Site icon Vistara News

Valentine’s Week List 2023: ಫೆ.7ರಿಂದಲೇ ಆರಂಭ ಪ್ರೇಮಿಗಳ ವಾರ; ಈ 8 ದಿನಗಳ ವಿಶೇಷತೆ ಏನು ಗೊತ್ತಾ?

#image_title

ಬೆಂಗಳೂರು: ಇದು ಪ್ರೇಮಿಗಳ ತಿಂಗಳು. ಪ್ರೀತಿ ಪಾತ್ರರಿಗೆ ಪ್ರೀತಿ ಹಂಚಿಕೊಳ್ಳುವ ಮಾಸ. ಫೆ.14ರ ಪ್ರೇಮಿಗಳ ದಿನಕ್ಕೆ ಪೂರ್ತಿ ಜಗತ್ತೇ ಪ್ರೀತಿಯಿಂದ ಕಂಗೊಳಿಸುತ್ತದೆ. ಮಂಗಳವಾರದಿಂದಲೇ ಆರಂಭವಾಗುವ ಈ ಪ್ರೇಮಿಗಳ ವಾರದ (Valentine’s Week List 2023:) ವಿಶೇಷತೆ ಏನು? ಹೇಗಿರುತ್ತದೆ ಆಚರಣೆ ಎನ್ನುವುದಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಇದನ್ನೂ ಓದಿ: Viral news: ಹಳೆಪ್ರೇಮಿಯ ಮೇಲೆ ಸಿಟ್ಟಾ? ಹಾಗಿದ್ದರೆ ಕೆನಡಾದ ಜಿರಳೆಗೆ ಪ್ರೇಮಿಯ ಹೆಸರಿಡಿ!

ಫೆಬ್ರವರಿ 7, ರೋಸ್‌ ಡೇ

Kiss Day 2023 Date february 13


ಪ್ರೇಮಿಗಳ ವಾರದ ಆಚರಣೆಯು ಫೆಬ್ರವರಿ 7ರಂದು ರೋಸ್‌ ಡೇ ಇಂದ ಪ್ರಾರಂಭವಾಗುತ್ತದೆ. ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರಿಗೆ, ಕ್ರಷ್‌ಗಳಿಗೆ ಅಥವಾ ಅರ್ಧಾಂಗಿಗೆ ತಮ್ಮ ಪ್ರೀತಿಯನ್ನು ಗುಲಾಬಿ ಹೂವನ್ನು ಕೊಡುತ್ತಾರೆ. ಇಲ್ಲಿ ಗುಲಾಬಿ ಹೂವಿನ ಬಣ್ಣವೂ ಪ್ರಾಮುಖ್ಯತೆಯನ್ನು ಹೊಂದಿದೆ. ಕೆಂಪು ಗುಲಾಬಿಯು ಪ್ರೀತಿಯನ್ನು ಸೂಚಿಸಿದರೆ, ಹಳದಿ ಸ್ನೇಹವನ್ನು, ಗುಲಾಬಿ ಬಣ್ಣದ ಹೂವು ಮೆಚ್ಚುಗೆಯನ್ನು ಮತ್ತು ಕೆಂಪು ಸುಳಿಯೊಂದಿಗಿರುವ ಹಳದಿ ಬಣ್ಣದ ಗುಲಾಬಿಯು ಸ್ನೇಹದ ಭಾವನೆಗಳು ಪ್ರೀತಿಯಾಗಿ ರೂಪಾಂತರಗೊಂಡಿದೆ ಎಂದು ಸೂಚಿಸುತ್ತದೆ.

ಫೆಬ್ರವರಿ 8, ಪ್ರಪೋಸ್‌ ಡೇ

ರೋಸ್ ಡೇ ನಂತರ ಫೆಬ್ರುವರಿ 8ರಂದು ಪ್ರಪೋಸ್ ಡೇ ಆಚರಿಸಲಾಗುತ್ತದೆ. ಹೆಸರೇ ಸೂಚಿಸುವಂತೆ, ಪ್ರಪೋಸ್ ಡೇಯಂದು, ಜನರು ತಮ್ಮ ಪ್ರೀತಿಯ ಭಾವನೆಗಳನ್ನು ತಮ್ಮ ಸಂಗಾತಿ ಅಥವಾ ಕ್ರಶ್ ಎದುರು ಹಂಚಿಕೊಳ್ಳುತ್ತಾರೆ. ತಮ್ಮ ಪ್ರೀತಿಯನ್ನು ಒಪ್ಪಿಕೊಂಡು, ಜೀವನಪೂರ್ತಿ ಜೊತೆಯಾಗಿರು ಎಂದು ಪ್ರೇಮ ನಿವೇದನೆಯನ್ನೂ ಮಾಡಿಕೊಳ್ಳುತ್ತಾರೆ.

ಫೆಬ್ರವರಿ 9, ಚಾಕೊಲೇಟ್ ಡೇ

Kiss Day 2023 Date february 13


ಪ್ರೇಮಿಗಳ ವಾರದ ಮೂರನೇ ದಿನ ಚಾಕೊಲೇಟ್ ಡೇ. ತಮ್ಮ ಸಂಬಂಧಗಳಲ್ಲಿನ ಎಲ್ಲಾ ಕಹಿ ಭಾವನೆಗಳನ್ನು ಮರೆತು ಜೀವನ ನಡೆಸೋಣ ಎನ್ನುವ ಕಾರಣಕ್ಕೆ ಜನರು ತಮ್ಮ ಕ್ರಷ್‌, ಪ್ರೇಮಿ ಅಥವಾ ಅರ್ಧಾಂಗಿಯೊಂದಿಗೆ ಚಾಕೊಲೇಟ್‌ಗಳನ್ನು ಹಂಚಿಕೊಳ್ಳುತ್ತಾರೆ.

ಫೆಬ್ರವರಿ 10, ಟೆಡ್ಡಿ ಡೇ

ಪ್ರೇಮಿಗಳ ವಾರದ ನಾಲ್ಕನೇ ದಿನ ಟೆಡ್ಡಿ ಡೇ. ಟೆಡ್ಡಿಗಳನ್ನು ನೋಡಿದಾಕ್ಷಣ ಮನಸ್ಸಿನ ಒತ್ತಡ ಕಡಿಮೆಯಾಗಿ ಮುಖದಲ್ಲಿ ನಗು ಮೂಡುತ್ತದೆ. ಅದೇ ರೀತಿಯಲ್ಲಿ ಸಂಗಾತಿ, ಪ್ರೇಮಿಯ ಮನಸ್ಸಿನ ಒತ್ತಡವನ್ನು ತಿಳಿಗೊಳಿಸಿಕೊಂಡು, ನಗುತ್ತಿರಲಿ ಎನ್ನುವ ಉದ್ದೇಶದಿಂದ ಟೆಡ್ಡಿಗಳನ್ನು ಕೊಡಲಾಗುವುದು.

ಫೆಬ್ರವರಿ 11, ಪ್ರಾಮಿಸ್ ಡೇ

#image_title


ಪ್ರೇಮಿಗಳ ದಿನದ ಐದನೇ ದಿನವು ಪ್ರಾಮಿಸ್ ಡೇ. ಪ್ರೇಮಿಗಳು ಜೀವನದ ಏರು ಇಳಿತಗಳಲ್ಲೂ ಒಟ್ಟಾಗಿ ಇರಲು, ತಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಲು ಮತ್ತು ಪರಸ್ಪರ ಬೆಂಬಲಿಸಲು ಪ್ರಮಾಣ ಮಾಡುವುದಕ್ಕೆಂದು ಈ ದಿನ ಆಚರಿಸಲಾಗುತ್ತದೆ.

ಫೆಬ್ರವರಿ 12, ಹಗ್‌ ಡೇ

ಪ್ರೇಮಿಗಳ ವಾರದ ಆರನೇ ದಿನ ಹಗ್‌ ಡೇ. ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ಸಾಂತ್ವನ ನೀಡುತ್ತಾರೆ. ಯಾರಿಗಾದರೂ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳು ವಿಫಲವಾದಾಗ, ದೈಹಿಕ ಸ್ಪರ್ಶದ ಭಾಷೆ ಅದ್ಭುತಗಳನ್ನು ಮಾಡುತ್ತದೆ. ಅದೇ ರೀತಿ ಅಪ್ಪುಗೆಯು ನಿಮ್ಮ ಪ್ರೀತಿಪಾತ್ರರಿಗೆ ನೀವು ಅವರಿಗಾಗಿ ಇದ್ದೀರಿ ಎಂದು ತಿಳಿ ಹೇಳುತ್ತದೆ. ಅದೇ ಕಾರಣಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಫೆಬ್ರವರಿ 13, ಕಿಸ್ ಡೇ

#image_title


ಪ್ರೇಮಿಗಳ ವಾರದ ಏಳನೇ ದಿನವನ್ನು, ಅಂದರೆ ಫೆ.13ರಂದು ಕಿಸ್ ದಿನವನ್ನು ಆಚರಿಸಲಾಗುತ್ತದೆ. ಪ್ರೀತಿಯಲ್ಲಿರುವ ಜನರು ಈ ದಿನದಂದು ತಮ್ಮ ಪ್ರೀತಿ ಪಾತ್ರರಿಗೆ ಚುಂಬಿಸಿ, ಪ್ರೀತಿ ಹಂಚಿಕೊಳ್ಳುತ್ತಾರೆ.

ಫೆಬ್ರವರಿ 14, ಪ್ರೇಮಿಗಳ ದಿನ

ಅಂತಿಮವಾಗಿ, ಫೆಬ್ರವರಿ 14ರಂದು ಜಗತ್ತಿನಾದ್ಯಂತ ಪ್ರೇಮಿಗಳು ಪ್ರೀತಿಯ ದಿನವನ್ನಾಗಿ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ. ಪ್ರವಾಸ, ಡೇಟ್‌, ಒಟ್ಟಿಗೆ ಊಟ ಮಾಡಿ ಅಥವಾ ಅವರ ಮೆಚ್ಚಿನ ಉಡುಗೊರೆಗಳನ್ನು ನೀಡಿ ಈ ದಿನವನ್ನು ಆಚರಿಸಿಕೊಳ್ಳುತ್ತಾರೆ.

ಇದನ್ನೂ ಓದಿ: Hampi Utsav 2023: ಹಂಪಿ ಉತ್ಸವದಲ್ಲಿ 2ನೇ ದಿನ ಗಮನ ಸೆಳೆದ ಕುಸ್ತಿ ಕಾಳಗ; 100ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿ

Exit mobile version