್ನುವುದೇ ವಿಪರ್ಯಾಸ! ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಇಲ್ಲೊಬ್ಬಳು ಮಹಾನ್‌ ತಾಯಿ ತನ್ನ ಮಗುವಿಗೆ ಸಿಗರೇಟ್ ಸೇದಲು ಮತ್ತು ಮದ್ಯಪಾನ ಮಾಡಲು ಒತ್ತಾಯಿಸಿದ ಘಟನೆಯೊಂದು ನಡೆದಿದೆ. ನಮ್ಮ ಸಮಾಜ ಎತ್ತಕಡೆ ಸಾಗುತ್ತಿದೆ ಎನ್ನುವುದೇ ಕಳವಳ ಮೂಡಿಸುತ್ತಿದೆ.

VISTARANEWS.COM


on

Viral News
Koo

ಹುಟ್ಟಿದ ಮಗುವಿಗೆ ಮೊದಲ ಗುರು ತಾಯಿಯೇ ಆಗಿರುತ್ತಾಳೆ. ಯಾಕೆಂದರೆ ತಾಯಿಯನ್ನು ನೋಡಿಯೇ ಮಕ್ಕಳು ಕಲಿಯುವುದರಿಂದ, ಮಕ್ಕಳು ತಾಯಿಯ ಜೊತೆ ಸಾಕಷ್ಟು ಸಮಯ ಕಳೆಯುವುದರಿಂದ ಮಕ್ಕಳ ಪಾಲಿಗೆ ಅವಳೇ ಗುರುವಾಗಿರುತ್ತಾಳೆ. ಮಕ್ಕಳು ಉತ್ತಮ ಸಂಸ್ಕಾರವಂತರಾದರೆ ಅದಕ್ಕೆ ಅವರ ತಾಯಿಯೇ ಕಾರಣೀಕರ್ತಳಾಗಿರುತ್ತಾಳೆ. ಇನ್ನು ತಾನು ಹಾಲೂಣಿಸಿ ಬೆಳೆಸಿದ ಮಗು ಕೆಟ್ಟದಾರಿ ಹಿಡಿದರೆ ಆ ತಾಯಿಗೆ ಆಗುವ ಅಘಾತ ಅಷ್ಟಿಷ್ಟಲ್ಲ. ಇಷ್ಟೆಲ್ಲಾ ಯಾಕೆ ಹೇಳುತ್ತಿರುವುದು ಎಂದರೆ ಇಲ್ಲೊಬ್ಬಳು ತಾಯಿ ಆ ಸ್ಥಾನಕ್ಕೆ ಅಪಮಾನ ಮಾಡಿದ್ದಾಳೆ. ತನ್ನ ಕರುಳಬಳ್ಳಿಗೆ ಕೆಟ್ಟ ಗುಣಗಳನ್ನು ಕಲಿಸುತ್ತಿರುವ ಘಟನೆ ಅಸ್ಸಾಂನಲ್ಲಿ ನಡೆದಿದ್ದು, ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದೆ. ಈ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ (Viral News) ಆಗಿದೆ.

ಅಸ್ಸಾಂನ ಸಿಲ್ಚಾರ್‌ನ ಚೆಂಗ್ಕುರಿಯಲ್ಲಿ ಮಹಿಳೆಯೊಬ್ಬಳು ತನ್ನ 20 ತಿಂಗಳ ಮಗುವಿಗೆ ಸಿಗರೇಟ್ ಸೇದಲು ಮತ್ತು ಮದ್ಯಪಾನ ಮಾಡಲು ಒತ್ತಾಯಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಪಟ್ಟ ಪೋಟೊಗಳ ಆಧಾರದ ಮೇಲೆ ಸ್ಥಳೀಯ ಮಕ್ಕಳ ಸಹಾಯವಾಣಿ ಘಟಕವು ಮಹಿಳೆಯ ಮೇಲೆ ದೂರು ದಾಖಲಿಸಿದೆ ಎಂಬುದಾಗಿ ವರದಿಯಾಗಿದೆ. ದೂರಿನ ನಂತರ ಪೊಲೀಸರು ಮಹಿಳೆಯ ನಿವಾಸಕ್ಕೆ ತಲುಪಿ ಮಗುವನ್ನು ರಕ್ಷಿಸಿ ತಾಯಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

‘ಸಿಲ್ಚಾರ್ ನ ಚೆಂಗ್ಕುರಿಯಲ್ಲಿ ಬುಧವಾರ ರಾತ್ರಿ ತಾಯಿಯೊಬ್ಬಳು ಮಗುವನ್ನು ಧೂಮಪಾನ ಮತ್ತು ಮದ್ಯಪಾನ ಮಾಡುವಂತೆ ಒತ್ತಾಯಿಸುತ್ತಿರುವ ಬಗ್ಗೆ ಮಾಹಿತಿ ತಿಳಿದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅವರು ಸೂಕ್ತ ಕ್ರಮ ಕೈಗೊಂಡು ತಾಯಿಯನ್ನು ವಶಕ್ಕೆ ತೆಗೆದುಕೊಂಡು ಮಗುವನ್ನು ರಕ್ಷಿಸಿದ್ದಾರೆ’ ಎಂದು ಮಕ್ಕಳ ಸಹಾಯವಾಣಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ತಾಯಿ ಮತ್ತು ಮಗು ಮಕ್ಕಳ ಕಲ್ಯಾಣ ಸಮಿತಿಯ ವಶದಲ್ಲಿದ್ದಾರೆ ಮತ್ತು ಸಮಗ್ರ ತನಿಖೆಗಾಗಿ ದೃಶ್ಯ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಹಿನ್ನಲೆಯಲ್ಲಿ ಈ ಪೋಟೊಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ಮಹಿಳೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕೆಲವರು ಮಗುವನ್ನು ದತ್ತು ತೆಗೆದುಕೊಳ್ಳಲು ಬಯಸಿದ್ದಾರೆ. ಮತ್ತೊಬ್ಬರು, ಮಗುವನ್ನು ಪ್ರೀತಿ ಮತ್ತು ಜವಬ್ದಾರಿಯಿಂದ ನೋಡಿಕೊಳ್ಳುವ ಕುಟುಂಬಕ್ಕೆ ದತ್ತು ನೀಡಬೇಕು. ಅವಳು ತಾಯಿಯಾಗಲು ಯೋಗ್ಯಳಲ್ಲ. ವಿದೇಶಗಳಲ್ಲಿ ಇಂತಹ ತಾಯಿಗೆ ದೀರ್ಘಕಾಲದವರೆಗೆ ಜೈಲಿನಲ್ಲಿ ಬಂಧಿಯಾಗಿರುವಂತಹ ಶಿಕ್ಷೆ ನೀಡುತ್ತಾರೆ ಎಂದು ಪೋಸ್ಟ್ ಮಾಡಿದ್ದಾರೆ.

ಕೆಲವರು ಮಹಿಳೆಗೆ ಕೌನ್ಸಿಲಿಂಗ್ ಅಗತ್ಯವಿದೆ ಎಂದರೆ, ಇನ್ನೂ ಕೆಲವರು ಮಹಿಳೆಯರು ಸಹಾನುಭೂತಿಯ ಪ್ರತಿರೂಪವೆಂದು ಪರಿಗಣಿಸುವ ದಿನಗಳು ಕಳೆದುಹೋಗಿವೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪುರುಷರಿಗಿಂತ ಕೆಟ್ಟವರಾಗಿದ್ದಾರೆ ಎಂದು ಮಹಿಳಾ ಕುಲದ ಬಗ್ಗೆ ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: Video Viral: ಮಹಿಳೆಯನ್ನು ತಿವಿದು ರಸ್ತೆಯುದ್ದಕ್ಕೂ ಎಳೆದೊಯ್ದ ಎಮ್ಮೆ! ವಿಡಿಯೊ ಇದೆ

ಇದೇರೀತಿಯ ಘಟನೆಯೊಂದು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಕೊಂಡಿದ್ದು, ಇದರಲ್ಲಿ ಮಹಿಳೆಯೊಬ್ಬಳು ತನ್ನ ಮಗುವನ್ನು ಎತ್ತಿಕೊಂಡು ಹಳೆಯ ಪ್ರಸಿದ್ಧ ಬಾಲಿವುಡ್ ಹಾಡಿಗೆ ರೀಲ್ಸ್ ಮಾಡುವಾಗ ಸಿಗರೇಟ್ ಸೇದುತ್ತಿರುವ ವಿಡಿಯೊ ಇದೆ. ಈ ವಿಡಿಯೊ ಕೂಡ ವೈರಲ್ ಆಗಿದ್ದು, ಅನೇಕರು ಮಹಿಳೆಯ ಮೇಲೆ ಕಿಡಿಕಾರಿದ್ದಾರೆ.

Continue Reading

Latest

NEET UG 2024: ಮಗಳ ಜೊತೆ ಸೇರಿ ನೀಟ್ ಯುಜಿ ಪರೀಕ್ಷೆ ಬರೆದು ಪಾಸಾದ ಅಪ್ಪ!

NEET UG 2024: ಅಪ್ಪನೆಂದರೆ ಅದ್ಭುತ ಎನ್ನುವ ಮಾತಿದೆ. ಮಕ್ಕಳ ಹಿತಕ್ಕಾಗಿ ಅಪ್ಪ ಏನು ಬೇಕಾದರೂ ಮಾಡುತ್ತಾನೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಮಗಳಿಗಾಗಿ ತಾನೂ ಕೂಡ ಪೆನ್ನು, ಪೇಪರ್‌ ಹಿಡಿದು ಪರೀಕ್ಷೆ ಬರೆದಿದ್ದಾರೆ.ಮಗಳನ್ನು ಪ್ರೋತ್ಸಾಹಿಸಲು ನೀಟ್ ಯುಜಿ 2024ರ ಪರೀಕ್ಷೆಯಲ್ಲಿ ಮಗಳ ಜೊತೆ ತಾನು ಪರೀಕ್ಷೆ ಬರೆದು ಒಟ್ಟಿಗೆ ತೇರ್ಗಡೆ ಹೊಂದಿದ್ದಾರೆ. ಇನ್ನು ಇವರ ಮಗಳ ಪಾಲಿಗೆ ಇವರೇ ಗುರುವಂತೆ. ತುಂಬಾ ಸರಳವಾಗಿ ಇವರು ಕಲಿಸುವುದರಿಂದ ಮಗಳಿಗೆ ಅಪ್ಪನೆಂದರೆ ತುಂಬಾ ಪ್ರೀತಿಯಂತೆ!

VISTARANEWS.COM


on

NEET UG 2024
Koo

ನವದೆಹಲಿ: ಪರೀಕ್ಷೆ ಹತ್ತಿರ ಬರುತ್ತಿದೆ ಓದು, ಮಾರ್ಕ್ಸ್‌ ಇಷ್ಟು ಕಡಿಮೆ ಯಾಕೆ ಬಂತು? ಇಂತಹದ್ದೇ ಪ್ರಶ್ನೆಗಳ ಸುರಿಮಳೆ ಸುರಿಸಿ ಮಕ್ಕಳ ಜೀವ ತಿನ್ನುವ ತಂದೆ-ತಾಯಿಗಳನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬರು ತಂದೆ ಮಗಳಿಗಾಗಿ ಮಾಡಿದ ಕೆಲಸವನ್ನು ಕೇಳಿದ್ರೆ ನೀವು ಆಶ್ವರ್ಯಕ್ಕೆಗೊಳಗಾಗುತ್ತೀರಿ. ತಂದೆ (Father Love) ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಏನೂ ಬೇಕಾದರೂ ಮಾಡಲು ಸಿದ್ಧರಿರುತ್ತಾರೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. 50 ವರ್ಷದ ತಂದೆಯೊಬ್ಬರು ತಮ್ಮ ಮಗಳನ್ನು ಪ್ರೋತ್ಸಾಹಿಸಲು ನೀಟ್ ಯುಜಿ 2024ರ (NEET UG 2024 ) ಪರೀಕ್ಷೆಯಲ್ಲಿ ಮಗಳ ಜೊತೆ ತಾವೂ ಕೂಡ ಪರೀಕ್ಷೆ ಬರೆದು ಒಟ್ಟಿಗೆ ತೇರ್ಗಡೆ ಆಗಿದ್ದಾರೆ.

50 ವರ್ಷದ ತಂದೆ ವಿಕಾಸ್ ಮಂಗೋತ್ರಾ ತಮ್ಮ ಮಗಳಾದ ಮೀಮಾನ್ಸಾ (18) ಜೊತೆ ನೀಟ್ ಪರೀಕ್ಷೆ ಬರೆದಿದ್ದಾರೆ. ಇವರು ದೆಹಲಿಯಲ್ಲಿ ಕಾರ್ಪೋರೇಟ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
‘ನೀಟ್ ಅತ್ಯಂತ ಸ್ಫರ್ಧಾತ್ಮಕ ಪರೀಕ್ಷೆಯಾಗಿದೆ. ಹಾಗಾಗಿ ನಾನು ನನ್ನ ಮಗಳಿಗೆ ಬೆಂಬಲ ನೀಡುವುದಕ್ಕಾಗಿ ಅವಳ ಜೊತೆಯಲ್ಲಿ ನಾನು ಪರೀಕ್ಷೆಗೆ ಹಾಜರಾದೆ’ ಎಂದು ಮಂಗೋತ್ರಾ ಹೇಳಿದ್ದಾರೆ.

ಇನ್ನು ಕಲಿಕೆಯ ವಿಷಯದ ಕುರಿತು ಮಾತನಾಡಿದ ಅವರು “ನಾನು ನನ್ನ ಮಗಳಿಗೆ ತುಂಬಾ ಸರಳ ರೀತಿಯಲ್ಲಿ ಕಲಿಸುತ್ತೇನೆ. ಹಾಗಾಗಿ ನನ್ನ ಮಗಳು ನನ್ನಿಂದ ಕಲಿಯಲು ಇಷ್ಟಪಡುತ್ತಾಳೆ. ಒಮ್ಮೆ ಅವಳಿಗೆ ಪ್ರಶ್ನೆಯೊಂದು ತುಂಬಾ ಕಷ್ಟವಾಗಿತ್ತು, ಅದನ್ನು ಪರಿಹರಿಸಲು ಅವಳಿಗೆ ನಾನು ಸಹಾಯ ಮಾಡಿದೆ. ಆಗ ಅವಳಿಗೆ ನನ್ನನ್ನು ನೋಡಿ ಆಶ್ಚರ್ಯವಾಯಿತು” ಎಂದು ಖುಷಿಯಿಂದ ಹೇಳಿಕೊಂಡರು.

ತನ್ನ ಆತ್ಮವಿಶ್ವಾಸ ಹಾಗೂ ಸ್ವಂತ ಸಾಮರ್ಥ್ಯವನ್ನು ಪರೀಕ್ಷಿಸಲು 2022ರಲ್ಲಿ ಪರೀಕ್ಷೆ ಬರೆದಿದ್ದರು. 2024ರಲ್ಲಿ ಮಗಳನ್ನು ಬೆಂಬಲಿಸುವುದಕ್ಕಾಗಿ ಪರೀಕ್ಷೆ ಬರೆದಿದ್ದಾರೆ. ವಿಕಾಸ್‌ ಅವರಿಗೆ ವೈದ್ಯರಾಗಬೇಕು ಎಂಬ ಆಸೆ ಇದ್ದಿತಂತೆ. ಅವರು ಸಾಕಷ್ಟು ಅಂಕಗಳನ್ನು ಪಡೆದಿದ್ದರೂ ಕೂಡ ಕೆಲವು ವೈಯಕ್ತಿಕ ಸಮಸ್ಯೆಗಳಿಂದ ಅವರು ಎಂಜಿನಿಯರಿಂಗ್‌ಗೆ ಹೋಗಬೇಕಾಯಿತಂತೆ.

ವಿಕಾಸ್ ನೀಟ್ ಮಾತ್ರವಲ್ಲ ಸುಮಾರು ಎರಡು ದಶಕಗಳ ಹಿಂದೆ ಗೇಟ್, ಜೆಕೆಸಿಇಟಿ ಮತ್ತು ಯುಪಿಎಸ್ ಸಿ, ಸಿಎಸ್ ಇಯಂತಹ ಇತರ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದರು. ಇದೀಗ ಮಗಳನ್ನು ಪ್ರೇರೆಪಿಸಲು ಅವರು ಎರಡನೇ ಬಾರಿ ನೀಟ್ ಪರೀಕ್ಷೆ ಬರೆದಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Viral News: ವಿದ್ಯಾರ್ಥಿಗಳಿಗೆ ಬಡಿಸಿದ್ದ ಊಟದ ತಟ್ಟೆಯಲ್ಲಿತ್ತು ಸತ್ತ ಹಾವು! ವಿಡಿಯೊ ನೋಡಿ

ಪೋಷಕರು ನಿಜವಾಗಿಯೂ ತಮ್ಮ ಮಕ್ಕಳನ್ನು ಪರೀಕ್ಷೆಗೆ ಸಿದ್ಧತೆ ಮಾಡಲು ಬಯಸಿದರೆ, ಮಕ್ಕಳಿಗೆ ಪಠ್ಯಪುಸ್ತಕವನ್ನು ಓದಲು ಪೋಷಕರು ಸಹಾಯ ಮಾಡಬೇಕು ಎಂದು ಅವರು ಎಲ್ಲಾ ಪೋಷಕರಿಗೆ ಸಲಹೆ ನೀಡಿದ್ದಾರೆ.
ಹಾಗೇ ಗ್ರೇಸ್ ಮಾರ್ಕ್ ನೀತಿಯ ಬಗ್ಗೆ ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ. ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಇಂತಹ ನೀತಿಯ ಬಗ್ಗೆ ತಾನು ಎಂದೂ ಕೇಳಿಲ್ಲ, ಇದು ಸರಿಯಲ್ಲ ಎಂದು ಶಿಕ್ಷಣ ನೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

Continue Reading
Advertisement
Narendra Modi
ದೇಶ11 mins ago

Narendra Modi: 3ನೇ ಸಲ ಗೆಲ್ಲಿಸಿದ ವಾರಾಣಸಿ ಜನತೆಗೆ ಧನ್ಯವಾದ ಎಂದ ಮೋದಿ; ಗೆದ್ದ ಬಳಿಕ ಮೊದಲ ಭೇಟಿ!

Electric Shock
ವಿಜಯಪುರ25 mins ago

Electric shock : ಮೀನು ಹಿಡಿಯಲು ಹೋದಾಗ ವಿದ್ಯುತ್‌ ಪ್ರವಹಿಸಿ ಬಾಲಕರಿಬ್ಬರು ಮೃತ್ಯು; ಕುಟುಂಬಸ್ಥರ ಆಕ್ರಂದನ

Woman having headache. stressed, Migraine, World Brain Tumor day
ಆರೋಗ್ಯ31 mins ago

Migraine Problem: ಮೈಗ್ರೇನ್‌ ಉಪಶಮನಕ್ಕೆ ರೋಸ್‌ಮೆರಿ ಸುಗಂಧ ತೈಲ ಮದ್ದು!

Indian Women
ವಿದೇಶ45 mins ago

ಭಾರತದಿಂದ ಅಮೆರಿಕಕ್ಕೆ ತೆರಳಿ, 29 ವರ್ಷದ ಯುವತಿಯನ್ನು ಕೊಂದ ಪಂಜಾಬ್‌ ವ್ಯಕ್ತಿ; ಇಷ್ಟೇಕೆ ಸೇಡು?

Pavithra Gowda
ಪ್ರಮುಖ ಸುದ್ದಿ47 mins ago

Pavithra Gowda: ಪೊಲೀಸ್ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡ ಅಸ್ವಸ್ಥ; ಆಸ್ಪತ್ರೆಗೆ ಶಿಫ್ಟ್‌

International Yoga Day 2024
ಫ್ಯಾಷನ್1 hour ago

International Yoga Day 2024: ಯುವತಿಯರ ಯೋಗಾಭ್ಯಾಸಕ್ಕೆ ಸಾಥ್‌ ನೀಡುವ 3 ಶೈಲಿಯ ಫ್ಯಾಷನ್‌ವೇರ್ಸ್

wild animals Attack
ಕೊಡಗು1 hour ago

Wild Animals Attack : ಮನೆಯಂಗಳವನ್ನು ಧ್ವಂಸ ಮಾಡಿದ ಆನೆಗಳು; ಗ್ರಾಮಕ್ಕೆ ಓಡೋಡಿ ಬಂದ ಕರಡಿ

Viral Video
ಕ್ರಿಕೆಟ್1 hour ago

Viral Video: ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸಿದ ಪಾಕ್​ ವೇಗಿ; ತಡೆದು ನಿಲ್ಲಿಸಿದ ಪತ್ನಿ

Kempegowda Jayanti
ಕರ್ನಾಟಕ1 hour ago

Kempegowda Jayanti: ಬೆಂಗಳೂರಲ್ಲಿ ಜೂನ್ 27ಕ್ಕೆ ಕೆಂಪೇಗೌಡ ಜಯಂತಿ: ಡಿಸಿಎಂ ಡಿ.ಕೆ.ಶಿವಕುಮಾರ್‌

Train Accident
ದೇಶ1 hour ago

Train Accident: ಸಿಬ್ಬಂದಿ ನಿರ್ಲಕ್ಷ್ಯ, ಸಿಗ್ನಲ್‌ ದೋಷ; ಬಂಗಾಳ ರೈಲು ಅಪಘಾತಕ್ಕೇನು ಕಾರಣ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು1 day ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 day ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ3 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌