Site icon Vistara News

Tragic Story: ಮಗ ಸತ್ತು ಶವ ಕೊಳೆಯುತ್ತಿದ್ದರೂ ಮಲಗಿದ್ದಾನೆಂದು ಮನೆಯಲ್ಲೇ ಇರಿಸಿಕೊಂಡಿದ್ದ ತಾಯಿ-ಮಗಳು!

Tragic Story


ಗಾಜಿಯಾಬಾದ್: ‘ಪುತ್ರ ಶೋಕ ನಿರಂತರ’ ಎನ್ನುವಂತೆ ತಂದೆ ತಾಯಿ (Tragic Story) ಬದುಕಿ ಬಾಳಬೇಕಾದ ತನ್ನ ಮಗ ಸಾವನಪ್ಪಿದ್ದರೆ ಅದರ ನೋವು ಅವರನ್ನು ಜೀವನ ಪರ್ಯಾಂತ ಕಾಡುತ್ತಿರುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಅಂತಹ ತಾಯಿಯೊಬ್ಬಳು ತನ್ನ 13 ವರ್ಷದ ಮಗನ ಸಾವನ್ನು (Son Death) ಸಹಿಸಲಾಗದೆ ಅವನ ಮೃತ ದೇಹವನ್ನು ತನ್ನ ಫ್ಲ್ಯಾಟ್‍ನಲ್ಲಿ ಹಲವು ದಿನಗಳವರೆಗೆ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

ತಾಯಿ ಕೋಮಲ್ ಜೈನ್ (50) ಮತ್ತು ಸಹೋದರಿ ಕಾವ್ಯಾ (22) ಮೃತ ಬಾಲಕ ತೇಜಸ್ ಜೈನ್ ಶವವನ್ನು ಇಟ್ಟುಕೊಂಡು ಚಂದ್ರನಗರ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಒಂದು ದಶಕದ ಹಿಂದೆ ಕೋಮಲ್ ಅವರ ಪತಿ ನಿಧನರಾದಾಗಿನಿಂದ ಕೋಮಲ್ ಮತ್ತು ಕಾವ್ಯಾ ಇಬ್ಬರೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈಗ ಮಗನು ಸಾವನಪ್ಪಿದ ಕಾರಣ ಅವರ ಮಾನಸಿಕ ಸಮಸ್ಯೆ ಹೆಚ್ಚಾಗಿ ಹೀಗೆ ಮಾಡಿರಬಹುದು ಎನ್ನಲಾಗಿದೆ.

ಫ್ಲ್ಯಾಟ್‍ನಿಂದ ಹೊರಬರುವ ಕೆಟ್ಟ ವಾಸನೆಯಿಂದ ತೊಂದರೆಗೊಳಗಾದ ನೆರೆಹೊರೆಯವರು ಭಾನುವಾರ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಸಾಹಿಬಾಬಾದ್‍ನ ಸಹಾಯಕ ಪೊಲೀಸ್ ಆಯುಕ್ತ ರಜನೀಶ್ ಕುಮಾರ್ ಉಪಾಧ್ಯಾಯ ಮಾತನಾಡಿ, “ಪೊಲೀಸರು ಫ್ಲ್ಯಾಟ್‍ಗೆ ಬಂದು ಅವರ ಮನೆಯೊಳಗೆ ಹೋಗಿ ನೋಡಿದಾಗ ತೇಜಸ್ ನೆಲದ ಮೇಲೆ ಬಿದ್ದಿರುವುದನ್ನು ನೋಡಿದರು. ಕೋಮಲ್ ಮತ್ತು ಕಾವ್ಯಾ ಈ ಶವದ ಬಳಿ ಕುಳಿತಿದ್ದರು. ತೇಜಸ್ ನಿದ್ದೆ ಮಾಡುತ್ತಿದ್ದಾನೆ ಎಂದು ಭಾವಿಸಿದ್ದಾಗಿ ಇಬ್ಬರೂ ಹೇಳಿಕೊಂಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿ ಮತ್ತು ಮಗಳು ತಮ್ಮ ಮನೆಯ ಲೈಟ್‌ಗಳನ್ನು ಆಫ್ ಮಾಡಿದ್ದರು ಮತ್ತು ಕಾಲೋನಿಯಲ್ಲಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಕಾವ್ಯಾ, ಅನಾರೋಗ್ಯದ ಕಾರಣ 12ನೇ ತರಗತಿಯ ನಂತರ ತನ್ನ ಅಧ್ಯಯನವನ್ನು ನಿಲ್ಲಿಸಬೇಕಾಯಿತು. ದೆಹಲಿಯ ಚೌರಿ ಬಜಾರ್‌ನಲ್ಲಿ ವಾಸಿಸುವ ಕೋಮಲ್ ಅವರ ಸಹೋದರ ಪ್ರಶಾಂತ್ ಜೈನ್ ಇವರ ಕುಟುಂಬದ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದರು. ತೇಜಸ್ ಸೆಪ್ಟಿಸೆಮಿಯಾದಿಂದ ಮೃತಪಟ್ಟಿದ್ದಾನೆ ಎಂದು ಮಂಗಳವಾರ ಶವಪರೀಕ್ಷೆ ವರದಿಗಳು ದೃಢಪಡಿಸಿವೆ. ಅವರ ಅಂತಿಮ ವಿಧಿಗಳನ್ನು ನಡೆಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:  5 ಲಕ್ಷ ರೂ. ಮೌಲ್ಯದ ವಜ್ರದ ಹಾರ ಕಸದ ರಾಶಿ ಸೇರಿದರೂ ವಾಪಸ್‌ ಸಿಕ್ಕಿತು!

ಮತ್ತೊಂದು ಘಟನೆಯಲ್ಲಿ, ಗಾಜಿಯಾಬಾದ್‍ನ ಕೌಶಾಂಬಿಯ ಹೋಟೆಲ್ ಕೋಣೆಯಲ್ಲಿ 35 ವರ್ಷದ ವ್ಯಕ್ತಿಯ ಶವ ಸೋಮವಾರ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಎಮಿಲ್ ಜೋಸೆಫ್ ಎಂದು ಗುರುತಿಸಲಾಗಿದ್ದು, ದೆಹಲಿಯ ಪ್ರೀತಂಪುರ ನಿವಾಸಿಯಾಗಿದ್ದು, ಟ್ಯಾಕ್ಸ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಜೋಸೆಫ್ ಅವರ ಸಹೋದರನ ಮಾಹಿತಿ ಮೇರೆಗೆ ರೂಮ್‌ ಬಾಗಿಲು ತೆರೆಯುವಂತೆ ಹೋಟೆಲ್ ಸಿಬ್ಬಂದಿಯನ್ನು ಕೇಳಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಟ್ರಾನ್ಸ್-ಹಿಂಡನ್ ಉಪ ಪೊಲೀಸ್ ಆಯುಕ್ತ ನಿಮಿಶ್ ಪಾಟೀಲ್ ಮಾತನಾಡಿ, “ಹೋಟೆಲ್‍ನ ವ್ಯವಸ್ಥಾಪಕರು ನಕಲಿ ಕೀಲಿಯಿಂದ ಬಾಗಿಲು ತೆರೆದಾಗ ಜೋಸೆಫ್ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಬೆಳಿಗ್ಗೆ 10 ಗಂಟೆ ಸುಮಾರಿಗೆ ಮ್ಯಾನೇಜರ್ ಪೊಲೀಸರಿಗೆ ಕರೆ ಮಾಡಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.

Exit mobile version