Site icon Vistara News

Viral News: ನಿವೃತ್ತಿಯಾದ ಪೊಲೀಸ್‌ ನಾಯಿಗೆ ಬೀಳ್ಕೊಟ್ಟಿದ್ದು ಹೇಗೆ? ವಿಡಿಯೊ ನೋಡಿ!

viral News

ಪೊಲೀಸ್ ವೃತ್ತಿಯನ್ನು ಬರೀ ಪೊಲೀಸರು ಮಾತ್ರ ನಿರ್ವಹಿಸುವುದಿಲ್ಲ ಜೊತೆಗೆ ಪೊಲೀಸ್ ನಾಯಿಗಳೆಂದು ಕರೆಯವ ವೆಲ್ ಟ್ರೈನರ್ ಶ್ವಾನಗಳೂ ಡ್ಯೂಟಿ ಮಾಡುತ್ತವೆ. ಅವುಗಳು ಕಳ್ಳರು, ಕೊಲೆಗಾರರನ್ನು ಹಿಡಿಯುವ ಕೆಲಸದಲ್ಲಿ ಮತ್ತು ಕೊಲೆಗೆ ಬಳಸುವ ವಸ್ತುಗಳನ್ನು ಕಂಡುಹಿಡಿಯುವ ಕೆಲಸದಲ್ಲಿ ಪೊಲೀಸರಿಗೆ ಸಹಾಯ ಮಾಡುತ್ತವೆ. ಎಷ್ಟೋ ಪ್ರಕರಣದ ಆರೋಪಿಗಳನ್ನು ಈ ನಾಯಿಗಳೇ ಹಿಡಿದಿವೆ. ಹಾಗಾಗಿ ಇದೀಗ ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸೇವೆ ಸಲ್ಲಿಸಿದ ಸ್ನಿಫರ್ ಡಾಗ್ ವೊಂದು ನಿವೃತ್ತಿ ಹೊಂದಿದೆ ಎಂಬುದಾಗಿ ತಿಳಿದುಬಂದಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಸುದ್ದಿ ವೈರಲ್‌ (Viral News) ಆಗಿದೆ.

ತೆಲಂಗಾಣ ಆದಿಲಾಬಾದ್ ನಲ್ಲಿರುವ ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿಯಲ್ಲಿ 11 ವರ್ಷಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಜೂನ್ 18ರಂದು ನಿವೃತ್ತಿ ಹೊಂದಿದ ಪೊಲೀಸ್ ಸ್ನಿಫರ್ ಡಾಗ್ ಜಗಿಲಂ ತಾರಾಗೆ ಮಾಲಾರ್ಪಣೆ ಮಾಡಿ ಗೌರವಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಅನೇಕರು ತಾರಾನನ್ನು ಹೊಗಳಿದ್ದಾರೆ.

ಈ ವಿಡಿಯೊದಲ್ಲಿ ಡಾಗ್ ತಾರಾನನ್ನು ಹೂಮಾಲೆಗಳಿಂದ ಅಲಂಕರಿಸಲಾಗಿದೆ. ಮತ್ತು ಅಲ್ಲಿ ನೆರೆದಿದ್ದ ಪೊಲೀಸ್ ಅಧಿಕಾರಿಗಳು ಸಂತಸದಿಂದ ಚಪ್ಪಾಳೆ ತಟ್ಟುತ್ತಾ ತಾರಾಗೆ ಶಾಲು ಹೊದಿಸಿ ಸನ್ಮಾನ ಮಾಡುತ್ತಿರುವುದು ಕಂಡುಬಂದಿದೆ. ಈ ಸಮಾರಂಭದಲ್ಲಿ ಆದಿಲಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಗೌಶ್ ಆಲಂ ಅವರು ತಾರಾ ಅವರ ಅಚಲ ನಿಷ್ಠೆ ಮತ್ತು ಕೊಡುಗೆಗಳನ್ನು ಹೊಗಳಿದ್ದಾರೆ.

ತಾರಾ ಲ್ಯಾಬ್ರಡಾರ್ ರಿಟ್ರೈವರ್, ಸ್ಫೋಟಕಗಳನ್ನು ಪತ್ತೆಹಚ್ಚುವಲ್ಲಿ ತನ್ನ ನಿಷ್ಠೆ ಮತ್ತು ಪ್ರಾವೀಣ್ಯತೆಗಾಗಿ ಹೆಚ್ಚು ಹೆಸರುವಾಸಿಯಾಗಿದೆ. ತಾರಾ ಒಂದು ದಶಕಕ್ಕೂ ಹೆಚ್ಚು ಕಾಲ ಆದಿಲಾಬಾದ್ ನ ಶ್ವಾನದಳದಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿಸಿ ತಂಡದ ವಿಶ್ವಾಸಾರ್ಹ ಮತ್ತು ಪ್ರೀತಿಯ ಸದಸ್ಯೆ ಆಗಿದೆ.

ಇದನ್ನೂ ಓದಿ:ಮತ್ತೊಂದು ರೀಲ್‌ ಕ್ರೇಜ್‌; ಚಲಿಸುವ ರೈಲಿನಲ್ಲಿ ಯುವತಿಯ ಡೇಂಜರಸ್‌ ಡ್ಯಾನ್ಸ್‌!

ಜನವರಿ 22, 2013ರಂದು ಜನಿಸಿದ ತಾರಾ ತೆಲಂಗಾಣದ ಮೊಯಿನಾಬಾದ್ ನಲ್ಲಿರುವ ಇಂಟಿಗ್ರೇಟೆಡ್ ಇಂಟೆಲಿಜೆನ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಸ್ಪೋಟಕ ಪತ್ತೆ ತಜ್ಞರಾಗಿ ತರಬೇತಿ ಪಡೆದಿದೆ. ತಾರಾ ನಿವೃತ್ತಿಯು ಆದಿಲಾಬಾದ್ ಪೊಲೀಸ್ ಪಡೆಗೆ ಬೇಸರ ಮೂಡಿಸಿದೆ. ಇನ್ನು ತಮ್ಮ ಪ್ರೀತಿಯ ಒಡನಾಡಿಗೆ ಎಲ್ಲರೂ ವಿದಾಯ ಹೇಳಿದ್ದಾರೆ.

Exit mobile version