ಪುರಾತನ ಕಾಲದಲ್ಲಿ ಮಹಿಳೆಯರಿಗೆ ಅಪಾರ ಗೌರವ ನೀಡುತ್ತಿದ್ದರು. ಪರಸ್ತ್ರೀಯನ್ನು ಮುಟ್ಟಲೂ ಹೆದರುತ್ತಿದ್ದರು ಎಂಬ ಮಾತಿತ್ತು. ಆದರೆ ಇಂದಿನ ಕಾಲದಲ್ಲಿ ಮಹಿಳೆಯರ ದೇಹವನ್ನೇ ಬಳಸಿಕೊಂಡು ವ್ಯಾಪಾರ ಮಾಡಲು ಶುರುಮಾಡಿದ್ದಾರೆ. ಈಗ ಮಹಿಳೆಯರನ್ನು ನಗ್ನವಾಗಿ ಬಳಸಿಕೊಂಡು ವ್ಯಾಪಾರ ಮಾಡುವ ಪ್ರವೃತ್ತಿ ರೆಸ್ಟೋರೆಂಟ್‌ಗಳಲ್ಲಿಯೂ ಬಂದಿದೆ. ಗ್ರಾಹಕರನ್ನು ಆಕರ್ಷಿಸಲು ಕ್ಲಬ್ ರೆಸ್ಟೋರೆಂಟ್‌ಗಳು ಮಹಿಳೆಯರನ್ನು ಬೆತ್ತಲೆ ಮಾಡಿದ್ದು, ಇದಕ್ಕೆ ಸಂಬಂಧಪಟ್ಟ ಪೋಟೊ ವೈರಲ್ (Viral News) ಆಗಿದೆ. ತೈವಾನ್ ಕರಾವಳಿ ಭಾಗದ ತೈಚುಂಗ್‌ನ ರೆಸ್ಟೋರೆಂಟ್‌ವೊಂದರಲ್ಲಿ ಗ್ರಾಹಕರಿಗೆ ಪ್ಲೇಟ್ ಇಲ್ಲದೇ ಬೆತ್ತಲೆಯಾಗಿರುವ ಮಹಿಳೆಯ ಮೈಮೇಲೆ ಆಹಾರವನ್ನು ಬಡಿಸಲಾಗುತ್ತದೆ. ಆದರೆ ಈ ಆಹಾರವನ್ನು ಸೇವಿಸುವವರು ಸ್ಪೂನ್ ಬಳಸುವಂತಿಲ್ಲ. ತಮ್ಮ ಕೈಯಿಂದ ತೆಗೆದುಕೊಂಡು ತಿನ್ನಬೇಕು. ಈ ಭೋಜನ ತುಂಬಾ ದುಬಾರಿಯಾಗಿದ್ದು, ಭಾರತೀಯ ರೂಪಾಯಿಗಳಲ್ಲಿ ಹೇಳುವುದಾದರೆ ಬರೋಬ್ಬರಿ 2.58 ಲಕ್ಷ ರೂ. ಎನ್ನಲಾಗಿದೆ. ಈ ಭೋಜನಕ್ಕೆ ‘ನ್ಯೂಟೈಮೊರಿ ಡಿನ್ನರ್’ ಎಂದು ಹೆಸರಿಡಲಾಗಿದೆ.
ಹಾಗೇ ಯುವತಿಯ ಬೆತ್ತಲೆ ದೇಹದ ಪ್ಲೇಟ್‌ಗೆ ‘ಸುಶಿ ಬೋಟ್’ ಎಂದು ಕರೆಯಲಾಗುತ್ತದೆ. ಈ ಭೋಜನಕ್ಕೆ ಭಾರೀ ಬೇಡಿಕೆ ಇದ್ದು, ಇದನ್ನು ಪಡೆಯಲು ಗ್ರಾಹಕರು ಮೊದಲೇ ಬುಕ್ ಮಾಡಬೇಕು. ನಂತರ ಅವರು ತಿಳಿಸಿದ ದಿನ ಕ್ಲಬ್ ಗೆ ಹೋದರೆ ಸಾಕಂತೆ. ಅಲ್ಲಿ ಮೊದಲು ಟೇಬಲ್ ಮೇಲೆ ಬೆತ್ತಲೆಯಾದ ಯುವತಿ ಬಂದು ಮಲಗುತ್ತಾಳೆ ನಂತರ ಅವಳ ಮೇಮೇಲೆ ವಿವಿಧ ರೀತಿಯ ಸಲಾಡ್, ಫುಡ್ ಅನ್ನು ಇಡಲಾಗುತ್ತದೆ.
ಇದಕ್ಕೆ ಸಂಬಂಧಪಟ್ಟ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿದೆ. ಈ ಪ್ರಕರಣವು ಆನ್‌ಲೈನ್‌ನಲ್ಲಿ ಸಾಕಷ್ಟು ಟೀಕೆಗಳನ್ನು ಹುಟ್ಟುಹಾಕಿದೆ. ಅದರ ನಂತರ ಸ್ಥಳೀಯ ಅಧಿಕಾರಿಗಳು ಈ ಕ್ಲಬ್ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳನ್ನು ಬಂದಿಲ್ಲ, ಆದರೂ ಈ ಬಗ್ಗೆ ತನಿಖೆ ಮಾಡುವುದಾಗಿ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ನಡುರಸ್ತೆಯಲ್ಲಿ ಬಟ್ಟೆ ಕಳಚಿ ಬೆತ್ತಲೆಯಾಗಿ ನಡೆದ ಮಹಿಳೆ; ಪುರುಷರು ಕಕ್ಕಾಬಿಕ್ಕಿ!
ವರದಿ ಪ್ರಕಾರ, ಈ ‘ನ್ಯೂಟೈಮೊರಿ’ ಭೋಜನಾ ವ್ಯವಸ್ಥೆ 1980ರ ದಶಕದಲ್ಲಿ ಜಪಾನ್‌ನಲ್ಲಿ ಹುಟ್ಟಿಕೊಂಡಿತು. ಪುರುಷರ ದೇಹದ ಮೇಲೆ ಆಹಾರವನ್ನು ನೀಡುವುದಕ್ಕೆ ‘ನ್ಯೂಟೈಮೊರಿ’ ಎಂದು ಕರೆಯಲಾಗುತ್ತದೆ. ಈ ಬಗ್ಗೆ ಟೀಕೆಗಳನ್ನು ಕೇಳಿಬಂದರೂ ಕೂಡ ಇದು ಇನ್ನೂ ಅನೇಕ ಸ್ಥಳಗಳಲ್ಲಿ ಆಚರಣೆಯಲ್ಲಿದೆ ಎನ್ನಲಾಗಿದೆ. ಆದರೆ ಅತ್ಯಂತ ದುಬಾರಿಯಾದ್ದರಿಂದ ಸಾರ್ವಜನಿಕ ಆರೋಗ್ಯ ಕಾಳಜಿಗಳು ಮತ್ತು ನೈತಿಕ ಸಮಸ್ಯೆಗಳನ್ನು ಉಲ್ಲೇಖಿಸಿ ಚೀನಾ ಸರ್ಕಾರವು 2005 ರಲ್ಲಿ ‘ನ್ಯೂಟೈಮೊರಿ’ಯನ್ನು ನಿಷೇಧಿಸಿತು ಎನ್ನಲಾಗಿದೆ.