Site icon Vistara News

Video Viral: ಮಹಿಳೆಯನ್ನು ತಿವಿದು ರಸ್ತೆಯುದ್ದಕ್ಕೂ ಎಳೆದೊಯ್ದ ಎಮ್ಮೆ! ವಿಡಿಯೊ ಇದೆ

Viral Video

ಚೆನ್ನೈ : ಮಹಿಳೆಯೊಬ್ಬಳನ್ನು ಎಮ್ಮೆಯೊಂದು ರಸ್ತೆಯುದ್ದಕ್ಕೂ 500 ಮೀಗಳಷ್ಟು ದೂರ ತಿವಿದುಕೊಂಡು ಹೋಗಿ ಗಂಭೀರವಾಗಿ ಗಾಯಗೊಳಿಸಿದ ಆಘಾತಕಾರಿ ಘಟನೆ ಚೆನ್ನೈನ ತಿರುವೊಟ್ರಿಯೂರ್‌ನಲ್ಲಿ ನಡೆದಿದೆ. ಈ ಘಟನೆ ಸಿಸಿಟಿಯಲ್ಲಿ ಸೆರೆಯಾಗಿದ್ದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಇದೀಗ ಸಿಕ್ಕಾಪಟ್ಟೆ ವೈರಲ್ (Video Viral) ಆಗಿದೆ.

ವಿಡಿಯೊದಲ್ಲಿ ಮಹಿಳೆಯನ್ನು ಎಮ್ಮೆ ಎಳೆದುಕೊಂಡು ಹೋಗುತ್ತಿದ್ದು, ಅನೇಕರು ಮಹಿಳೆಗೆ ಸಹಾಯ ಮಾಡಲು ಅದರ ಹಿಂದೆ ಓಡಿ ಬರುತ್ತಿರುವ ದೃಶ್ಯ ಕಂಡುಬಂದಿದೆ. ಭಾನುವಾರ ಮಧ್ಯಾಹ್ನದ ವೇಳೆ 35 ವರ್ಷದ ಈ ಮಹಿಳೆ ಗ್ರಾಮದ ಕಿರಿದಾದ ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಎದುರು ಬದಿಯಿಂದ ಓಡಿ ಬರುತ್ತಿರುವ ಎಮ್ಮೆ ಆಕೆಯನ್ನು ತಿವಿದಿದೆ. ಆಗ ಎಮ್ಮೆಯ ಕೊಂಬಿಗೆ ಮಹಿಳೆಯ ಉಡುಪು ಸಿಕ್ಕಿಹಾಕಿಕೊಂಡಿದ್ದ ಪರಿಣಾಮ ಬೀದಿಯಲ್ಲಿ 500 ಮೀಗಳಷ್ಟು ದೂರ ಅದು ಎಳೆದುಕೊಂಡು ಹೋಗಿದೆ. ಕೊನೆಗೆ ಸ್ಥಳೀಯರು ಎಮ್ಮೆಯಿಂದ ಮಹಿಳೆಯನ್ನು ಕಾಪಾಡಿದ್ದಾರೆ. ಹಾಗೇ ಆಕೆಗೆ ಗಂಭೀರ ಗಾಯಗಳಾದ ಹಿನ್ನೆಲೆ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಮಹಿಳೆಗೆ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿದ್ದು ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ ಮತ್ತು ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಮಹಿಳೆಯನ್ನು ಎಮ್ಮೆಯಿಂದ ಬಿಡಿಸಿದ ನಂತರ ಆ ಎಮ್ಮೆ ರಸ್ತೆ ಬದಿಯಲ್ಲಿ ನಿಲ್ಲಿಸಿದ ಸಿಕ್ಕ ಸಿಕ್ಕ ವಾಹನಗಳನ್ನು ಕೆಡವಿದೆ. ಹಾಗಾಗಿ ಎಮ್ಮೆಯನ್ನು ಸೆರೆ ಹಿಡಿಯಲು ಗ್ರೇಟರ್ ಚೆನ್ನೈ ಕಾರ್ಪೋರೇಷನ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅದನ್ನು ಹಿಡಿದು, ಪುಲಿಯಂಥೋಪ್‌ನಲ್ಲಿರುವ ಗ್ರೇಟರ್ ಚೆನ್ನೈ ಕಾರ್ಪೋರೇಷನ್‌ ಆಶ್ರಯಕ್ಕೆ ಕರೆದೊಯ್ಯಲಾಯಿತು ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: Viral Video: 7 ಅಜ್ಜಂದಿರ ಜೊತೆ ಸಂಸಾರ ನಡೆಸುತ್ತಿರುವ ಯುವತಿ; ಆಕೆಯ ಪ್ಲ್ಯಾನ್ ಇಂಟರೆಸ್ಟಿಂಗ್!

ಈ ವರ್ಷದ ಕಾರ್ಪೋರೇಷನ್ ಬಜೆಟ್ ಮಂಡನೆಯ ವೇಳೆ ಮೇಯರ್ ಆರ್. ಪ್ರಿಯಾ ಅವರು ನಗರದಾದ್ಯಂತ ಹಸುಗಳಿಗೆ ಪರವಾನಗಿ ಮತ್ತು ದಕ್ಷಿಣ ಚೆನ್ನೈನಲ್ಲಿ ಹೆಚ್ಚುವರಿ ಆಶ್ರಯಗಳ ಸ್ಥಾಪನೆಯ ಯೋಜನೆ ಜಾರಿಗೊಳಿಸಿದ್ದರು. ಆದರೆ ಲೋಕಸಭಾ ಚುನಾವಣೆಯ ಕಾರಣದಿಂದ ಈ ಎರಡೂ ಯೋಜನೆಗಳಿಗೆ ಕೆಲಸ ಪ್ರಾರಂಭಿಸಲು ಸಾಧ್ಯವಾಗಿಲ್ಲ ಎಂಬುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

Exit mobile version