Site icon Vistara News

Union Budget 2024: 7 ಬಜೆಟ್‍ಗಳಲ್ಲಿ 7 ಬಣ್ಣದ ಸೀರೆ ಧರಿಸಿ ಮಿಂಚಿದ ನಿರ್ಮಲಾ ಸೀತಾರಾಮನ್!

Union Budget 2024


ನವದೆಹಲಿ: ಮಹಿಳೆಯರಿಗೆ ಸೀರೆಗಳೆಂದರೆ ಬಹಳ ಇಷ್ಟ. ಹಾಗಾಗಿ ಅವರು (Union Budget 2024) ಯಾವುದೇ ಸಭೆ ಸಮಾರಂಭಗಳಿಗೆ ಹೋಗುವಾದ ವಿವಿಧ ರೀತಿಯ, ಬಣ್ಣ ಬಣ್ಣದ ಸೀರೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರಿಗೂ ಕೂಡ ಸೀರೆಗಳ ಬಗ್ಗೆ ವಿಶೇಷ ಒಲವು ಇದೆ. ಹಾಗಾಗಿ ಅವರು ತಾವು ಮಂಡಿಸಿದ ಏಳು ಬಜೆಟ್‍ಗಳಲ್ಲಿ ಏಳು ತರಹದ ಸೀರೆಗಳನ್ನು ಉಟ್ಟು ಮಿಂಚಿದ್ದಾರೆ. ಈ ಮೂಲಕ ತಮಗೂ ಸೀರೆಗಳ ಬಗ್ಗೆ ಒಲವು ಇದೆ ಎಂಬುದನ್ನು ತಿಳಿಸಿದ್ದಾರೆ.

Nirmala Sitharaman

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಾವು ಮಂಡಿಸಿದ ಏಳು ಬಜೆಟ್‍ಗಳಲ್ಲಿ ಏಳು ಬಣ್ಣದ ಸೀರೆಗಳನ್ನು ಧರಿಸಿದ್ದಾರೆ. ಅದರಲ್ಲಿ ಕೆಂಪು, ನೀಲಿ, ಹಳದಿ, ಕಂದು ಮತ್ತು ಆಫ್-ವೈಟ್ ಮೆಜೆಂಟಾ ಬಾರ್ಡರ್ ಇದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸುವಾಗ ಧರಿಸಿದ ಸೀರೆಗಳ ಛಾಯೆಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಕಥೆ ಇದೆ. ಪ್ರತಿಯೊಂದು ಸೀರೆಯು ಭಾರತದ ವಿಭಿನ್ನ ಸಾಂಸ್ಕೃತಿಕ ಕಥೆಯನ್ನು ಚಿತ್ರಿಸುತ್ತದೆ.

2024-25ರ ಪೂರ್ಣ ಬಜೆಟ್ ಮಂಡಿಸಲು ಸೀತಾರಾಮನ್ ಮಂಗಳವಾರ ಆಂಧ್ರಪ್ರದೇಶದ ಮೆಜೆಂಟಾ ಬಾರ್ಡರ್ ಹೊಂದಿರುವ ಆಫ್-ವೈಟ್ ಮಂಗಳಗಿರಿ ಸೀರೆಯನ್ನು ಧರಿಸಿದ್ದರು.

Nirmala Sitharaman

ಇದಕ್ಕೂ ಮೊದಲು ಫೆಬ್ರವರಿ 2024ರಲ್ಲಿ ಅವರು ನೀಲಿ ಸೀರೆಯನ್ನು ಧರಿಸಿದ್ದರು. ಇದು ಪಶ್ಚಿಮ ಬಂಗಾಳದಲ್ಲಿ ಪ್ರಸಿದ್ಧವಾದ ಕಾಂತಾ ಸ್ಟಿಚ್‌ ಅನ್ನು ಹೊಂದಿತ್ತು. ಈ ವಿಶೇಷವಾದ ಸೀರೆಯ ಮೇಲಿನ ಎಲೆಯು ಬಂಗಾಳದ ಅತ್ಯಂತ ಹಳೆಯ ಕಸೂತಿ ಕೆಲಸಗಳಲ್ಲಿ ಒಂದಾಗಿದೆ. ಬಂಗಾಳದ ನೀಲಿ ಸೀರೆಯು ಜಲಚರ ಸಾಕಣೆ ಉತ್ಪಾದಕತೆ ಮತ್ತು ಭಾರತದ ಮೀನುಗಾರಿಕೆ ಕ್ಷೇತ್ರ ಮತ್ತು ಆರ್ಥಿಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸರ್ಕಾರದ ಯೋಜನೆಗಳ ಮೇಲೆ ಗಮನ ಸೆಳೆಯುವ ಪ್ರಯತ್ನವಾಗಿದೆ ಎಂದು ಅನೇಕರು ನಂಬುತ್ತಾರೆ.

ಯಾಕೆಂದರೆ ಮೀನುಗಾರಿಕೆ ಇಲಾಖೆಗೆ 2024-25ರ ಆರ್ಥಿಕ ವರ್ಷಕ್ಕೆ 2,584.50 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಇದು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 15% ಹೆಚ್ಚಾಗಿದೆ. ಕಾಂತಾ ಕಸೂತಿಯೊಂದಿಗೆ ಈ ಟಸ್ಸಾರ್ ಸೀರೆಯು ಬಟ್ಟೆಯ ತುಂಡುಗಳನ್ನು ಒಟ್ಟಿಗೆ ಹೊಲಿದು ಸೀರೆಯನ್ನು ತಯಾರಿಸಲಾಗಿದೆ. ಈಗ ಸೀತಾರಾಮನ್ ಅವರು ಈ ಸೀರೆಯನ್ನು ಧರಿಸಿರುವುದರಿಂದ, ಸ್ಥಳೀಯ ಕೈಮಗ್ಗ ಕರಕುಶಲತೆಯು ಹೆಚ್ಚು ಗಮನ ಸೆಳೆಯುತ್ತದೆ.

Nirmala Sitharaman

2023ರಲ್ಲಿ ಅವರು ಕೆಂಪು ಬಣ್ಣದ ಟೆಂಪಲ್ ಬಾರ್ಡರ್ ಸೀರೆಯನ್ನು ಧರಿಸಿದ್ದರು. ಈ ಸೀರೆಯು ಕಸೂತಿ ಕೆಲಸದೊಂದಿಗೆ ಕರ್ನಾಟಕ ಧಾರವಾಡ ಪ್ರದೇಶದ ಇಳಕಲ್ ರೇಷ್ಮೆ ಸೀರೆಗೆ ಸೇರಿದೆ. ಇದು ಕೈಯಿಂದ ನೇಯ್ದ ಸೀರೆಯಾಗಿದೆ. ಈ ಸೀರೆಯ ಮೇಲೆ ರಥಗಳು, ನವಿಲುಗಳು ಮತ್ತು ಕಮಲವಿತ್ತು.

Nirmala Sitharaman

2022ರಲ್ಲಿ ಸೀತಾರಾಮನ್ ಅವರು ಬಜೆಟ್ ಮಂಡಿಸುವಾಗ ಕಂದು ಬಣ್ಣದ ಬೊಮ್ಕೈ ಸೀರೆಯನ್ನು ಧರಿಸಿದ್ದರು ಮತ್ತು ಇದು ಒಡಿಶಾದ ಗಂಜಾಂ ಜಿಲ್ಲೆಯ ಕೈಮಗ್ಗಕ್ಕೆ ನೀಡಿದ ಗೌರವದ ಸೂಚಕವಾಗಿತ್ತು.

Nirmala Sitharaman

2021ರಲ್ಲಿ ಅವರು ಹೈದರಾಬಾದ್‍ನ ಪೋಚಂಪಲ್ಲಿ ಗ್ರಾಮದ ವಿಶಿಷ್ಟ ಮಾದರಿಗಳಿಗೆ ಹೆಸರುವಾಸಿಯಾದ ಆಫ್-ವೈಟ್ ಪೋಚಂಪಲ್ಲಿ ಸೀರೆಯನ್ನು ಆರಿಸಿಕೊಂಡರು.

Nirmala Sitharaman

2020ರಲ್ಲಿ ಬಜೆಟ್ ಮಂಡಿಸಲು ಅವರು ಹಳದಿ ರೇಷ್ಮೆ ಸೀರೆಯನ್ನು ಧರಿಸಿದ್ದರು. ಹಳದಿಯನ್ನು ಭಾರತದ ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ.

Nirmala Sitharaman

2019ರಲ್ಲಿ ಅವರು ಕೆಂಪು ಮತ್ತು ಸಮೃದ್ಧಿಯ ಸಂಕೇತವಾದ ಸಾಂಪ್ರದಾಯಿಕ ‘ಬಹಿ ಖಾತಾ’ ದೊಂದಿಗೆ ಬಜೆಟ್ ಬ್ರೀಫ್‌ಕೇಸ್‌ ಅನ್ನು ತೆಗೆದುಕೊಂಡು ಬಂದಿದ್ದರು. ಅದರ ಮೇಲ್ಭಾಗದಲ್ಲಿ ರಾಷ್ಟ್ರೀಯ ಲಾಂಛನದೊಂದಿಗೆ ಚಿನ್ನದ ದಾರಗಳನ್ನು ಹೊಂದಿತ್ತು. ಆ ವೇಳೆ ಅವರು ಚಿನ್ನದ ಅಂಚುಗಳನ್ನು ಹೊಂದಿರುವ ಗುಲಾಬಿ ಮಂಗಳಗಿರಿ ಸೀರೆಯನ್ನು ಧರಿಸಿದ್ದರು.

ನಿರ್ಮಲಾ ಧರಿಸಿದ್ದ ಈ ಸುಂದರವಾದ ಸೀರೆಗಳು ಪ್ರತಿಯೊಂದೂ ರಾಜ್ಯವನ್ನು ಮತ್ತು ಒಂದು ಪ್ರದೇಶದ ವಿಶಿಷ್ಟ ಕೈಮಗ್ಗ ಮತ್ತು ಕಸೂತಿಯನ್ನು ಪ್ರತಿನಿಧಿಸುತ್ತದೆ. ಅದಕ್ಕಿಂತ ಮುಖ್ಯವಾದ ವಿಷಯವೆಂದರೆ, ಸೀತಾರಾಮನ್ ಬಜೆಟ್ ಮಂಡಿಸಲು ಸೀರೆಯನ್ನು ಧರಿಸಿದ ನಂತರ ಪ್ರತಿ ಸೀರೆಯು ಎಲ್ಲರ ಗಮನ ಸೆಳೆದು ಈಗ ಪ್ರಚಲಿತಕ್ಕೆ ಬಂದಿದೆ.

Nirmala Sitharaman

2024ರ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಧರಿಸಿದ್ದ ಮೆಜೆಂಟಾ ಬಾರ್ಡರ್ ಹೊಂದಿರುವ ಆಫ್-ವೈಟ್ ಬಣ್ಣದ ಸೀರೆಯು ಮಂಗಳಗಿರಿ ಸೀರೆಯಾಗಿದೆ. ಆಂಧ್ರಪ್ರದೇಶದ ಗುಂಟೂರಿನಿಂದ ಹುಟ್ಟಿಕೊಂಡ ಮಂಗಳಗಿರಿ ಸೀರೆಯು ವಿಶಿಷ್ಟವಾದ ಕೈಮಗ್ಗ ಬಟ್ಟೆಯಾಗಿದ್ದು, ಬಾರ್ಡರ್‌ನಲ್ಲಿ ಜರಿ ಮತ್ತು ಮೈಮೇಲೆ ಯಾವುದೇ ನೇಯ್ದ ವಿನ್ಯಾಸಗಳಿಲ್ಲದ ವಿಶಿಷ್ಟ ಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ತಮ್ಮ 2024ರ ಬಜೆಟ್‍ನಲ್ಲಿ ನಿರ್ಮಲಾ ಸೀತಾರಾಮನ್ ಆಂಧ್ರಪ್ರದೇಶಕ್ಕೆ ವಿಶೇಷ ಆರ್ಥಿಕ ಬೆಂಬಲವನ್ನು ಘೋಷಿಸಿದ್ದಾರೆ.

ಇದನ್ನೂ ಓದಿ:  ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಏಳು ಬಜೆಟ್‍ಗಳಲ್ಲಿ ನಿರ್ಮಲಾ ಸೀತಾರಾಮನ್ ಅವರ ಏಳು ಸೀರೆಗಳು ಭಾರತದ ವೈವಿಧ್ಯತೆಯನ್ನು ಪ್ರದರ್ಶಿಸುವುದಲ್ಲದೆ, ಸೀರೆಗಳ ಮೂಲಕ ಯೋಜನೆಗಳು ಮತ್ತು ರಾಜ್ಯಗಳಿಗೆ ಒತ್ತು ನೀಡುವ ಬಗ್ಗೆ ಸಾಂಕೇತಿಕ ಸುಳಿವು ನೀಡಿದ್ದಾರೆ.

Exit mobile version