Site icon Vistara News

Viral News: ಐಸ್‌ಕ್ರೀಂನಲ್ಲಿ ಕೈಬೆರಳಾಯ್ತು, ಈಗ ಚಾಕೊಲೇಟ್‍ನಲ್ಲಿ ಸಿಕ್ಕಿದೆ ಹಲ್ಲಿನ ಸೆಟ್‌!

Viral Video


ಇತ್ತೀಚೆಗಷ್ಟೇ ವೈದ್ಯರೊಬ್ಬರು ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ ಐಸ್ ಕ್ರೀಂನಲ್ಲಿ ವ್ಯಕ್ತಿಯ ಕೈಬೆರಳು ಪತ್ತೆಯಾಗಿತ್ತು. ಇದೀಗ ಮಧ್ಯಪ್ರದೇಶದ ಖಾರ್ಗೋನ್‍ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ನಿವೃತ್ತ ಶಾಲಾ ಪ್ರಾಂಶುಪಾಲರು ತಿನ್ನುತ್ತಿದ್ದ ಚಾಕೊಲೇಟ್‍ನಲ್ಲಿ ಕೃತಕ ಹಲ್ಲುಗಳು ಪತ್ತೆಯಾಗಿವೆ! ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್ (Viral News) ಆಗಿದೆ.

ನಿವೃತ್ತ ಶಾಲಾ ಪ್ರಾಂಶುಪಾಲರಾದ ಮಾಯಾದೇವಿ ಗುಪ್ತಾ ಅವರು ತಿನ್ನುತ್ತಿದ್ದ ಚಾಕೊಲೇಟ್‍ನಲ್ಲಿ ನಾಲ್ಕು ಹಲ್ಲುಗಳು ಕಂಡುಬಂದಿದೆ. ಗುಪ್ತಾ ಅವರು ಮಗುವಿನ ಹುಟ್ಟುಹಬ್ಬದ ವಿಶೇಷವಾಗಿ ಈ ಚಾಕೊಲೇಟ್‍ ಅನ್ನು ಸ್ವೀಕರಿಸಿದ್ದರು. ಅದನ್ನು ಅವರು ತಿನ್ನುತ್ತಿದ್ದಾಗ ಗಟ್ಟಿ ವಸ್ತುವೊಂದು ಅವರ ಹಲ್ಲಿಗೆ ಸಿಕ್ಕಿದಂತಾಗಿದೆ. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಗಟ್ಟಿಯಾದ ವಸ್ತುವು ಕೃತಕ ಹಲ್ಲುಗಳು ಎಂದು ಅವರು ಅರಿತುಕೊಂಡರು. “ಅದು ಜನಪ್ರಿಯ ಬ್ರಾಂಡ್‍ನ ಕಾಫಿ ಫ್ಲೇವರ್ ಚಾಕೊಲೇಟ್ ಆಗಿತ್ತು. ಚಾಕೊಲೇಟ್ ತಿಂದ ನಂತರ, ಬಾಯಿಗೆ ಯಾವುದೋ ಕುರುಕಲು ಸಿಕ್ಕಿದ ಹಾಗೆ ಆಯಿತು. ನಾನು ಅದನ್ನು ಮತ್ತೆ ಜಗಿಯಲು ಪ್ರಯತ್ನಿಸಿದಾಗ, ಅದು ತುಂಬಾ ಗಟ್ಟಿಯಾಗಿತ್ತು. ನಾನು ಅದನ್ನು ಹೊರತೆಗೆದು ನೋಡಿದಾಗ, ಅದು ನಾಲ್ಕು ಕೃತಕ ಹಲ್ಲುಗಳಾಗಿದ್ದವು. ಅದನ್ನು ನೋಡಿ ನನಗೆ ಶಾಕ್‌ ಆಗಿದೆ” ಎಂದು ಗುಪ್ತಾ ಹೇಳಿದ್ದಾರೆ.

Viral News

ಎನ್‍ಜಿಒ ಆಯೋಜಿಸಿದ್ದ ಹುಟ್ಟುಹಬ್ಬದ ಪಾರ್ಟಿಯಲ್ಲಿ ವಿದ್ಯಾರ್ಥಿಯೊಬ್ಬರು ಗುಪ್ತಾಗೆ ಈ ಚಾಕೊಲೇಟ್ ನೀಡಿದ್ದರು, ಸರ್ಕಾರೇತರ ಸಂಸ್ಥೆಯಲ್ಲಿ ಸ್ವಯಂಸೇವಕರಾದ ಗುಪ್ತಾ ಅವರು ಅಲ್ಲಿ ನಿಯಮಿತವಾಗಿ ಸಹ ಸ್ವಯಂಸೇವಕರೊಂದಿಗೆ (ವಿಸ್ತಾರ ನ್ಯೂಸ್‌) ಮಾತುಕತೆ ನಡೆಸುತ್ತಿರುತ್ತಾರೆ. ಘಟನೆಯ ನಂತರ, ಅವರು ಈ ವಿಷಯವನ್ನು ಖಾರ್ಗೋನ್‍ನ ಜಿಲ್ಲಾ ಆಹಾರ ಮತ್ತು ಔಷಧ ಇಲಾಖೆಗೆ ವರದಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಧಿಕಾರಿ ಎಚ್.ಎಲ್.ಅವಾಸಿಯಾ ಹೇಳಿದ್ದಾರೆ. ಈ ವಿಷಯವನ್ನು ಪರಿಶೀಲಿಸಲು ತಂಡವನ್ನು ನಿಯೋಜಿಸಲಾಗಿದೆ ಮತ್ತು ಚಾಕೊಲೇಟ್‍ಗಳನ್ನು ಖರೀದಿಸಿದ ಅಂಗಡಿಯಿಂದ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಲು ಸಂಗ್ರಹಿಸಲಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆಯಾದ ಮೂರೇ ಮೂರು ನಿಮಿಷದೊಳಗೆ ವಿಚ್ಛೇದನ! ಕಾರಣ ವಿಚಿತ್ರ!

ಜೂನ್‍ನಲ್ಲಿ ಮುಂಬೈನ ವೈದ್ಯರೊಬ್ಬರು ತಮ್ಮ ಸಹೋದರಿ ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ್ದ ಐಸ್ ಕ್ರೀಮ್ ಕೋನ್‍ನಲ್ಲಿ ಮಾನವ ಬೆರಳನ್ನು ಪತ್ತೆಯಾಗಿತ್ತು. ಬೆರಳನ್ನು ಕಂಡುಹಿಡಿದ ವೈದ್ಯರು ಇನ್ಸ್ಟಾಗ್ರಾಮ್ ಮೂಲಕ ಐಸ್ ಕ್ರೀಮ್ ಕಂಪನಿಗೆ ದೂರು ನೀಡಿ ಪೊಲೀಸ್ ದೂರು ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆ ವಸ್ತು ನಿಜವಾಗಿಯೂ ಮಾನವ ಬೆರಳು ಎಂದು ದೃಢಪಡಿಸಿತು. ಹೆಚ್ಚಿನ ತನಿಖೆಯಲ್ಲಿ ಬೆರಳು ಐಸ್ ಕ್ರೀಮ್ ಕಂಪನಿಯಲ್ಲಿ ಕೆಲಸ ಮಾಡುವ ಸಹಾಯಕ ಆಪರೇಟರ್ ಮ್ಯಾನೇಜರ್ ಗೆ ಸೇರಿದ್ದು ಎಂದು ತಿಳಿದುಬಂದಿತ್ತು.

Exit mobile version