Site icon Vistara News

Viral News: ಬಿಜೆಪಿಗೆ ಮತ ಹಾಕಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ!

Viral News

ಮಧ್ಯಪ್ರದೇಶ: ಮಹಿಳೆಯೊಬ್ಬರು ಬಿಜೆಪಿ ಪಕ್ಷವನ್ನು ಬೆಂಬಲಿಸಿ ವೋಟ್ ಹಾಕಿದ್ದಕ್ಕೆ ಕೋಪಗೊಂಡ ಆಕೆಯ ಪತಿ ಆಕೆಗೆ ತ್ರಿವಳಿ ತಲಾಖ್ ನೀಡಿದ ಘಟನೆ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಮಹಿಳೆ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಸುದ್ದಿ ಎಲ್ಲೆಡೆ ವೈರಲ್‌ (Viral News) ಆಗಿದೆ.

ದೂರಿನಲ್ಲಿ ಮಹಿಳೆ, ತಾನು ಸುಮಾರು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದು, ಸ್ವಲ್ಪ ಸಮಯದ ನಂತರ ಅತ್ತೆ, ಪತಿ ಹಾಗೂ ನಾದಿನಿಯರು ಹಿಂಸೆ ನೀಡಿ ಆಕೆಯನ್ನು ಮನೆಯಿಂದ ಹೊರಹಾಕಿದ್ದಾರೆ. ಒಂದೂವರೆ ವರ್ಷದಿಂದ ಪತಿಯ ಜೊತೆ ಆಕೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳಂತೆ. ಆದರೆ ಮಹಿಳೆ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಅದರ ಪರವಾಗಿ ಮತ ಹಾಕಿದ್ದಕ್ಕೆ ಕೋಪಗೊಂಡ ಪತಿ ಆಕೆಗೆ ತ್ರಿವಳಿ ತಲಾಖ್ ನೀಡಿದ್ದಾನೆ ಎಂಬುದಾಗಿ ತಿಳಿಸಿದ್ದಾಳೆ.

ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಆಕೆಯ ಪತಿ, ಅತ್ತೆ ಹಾಗೂ ನಾದಿನಿಯರ ವಿರುದ್ಧ ವರದಕ್ಷಿಣ ನಿಷೇಧ ಕಾಯಿದೆ, ಮುಸ್ಲಿಂ ಮಹಿಳೆಯರ ಕಾಯ್ದೆ ಮತ್ತು ಭಾರತೀಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹಾಗೇ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಆದರೆ ಮಹಿಳೆಯ ಪತಿ ಆರೋಪವನ್ನು ತಳ್ಳಿ ಹಾಕಿದ್ದು, ಆಕೆಗೆ ಅಕ್ರಮ ಸಂಬಂಧವಿದೆ. ಅದನ್ನು ಮರೆಮಾಚಲು ಇಂತಹ ಆರೋಪ ಮಾಡುತ್ತಿದ್ದಾಳೆ ಎಂದು ಆರೋಪಿಸಿದ್ದಾನೆ. ತಮ್ಮ ಮಗುವಿನ ಭವಿಷ್ಯಕ್ಕಾಗಿ ಆಕೆಗೆ ಹಲವಾರು ಅವಕಾಶಗಳನ್ನು ನೀಡಿದ್ದರೂ ಕೂಡ ಆಕೆ ಸರಿಹೋಗದ ಕಾರಣ ಆಕೆಗೆ ಮುಸ್ಲಿಂ ಕಾನೂನಿಗೆ ಅನುಸಾರವಾಗಿ ತಲಾಖ್ ನೀಡಿರುವುದಾಗಿ ತಿಳಿಸಿದ್ದಾನೆ. ಹಾಗೇ ಪತ್ನಿ ತನಗೆ ಬೆದರಿಕೆ ಹಾಕುತ್ತಿದ್ದಾಳೆ, ತನ್ನ ಮರ್ಯಾದೆಗೆ ಧಕ್ಕೆ ತರುತ್ತಿದ್ದಾಳೆ, ತನ್ನ ಮನೆಯವರ ಜೀವನ ಹಾಳುಮಾಡುತ್ತಿದ್ದಾಳೆ. ತನ್ನ ಅಕ್ರಮ ಸಂಬಂಧವನ್ನು ಮರೆಮಾಚಲು ಇಂತಹ ಆರೋಪ ಮಾಡುತ್ತಿದ್ದಾಳೆ . ಪ್ರತ್ಯೇಕವಾಗಿ ವಾಸವಾಗಿರುವುದರಿಂದ ಆಕೆಗೆ ಯಾರು ಕಿರುಕುಳ ನೀಡಿಲ್ಲ. ತನ್ನ ಸಹೋದರಿ ಬೇರೆ ಪಟ್ಟಣದಲ್ಲಿ ನೆಲೆಸಿದ್ದಾಳೆ. ಆಕೆಯ ಹೆಸರನ್ನು ತಪ್ಪಾಗಿ ಪ್ರಕರಣದಲ್ಲಿ ಸೇರಿಸಿದ್ದಾಳೆ. ಪ್ರತಿಯೊಬ್ಬರಿಗೂ ಅವರಿಗೆ ಇಷ್ಟವಾದ ರಾಜಕೀಯ ಪಕ್ಷವನ್ನು ಬೆಂಬಲಿಸುವ ಸ್ವತಂತ್ರವಿದೆ. ಎಂದು ಆಕೆಯ ಪತಿ ಪ್ರತ್ಯಾರೋಪ ಮಾಡಿದ್ದಾನೆ.

ಇದನ್ನೂ ಓದಿ: ಪ್ರೇಯಸಿ ಹೆಜ್ಜೆ ಇರಿಸಲು ಕಂತೆಕಂತೆ ನೋಟಿನ ಮೆಟ್ಟಿಲು! ಪ್ರಿಯತಮನ ಹುಚ್ಚು ಪ್ರೀತಿ ನೋಡಿ!

ಈ ಹಿಂದೆ ಉತ್ತರ ಪ್ರದೇಶದ ಬುದೌನ್ ನಲ್ಲಿ ಬಿಜೆಪಿಗೆ ಮತ ಹಾಕಿದ್ದಕ್ಕೆ ಕ್ಷೌರಿಕನೊಬ್ಬ 12 ವರ್ಷದ ಮಾನಸಿಕ ಅಸ್ವಸ್ಥ ಬಾಲಕನ ತಲೆಯನ್ನು ಬೋಳಿಸಿದ ಘಟನೆ ನಡೆದಿತ್ತು. ಲೋಕಸಭಾ ಚುನಾವಣೆಯ ಸಮಯದಲ್ಲಿ ಬಾಲಕನ ಕುಟುಂಬವು ಬಿಜೆಪಿಗೆ ಬೆಂಬಲ ನೀಡಿದೆ. ಇದರಿಂದ ಕ್ಷೌರಿಕ ಮತ್ತು ಆ ಪ್ರದೇಶದ ಇತರ ಕೆಲವರು ಅಸಮಾಧಾನಗೊಂಡಿದ್ದರು. ಆಗ ಅವರು ಮನೆಯ ಬಳಿ ಆಟವಾಡುತ್ತಿದ್ದ ಬಾಲಕನನ್ನು ಬಲವಂತವಾಗಿ ಕರೆದೊಯ್ದು ತಲೆ ಬೋಳಿಸಿದ್ದಾರೆ. ಈ ಬಗ್ಗೆ ಬಾಲಕನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿ ಕ್ಷೌರಿಕನನ್ನು ಬಂಧಿಸಿದ್ದರು.

Exit mobile version