Site icon Vistara News

Viral News: ಸರ್ಕಾರಿ ಕಚೇರಿಯ ಶೌಚಾಲಯದಲ್ಲಿ ಕ್ಲಾಸ್‌ 1 ಅಧಿಕಾರಿಗಳಿಗೆ ಮೀಸಲು! ಫೋಟೊ ನೋಡಿ

Viral News


ನವದೆಹಲಿ: ಕೆಲವೊಂದು ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿರುವವರಿಗೆ ಶೌಚಾಲಯದ ವ್ಯವಸ್ಥೆ ಬೇರೆ ಕಡೆ ಮಾಡಲಾಗುತ್ತದೆ. ಉದ್ಯೋಗಿಗಳು ಬಳಸುವಂತಹ ಶೌಚಾಲಯಗಳನ್ನು ಕೆಲವು ಉನ್ನತ ಹುದ್ದೆಯವರು ಬಳಸುವುದಿಲ್ಲ. ಇದು ಎಲ್ಲ ಖಾಸಗಿ ಸಂಸ್ಥೆಗಳಿರುವ ಕಡೆ ಸರ್ವೇಸಾಮಾನ್ಯ. ಆದರೆ ಭಾರತದ ಪ್ರತಿಷ್ಠಿತ ಸರ್ಕಾರಿ ಕಚೇರಿಯಲ್ಲಿಯೂ ಕೂಡ ಉದ್ಯೋಗಿಗಳ ನಡುವೆ ತಾರತಮ್ಯ ಮಾಡಲಾಗಿದೆ. ಸರ್ಕಾರಿ ಹುದ್ದೆಗಳಲ್ಲಿ ಎಲ್ಲಾ ಉದ್ಯೋಗಿಗಳು ಸಮಾನರೆಂದು ಘೋಷಿಸಲಾಗುತ್ತದೆ. ಆದರೆ ಅಲ್ಲಿ ಕೆಲವು ಶೌಚಾಲಯ ಸ್ಥಳಗಳನ್ನು ಉನ್ನತ ದರ್ಜೆಯ ಅಧಿಕಾರಿಗಳಿಗೆ ಮಾತ್ರ ಕಾಯ್ದಿರಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಪೋಟೊ ವೈರಲ್ (Viral News ) ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈಗ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಮತ್ತು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‍ಗಳಲ್ಲಿ ವೈರಲ್ ಆಗುತ್ತಿರುವ ಈ ಪೋಟೊದಲ್ಲಿ ಶೌಚಾಲಯದಲ್ಲಿ ಎರಡನ್ನು ಕ್ಲಾಸ್ -1 ಅಧಿಕಾರಿಗಳಿಗೆ ಕಾಯ್ದಿರಿಸಿದ್ದನ್ನು ತೋರಿಸುತ್ತದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಇದನ್ನು ತಾರತಮ್ಯಕ್ಕೆ ಉದಾಹರಣೆ ಎಂದು ಹಲವರು ಕರೆದಿದ್ದಾರೆ. ಇದು “ಸಂಪೂರ್ಣ ನಾಚಿಕೆಗೇಡು” ಎಂದು ಈ ಪೋಟೊವನ್ನು ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡ ಮುದಿತ್ ಗುಪ್ತಾ ತಿಳಿಸಿದ್ದಾರೆ ಹಾಗೂ ಅವರು ಈ ಬೇಧಭಾವವನ್ನು ಖಂಡಿಸಲು ಚಿತ್ರವನ್ನು ಎಕ್ಸ್‌ನಲ್ಲಿ ಫಾರ್ವರ್ಡ್ ಮಾಡಿದರು. ಈ ಚಿತ್ರವನ್ನು ಮೂಲತಃ ರೆಡ್ಡಿಟ್ ಪುಟದಲ್ಲಿ ಅಪ್ಲೋಡ್ ಮಾಡಲಾಗಿದೆ. ಅಲ್ಲಿಯೂ ಇದು ಭಾರಿ ಆಕ್ರೋಶಕ್ಕೆ ಒಳಗಾಗಿದೆ ಎಂಬುದಾಗಿ ತಿಳಿದುಬಂದಿದೆ.

ವಿಶೇಷವೆಂದರೆ, ಶೌಚಾಲಯದಲ್ಲಿ ಮಾಡಿದ ಅಂತಹ ವಿಭಜನೆ ಮತ್ತು ಮೀಸಲಾತಿಗಳ ಬಗ್ಗೆ ಹೆಚ್ಚಿನ ಜನರು ಆಘಾತಕ್ಕೊಳಗಾಗಲಿಲ್ಲ. ಇದು ಹೊಸತೇನು ಅಲ್ಲ, ಇದು ಸಾಮಾನ್ಯ ಪ್ರಕರಣವಾಗಿದೆ ಎಂದು ಅನೇಕ ಜನರು ಹೇಳಿದ್ದಾರೆ. ಆದರೆ ಇದು ಬದಲಾಗಬೇಕು ಎಂದು ಹಲವರು ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆಯಾದ ಮೂರೇ ಮೂರು ನಿಮಿಷದೊಳಗೆ ವಿಚ್ಛೇದನ! ಕಾರಣ ವಿಚಿತ್ರ!

ಈ ಶೌಚಾಲಯದ ವಿಚಾರಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿರುತ್ತದೆ. ಶೌಚಾಲಯ ಸ್ವಚ್ಛಗೊಳಿಸಲು ವಿದ್ಯಾರ್ಥಿಗಳನ್ನು ಬಳಸುವುದನ್ನು ನಿಷೇಧಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ ನಂತರವೂ ಕೆಲವು ಸರ್ಕಾರಿ ಶಾಲೆಯಲ್ಲಿ ಶೌಚಾಲಯವನ್ನು ವಿದ್ಯಾರ್ಥಿಗಳು ಸ್ವಚ್ಛಗೊಳಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು, ಈ ಬಗ್ಗೆ ಶಿಕ್ಷಣ ಇಲಾಖೆ ತನಿಖೆ ನಡೆಸುವಂತೆ ಆದೇಶಿಸಿತ್ತು ಎನ್ನಲಾಗಿದೆ.

Exit mobile version