Valentine’s Week List 2023: ಫೆ.7ರಿಂದಲೇ ಆರಂಭ ಪ್ರೇಮಿಗಳ ವಾರ; ಈ 8 ದಿನಗಳ ವಿಶೇಷತೆ ಏನು ಗೊತ್ತಾ? Vistara News

Latest

Valentine’s Week List 2023: ಫೆ.7ರಿಂದಲೇ ಆರಂಭ ಪ್ರೇಮಿಗಳ ವಾರ; ಈ 8 ದಿನಗಳ ವಿಶೇಷತೆ ಏನು ಗೊತ್ತಾ?

Valentine’s Week List 2023: ಪ್ರೇಮಿಗಳ ವಾರವು ಮಂಗಳವಾರದಿಂದ ಆರಂಭವಾಗುತ್ತದೆ. ಫೆ.14ರಂದು ಮಾತ್ರವಲ್ಲ, ಇಡೀ ವಾರ ಪ್ರೇಮಿಗಳು ವಿಶೇಷ ದಿನ ಆಚರಿಸಬಹುದು. ಹಾಗಾಗಿ, ಈ ದಿನಗಳ ವಿಶೇಷತೆ ವಿವರ ಇಲ್ಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇದು ಪ್ರೇಮಿಗಳ ತಿಂಗಳು. ಪ್ರೀತಿ ಪಾತ್ರರಿಗೆ ಪ್ರೀತಿ ಹಂಚಿಕೊಳ್ಳುವ ಮಾಸ. ಫೆ.14ರ ಪ್ರೇಮಿಗಳ ದಿನಕ್ಕೆ ಪೂರ್ತಿ ಜಗತ್ತೇ ಪ್ರೀತಿಯಿಂದ ಕಂಗೊಳಿಸುತ್ತದೆ. ಮಂಗಳವಾರದಿಂದಲೇ ಆರಂಭವಾಗುವ ಈ ಪ್ರೇಮಿಗಳ ವಾರದ (Valentine’s Week List 2023:) ವಿಶೇಷತೆ ಏನು? ಹೇಗಿರುತ್ತದೆ ಆಚರಣೆ ಎನ್ನುವುದಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಇದನ್ನೂ ಓದಿ: Viral news: ಹಳೆಪ್ರೇಮಿಯ ಮೇಲೆ ಸಿಟ್ಟಾ? ಹಾಗಿದ್ದರೆ ಕೆನಡಾದ ಜಿರಳೆಗೆ ಪ್ರೇಮಿಯ ಹೆಸರಿಡಿ!

ಫೆಬ್ರವರಿ 7, ರೋಸ್‌ ಡೇ

Rose Day 2023 Date February 7


ಪ್ರೇಮಿಗಳ ವಾರದ ಆಚರಣೆಯು ಫೆಬ್ರವರಿ 7ರಂದು ರೋಸ್‌ ಡೇ ಇಂದ ಪ್ರಾರಂಭವಾಗುತ್ತದೆ. ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರಿಗೆ, ಕ್ರಷ್‌ಗಳಿಗೆ ಅಥವಾ ಅರ್ಧಾಂಗಿಗೆ ತಮ್ಮ ಪ್ರೀತಿಯನ್ನು ಗುಲಾಬಿ ಹೂವನ್ನು ಕೊಡುತ್ತಾರೆ. ಇಲ್ಲಿ ಗುಲಾಬಿ ಹೂವಿನ ಬಣ್ಣವೂ ಪ್ರಾಮುಖ್ಯತೆಯನ್ನು ಹೊಂದಿದೆ. ಕೆಂಪು ಗುಲಾಬಿಯು ಪ್ರೀತಿಯನ್ನು ಸೂಚಿಸಿದರೆ, ಹಳದಿ ಸ್ನೇಹವನ್ನು, ಗುಲಾಬಿ ಬಣ್ಣದ ಹೂವು ಮೆಚ್ಚುಗೆಯನ್ನು ಮತ್ತು ಕೆಂಪು ಸುಳಿಯೊಂದಿಗಿರುವ ಹಳದಿ ಬಣ್ಣದ ಗುಲಾಬಿಯು ಸ್ನೇಹದ ಭಾವನೆಗಳು ಪ್ರೀತಿಯಾಗಿ ರೂಪಾಂತರಗೊಂಡಿದೆ ಎಂದು ಸೂಚಿಸುತ್ತದೆ.

ಫೆಬ್ರವರಿ 8, ಪ್ರಪೋಸ್‌ ಡೇ

ರೋಸ್ ಡೇ ನಂತರ ಫೆಬ್ರುವರಿ 8ರಂದು ಪ್ರಪೋಸ್ ಡೇ ಆಚರಿಸಲಾಗುತ್ತದೆ. ಹೆಸರೇ ಸೂಚಿಸುವಂತೆ, ಪ್ರಪೋಸ್ ಡೇಯಂದು, ಜನರು ತಮ್ಮ ಪ್ರೀತಿಯ ಭಾವನೆಗಳನ್ನು ತಮ್ಮ ಸಂಗಾತಿ ಅಥವಾ ಕ್ರಶ್ ಎದುರು ಹಂಚಿಕೊಳ್ಳುತ್ತಾರೆ. ತಮ್ಮ ಪ್ರೀತಿಯನ್ನು ಒಪ್ಪಿಕೊಂಡು, ಜೀವನಪೂರ್ತಿ ಜೊತೆಯಾಗಿರು ಎಂದು ಪ್ರೇಮ ನಿವೇದನೆಯನ್ನೂ ಮಾಡಿಕೊಳ್ಳುತ್ತಾರೆ.

ಫೆಬ್ರವರಿ 9, ಚಾಕೊಲೇಟ್ ಡೇ

Chocolate Day 2023 Date february 9


ಪ್ರೇಮಿಗಳ ವಾರದ ಮೂರನೇ ದಿನ ಚಾಕೊಲೇಟ್ ಡೇ. ತಮ್ಮ ಸಂಬಂಧಗಳಲ್ಲಿನ ಎಲ್ಲಾ ಕಹಿ ಭಾವನೆಗಳನ್ನು ಮರೆತು ಜೀವನ ನಡೆಸೋಣ ಎನ್ನುವ ಕಾರಣಕ್ಕೆ ಜನರು ತಮ್ಮ ಕ್ರಷ್‌, ಪ್ರೇಮಿ ಅಥವಾ ಅರ್ಧಾಂಗಿಯೊಂದಿಗೆ ಚಾಕೊಲೇಟ್‌ಗಳನ್ನು ಹಂಚಿಕೊಳ್ಳುತ್ತಾರೆ.

ಫೆಬ್ರವರಿ 10, ಟೆಡ್ಡಿ ಡೇ

ಪ್ರೇಮಿಗಳ ವಾರದ ನಾಲ್ಕನೇ ದಿನ ಟೆಡ್ಡಿ ಡೇ. ಟೆಡ್ಡಿಗಳನ್ನು ನೋಡಿದಾಕ್ಷಣ ಮನಸ್ಸಿನ ಒತ್ತಡ ಕಡಿಮೆಯಾಗಿ ಮುಖದಲ್ಲಿ ನಗು ಮೂಡುತ್ತದೆ. ಅದೇ ರೀತಿಯಲ್ಲಿ ಸಂಗಾತಿ, ಪ್ರೇಮಿಯ ಮನಸ್ಸಿನ ಒತ್ತಡವನ್ನು ತಿಳಿಗೊಳಿಸಿಕೊಂಡು, ನಗುತ್ತಿರಲಿ ಎನ್ನುವ ಉದ್ದೇಶದಿಂದ ಟೆಡ್ಡಿಗಳನ್ನು ಕೊಡಲಾಗುವುದು.

ಫೆಬ್ರವರಿ 11, ಪ್ರಾಮಿಸ್ ಡೇ

Promise Day 2023 Date
Valentines Week Promise Day 2023


ಪ್ರೇಮಿಗಳ ದಿನದ ಐದನೇ ದಿನವು ಪ್ರಾಮಿಸ್ ಡೇ. ಪ್ರೇಮಿಗಳು ಜೀವನದ ಏರು ಇಳಿತಗಳಲ್ಲೂ ಒಟ್ಟಾಗಿ ಇರಲು, ತಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಲು ಮತ್ತು ಪರಸ್ಪರ ಬೆಂಬಲಿಸಲು ಪ್ರಮಾಣ ಮಾಡುವುದಕ್ಕೆಂದು ಈ ದಿನ ಆಚರಿಸಲಾಗುತ್ತದೆ.

ಫೆಬ್ರವರಿ 12, ಹಗ್‌ ಡೇ

ಪ್ರೇಮಿಗಳ ವಾರದ ಆರನೇ ದಿನ ಹಗ್‌ ಡೇ. ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ಸಾಂತ್ವನ ನೀಡುತ್ತಾರೆ. ಯಾರಿಗಾದರೂ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳು ವಿಫಲವಾದಾಗ, ದೈಹಿಕ ಸ್ಪರ್ಶದ ಭಾಷೆ ಅದ್ಭುತಗಳನ್ನು ಮಾಡುತ್ತದೆ. ಅದೇ ರೀತಿ ಅಪ್ಪುಗೆಯು ನಿಮ್ಮ ಪ್ರೀತಿಪಾತ್ರರಿಗೆ ನೀವು ಅವರಿಗಾಗಿ ಇದ್ದೀರಿ ಎಂದು ತಿಳಿ ಹೇಳುತ್ತದೆ. ಅದೇ ಕಾರಣಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಫೆಬ್ರವರಿ 13, ಕಿಸ್ ಡೇ

Kiss Day 2023 Date february 13
Valentines Week 2023 kiss day


ಪ್ರೇಮಿಗಳ ವಾರದ ಏಳನೇ ದಿನವನ್ನು, ಅಂದರೆ ಫೆ.13ರಂದು ಕಿಸ್ ದಿನವನ್ನು ಆಚರಿಸಲಾಗುತ್ತದೆ. ಪ್ರೀತಿಯಲ್ಲಿರುವ ಜನರು ಈ ದಿನದಂದು ತಮ್ಮ ಪ್ರೀತಿ ಪಾತ್ರರಿಗೆ ಚುಂಬಿಸಿ, ಪ್ರೀತಿ ಹಂಚಿಕೊಳ್ಳುತ್ತಾರೆ.

ಫೆಬ್ರವರಿ 14, ಪ್ರೇಮಿಗಳ ದಿನ

ಅಂತಿಮವಾಗಿ, ಫೆಬ್ರವರಿ 14ರಂದು ಜಗತ್ತಿನಾದ್ಯಂತ ಪ್ರೇಮಿಗಳು ಪ್ರೀತಿಯ ದಿನವನ್ನಾಗಿ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ. ಪ್ರವಾಸ, ಡೇಟ್‌, ಒಟ್ಟಿಗೆ ಊಟ ಮಾಡಿ ಅಥವಾ ಅವರ ಮೆಚ್ಚಿನ ಉಡುಗೊರೆಗಳನ್ನು ನೀಡಿ ಈ ದಿನವನ್ನು ಆಚರಿಸಿಕೊಳ್ಳುತ್ತಾರೆ.

ಇದನ್ನೂ ಓದಿ: Hampi Utsav 2023: ಹಂಪಿ ಉತ್ಸವದಲ್ಲಿ 2ನೇ ದಿನ ಗಮನ ಸೆಳೆದ ಕುಸ್ತಿ ಕಾಳಗ; 100ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Diamond League: ಸೆಂಟಿಮೀಟರ್ ಅಂತರದಲ್ಲಿ ನೀರಜ್​ ಕೈತಪ್ಪಿದ ಚಿನ್ನ; ಲಾಂಗ್​ ಜಂಪ್​ನಲ್ಲಿ ಶ್ರೀಶಂಕರ್​ಗೆ 5ನೇ ಸ್ಥಾನ

ಜ್ಯೂರಿಚ್‌ನಲ್ಲಿ ನಡೆದ ಮೂರನೇ ಚರಣರದ ಡೈಮಂಡ್​ ಲೀಗ್​ನಲ್ಲಿ ನೀರಜ್​ ಅವರು 85.71 ದೂರ ಜಾವೆಲಿನ್​ ಎಸೆದು ಕೇವಲ 15 ಸೆಂಟಿಮೀಟರ್​ ಅಂತರದಿಂದ ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು

VISTARANEWS.COM


on

neeraj chopra and Sreeshankar
Koo

ಜ್ಯೂರಿಚ್‌: ಭಾನುವಾರ ಬುಡಾಪೆಸ್ಟ್​ನಲ್ಲಿ ನಡೆದಿದ್ದ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಭಾರತದ ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ(Neeraj Chopra) ನಾಲ್ಕು ದಿನಗಳ ಅಂತರದಲ್ಲಿ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದಾರೆ. ಜ್ಯೂರಿಚ್‌ನಲ್ಲಿ ನಡೆದ ಮೂರನೇ ಚರಣರದ ಡೈಮಂಡ್​ ಲೀಗ್​ನಲ್ಲಿ ನೀರಜ್​ ಅವರು 85.71 ದೂರ ಜಾವೆಲಿನ್​ ಎಸೆದು ಕೇವಲ 15 ಸೆಂಟಿಮೀಟರ್​ ಅಂತರದಿಂದ ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು. ಆದರೆ ಮತ್ತೊಮ್ಮೆ ಭಾರತದ ಕೀರ್ತಿ ಪತಾಕೆಯನ್ನು ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಎತ್ತಿ ಹಿಡಿದರು. ಭಾರತರ ಮತ್ತೊಂದು ಭರವಸೆಯಾಗಿದ್ದ ಲಾಂಗ್​ ಜಂಪ್​ ಸ್ಪರ್ಧೆಯಲ್ಲಿ ಮುರಳಿ ಶ್ರೀಶಂಕರ್‌ ಅವರು ಪದಕ ಗೆಲ್ಲುವಲ್ಲಿ ವಿಫಲರಾದರು. ಅವರು 7.99 ಮೀ. ಜಿಗಿದು 5ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಗ್ರ್ಯಾಂಡ್‌ ಫಿನಾಲೆ ಅಮೆರಿಕದ ಯೂಜಿನ್‌ನಲ್ಲಿ ಸೆಪ್ಟೆಂಬರ್​ 16, 17ರಂದು ನಡೆಯಲಿದೆ.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ 85.86 ದೂರ ಎಸೆದು ಚಿನ್ನ ಗೆದ್ದರು. ನೀರಜ್​ 85.71 ದೂರ ಎಸೆದು ಬೆಳ್ಳಿ ಗೆದ್ದರೆ, ಜರ್ಮನಿಯ ಜೂಲಿಯನ್‌ ವೆಬ್ಬರ್‌ 85.04 ಕಂಚು ಗೆದ್ದರು. ​ಮೊದಲ ಪ್ರಯತ್ನದಲ್ಲಿ 80.79 ಮೀ. ಎಸೆದ ನೀರಜ್​ ದ್ವಿತೀಯ ಎಸೆತದಲ್ಲಿ ಫೌಲ್​ ಆದರು. ನಾಲ್ಕನೇ ಎಸೆದಲ್ಲಿ ಮತ್ತೆ ಹಿಡಿತ ಸಾಧಿಸಿದರೂ ಅಂತಿಮ ಎಸೆದಲ್ಲಿ ಎಡವಿ ಚಿನ್ನದ ಪದಕದಿಂದ ವಂಚಿತಾದರು.

ದೋಹ- ಲಾಸನ್ನೆ ಚರಣದಲ್ಲಿ ಚಿನ್ನ

ನೀರಜ್‌ ಚೋಪ್ರಾ ಇದೇ ಮೇ 5ರಂದು ದೋಹಾದಲ್ಲಿ ನಡೆದಿದ್ದ ಡೈಮಂಡ್‌ ಲೀಗ್‌ನಲ್ಲಿ(Diamond League) ಚಿನ್ನದ ಪದಕ ಗೆದ್ದಿದ್ದರು. ಈ ಕೂಟದಲ್ಲಿ ಅವರು ತಮ್ಮ 4ನೇ ಅತ್ಯುತ್ತಮ ದೂರದ(88.67 ಮೀ.) ಸಾಧನೆಯೊಂದಿಗೆ ಗುರುತಿಸಿಕೊಂಡಿದ್ದರು. ಬಳಿಕ ಸ್ನಾಯು ಸೆಳೆತಕ್ಕೆ ಸಿಲುಕಿದ ಕಾರಣ ಒಂದು ತಿಂಗಳ ವಿಶ್ರಾಂತಿ ಪಡೆದು ಲಾಸನ್ನೆ ಚರಣರದ ಡೈಮಂಡ್​ ಲೀಗ್​ನಲ್ಲಿ(Lausanne Diamond League) ಕಣಕ್ಕಿಳಿದಿದ್ದರು. ಇಲ್ಲಿ 87.66 ಮೀಟರ್‌ ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ್ಕೆ ಕೊರಳೊಡ್ಡಿ ಸತತ ಚಿನ್ನ ಗೆದ್ದ ಸಾಧನೆ ಮಾಡಿದ್ದರು. ಇಲ್ಲಿಯೂ ಚಿನ್ನ ಗೆದ್ದಿದ್ದರೆ ಹ್ಯಾಟ್ರಿಕ್​ ಚಿನ್ನ ಗೆದ್ದ ಸಾಧನೆ ಮಾಡುತ್ತಿದ್ದರು.

ಇದನ್ನೂ ಓದಿ Neeraj Chopra: ಪ್ಯಾರಿಸ್​ನಲ್ಲಿಯೂ ನೀರಜ್​ ಚೋಪ್ರಾಗೆ ಚಿನ್ನ ಒಲಿಯಲಿದೆ; ಶಿರಸಿಯ ಕಾಶಿನಾಥ್ ನಾಯ್ಕ್ ವಿಶ್ವಾಸ

5ನೇ ಸ್ಥಾನಕ್ಕೆ ತೃಪ್ತಿಪಟ್ಟ ಮುರಳಿ ಶ್ರೀಶಂಕರ್‌

ಭಾರತರ ಮತ್ತೊಂದು ಭರವಸೆಯಾಗಿದ್ದ ಲಾಂಗ್​ ಜಂಪ್​ ಸ್ಪರ್ಧೆಯಲ್ಲಿ ಮುರಳಿ ಶ್ರೀಶಂಕರ್‌ ಅವರು ಪದಕ ಗೆಲ್ಲುವಲ್ಲಿ ವಿಫಲರಾದರು. 7.99 ಮೀ. ಜಿಗಿದು 5ನೇ ಸ್ಥಾನ ಪಡೆದರು. ಲಾಸನ್ನೆ ಚರಣದಲ್ಲಿಯೂ 7.88 ಮೀಟರ್‌ ಜಿಗಿತದೊಂದಿಗೆ ಐದನೇ ಸ್ಥಾನ ಪಡೆದಿದ್ದರು. ಈ ಬಾರಿ ತಮ್ಮ ಜಿಗಿತವನ್ನು ಕೊಂಚ ಉತ್ತಮಗೊಳಿಸಿದರು. ಗ್ರೀಸ್‌ನ ಮಿಲ್ಟಿಯಾಡಿಸ್ ಟೆಂಟೊಗ್ಲೋ 8.07 ಮೀ. ಜಿಗಿದು ಚಿನ್ನ ಗೆದ್ದರು.

ಕಳೆದ ಪ್ಯಾರಿಸ್‌ ಡೈಮಂಡ್‌ ಲೀಗ್‌ ಲಾಂಗ್‌ಜಂಪ್‌ನಲ್ಲಿ 8.09 ಮೀ. ದೂರದ ಸಾಧನೆಯೊಂದಿಗೆ ತೃತೀಯ ಸ್ಥಾನಿಯಾಗಿದ್ದ ಮುರಳಿ ಶ್ರೀಶಂಕರ್‌ ಇಲ್ಲಿ ಪದಕ ಗೆಲ್ಲುವಲ್ಲಿ ಎಡವಿದರು. ಇದಕ್ಕೂ ಮುನ್ನ ನಡೆದಿದ್ದ ನ್ಯಾಶನಲ್‌ ಇಂಟರ್‌ ಸ್ಟೇಟ್‌ ಆ್ಯತ್ಲೆಟಿಕ್ಸ್‌ನಲ್ಲಿ ಅತ್ಯುತ್ತಮ ವೈಯಕ್ತಿಕ ಸಾಧನೆಯನ್ನು ದಾಖಲಿಸಿ(8.42 ಮೀ.) ಮಿಂಚಿದ್ದರು.

ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಚಿನ್ನದ ಹೊಳಪು

ಭಾನುವಾರ ರಾತ್ರಿ ನಡೆದಿದ್ದ ಫೈನಲ್‌ನಲ್ಲಿ ನೀರಜ್‌ ಚೋಪ್ರಾ 88.17 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಚಿನ್ನದ ಪದಕ ಗೆದ್ದಿದ್ದರು. ಈ ಮೂಲಕ ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದರು. ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ ಹಾಗೂ ವಿಶ್ವ ಚಾಂಪಿಯನ್​ಶಿಪ್​ನಲ್ಲಿಯೂ ಚಿನ್ನ ಗೆದ್ದ ಭಾರತದ ಮೊದಲ ಅಥ್ಲೀಟ್​ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಕಳೆದ ವರ್ಷ ಇದೇ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

Continue Reading

Latest

ST Somashekhar : ಜನಸ್ಪಂದನ ಕಾರ್ಯಕ್ರಮಕ್ಕೆ ಡಿಕೆಶಿಗೆ ಆಹ್ವಾನ; ಸೋಮಶೇಖರ್‌ ಕಾಂಗ್ರೆಸ್‌ ಸೇರ್ಪಡೆ ಫಿಕ್ಸಾ?

ST Somashekhar : ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್‌ ಅವರು ಶನಿವಾರ ಬೆಳಗ್ಗೆ ಮೋದಿ ಕಾರ್ಯಕ್ರಮದ ಕಡೆಗೆ ತಲೆ ಹಾಕಿಲ್ಲ. ಆದರೆ, ಸಂಜೆ ಡಿಕೆಶಿ ಜತೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ!

VISTARANEWS.COM


on

ST Somashekhar
Koo

ಬೆಂಗಳೂರು: ಯಶವಂತಪುರದ ಬಿಜೆಪಿ ಶಾಸಕರಾಗಿರುವ ಎಸ್‌ಟಿ ಸೋಮಶೇಖರ್‌ (ST Somashekhar) ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರ್ಪಡೆಯ (Operation Hasta) ಸುದ್ದಿ ನಿಜವಾಗುವ ಕಾಲ ಸನ್ನಿಹಿತವಾದಂತೆ ಕಾಣುತ್ತಿದೆ. ಹಂತ ಹಂತವಾಗಿ ಬಿಜೆಪಿಯಿಂದ ದೂರವಾಗುತ್ತಾ, ಕಾಂಗ್ರೆಸ್‌ಗೆ ಹತ್ತಿರವಾಗುತ್ತಿರುವ ಅವರ ನಡೆಯಲ್ಲಿ ಶನಿವಾರ ಒಂದು ನಿರ್ಣಾಯಕ ದಿನವಾಗುವ ಸಾಧ್ಯತೆ ಇದೆ.

ಜನಸ್ಪಂದನ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್‌ಗೆ ಆಹ್ವಾನ

ಬಿಜೆಪಿ ಪಕ್ಷದ ಎಲ್ಲ ಕಾರ್ಯಕ್ರಮಗಳಿಂದ ದೂರವಾಗಿ ನಿಂತಿರುವ ಎಸ್‌ಟಿ ಸೋಮಶೇಖರ್‌ ಅವರು ಶನಿವಾರ ಸಂಜೆ ತಮ್ಮ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದಾರೆ. ಇದರಲ್ಲಿ ಅವರು ವೇದಿಕೆ ಹಂಚಿಕೊಳ್ಳುತ್ತಿರುವುದು ರಾಜ್ಯದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಜತೆ.

ಚೇಂಜ್‌ ಮೇಕರ್ಸ್‌ ಆಫ್‌ ಕನಕಪುರ ನಿವಾಸಿ ಸಂಘ ಎಂಬ ಸಂಸ್ಥೆ, ಶೋಭಾ ಫಾರೆಸ್ಟ್‌ ವ್ಯೂ ನಿವಾಸಿ ಸಂಘ (ಎಸ್‌ಫ್‌ವಿ) ಜತೆ ಸೇರಿಕೊಂಡು ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆ ಪುರ ವಾರ್ಡ್‌ ಸಂಖ್ಯೆ 198ರ ನಿವಾಸಿಗಳ ಜತೆ ʻಜನಸ್ಪಂದನʼ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಅಧ್ಯಕ್ಷತೆಯನ್ನು ವಹಿಸುವವರು ಶಾಸಕ ಎಸ್‌.ಟಿ. ಸೋಮಶೇಖರ್‌. ಸಂಜೆ ನಾಲ್ಕು ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

ST Somashekhar

ಎಸ್‌ಟಿ ಸೋಮಶೇಖರ್‌ ಅವರು ಇತ್ತೀಚೆಗೆ ಬಿಜೆಪಿಯ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಆಯೋಜಿಸಿದ್ದ ಬೆಂಗಳೂರು ಶಾಸಕರ ಸಭೆಯಲ್ಲಿ ಅವರು ಗೈರು ಹಾಜರಾಗಿದ್ದರು. ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಾಗಲೂ ಸೋಮಶೇಖರ್‌ ಮಾತ್ರ ತಿರುಗಿ ನೋಡಿಲ್ಲ!

ಬಿ.ಎಸ್‌. ಯಡಿಯೂರಪ್ಪ ಅವರು ಸೋಮಶೇಖರ್‌ ಅವರ ಜತೆ ಮಾತನಾಡುವ ಹೊಣೆಯನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ವಹಿಸಿದ್ದರು. ಆದರೆ, ಬೊಮ್ಮಾಯಿ ಅವರು ಮಾತನಾಡಿಲ್ಲ. ಸಿ.ಟಿ. ರವಿ, ಆರ್‌. ಅಶೋಕ್‌ ಅವರು ಕರೆಸಿಕೊಂಡು ಮಾತನಾಡಿದರೂ ಸೋಮಶೇಖರ್‌ ಅವರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ ಹೊರತು ಸಾಂತ್ವನ ಸಿಕ್ಕಿಲ್ಲ ಎನ್ನಲಾಗಿದೆ.

ಇದರ ನಡುವೆ ಸೋಮಶೇಖರ್‌ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಮತ್ತು ಅವರ ಕ್ಷೇತ್ರಕ್ಕೆ ದೊಡ್ಡ ಮೊತ್ತದ ಅನುದಾನವನ್ನು ಪಡೆದುಕೊಂಡು ಬಂದಿದ್ದರು. ಇದೆಲ್ಲವೂ ಸೋಮಶೇಖರ್‌ ಅವರು ಕಾಂಗ್ರೆಸ್‌ಗೆ ಹೋಗುವ ಸಂದೇಶ ಎಂಬಂತೆ ವಿಶ್ಲೇಷಿಸಲಾಗುತ್ತಿದೆ.

ಇದೀಗ ತಮ್ಮ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್‌ ಅವರಿಗೆ ಸಂಬಂಧಿಸಿದ ಸಂಘಟನೆಗಳು ಆಯೋಜಿಸಿರುವ ಜನಸ್ಪಂದನ ಕಾರ್ಯಕರ್ಮದಲ್ಲಿ ಎಸ್‌ಟಿ ಸೋಮಶೇಖರ್‌ ಭಾಗವಹಿಸುತ್ತಿರುವುದು ಭಾರಿ ಸದ್ದು ಮಾಡಿದೆ.

ಇದನ್ನೂ ಓದಿ: Operation Hasta : ಮೋದಿ ಬಂದ್ರೂ ಬರಲಿಲ್ಲ ಸೋಮಶೇಖರ್‌, ಸಿಎಂ ಭೇಟಿಯಾದ್ರು ಶಿವರಾಂ ಹೆಬ್ಬಾರ್‌! ಏನಾಗ್ತಿದೆ?

ಸಿದ್ದರಾಮಯ್ಯ ಭೇಟಿ ಮಾಡಿದ ಶಿವರಾಮ್‌ ಹೆಬ್ಬಾರ್‌

ಈ ನಡುವೆ, ಆಪರೇಷನ್‌ ಹಸ್ತದ ಸುಳಿಗೆ ಸಿಲುಕಿದ್ದಾರೆ ಎಂದು ಹೇಳಲಾದ ಇನ್ನೊಬ್ಬ ಶಾಸಕ ಶಿವರಾಮ ಹೆಬ್ಬಾರ್‌ ಅವರು ಕೂಡಾ ಶನಿವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅವರು ಬರ ಘೋಷಣೆ ಮತ್ತು ಪರಿಹಾರದ ಬೇಡಿಕೆಯನ್ನು ಇಟ್ಟುಕೊಂಡು ಹೋಗಿದ್ದಾರಾದರೂ, ನಿಜವಾದ ಉದ್ದೇಶ ಅದಲ್ಲ ಎನ್ನಲಾಗುತ್ತಿದೆ.

Continue Reading

Latest

ICC World Cup: ಬುಕ್​​ ಮೈ ಶೋದಲ್ಲಿ ವಿಶ್ವಕಪ್​ ಟಿಕೆಟ್ ಲಭ್ಯ​; ದಿನಾಂಕ​ ಘೋಷಿಸಿದ ಬಿಸಿಸಿಐ

ಬಹುನಿರೀಕ್ಷಿತ ಏಕದಿನ ವಿಶ್ವಕಪ್​ ಟೂರ್ನಿಯ(ICC World Cup) ಪಂದ್ಯಗಳ ಟಿಕೆಟ್​ಗಳು ಬುಕ್​ ಮೈ ಶೋದಲ್ಲಿ(BookMyShow) ಲಭ್ಯವಾಗಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ.

VISTARANEWS.COM


on

icc world cup 2023 tickets
Koo

ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬುಧವಾರ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಬಹುನಿರೀಕ್ಷಿತ ಏಕದಿನ ವಿಶ್ವಕಪ್​ ಟೂರ್ನಿಯ(ICC World Cup) ಪಂದ್ಯಗಳ ಟಿಕೆಟ್​ಗಳನ್ನು ಖರೀದಿಸುವ ಪ್ಲಾಟ್‌ಫಾರ್ಮನ್ನು ಪ್ರಕಟಿಸಿದೆ. ಮನರಂಜನಾ ತಾಣವಾದ ಬುಕ್​ ಮೈ ಶೋದ(BookMyShow) ವಿಶ್ವಕಪ್​ನ ಅಧಿಕೃತ ಟಿಕೆಟ್​ ಬುಕಿಂಗ್​ ಮಾಡುವ ಆ್ಯಪ್​ ಎಂದು ತಿಳಿಸಿದೆ. ಸೆಪ್ಟೆಂಬರ್ 29 ರಿಂದ ಪಂದ್ಯಾವಳಿಯ ಟಿಕೆಟ್​ ಬುಕಿಂಗ್​ ಆರಂಭಗೊಳ್ಳಲಿದೆ. ಸೆಪ್ಟೆಂಬರ್‌ 15ರಂದು ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳ ಟಿಕೆಟ್ (Tickets For ODI World Cup 2023) ಲಭ್ಯವಾಗಲಿದೆ. ಉಳಿದಂತೆ ಎಲ್ಲ ಪಂದ್ಯಗಳ ಟಿಕೆಟ್​ ಯಾವ ದಿನಾಂಕದಂದು ಲಭ್ಯವಾಗಲಿದೆ

ಒಟ್ಟು 10 ಅಭ್ಯಾಸ ಪಂದ್ಯಗಳು ಮತ್ತು ಪ್ರಧಾನ ಸುತ್ತಿನ ಪಂದ್ಯಗಳು ಸೇರಿದಂತೆ ಒಟ್ಟು 58 ಪಂದ್ಯಗಳು ನಡೆಯಲಿದೆ. ದೇಶದ 12 ಪ್ರಮುಖ ಸ್ಟೇಡಿಯಂಗಳಲ್ಲಿ ಪಂದ್ಯಗಳು ಆಯೋಜಿಸಲಾಗಿದೆ. ಅಭ್ಯಾಸ ಪಂದ್ಯಗಳ ಟಿಕೆಟ್​ ಕೂಡ ಲಭ್ಯವಾಗಲಿದೆ. ಆರಂಭಿಕ ಹಂತವು ಐಸಿಸಿಯ ವಾಣಿಜ್ಯ ಪಾಲುದಾರ ಮಾಸ್ಟರ್‌ ಕಾರ್ಡ್‌ಗಾಗಿ ಪ್ರತ್ಯೇಕವಾಗಿ ಗೊತ್ತುಪಡಿಸಿದ 24-ಗಂಟೆಗಳ ಸ್ಲಾಟ್​ಗಳನ್ನು ಮಾಡಲಾಗಿದೆ. ಬಳಿಕ ಕ್ರಿಕೆಟ್​ ಅಭಿಮಾನಿಗಳಿಗೆ ಟಿಕೆಟ್​ ಬುಕಿಂಗ್​ ಮಾಡಲು ಅವಕಾಶ ನೀಡಲಾಗಿದೆ. ಟಿಕೆಟ್​ನ ಎಲ್ಲ ದರಗಳು ಬುಕ್​ ಮೈ ಶೋದಲ್ಲಿ ಲಭ್ಯವಿದೆ.

24ಕ್ಕೆ ಮೊದಲ ಹಂತ

ಆಗಸ್ಟ್​ 24ರಿಂದ ಟಿಕೆಟ್​ ಬುಕ್ಕಿಂಗ್​ ಕಾರ್ಯ ಆರಂಭವಾಗಲಿದೆ. ಆದರೆ ಇಲ್ಲಿ ಭಾರತವನ್ನು ಹೊರತುಪಡಿಸಿ ಉಳಿದ ತಂಡಗಳ ನಡುವಿನ ಅಭ್ಯಾಸ ಮತ್ತು ಪ್ರಧಾನ ಪಂದ್ಯಗಳ ಟಿಕೆಟ್​ಗಳನ್ನು ಮಾತ್ರ ಬುಕಿಂಗ್​ ಮಾಡಬಹುದಾಗಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲ್ಯಾಂಡ್​, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ಅಫಘಾನಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯಗಳ ಟಿಕೆಟ್​ ಲಭ್ಯವಾಗಲಿದೆ.

ಭಾರತ-ಪಾಕ್​ ಪಂದ್ಯದ ಟಿಕೆಟ್

ದ್ವಿತೀಯ ಹಂತದಲ್ಲಿ ಭಾರತ ತಂಡದ ಅಭ್ಯಾಸ ಮತ್ತು ಲೀಗ್​ ಪಂದ್ಯಗಳ ಟಿಕೆಟ್​ ಮಾರಾಟವಾಗಲಿದೆ. ಅಭ್ಯಾಸ ಪಂದ್ಯಗಳ ಟಿಕೆಟ್‌ಗಳು ಆಗಸ್ಟ್ 30 ರಂದು ಪ್ರಾರಂಭವಾದರೆ, ಲೀಗ್​ ಹಂತದ ಪಂದ್ಯಗಳು ಆಗಸ್ಟ್ 31 ರಿಂದ ಲಭ್ಯವಿರುತ್ತವೆ. ಕ್ರಿಕೆಟ್​ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿರುವ ಅಕ್ಟೋಬರ್ 14 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ(ickets For world cup india vs pak) ಪಂದ್ಯದ ಟಿಕೆಟ್‌ಗಳನ್ನು ಸೆಪ್ಟೆಂಬರ್ 3 ರಂದು ಬುಕ್​ ಮಾಡಬಹುದು.

ತಡೆರಹಿತ ಅನುಭವ

ಟಿಕೆಟ್​ ಬುಕಿಂಗ್​ ಪ್ಲಾಟ್​ಫಾರ್ಮ್​ನ ಘೋಷಣೆ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ ಬಿಸಿಸಿಐ ಸಿಇಒ ಹೇಮಾಂಗ್ ಅಮೀನ್, “ಈ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್​ ಕ್ಯಾಲೆಂಡರ್‌ನಲ್ಲಿ ಅತ್ಯಂತ ನಿರೀಕ್ಷಿತ ಮತ್ತು ಮಹತ್ವದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್​ಗೆ ಬುಕ್‌ಮೈಶೋವನ್ನು ಟಿಕೆಟಿಂಗ್ ಪ್ಲಾಟ್‌ಫಾರ್ಮ್ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಅಚಲವಾದ ವಿಶ್ವಾಸದೊಂದಿಗೆ, ತಡೆರಹಿತ ಟಿಕೆಟಿಂಗ್ ಅನುಭವವನ್ನು ನಿರೀಕ್ಷಿಸುತ್ತೇವೆ, ರೋಮಾಂಚಕ ಆನ್-ಫೀಲ್ಡ್ ಅಭಿಮಾನಿಗಳಿಗೆ ಯಾವುದೇ ತಡೆಯಿಲ್ಲದೆ ಸುಲಭ ಪ್ರವೇಶವನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಪ್ರತಿಯೊಬ್ಬ ಕ್ರಿಕೆಟ್​ ಉತ್ಸಾಹಿಗಳಿಗೆ ಟಿಕೆಟ್​ ದೊರೆಯುವಂತಾಗಲಿ” ಎಂದು ಹೇಳಿದರು.

ಟೂರ್ನಿ ಆರಂಭ

ಸಂಪೂರ್ಣವಾಗಿ ಭಾರತ ಆತಿಥ್ಯದಲ್ಲಿ ಇದೇ ಮೊದಲ ಬಾರಿಗೆ ನಡೆಯುವ ಈ ಮಹತ್ವದ ವಿಶ್ವಕಪ್​ ಟೂರ್ನಿ ಅಕ್ಟೋಬರ್​ 5ರಿಂದ ನವೆಂಬರ್​ 19ರ ವರೆಗೆ ನಡೆಯಲಿದೆ. ಟೂರ್ನಿಯ ಉದ್ಘಾಟನ ಪಂದ್ಯ ಮತ್ತು ಫೈನಲ್​ ಪಂದ್ಯಗಳೆರಡು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ.

ಇದನ್ನೂ ಓದಿ ICC World Cup: ಮತ್ತೆ ವಿಶ್ವಕಪ್ ವೇಳಾಪಟ್ಟಿ​ ಬದಲಾವಣೆ ಅಸಾಧ್ಯ; ರಾಜೀವ್ ಶುಕ್ಲಾ ಸ್ಪಷ್ಟನೆ

ಭಾರತ ಪಂದ್ಯಗಳ ಟಿಕೆಟ್​ ಮಾರಾಟದ ಮಾಹಿತಿ

1. ಆಗಸ್ಟ್‌ 30: ತಿರುವನಂತಪುರ ಮತ್ತು ಗುವಾಹಟಿ ನಡೆಯಲಿರುವ ಭಾರತದ ಅಭ್ಯಾಸ ಪಂದ್ಯಗಳ ಟಿಕೆಟ್‌ ಮಾರಾಟ ಈ ದಿನಾಂಕದಂದು ಲಭ್ಯವಾಗಲಿದೆ. ಈ ಎರಡೂ ಮೈದಾನಗಳಲ್ಲಿ ಲೀಗ್​ ಪಂದ್ಯಗಳು ನಡೆಯುವುದಿಲ್ಲ.

2. ಆಗಸ್ಟ್ 31: ಆಸ್ಟ್ರೇಲಿಯಾ ವಿರುದ್ಧ ಚೆನ್ನೈಯಲ್ಲಿ ನಡೆಯುವ ಪಂದ್ಯ, ದೆಹಲಿಯಲ್ಲಿ ಅಫಘಾನಿಸ್ತಾನ ವಿರುದ್ಧ ಮತ್ತು ಪುಣೆಯಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಪಂದ್ಯಗಳ ಟಿಕೆಟ್‌ ಮಾರಾಟವಾಗಲಿದೆ.

3. ಸೆಪ್ಟೆಂಬರ್‌ 1: ಧರ್ಮಶಾಲಾದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ, ಲಕ್ನೋದಲ್ಲಿ ಇಂಗ್ಲೆಂಡ್‌ ವಿರುದ್ಧ ಮುಂಬಯಿಯಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಪಂದ್ಯಗಳ ಟಿಕೆಟ್‌ ಮಾರಾಟವಾಗಲಿದೆ.

4. ಸೆಪ್ಟೆಂಬರ್‌ 2: ನೆದರ್ಲೆಂಡ್ಸ್‌ ವಿರುದ್ಧ ಬೆಂಗಳೂರಲ್ಲಿ ನಡೆಯುವ, ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏರ್ಪಡಲಿರುವ ಪಂದ್ಯಗಳ ಟಿಕೆಟ್‌ ಮಾರಾಟ ದೊರೆಯಲಿದೆ.

5. ಸೆಪ್ಟೆಂಬರ್‌ 3: ಹೈವೋಲ್ಟೇಜ್ ಪಂದ್ಯವಾದ ಭಾರತ ಮತ್ತು ಪಾಕಿಸ್ತಾನ ವಿರುದ್ಧದ​ ಅಹಮದಾಬಾದ್‌ನಲ್ಲಿ ನಡೆಯುವ ಪಂದ್ಯದ ಟಿಕೆಟ್​ ಮಾರಾಟವಾಗಲಿದೆ.

Continue Reading

Latest

Harshika Poonacha : ಹರ್ಷಿಕಾ ಪೂಣಚ್ಚಗೆ ಮದುವೆಗೆ ಮುನ್ನವೇ ಭರ್ಜರಿ ಗಿಫ್ಟ್‌; ಜಯಮಾಲಾಗೆ ಚಿಟ್ಟೆ ಮೇಲೆ ಯಾಕಿಷ್ಟು ಪ್ರೀತಿ?

Harshika Poonacha : ಖ್ಯಾತ ನಟಿ ಜಯಮಾಲಾ ಅವರು ಆಮಂತ್ರಣ ಕೊಡಲು ಬಂದ ಹರ್ಷಿಕಾ ಪೂಣಚ್ಚಗೆ ಕಿವಿಯೋಲೆ ಉಡುಗೊರೆ ಕೊಟ್ಟಿದ್ದಾರೆ. ಹಾಗಿದ್ದರೆ ಜಯಮಾಲಾಗೆ ಹರ್ಷಿಕಾ ಮೇಲೆ ಇಷ್ಟೊಂದು ಪ್ರೀತೀನಾ? ಈ ವರದಿ ನೋಡಿ

VISTARANEWS.COM


on

Harshika poonacha Marriage gift
Koo

ಬೆಂಗಳೂರು: ಕ್ಯೂಟ್‌ ಜೋಡಿ ಹರ್ಷಿಕಾ ಪೂಣಚ್ಚ (Harshika poonacha) ಮತ್ತು ಭುವನ್‌ ಪೊನ್ನಪ್ಪ (Bhuvan Ponnappa) ಅವರು ಹಸೆಮಣೆ ಏರಲಿರುವ ಮುಹೂರ್ತ ಹತ್ತಿರವಾಗುತ್ತಿದೆ. ಆಗಸ್ಟ್‌ 24ರಂದು ವಿರಾಜಪೇಟೆಯ ‘ಅಮ್ಮತಿ ಕೊಡವ ಸಮಾಜ’ದ ಸಭಾಂಗಣದಲ್ಲಿ ಈ ಸ್ಟಾರ್‌ ಜೋಡಿಯ ಮದುವೆ (Harshika Poonacha Bhuvan Ponnappa Marriage) ಕೊಡವ ಶೈಲಿಯಲ್ಲಿ ಅದ್ಧೂರಿಯಾಗಿ (Marriage in Kodava style) ನಡೆಯಲಿದೆ. ಆವತ್ತು ಸ್ನೇಹಿತರು, ಬಂಧುಗಳು, ಅಭಿಮಾನಿಗಳು ಅವರಿಗೆ ಉಡುಗೊರೆ ಕೊಡಲು, ಜೋಡಿಯ ಚೆಲುವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಮದುವೆಗೆ ಮೊದಲೇ ಹರ್ಷಿಕಾ ಪೂಣಚ್ಚಗೆ ಒಂದು ಭರ್ಜರಿ ಉಡುಗೊರೆ (Harshika got best gift) ಸಿಕ್ಕಿದೆ.

ಈ ಭರ್ಜರಿ ಗಿಫ್ಟ್‌ ಕೊಟ್ಟಿದ್ದು ಬೇರೆ ಯಾರೂ ಅಲ್ಲ, ಕನ್ನಡದ ಖ್ಯಾತ ಅಭಿನೇತ್ರಿ ಜಯಮಾಲಾ (Actress Jayamala) ಅವರು. ನಾಯಕಿ ನಟಿಯಾಗಿ ಗಮನ ಸೆಳೆದಿದ್ದಲ್ಲದೆ, ರಾಜಕಾರಣಿಯಾಗಿ, ರಾಜ್ಯದ ಸಚಿವೆಯಾಗಿಯೂ ಗಮನ ಸೆಳೆದ ನಟಿ ಜಯಮಾಲಾ ಅವರು ಹರ್ಷಿಕಾಗೆ ವಿಶೇಷ ಗಿಫ್ಟ್‌ ಕೊಟ್ಟಿದ್ದಾರೆ.

Harshika Jayamala

ಹರ್ಷಿಕಾ ಪೂಣಚ್ಚ ಮತ್ತು ಭುವನ್‌ ಪೊನ್ನಪ್ಪ ಜೋಡಿ ತಮ್ಮ ದೀರ್ಘ ಕಾಲದ ಸ್ನೇಹಕ್ಕೆ, ಪ್ರೀತಿಯ ತಿರುವು ನೀಡಿ ಇದೀಗ ಮದುವೆಯ ಸಂಭ್ರಮಕ್ಕೆ ಅಣಿಯಾಗಿದ್ದಾರೆ. ಈ ಖುಷಿಯ ಕ್ಷಣದಲ್ಲಿ ನೀವು ಬಂದು ಹರಸಬೇಕು ಎಂದು ಸಿನಿಮಾ ತಾರೆಯರಿಗೆ, ರಾಜಕಾರಣಿಗಳಿಗೆ ಪ್ರೀತಿಯ ಆಹ್ವಾನ ನೀಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳಾ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಿ.ಎಸ್‌. ಯಡಿಯೂರಪ್ಪ ಅವರ ಮನೆಗೆ ಹೋಗಿ ಆಮಂತ್ರಣ ನೀಡಲಾಗಿದೆ. ಎಲ್ಲ ನಾಯಕರು ಈ ಸುಂದರ ಜೋಡಿಗೆ ಶುಭಾಶಯ ಕೋರಿ ಹರಸಿದೆ.

Harshika Poonacha Jayamala

ಶಿವರಾಜ್ ಕುಮಾರ್, ರವಿಚಂದ್ರನ್, ಅಶ್ವಿನಿ ಪುನೀತ್ ರಾಜ್‌ಕುಮಾರ್‌, ಗಣೇಶ್ , ದೊಡ್ಡಣ್ಣ, ಶ್ರೀನಾಥ್, ಸುಧಾರಾಣಿ, ತಾರಾ, ಮಾಲಾಶ್ರೀ, ಅನುಪ್ರಭಾಕರ್, ಅಮೂಲ್ಯ, ದಿಗಂತ್ ಸೇರಿದಂತೆ ಹಲವರಿಗೆ ಖುದ್ದಾಗಿ ಆಮಂತ್ರಣ ತಲುಪಿಸಿ ಪ್ರೀತಿಯ ಅಪ್ಪುಗೆಯನ್ನು ಸ್ವೀಕರಿಸಿದೆ ಈ ಜೋಡಿ.

ಇದನ್ನೂ ಓದಿ: Harshika Poonacha: ಯಾರಿಗೆಲ್ಲ ವಿವಾಹ ಆಮಂತ್ರಣ ನೀಡಿದ್ರು ಹರ್ಷಿಕಾ-ಭುವನ್?

ಅಂತೆಯೇ ಭುವನ್‌ ಮತ್ತು ಹರ್ಷಿಕಾ ಅವರು ಖ್ಯಾತ ನಟಿ ಜಯಮಾಲಾ ಅವರ ಮನೆಗೂ ಹೋಗಿದ್ದಾರೆ. ಅಲ್ಲಿ ಅವರಿಗೆ ಅಚ್ಚರಿಯೊಂದು ಕಾದಿತ್ತು.

Harshika Jayamala
ನೋವಾಯ್ತಾ ಮಗು

ಜಯಮಾಲಾ ಅವರು ಯಾವತ್ತೂ ಹಾಗೆಯೇ. ಕಂಡೊಡನೆ ಆತ್ಮೀಯವಾಗಿ ಆದರಿಸುವ ಸ್ವಭಾವದವರು. ಬಾಯಿ ತುಂಬ ಮಾತು. ಹೀಗೆ ಭುವನ್‌ ಮತ್ತು ಹರ್ಷಿಕಾ ಅವರು ಮದುವೆಯ ಆಮಂತ್ರಣ ಕೊಡಲು ಹೋದಾಗೂ ಜನ್ಮಾಂತರದ ಬಂಧುಗಳೆಂಬಂತೆ ಕರೆದು ಆಧರಿಸಿ ಸತ್ಕರಿಸಿದ್ದಾರೆ. ಹರ್ಷಿಕಾರನ್ನಂತೂ ಮಗುವಿನಂತೆ ಅವಚಿ ಹಿಡಿದು ಖುಷಿಪಟ್ಟಿದ್ದಾರೆ. ಭುವನ್‌ ಮತ್ತು ಹರ್ಷಿಕಾ ಕೂಡಾ ಪ್ರೀತಿಯಿಂದ ಅಮ್ಮನಂತೆ ತಬ್ಬಿ ಖುಷಿಪಟ್ಟಿದ್ದಾರೆ.

ಇದೆಲ್ಲದರ ನಡುವೆ ಜಯಮಾಲಾ ಅವರು ಆಹ್ವಾನ ಪತ್ರಿಕೆ ನೀಡಿದ ಹರ್ಷಿಕಾಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ವಿಶೇಷ ಉಡುಗೊರೆ ಕೊಟ್ಟು ಆಶೀರ್ವದಿಸಿದ್ದು ಮಾತ್ರವಲ್ಲ ತಾವೇ ಕೈಯಾರೆ ತೊಡಿಸಿ ಸಂಭ್ರಮಿಸಿದ್ದಾರೆ.

ಜಯಮಾಲಾ ಅವರು ಹರ್ಷಿಕಾ ಪೂಣಚ್ಚಗೆ ಕೊಟ್ಟಿದ್ದು ಚಿನ್ನದ ಓಲೆ. ಕಿವಿಯ ಓಲೆಗಳನ್ನು ಪಕ್ಕದಲ್ಲಿ ಮಗಳಂತೆ ಕೂರಿಸಿಕೊಂಡು ಕೈಯಾರೆ ಅದನ್ನು ತೊಡಿಸಿ ಖುಷಿಪಟ್ಟರು.

ಚಿನ್ನದ ಕಿವಿಯೋಲೆ ತೊಡಿಸಿ, ಸರಿಯಾಯ್ತಾ ಅಂತ ನೋಡಿದ ಜಯಮಾಲಾ ಅವರು ಮುತ್ತಿಕ್ಕಿ ಮುದ್ದು ಮಾಡಿದರು. ಇದಕ್ಕೆ ಪ್ರತಿಯಾಗಿ ಹರ್ಷಿಕಾ ಪೂಣಚ್ಚ ಕೂಡಾ ಖುಷಿಯಿಂದ ಮುತ್ತು ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಜಯಮಾಲಾ ಅವತ ಪುತ್ರಿ ಸೌಂದರ್ಯ ಕೂಡಾ ಜತೆಗಿದ್ದು ಈ ಜಯಮಾಲಾ- ಹರ್ಷಿಕಾ ಅವರ ಖುಷಿಯ ಕ್ಷಣಗಳಿಗೆ ಸಾಕ್ಷಿಯಾದರು.

Harshika poonacha and Jayamala
ಭುವನ್‌ ಪೊನ್ನಪ್ಪ ಹರ್ಷಿಕಾ ಜೋಡಿಗೆ ಜಯಮಾಲಾ ಆಶೀರ್ವಾದ ಸೌಂದರ್ಯ ಜಯಮಾಲಾ ಜತೆಗಿದ್ದಾರೆ

ಇದನ್ನೂ ಓದಿ: Harshika Poonacha: ಮದುವೆಗೂ ಮುಂಚೆ ಗುಡ್‌ ನ್ಯೂಸ್‌ ಕೊಟ್ಟ ಹರ್ಷಿಕಾ- ಭುವನ್ ಜೋಡಿ!

ಈ ನಡುವೆ ಜಯಮಾಲಾ ಅವರು ಹರ್ಷಿಕಾಗೆ ಅಷ್ಟೊಂದು ಪ್ರೀತಿಯಿಂದ ಕಿವಿಯೋಲೆ ಉಡುಗೊರೆ ಕೊಡಲು ಕಾರಣವೇನು? ಮೊದಲೇ ತಂದು ಇಟ್ಟುಕೊಂಡಿದ್ದಾರೆ ಎಂದರೆ ಏನಾದರೂ ಕಾರಣ ಇರಲೇಬೇಕಲ್ಲ ಎಂಬ ಚರ್ಚೆ ಹುಟ್ಟಿಕೊಂಡಿದೆ. ತುಂಬ ಕಷ್ಟಪಟ್ಟು ಚಿತ್ರರಂಗದಲ್ಲಿ ಮೇಲೆ ಬಂದಿರುವ ಜಯಮಾಲಾ ಅವರು ಹೆಣ್ಣು ಮಕ್ಕಳ ಸಬಲತೆಯ ಪರವಾಗಿ ವಾದ ಮಾಡುವ ಗಟ್ಟಿಗಿತ್ತಿ. ಹೀಗಾಗಿ ಚಿತ್ರರಂಗದಲ್ಲಿ ಸಾಧನೆ ಮಾಡುವ ಹೆಣ್ಮಕ್ಕಳ ಬಗ್ಗೆ ಅವರು ಅಕ್ಕರೆ ಇಟ್ಟುಕೊಂಡಿದ್ದಾರೆ. ಅದರಲ್ಲಿ ಚಿಟ್ಟೆ ಹರ್ಷಿಕಾ ಪೂಣಚ್ಚ ಅವರೂ ಒಬ್ಬರು. ಹೀಗಾಗಿ ತುಂಬ ಖುಷಿಯಿಂದ ಉಡುಗೊರೆ ಕೊಟ್ಟಿದ್ದಾರೆ ಎನ್ನಲಾಗಿದೆ.

Continue Reading
Advertisement
girl students fall ill
ಕರ್ನಾಟಕ2 mins ago

Raichur News: ಮಾನ್ವಿ ಹಾಸ್ಟೆಲ್‌ನಲ್ಲಿ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ

Fans brave the dampness, waiting for India's tour of South Africa to kick off
ಕ್ರಿಕೆಟ್13 mins ago

IND vs SA: ಮಳೆಗೆ ಕೊಚ್ಚಿ ಹೋದ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ

Gautam Gambhir
ಕ್ರಿಕೆಟ್35 mins ago

Gautam Gambhir: ಮತ್ತೆ ಪಾಕ್​ ಆಟಗಾರನ ಬೆಂಬಲಕ್ಕೆ ನಿಂತ ಗೌತಮ್​ ಗಂಭೀರ್

Shakti Scheme
ಕರ್ನಾಟಕ46 mins ago

Shakti Scheme: ಒಂದೇ ಆಧಾರ್‌ ಕಾರ್ಡ್‌ ಬಳಸಿ ಇಬ್ಬರ ಪ್ರಯಾಣ; ಸಿಕ್ಕಿಬಿದ್ದ ಬುರ್ಕಾಧಾರಿ ಮಹಿಳೆಯರು!

Supreme Court verdict on Article 370 and Know about this article
ದೇಶ1 hour ago

ನಾಳೆ ಆರ್ಟಿಕಲ್ 370 ರದ್ದು ತೀರ್ಪು; ಅದಕ್ಕೂ ಮೊದಲು ಈ ಸಂಗತಿ ತಿಳಿದುಕೊಂಡಿರಿ

WPL 2024 Auction
ಕ್ರಿಕೆಟ್2 hours ago

ಬಿಡ್ಡಿಂಗ್​ ಹಣದಲ್ಲಿ ತಂದೆ-ತಾಯಿಗೆ ವಿಶೇಷ ಉಡುಗೊರೆ ನೀಡಲು ಮುಂದಾದ ಕರ್ನಾಟಕದ ​ ವೃಂದಾ ದಿನೇಶ್​

Naveen Ammembala
ದಕ್ಷಿಣ ಕನ್ನಡ2 hours ago

ಹೈಪರ್ ಲೋಕಲ್ ಸುದ್ದಿಗೂ ಅಭ್ಯುದಯ ಪತ್ರಿಕೋದ್ಯಮಕ್ಕೂ ಅವಿನಾಭಾವ ಸಂಬಂಧ: ನವೀನ್ ಅಮ್ಮೆಂಬಳ

Chhattisgarh to be CM Vishnu has two deputies and Raman Singh Speaker
ದೇಶ2 hours ago

ಛತ್ತೀಸ್‍‌ಗಢ ಸಿಎಂ ವಿಷ್ಣುಗೆ ಇಬ್ಬರು ಡೆಪ್ಯುಟಿಗಳು; ರಮಣ್ ಸಿಂಗ್ ಸ್ಪೀಕರ್

Rambhapuri seer and MB Patil
ಕರ್ನಾಟಕ2 hours ago

ಎಂ.ಬಿ. ಪಾಟೀಲ್‌ಗೆ ನೀರಾವರಿ ಖಾತೆ ಸಿಗಬೇಕಿತ್ತು; ಡಿಕೆಶಿಗೆ ಕೊಟ್ಟಿದ್ದಕ್ಕೆ ರಂಭಾಪುರಿ ಶ್ರೀ ಬೇಸರ!

India U19 vs Pakistan U19
ಕ್ರಿಕೆಟ್2 hours ago

U19 Asia Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ 8 ವಿಕೆಟ್​ ಸೋಲು

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ7 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ9 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ17 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌