Site icon Vistara News

Viral News: ಚಹಾ ಮಾರಾಟದಿಂದ ಇವರಿಗೆ ಪ್ರತಿ ತಿಂಗಳು 2 ಲಕ್ಷ ರೂ. ಆದಾಯ!

Viral News


ಚಹಾ ಹೆಚ್ಚಿನವರಿಗೆ ಪ್ರಿಯವಾದ ಪಾನೀಯವಾಗಿದೆ. ಹೆಚ್ಚಿನ ಜನರು ತಮ್ಮ ದಿನವನ್ನು ಚಹಾ ಕುಡಿಯುವ ಮೂಲಕ ಪ್ರಾರಂಭಿಸುತ್ತಾರೆ. ಕೆಲವರು ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಚಹಾ ಕುಡಿದರೆ ಇಡೀ ದಿನ ಲವಲವಿಕೆಯಿಂದ ಕೆಲಸ ಮಾಡುತ್ತಾರೆ. ಇದೇ ಚಹಾವನ್ನು ಬಂಡವಾಳವಾಗಿಟ್ಟುಕೊಂಡು ಮಹಾರಾಷ್ಟ್ರದಲ್ಲಿ ಒಬ್ಬ ಚಹಾ ಮಾರಾಟಗಾರರೊಬ್ಬರು ತಿಂಗಳಿಗೆ ಲಕ್ಷಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ. ಒಂದು ಕಪ್ ಚಹಾಕ್ಕೆ 5-10 ರೂ. ಪಡೆದು ಅದು ಹೇಗೆ ಆತ ಲಕ್ಷಾಗಟ್ಟಲೆ ಸಂಪಾದಿಸುತ್ತಾನೆ ಎಂದು ನಿಮಗೆ ಕೇಳಿ ಆಶ್ಚರ್ಯವಾಗಬಹುದು. ಅದರ ಬಗ್ಗೆ ಮಾಹಿತಿ ಈಗ ವೈರಲ್‌ (Viral News) ಆಗಿದೆ.

ಚಹಾ ಎಂದರೆ ಬಹಳ ಇಷ್ಟಪಡುವಂತಹ ಸ್ಥಳವಾದ ಮಹಾರಾಷ್ಟ್ರದ ಧಾರಾಶಿವ್‌ನ ಸ್ಥಳೀಯ ಚಹಾ ಮಾರಾಟಗಾರರೊಬ್ಬರು ತಮ್ಮ ವಿಶಿಷ್ಟ ವ್ಯವಹಾರದಿಂದಾಗಿ ಹೆಚ್ಚು ಗಮನ ಸೆಳೆದಿದ್ದಾರೆ. ತೇರ್ ಗ್ರಾಮದ ನಿವಾಸಿ ಮಹಾದೇವ್ ನಾನಾ ಮಾಲಿ ಅವರು ಚಹಾ ಮಾರಾಟಕ್ಕೆ ವಿಶಿಷ್ಟ ವಿಧಾನವನ್ನು ಬಳಸಿಕೊಂಡಿದ್ದಾರೆ. ಅದು ಹೆಚ್ಚು ಲಾಭದಾಯಕವೆಂದು ಸಾಬೀತುಪಡಿಸಿದ್ದಾರೆ. ಕೇವಲ ಮೂರನೇ ಕ್ಲಾಸ್‍ವರೆಗೆ ಓದಿದ್ದ ಮಹಾದೇವ್ ಮಾಲಿ ಕಳೆದ 20 ವರ್ಷಗಳಿಂದ ಚಹಾ ಮಾರಾಟ ಮಾಡುತ್ತಿದ್ದಾರೆ. ಫೋನ್ ಮೂಲಕ ಆರ್ಡರ್‌ಗಳನ್ನು ತೆಗೆದುಕೊಳ್ಳುವ ಹೊಸ ವಿಧಾನದ ಮೂಲಕ ಅವರ ಈ ಚಹಾ ಮಾರಾಟ ವ್ಯವಹಾರವು ತುಂಬಾ ಲಾಭದಾಯಕವಾಗಿ ನಡೆಯುತ್ತಿದೆ. ಬಿಸಿಲು ಮಳೆ ಎನ್ನದೇ ಮಾಲಿ ತಮಗೆ ಬಂದ ಆರ್ಡರ್ ಗಳನ್ನು ಸ್ವೀಕರಿಸಿ ಸಮಯಕ್ಕೆ ಸರಿಯಾಗಿ ಚಹಾವನ್ನು ತಲುಪಿಸುತ್ತಾರೆ.

ಈ ಪ್ರದೇಶದ ಸುಮಾರು 15,000 ಗ್ರಾಮಸ್ಥರ ಚಹಾ ಬೇಡಿಕೆಯನ್ನು ಪೂರೈಸಲು, ಮಾಲಿಗೆ ಪ್ರತಿದಿನ 50ರಿಂದ 60 ಲೀಟರ್ ಹಾಲು ಬೇಕಾಗುತ್ತದೆ. ಅವರು ತಮ್ಮ ಪತ್ನಿ ಮತ್ತು ಇಬ್ಬರು ಪುತ್ರರ ಸಹಾಯದಿಂದ ಈ ಕೆಲಸ ಮಾಡುತ್ತಿದ್ದಾರೆ ಮತ್ತು 2ರಿಂದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಟೆರ್ ಮತ್ತು ನೆರೆಯ ಹಳ್ಳಿಗಳಿಗೆ ಸೇವೆ ಸಲ್ಲಿಸುತ್ತಾರೆ. ಪ್ರತಿ ಕಪ್ ಚಹಾದ ಬೆಲೆ ಕೇವಲ 5 ರೂ. ಮಾತ್ರ.

ಇದನ್ನೂ ಓದಿ: ʼಮೇಡಂ ನನಗೆ ಪಿರಿಯಡ್ಸ್‌ʼ ಎಂದರೂ ಬಿಡದೆ ವಿದ್ಯಾರ್ಥಿನಿಯನ್ನು ನಗ್ನಗೊಳಿಸಿದ ಶಿಕ್ಷಕಿ!

ಮಾಲಿಯು ಈ ವ್ಯವಹಾರದಲ್ಲಿ ಪ್ರತಿದಿನ 1,500ರಿಂದ 2,000 ಕಪ್ ಚಹಾದವರೆಗೆ ಮಾರಾಟ ಮಾಡುತ್ತಾರೆ. ಇದರಿಂದ ಅವರ ದಿನದ ಗಳಿಕೆ ಸುಮಾರು 7,000ರಿಂದ 10,000 ರೂ. ಆಗಿದೆ. ಈ ಆದಾಯದಿಂದ ಮಾಲಿ ಮತ್ತು ಅವರ ಕುಟುಂಬ ಹಣಕಾಸಿನ ಸಮಸ್ಯೆಯಿಲ್ಲದೇ ಸುಖಕರವಾದ ಜೀವನ ನಡೆಸುತ್ತಿದೆ. ಪ್ರತಿ ತಿಂಗಳು ಅವರು ಚಹಾ ಮಾರಾಟದಿಂದ ಸುಮಾರು 2 ಲಕ್ಷ ರೂ. ಗಳಿಸುತ್ತಾರೆ.

Exit mobile version