ಮುಂಬೈ: ಮುಸ್ಲಿಂ ಸಮುದಾಯದವರು ತಮ್ಮ ನಮಾಜ್‌ನ ಸಮಯವಾದಾಗ ನಮಾಜ್ ಮಾಡಲು ಶುರು ಮಾಡುತ್ತಾರೆ. ಅವರಿಗೆ ಆ ಸಮಯದಲ್ಲಿ ನಮಾಜ್ ಮಾಡುವುದೊಂದೆ ಮುಖ್ಯವಾಗಿರುತ್ತದೆ. ಹಾಗಾಗಿ ರೈಲಿನಲ್ಲಿ ನಮಾಜ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಪ್ರಯಾಣಿಕರಿಗೆ ನಡೆದಾಡಲು ಅಡ್ಡಿಯುಂಟಾದ ಕಾರಣ ಮುಸ್ಲಿಂ ಪ್ರಯಾಣಿಕರನ್ನು ಟಿಟಿಇ ತರಾಟೆ ತೆಗೆದುಕೊಂಡ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು ಇದು ಸಖತ್ ವೈರಲ್ (Viral News) ಆಗಿದೆ.
ಹಂಚಿಕೊಳ್ಳಲಾದ ಈ ವಿಡಿಯೊದಲ್ಲಿ, ರೈಲ್ವೆ ಟಿಟಿಇ ಬೋಗಿಯಲ್ಲಿ ನಡೆದಾಡುವ ಸ್ಥಳದಲ್ಲಿ ನಮಾಜ್ ಮಾಡಲು ಮುಂದಾದ ಮುಸ್ಲಿಂ ಪ್ರಯಾಣಿಕರನ್ನು ಬೈಯುತ್ತಿರುವುದನ್ನು ಗಮನಿಸಬಹುದು. ರೈಲಿನಲ್ಲಿದ್ದ ಮುಸ್ಲಿಂ ಸಮುದಾಯದವರು ಬೋಗಿಯ ಮಧ್ಯದಲ್ಲಿ ನಡೆದಾಡುವ ಸ್ಥಳದಲ್ಲಿ ನಮಾಜ್ ಮಾಡಲು ತಯಾರಿ ನಡೆಸುತ್ತಿದ್ದಾರೆ. ಅದಕ್ಕಾಗಿ ಕುಳಿತುಕೊಳ್ಳಲು ಅವರು ದಾರಿಯಲ್ಲಿ ಪ್ಲಾಸ್ಟಿಕ್ ಅನ್ನು ಹಾಸುತ್ತಿದ್ದರು. ಈ ಸಮಯದಲ್ಲಿ ಅಲ್ಲಿಗೆ ಬಂದ ಟಿಟಿಇ ಕೋಪಗೊಂಡು ಅವರಿಗೆ ತಮ್ಮ ಕುಳಿತುಕೊಳ್ಳುವ ಸೀಟಿನಲ್ಲಿ ನಮಾಜ್ ಮಾಡುವಂತೆ ಮತ್ತು ದಾರಿಯಿಂದ ಎದ್ದೇಳುವಂತೆ ತಿಳಿಸಿದ್ದಾರೆ. ಇದು ವಿಡಿಯೊದಲ್ಲಿ ಕಂಡು ಬಂದಿದೆ.
A brave railway TT prevented passengers from offering Namaz on the train.
— Amit Mishra 🇮🇳 (@RealAmitMishr) August 13, 2024
👏👏👏pic.twitter.com/1GHqNINdra
“ಈ ರೈಲಿನಲ್ಲಿ ತಮಾಷೆಯಾಗಿ ವರ್ತಿಸಬೇಡಿ. ಈ ಮಾರ್ಗ ಇರುವುದು ನಡೆದಾಡಲು. ನಿಮಗೆ ನಮಾಜ್ ಮಾಡಲು ಅಲ್ಲ. ಇದರಲ್ಲಿ ನಮಾಜ್ ಮಾಡುವ ನಿಮ್ಮ ಮನಸ್ಥಿತಿಗೆ ಏನಾಗಿದೆ? ನಿಮ್ಮ ಈ ಆಲೋಚನೆಯನ್ನು ಬಿಟ್ಟುಬಿಡಿ. ನನ್ನ ರೈಲಿನಲ್ಲಿ ಇದು ಸಂಭವಿಸಲು ನಾನು ಅನುಮತಿಸುವುದಿಲ್ಲʼʼ ಎಂದು ಹೇಳಿದ್ದಾರೆ. ಅಲ್ಲದೇ ತಮ್ಮ ಕಾರ್ಯಗಳಿಂದಾಗಿ ಇತರ ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಮುಸ್ಲಿಂ ಪ್ರಯಾಣಿಕರಿಗೆ ತಿಳಿಸಿದ್ದಾರೆ. ಪ್ರಯಾಣಿಸುವ ರೈಲುಗಳಲ್ಲಿ ನಮಾಜ್ ಮಾಡಲು ಅನುಮತಿ ಇಲ್ಲ. ಒಂದು ವೇಳೆ ಪ್ರಯಾಣಿಕರು ಅವರು ಹೇಳುವುದನ್ನು ಅನುಸರಿಸದಿದ್ದರೆ, ರೈಲ್ವೆ ಪೊಲೀಸರಿಗೆ ಕರೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಹಸ್ತಮೈಥುನ ಮಾಡಿಕೊಳ್ಳಲು 6 ವರ್ಷದ ಬಾಲಕಿ ಮೇಲೆ ದೌರ್ಜನ್ಯ; ಆಕೆ ತಪ್ಪಿಸಿಕೊಂಡಾಗ ಮೇಕೆ ಮೇಲೆ ಅತ್ಯಾಚಾರ!
ಹಾಗಾಗಿ ಮುಸ್ಲಿಂ ಪ್ರಯಾಣಿಕರು ತಮ್ಮ ಸೀಟಿನ ಬಳಿ ಹೋಗಿರುವುದು ವಿಡಿಯೊದ ಕೊನೆಯಲ್ಲಿ ಕಂಡು ಬಂದಿದೆ. ಕೆಲವರು ಟಿಟಿಇ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಎಲ್ಲರಿಗೂ ಕಾನೂನು ಒಂದೇ ಎಂದು ಇನ್ನು ಹಲವರು ತಿಳಿಸಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರೂ, ರೆಕಾರ್ಡ್ ಮಾಡಿದ ದಿನಾಂಕ ಮತ್ತು ರೈಲಿನ ನಿಖರವಾದ ವಿವರಗಳು ಸ್ಪಷ್ಟವಾಗಿಲ್ಲ. ಹಾಗಾಗಿ ಹಲವರು ಈ ವಿಡಿಯೊದ ಸತ್ಯಾತೆಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.