ನವದೆಹಲಿ : ಸಣ್ಣ ವಿಚಾರಕ್ಕೆ ಆಗಾಗ ಜಗಳಗಳು ನಡೆಯುವುದು ಸಹಜ. ಆದರೆ ಹಿಂದಿನ ಕಾಲದಲ್ಲಿ ಜನರು ಅನುಸರಿಸಿಕೊಂಡು ಹೋಗುತ್ತಿದ್ದರು. ಆದರೆ ಇಂದಿನ ಕಾಲದ ಯುವಕರು ಸಣ್ಣ ಜಗಳವನ್ನು ದೊಡ್ಡದು ಮಾಡಿ ಕೊಲೆ, ಹಲ್ಲೆ ಮಾಡಲು ಮುಂದಾಗುತ್ತಾರೆ. ಅಂತಹದೊಂದು ಘಟನೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ (Viral News) ಆಗಿದೆ.
ಟ್ವಿಟರ್ ಬಳಕೆದಾರ ಲಾವೆಲಿ ಬಕ್ಷಿ ಎಂಬುವವರು ಹಂಚಿಕೊಂಡಿರುವ ವಿಡಿಯೊದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಸ್ಕೂಟರ್ ಸವಾರನ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ಆತ ಚಾಕುವಿನಿಂದ ಬೆದರಿಕೆ ಒಡ್ಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊದಲ್ಲಿ, ಅಪ್ರಾಪ್ತ ವಯಸ್ಕನು ಸ್ಕೂಟರ್ ಸವಾರನೊಂದಿಗೆ ಕೋಪದಲ್ಲಿ ಗಲಾಟೆ ಮಾಡುತ್ತಿರುವುದು ಹಾಗೂ ಅವನ ಮೇಲೆ ಹಲ್ಲೆ ಮಾಡಲು ಚಾಕುವನ್ನು ತೋರಿಸುತ್ತಿರುವುದನ್ನು ಕಾಣಬಹುದು. ಹುಡುಗ ಬೈಕ್ ಸವಾರನ ಕಡೆಗೆ ಬಂದು ಜಗಳ ಶುರು ಮಾಡಿದ್ದಾನೆ. ಅಲ್ಲಿ ಇದ್ದಕ್ಕಿದ್ದಂತೆ ಪರಿಸ್ಥಿತಿ ಹೆಚ್ಚು ಉದ್ವಿಗ್ನವಾಯಿತು. ಆದರೆ, ಸಮಯಕ್ಕೆ ಸರಿಯಾಗಿ ಅಲ್ಲಿದ್ದ ಜನರು ಮಧ್ಯಪ್ರವೇಶಿಸಿ ಯಾವುದೇ ಹಿಂಸಾಚಾರ ಘಟನೆ ನಡೆಯದಂತೆ ತಡೆದಿದ್ದಾರೆ ಎನ್ನಲಾಗಿದೆ.
देखिए एक नाबालिक लड़का एक स्कूटी सवार को कुछ बोलता हुआ,चाकु निकाल कर मारने की कोशिश करता है
— Lavely Bakshi (@lavelybakshi) July 23, 2024
तभी साथ मे एक खड़ा व्यक्ती उसको मारने से रोकता है,वायरल वीडियो सुभाष नगर पैसिफ़िक मॉल के पास की बताई जा रही है@DelhiPolice आसपास के इलाकों मे नाबालिक गैंग एक्टिव हैं pic.twitter.com/C9WZ77lZGc
ದಾರಿಹೋಕನ ಜೊತೆ ಗಲಾಟೆಗೆ ಇಳಿಯುವುದು ಎಂತಹ ಅಪಾಯಕಾರಿ ಎಂಬುದನ್ನು ಈ ವಿಡಿಯೊ ತೋರಿಸುತ್ತದೆ. ಹಾಗೇ ಆ ಸಮಯದಲ್ಲಿ ಅಲ್ಲಿದ್ದ ಜನರು ಭಯಗೊಳ್ಳದೆ ಮಧ್ಯ ಪ್ರವೇಶಿಸಿ ಗಲಾಟೆಯನ್ನು ತಡೆದಿದ್ದು, ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಘಟನೆ ಸಾರ್ವಜನಿಕರ ಸುರಕ್ಷತೆ ಮತ್ತು ನಾಗರಿಕ ಜಾಗರೂಕತೆಯ ಬಗ್ಗೆ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: 7 ಬಜೆಟ್‍ಗಳಲ್ಲಿ 7 ಬಣ್ಣದ ಸೀರೆ ಧರಿಸಿ ಮಿಂಚಿದ ನಿರ್ಮಲಾ ಸೀತಾರಾಮನ್!
ಆದರೆ ಈ ವಿಡಿಯೊಗೆ ಸಂಬಂಧಿಸಿದಂತೆ ಸಾರ್ವಜನಿಕ ಸುರಕ್ಷತೆ ಮತ್ತು ನಾಗರಿಕ ಜಾಗರೂಕತೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಆದರೆ ಯಾವುದೇ ಹಾನಿಯಾಗದೆ ಗಲಾಟೆ ಕೊನೆಗೊಂಡಿದೆ ಎಂದು ವೀಕ್ಷಕರು ನಿರಾಳರಾಗಿದ್ದಾರೆ, ಈ ಘಟನೆಯು ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ ಮತ್ತು ಯುವ ಹಿಂಸಾಚಾರವನ್ನು ಪರಿಹರಿಸಲು ಮತ್ತು ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳುವಂತೆ ಕರೆ ನೀಡಲಾಗಿದೆ.