ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಲೈಕ್ಸ್ , ಕಾಮೆಂಟ್ ಪಡೆಯಲು ಯುವಕರು ಅನೇಕ ದುಸ್ಸಾಹಸಗಳಿಗೆ ಕೈ ಹಾಕಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಅದೇ ರೀತಿ ಇದೀಗ ಯುವಕರು ಸಿನಿಮಾವೊಂದರಲ್ಲಿ ಹೀರೊ ಲುಕ್ ಅನ್ನು ನಕಲು ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೊ ವೈರಲ್
(Viral Video) ಆಗಿದೆ.
ಉತ್ತರ ಪ್ರದೇಶದ ಬುಲಂದ್ ಶಹರ್‌ನ ದಿಬಾಯ್‌ನಲ್ಲಿ ಆರು ಯುಟ್ಯೂಬರ್‌ಗಳು ಜವಾನ್ ಚಿತ್ರದಲ್ಲಿ ನಟ ಶಾರುಖ್ ಖಾನ್ ಅವರು ಬ್ಯಾಂಡೇಜ್ ಧರಿಸಿದ ಲುಕ್ ಅನ್ನು ನಕಲು ಮಾಡಿ ಇಡೀ ಪಟ್ಟಣವನ್ನು ಸುತ್ತಿದ್ದಾರೆ. ಇವರನ್ನು ಕಂಡು ಸ್ಥಳೀಯರು ಗಾಬರಿಗೊಂಡಿದ್ದಾರೆ ಎನ್ನಲಾಗಿದೆ.
ಈ ವಿಡಿಯೊದಲ್ಲಿ ಆರು ಮಂದಿ ಯುವಕರು ರಕ್ತದಂತೆ ಕಾಣುವ ಬಣ್ಣವನ್ನು ಬ್ಯಾಂಡೇಜ್‌ಗೆ ಬಳಿದುಕೊಂಡು ಅದನ್ನು ಮುಖಕ್ಕೆ ಸುತ್ತಿಕೊಂಡು ಕೈಯಲ್ಲಿ ಕೋಲುಗಳನ್ನು ಹಿಡಿದು ಜವಾನ್ ಚಿತ್ರದಲ್ಲಿ ನಟ ಶಾರುಖ್ ಖಾನ್ ಅವರ ಲುಕ್ ಅನ್ನು ನಕಲು ಮಾಡಿ ಇಡೀ ಪಟ್ಟಣವನ್ನು ಸುತ್ತಿಹಾಕಿದ್ದಾರೆ. ಇವರಲ್ಲಿ ಒಬ್ಬ ಶರ್ಟ್ ಧರಿಸಿದೆ ತನ್ನ ಇಡೀ ದೇಹವನ್ನು ರಕ್ತದ ಕಲೆಯಂತೆ ಕಾಣುವ ಬ್ಯಾಂಡೇಜ್‌ನಿಂದ ಮುಚ್ಚಿಕೊಂಡಿದ್ದಾನೆ. ಇವರನ್ನು ಕಂಡು ಸ್ಥಳೀಯರು ಗಾಬರಿಗೊಂಡಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಈ ವಿಡಿಯೊ ಸೋಶಿಯಲ್ ವೀಡಿಯಾದಲ್ಲಿ ವೈರಲ್ ಆಗಿದ್ದು, ಮಾತ್ರವಲ್ಲ ಇದರಿಂದ ಪೊಲೀಸರು ಇವರನ್ನು ಹುಡುಕಿಕೊಂಡು ಬರುವಂತಾಗಿದೆ. ಈ ಆರು ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
फिल्म 'जवान' वाला शाहरुख खान बनने के चक्कर में 6 यूट्यूबर गिरफ्तार
— Sachin Gupta (@SachinGuptaUP) June 27, 2024
शिवकुमार, रोबिन, कुशल, अंकुश मीणा, अमन और सचिन मीणा
यूपी के बुलंदशहर जिले में ये यूट्यूबर्स मुंह पर खून जैसे रंग से सनी लाल पट्टी बांधकर पैदल घूम रहे थे। बाइक पर घूम रहे थे। दहशत फैला रहे थे।
रिपोर्ट :… pic.twitter.com/wZnl6RQTJi
ವಿಡಿಯೊ 15 ನಿಮಿಷಗಳ ಕಾಲವಿದ್ದು, ಸಮಾಜದ ಜನತೆಗೆ ಉಪದ್ರವ ನೀಡುವಂತಹ ಈ ರೀಲ್ಸ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇದಕ್ಕೆ ಶೀರ್ಷಿಕೆ ನೀಡಲಾಗಿದೆ. ಈ ಆರು ಮಂದಿ ಸ್ಥಳೀಯರನ್ನು ಹೆದರಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಮತ್ತು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹಾಗೇ ಮುಂದೆ ಇಂತಹ ಕುಚೇಷ್ಠೆಗಳನ್ನು ಮಾಡದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
Many trailers came and went, but none could match the level of #Jawan.🔥
— 𝕾𝖆𝖗𝖆𝖓𝖘𝖍 (@Cinem3ooo) June 10, 2024
The best trailer that had ever been made for a Bollywood movie. 💥#ShahRukhKhan pic.twitter.com/YDiFqswHvy
ಇದನ್ನೂ ಓದಿ: ರೀಲ್ಸ್ ಮಾಡಲು ಹೋದ ಹುಡುಗರು; ರೈಲಿನ ಪ್ರಯಾಣಿಕರು ಏನು ಮಾಡಿದರು ನೋಡಿ!
ರೀಲ್ಸ್‌ಗಾಗಿ ಯುವಕರು ಇಂತಹ ಕುಚೇಷ್ಠೆಗಳನ್ನು ಈ ಹಿಂದೆ ಹಲವು ಬಾರಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಅನೇಕ ಬಾರಿ ಎಚ್ಚರಿಕೆ ನೀಡಿದರೂ ಕೂಡ ಇಂತಹ ಘಟನೆಗಳು ನಡೆಯುತ್ತಿರುತ್ತದೆ. ಈ ಹಿಂದೆ ಪಾಕಿಸ್ತಾನದಲ್ಲಿ ಯುವಕರು ಗುಂಪೊಂದು ತಮಾಷೆ ರೀಲ್ ಮಾಡಲು ವೇಗವಾಗಿ ಬರುವ ರೈಲಿಗೆ ನೀರು ಚುಮ್ಮುವಂತೆ ರೈಲು ಹಳಿ ಮೇಲೆ ಹಾದು ಹೋಗುವ ತೊರೆಗೆ ತಮ್ಮ ಬೈಕ್ ಅನ್ನು ಅಡ್ಡಲಾಗಿ ನಿಲ್ಲಿಸಿ ರೈಲಿನ ಪ್ರಯಾಣಿಕರಿಂದ ಒದೆ ತಿಂದಿದ್ದಾರೆ. ಹಾಗೇ ರೀಲ್ಸ್ ಗಾಗಿ ಪಾಳುಬಿದ್ದ ಕಟ್ಟಡದ ಮೇಲಿಂದ ಸ್ನೇಹಿತನ ಕೈಹಿಡಿದು ಕೆಳಗಿಳಿದು ನೇತಾಡಿದ ಯುವತಿಯನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು.