ಚೀನಾದ ಕಂಪನಿಯೊಂದು ದಂತ ಕಸಿ ಮಾಡಲು ಸ್ಮಶಾನಗಳು ಮತ್ತು ವೈದ್ಯಕೀಯ ಪ್ರಯೋಗಾಲಯಗಳಿಂದ 4,000 ಕ್ಕೂ ಹೆಚ್ಚು ಶವಗಳನ್ನು ಕದ್ದಿದೆ ಎಂದು ಆರೋಪಿಸಲಾಗಿದೆ. ಪ್ರಸಿದ್ಧ ಕ್ರಿಮಿನಲ್ ವಕೀಲರು ಗುರುವಾರ ಈ ಪ್ರಕರಣಕ್ಕೆ ಸಂಬಂಧಪಟ್ಟ ವಿವರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ.
ಬೀಜಿಂಗ್ ಬ್ರೇವ್ ವಕೀಲರ ಸಂಘದ ಅಧ್ಯಕ್ಷ ಯಿ ಶೆಂಗ್ಹುವಾ, ಉತ್ತರ ಪ್ರಾಂತ್ಯದ ಶಾಂಕ್ಸಿಯ ರಾಜಧಾನಿ ತೈಯುವಾನ್‍ನ ಪೊಲೀಸರು ಅಲೋಜೆನಿಕ್ ಮೂಳೆ ಕಸಿಗಳನ್ನು ಉತ್ಪಾದಿಸಲು ಮೂಳೆಗಳನ್ನು ಬಳಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು. ಶಾಂಕ್ಸಿ ಅರೋಯಿ ಬಯೋಮೆಟೀರಿಯಲ್ಸ್ ಎಂಬ ಕಂಪನಿಯು ಸಿಚುವಾನ್, ಗುವಾಂಗ್ಕ್ಸಿ ಮತ್ತು ಶಾಂಡೊಂಗ್ ಪ್ರಾಂತ್ಯಗಳಿಂದ ಶವಗಳು ಮತ್ತು ಶವದ ಕೈಕಾಲುಗಳನ್ನು ಅಕ್ರಮವಾಗಿ ಖರೀದಿಸಿ ಮೂಳೆ ಕಸಿಗಳನ್ನು ತಯಾರಿಸಲು ಬಳಸುತ್ತಿದೆ ಎಂದು ಶಂಕಿಸಲಾಗಿದೆ ಎಂದು ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ತಿಳಿಸಲಾಗಿದೆ.
ಇದರಿಂದ ಕಂಪನಿಯು 380 ಮಿಲಿಯನ್ ಯುವಾನ್ (ಯುಎಸ್ $ 53 ಮಿಲಿಯನ್) ಗಳಿಸಿದೆ. ಅದರಲ್ಲೂ ದಂತ ಕಸಿಗಾಗಿ ಮೂಳೆಗಳನ್ನು ಮಾರಾಟ ಮಾಡುವುದರಿಂದ ಹೆಚ್ಚು ಆದಾಯ ಗಳಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ರೋಗಿಗಳಲ್ಲಿ ಕಸಿಗಳಿಗೆ ಸಾಕಷ್ಟು ಮೂಳೆ ಸಾಂದ್ರತೆ ಇಲ್ಲದಿದ್ದಾಗ ಅಲೋಜೆನಿಕ್ ಕಸಿಗಳನ್ನು ಬಳಸಲಾಗುತ್ತದೆ, ಆದರೆ ಮೂಳೆಯನ್ನು ಸಾಮಾನ್ಯವಾಗಿ ಸೊಂಟದ ಬದಲಿಯಂತಹ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುವ ರೋಗಿಗಳಿಂದ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.
ಪೊಲೀಸರು 18 ಟನ್ ಮೂಳೆಗಳು ಮತ್ತು 34,000 ಕ್ಕೂ ಹೆಚ್ಚು ಈಗಾಗಲೇ ಸಿದ್ಧಪಡಿಸಿದ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಯಿ ಪ್ರಕಟಿಸಿದ ದಾಖಲೆಗಳು ತಿಳಿಸಿವೆ. ಕಂಪನಿಯ ಜನರಲ್ ಮ್ಯಾನೇಜರ್ ಆಗಿದ್ದ ಸು ಎಂಬ ಶಂಕಿತನು ಯುನ್ನಾನ್, ಚಾಂಗ್ಕಿಂಗ್, ಗುಯಿಝೌ ಮತ್ತು ಸಿಚುವಾನ್ ನ ಸ್ಮಶಾನಗಳಿಂದ 4,000 ಕ್ಕೂ ಹೆಚ್ಚು ಮಾನವ ದೇಹಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದರು. ಯುನ್ನಾನ್ ಪ್ರಾಂತ್ಯದ ಶುಯಿಫು, ಚಾಂಗ್ಕಿಂಗ್ ನ ಬನಾನ್ ಜಿಲ್ಲೆ, ಗುಯಿಝೌನ ಶಿಕಿಯಾನ್ ಕೌಂಟಿ ಮತ್ತು ಸಿಚುವಾನ್‍ನ ಡೇಯಿಂಗ್ ಕೌಂಟಿಯ ಚಿತಾಗಾರದ ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ಹೆಚ್ಚಿನ ಸಂಸ್ಕರಣೆಗಾಗಿ ಸು ಅವರ ಕಂಪನಿಗೆ ಸಾಗಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ವೇಗವಾಗಿ ಬಂದು ಅಪ್ಪಳಿಸಿದ ಸ್ಕಾರ್ಪಿಯೋ; ಒಂದೇ ಕುಟುಂಬದ ಮೂವರು ಪಾರಾಗಿದ್ದೇ ಅಚ್ಚರಿ!
ಅಲ್ಲದೇ ತನಿಖೆಯ ಸಮಯದಲ್ಲಿ ಇನ್ನೂ75 ಮಂದಿ ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಚಿತಾಗಾರಗಳಲ್ಲಿನ ಕಾರ್ಮಿಕರು ಮೂಳೆಗಳನ್ನು ಸುಗೆ ಮಾರಾಟ ಮಾಡಲು ಶವಗಳನ್ನು ತುಂಡು ತುಂಡುಗಳಾಗಿ ಕತ್ತರಿಸಿದ್ದಾರೆ ಎಂದು ಶಂಕಿಸಲಾಗಿದೆ. ಶಾಂಡೊಂಗ್‌ನ ಕಿಂಗ್ಡಾವೊ ಯೂನಿವರ್ಸಿಟಿ ಆಸ್ಪತ್ರೆಯ ಲಿವರ್ ಸೆಂಟರ್ ಅಕ್ರಮವಾಗಿ ಶವಗಳನ್ನು ಕಂಪನಿಗೆ ಮಾರಾಟ ಮಾಡಿದೆ ಎಂಬ ಹೇಳಿಕೆಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ಹಾಗೇ ವೈದ್ಯಕೀಯ ವಿಜ್ಞಾನಕ್ಕೆ ಉತ್ತಮ ಕೊಡುಗೆ ನೀಡಿದ ಲಿವರ್ ಸೆಂಟರ್ ನ ನಿರ್ದೇಶಕ ಲಿ ಬಾಕ್ಸಿಂಗ್ ಅವರು ಈ ಪ್ರಕರಣದಲ್ಲಿ ಕೈಜೋಡಿಸಿದ್ದಾರೆ ಎಂದು ಆರೋಪಿಸಲಾಗಿದೆ.