Site icon Vistara News

Viral News: 5 ಲಕ್ಷ ರೂ. ಮೌಲ್ಯದ ವಜ್ರದ ಹಾರ ಕಸದ ರಾಶಿ ಸೇರಿದರೂ ವಾಪಸ್‌ ಸಿಕ್ಕಿತು!

Viral News


ಚೆನ್ನೈ: ನಾವು ಕೆಲವೊಮ್ಮೆ ಮುಖ್ಯವಾದ ಯಾವುದೋ ವಸ್ತುವನ್ನು ಕಳೆದುಕೊಂಡ ನಂತರ ಅದನ್ನು ಹುಡುಕಾಡುತ್ತೇವೆ. ಆಗ ನಾವು ಹೆಚ್ಚಾಗಿ ಎಲ್ಲೋ ಎಸೆದಿರಬಹುದು ಅಥವಾ ತಪ್ಪಾಗಿ ಕಸದ ಬುಟ್ಟಿಗೆ ಎಸೆದಿರಬಹುದು ಎಂದು ಭಾವಿಸುತ್ತೇವೆ. ಹಾಗಾಗಿ ನಾವು ಅಸಹ್ಯವಾದರೂ ಕೂಡ ಕಸದ ಬುಟ್ಟಿಯನ್ನು ಅಗೆಯುತ್ತೇವೆ. ಎಲ್ಲೆಂದರಲ್ಲಿ ಹುಡುಕಾಡುತ್ತೇವೆ. ಆದರೆ ಅದು ಸಿಗದಿದ್ದರೆ ಹೋಗಲಿ ಬಿಡಿ ಎಂದು ಸುಮ್ಮನಾಗುತ್ತೇವೆ. ಆದರೆ ಅದೇ ದುಬಾರಿ ವಸ್ತುಗಳನ್ನು ನೀವು ಕಸಕ್ಕೆ ಎಸೆದಿದ್ದರೆ ಆಗ ನಿಮಗಾಗುವ ಆತಂಕವನ್ನು ಕಲ್ಪಿಸಿಕೊಂಡರೆ ಮೈ ಜುಮ್ಮೆನಿಸುವುದು ಖಂಡಿತ. ಅಂತಹದೊಂದು ಅನುಭವ ಚೆನ್ನೈನ ವ್ಯಕ್ತಿಯೊಬ್ಬರಿಗೆ ಆಗಿದೆ.ಈ ಸುದ್ದಿ ಎಲ್ಲೆಡೆ ವೈರಲ್‌ (Viral News) ಆಗಿದೆ.

ಚೆನ್ನೈ ಮೂಲದ ದೇವರಾಜ್ ಎಂಬುವವರು ಆಕಸ್ಮಿಕವಾಗಿ 5 ಲಕ್ಷ ರೂಪಾಯಿ ಮೌಲ್ಯದ ವಜ್ರದ ಹಾರವನ್ನು ಪುರಸಭೆಯವರಿಗೆ ನೀಡುವ ಕಸದ ಬುಟ್ಟಿಗೆ ಎಸೆದಿದ್ದಾರೆ. ಈ ಹಾರವು ಸಾಕಷ್ಟು ಮೌಲ್ಯಯುತವಾಗಿತ್ತು ಮಾತ್ರವಲ್ಲ, ಮುಂಬರುವ ತನ್ನ ಮಗಳ ಮದುವೆಗೆ ಅವರ ತಾಯಿ ನೀಡಿದ ಪ್ರೀತಿಯ ಉಡುಗೊರೆಯಾಗಿದೆ. ಕೊನೆಗೆ ತನ್ನ ತಪ್ಪನ್ನು ಅರಿತುಕೊಂಡ ಕೂಡಲೇ ದೇವರಾಜ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಸದ ಗಾಡಿಯಲ್ಲಿ ಹುಡುಕಾಡಲು ತಿಳಿಸಿದ್ದಾರೆ. ಅದರಂತೆ ಚೆನ್ನೈ ಕಾರ್ಪೊರೇಷನ್ ಗುತ್ತಿಗೆ ಪಡೆದ ತ್ಯಾಜ್ಯ ನಿರ್ವಹಣಾ ಕಂಪನಿಯ ನೇತೃತ್ವದಲ್ಲಿ ಹುಡುಕಾಟ ನಡೆಸಲಾಗಿದೆ. ನಂತರ ತುಂಬಾ ಹೊತ್ತು ಹುಡುಕಾಡಿದ ನಂತರ, ಹಾರವು ಅಂತಿಮವಾಗಿ ಕಸದ ತೊಟ್ಟಿಯೊಳಗೆ ಸಿಲುಕಿಕೊಂಡಿರುವುದು ಕಂಡುಬಂದಿದೆ. ನಂತರ ಅದನ್ನು ತೆಗೆದುಕೊಂಡು ಸುರಕ್ಷಿತವಾಗಿ ಅದರ ಮಾಲೀಕರಿಗೆ ಹಿಂದಿರುಗಿಸಲಾಯಿತು.

ಇದನ್ನೂ ಓದಿ: ಎರಡು ಮುಖ, ನಾಲ್ಕು ತೋಳು, ನಾಲ್ಕು ಕಾಲುಗಳ ಮಗು ಜನನ!

ಬೆಲೆಬಾಳುವ ಹಾರವನ್ನು ಮರಳಿಸಲು ಕಠಿಣ ಕಾರ್ಯದಲ್ಲಿ ತೊಡಗಿದ ಕಸದ ಮೇಲ್ವಿಚಾರಕರು ಹಾಗೂ ಕಸ ಸಂಗ್ರಹ ಸಿಬ್ಬಂದಿಗಳಿಗೆ ದೇವರಾಜ್ ಕೃತಜ್ಞತೆ ಸಲ್ಲಿಸಿದ್ದಾರೆ. ದೇವರಾಜ್ ಅವರ ಈ ಕಥೆ ಬಹಳ ಅಪರೂಪವೆಂದು ತೋರುತ್ತದೆಯಾದರೂ, ಅವರು ಮಾತ್ರ ಆ ಹಾರದ ವಿಚಾರದಲ್ಲಿ ಅದೃಷ್ಟವನ್ನು ಹೊಂದಿದ್ದರು ಎನ್ನಲಾಗಿದೆ.
ಕಳೆದ ತಿಂಗಳು ನಡೆದ ಮತ್ತೊಂದು ಘಟನೆಯಲ್ಲಿ, ಬಂಡೆಯನ್ನು ಕೊರೆಯುತ್ತಿದ್ದ ವ್ಯಕ್ತಿಯೊಬ್ಬರು ಅದರೊಳಗೆ ಹಲವಾರು ಚಿನ್ನದ ನಾಣ್ಯಗಳನ್ನು ಕಂಡುಕೊಂಡರು. ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗದಿದ್ದರೂ, ಅದು ಸಖತ್ ವೈರಲ್ ಆಗಿತ್ತು.

Exit mobile version