Site icon Vistara News

Viral News: ಈತ 610 ಕೆಜಿ ಇದ್ದ, ಈಗ 63 ಕೆಜಿಗೆ ಇಳಿದಿದ್ದಾನೆ! 30 ವೈದ್ಯರ ತಂಡದ ಕಾರ್ಯಾಚರಣೆ!

Viral News


ವಿಶ್ವದ ಅತಿ ತೂಕ ಹೊಂದಿರುವ ವ್ಯಕ್ತಿ ಎಂದು ಕರೆಸಿಕೊಂಡ ಖಾಲಿದ್ ಬಿನ್ ಮೊಹ್ಸೆನ್ ಶಾರಿ ಸೌದಿ ಅರೇಬಿಯಾದ ಮಾಜಿ ದೊರೆ ಅಬ್ದುಲ್ಲಾ ಅವರ ಸಹಾಯದಿಂದ 542 ಕೆಜಿ ತೂಕವನ್ನು ಕಳೆದುಕೊಳ್ಳುವ ಮೂಲಕ ಅವರು ಐತಿಹಾಸಿಕ ದಾಖಲೆ ಮಾಡಿದ್ದಾರೆ. ಒಂದು ಕಾಲದಲ್ಲಿ 610 ಕೆಜಿ ತೂಕವಿದ್ದ ಶಾರಿ ಈಗ ಕೇವಲ 63 ಕೆಜಿ ತೂಕ ಹೊಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.ಈ ಸುದ್ದಿ ಸಿಕ್ಕಾಪಟ್ಟೆ ವೈರಲ್‌ (Viral News) ಆಗಿದೆ.

ಶಾರಿ ತನ್ನ ಅತಿಯಾದ ತೂಕದಿಂದಾಗಿ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಹಾಸಿಗೆಯಲ್ಲೇ ಮಲಗಿದ್ದರು. ಮತ್ತು ಅವರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟಿತು, ಏಕೆಂದರೆ ಅವರು ತನ್ನ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ತನ್ನ ಕುಟುಂಬ ಮತ್ತು ಪೋಷಕರ ಮೇಲೆ ಅಲಂಬಿತರಾಗಿದ್ದರು. ಕೊನೆಗೆ ಸೌದಿ ಅರೇಬಿಯಾದ ಮಾಜಿ ದೊರೆಯ ಸಹಾಯದಿಂದ ಅವರು ತಮ್ಮ ಅತಿಯಾದ ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಾಗಿದೆ. ದೊರೆಯ ಸಹಾಯದಿಂದ ಅವರು ವೈದ್ಯಕೀಯ ಚಿಕಿತ್ಸೆಗಳನ್ನು ಉಚಿತವಾಗಿ ಪಡೆದರು ಎನ್ನಲಾಗಿದೆ.

ಹಾಗಾದ್ರೆ ಶಾರಿ ತೂಕ ಕಳೆದುಕೊಳ್ಳುವಂತೆ ಸೌದಿ ದೊರೆ ಮಾಡಿದ್ದೇನು? ಎಂಬುದಕ್ಕೆ ಇಲ್ಲಿದೆ ವಿವರ:
2013 ರಲ್ಲಿ ಶಾರಿಯ ಸ್ಥಿತಿಯ ಬಗ್ಗೆ ರಾಜ ಅಬ್ದುಲ್ಲಾ ಅವರ ಗಮನವನ್ನು ಸೆಳೆಯಿತು. ಅದಕ್ಕಾಗಿ ರಾಜ ಶಾರಿಯನ್ನು ವೈದ್ಯಕೀಯ ಸಹಾಯದಿಂದ ಸರಿಪಡಿಸಲು ಯೋಜನೆ ಮಾಡಿದರು. ಶಾರಿಗಾಗಿ ರೂಪಿಸಲಾದ ಯೋಜನೆಯಲ್ಲಿ, ಕಾರ್ಯ ನಿರ್ವಹಿಸಲು 30 ವೈದ್ಯರ ತಂಡವನ್ನು ರಚಿಸಲಾಯಿತು. ವಿಶೇಷವಾಗಿ ವಿನ್ಯಾಸಗೊಳಿಸಲಾದ ಬೆಡ್ ಮತ್ತು ಫೋರ್ಕ್ ಲಿಫ್ಟ್ ಸಹಾಯದಿಂದ, ಶಾರಿಯನ್ನು ಜಜಾನ್‍ನಲ್ಲಿರುವ ಅವರ ಮನೆಯಿಂದ ರಿಯಾದ್‍ನ ಕಿಂಗ್ ಫಹಾದ್ ಮೆಡಿಕಲ್ ಸಿಟಿಗೆ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಯಿತು. ಅವರ ಚಿಕಿತ್ಸಾ ಯೋಜನೆಯ ಭಾಗವಾಗಿ, ಅವರು ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾದರು ಮತ್ತು ಸೂಕ್ತವಾದ ಆಹಾರ ಮತ್ತು ಕಠಿಣ ವ್ಯಾಯಾಮ ನಿಯಮವನ್ನು ಅನುಸರಿಸಿದರು.

ಮೊದಲ ಆರು ತಿಂಗಳಲ್ಲಿ, ಹಲವಾರು ಫಿಸಿಯೋಥೆರಪಿ ಮತ್ತು ಇನ್ಟೆಸಿವ್ ಕೇರ್ ಸಹಾಯದಿಂದ ಅವರ ದೇಹದ ತೂಕದ ಅರ್ಧದಷ್ಟು ಕಳೆದುಕೊಳ್ಳಲು ಸಹಾಯ ಮಾಡಿತು. 2023 ರ ಹೊತ್ತಿಗೆ, ಅವರ ತೂಕವನ್ನು 63.5 ಕೆಜಿಗಳಿಗೆ ಇಳಿಸಲಾಯಿತು. ಆದರೆ ಅಂತಹ ದೊಡ್ಡ ತೂಕ ನಷ್ಟದಿಂದಾಗಿ ಉಳಿದಿದ್ದ ಹೆಚ್ಚುವರಿ ಚರ್ಮವನ್ನು ತೆಗೆದುಹಾಕಲು ಅವರು ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು.

ಇದನ್ನೂ ಓದಿ:ಪಿಸ್ತೂಲ್ ಹಿಡಿದು ಚಿನ್ನ ದೋಚಲು ಬಂದವರನ್ನು ಕೋಲು ಹಿಡಿದು ಓಡಿಸಿದ ಅಂಗಡಿ ಮಾಲೀಕ!

ಅಂತಹ ಗಮನಾರ್ಹ ತೂಕ ನಷ್ಟಕ್ಕೆ ಒಳಗಾಗುವ ಜನರು ಸಾಮಾನ್ಯವಾಗಿ ಹೆಚ್ಚುವರಿ ಚರ್ಮ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ ಇದರಿಂದ ಅವರ ಚರ್ಮವು ಅವರ ಹೊಸ ದೇಹದ ಆಕಾರಕ್ಕೆ ಹೊಂದಿಕೊಳ್ಳುತ್ತದೆ ಎನ್ನಲಾಗಿದೆ. ಈಗ, ಈ ವ್ಯಕ್ತಿಯನ್ನು “ದಿ ಸ್ಮೈಲಿಂಗ್ ಮ್ಯಾನ್” ಎಂದು ಕರೆಯಲಾಗುತ್ತದೆ, ಇದು ಅವನ ಗಮನಾರ್ಹ ರೂಪಾಂತರವನ್ನು ನೋಡಿದ ವೈದ್ಯಕೀಯ ಸಿಬ್ಬಂದಿ ಅವರಿಗೆ ನೀಡಲಾದ ಅಡ್ಡಹೆಸರು ಎನ್ನಲಾಗಿದೆ.

Exit mobile version