ಸಾಮಾನ್ಯವಾಗಿ ಮನುಷ್ಯರಲ್ಲಿ ಸ್ನೇಹಿತನೊಬ್ಬ ಸಂಕಷ್ಟದಲ್ಲಿದ್ದಾಗ ಮತ್ತೊಬ್ಬ ಸ್ನೇಹಿತ ಸಹಾಯಕ್ಕೆ ಬರುವುದನ್ನು ನಾವು ಹೆಚ್ಚಾಗಿ ನೋಡುತ್ತೇವೆ. ಹಾಗೇ ಪ್ರಾಣಿಗಳು ಸಹ ತಮ್ಮ ಸ್ನೇಹಿತನ ಮೇಲೆ ಆಕ್ರಮಣ ನಡೆದರೆ ಅದನ್ನು ಕಾಪಾಡಲು ಬರುವುದನ್ನು ನಾವು ಹಲವು ಬಾರಿ ನೋಡಿರುತ್ತೇವೆ. ಆದರೆ ಚಿಕ್ಕ ಪುಟ್ಟ ಜೀವಿಗಳು ಕೂಡ ತಮ್ಮ ಸಹಚರರು ಸಂಕಷ್ಟದಲ್ಲಿದ್ದಾಗ ಸಹಾಯಕ್ಕೆ ಬರುವುದನ್ನು ನೋಡಿದಾಗ ಆಶ್ಚರ್ಯವಾಗುವುದು ಖಂಡಿತ. ಇದೀಗ ಹಲ್ಲಿಯೊಂದು ಸಂಕಷ್ಟದಲ್ಲಿರುವ ತನ್ನ ಸ್ನೇಹಿತನ ಸಹಾಯಕ್ಕೆ ಬಂದು ಅದರ ಜೀವ ಉಳಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ. ಇದನ್ನು ಕಂಡು ಅನೇಕರು ಆಶ್ಚರ್ಯಚಕಿತರಾಗಿದ್ದಾರೆ.
ಹಲ್ಲಿಯೊಂದನ್ನು ಬಂಡೆಯ ಅಂಚಿನ ಮೇಲೆ ಹಾವೊಂದು ಹಿಡಿದು ಅದರ ದೇಹವನ್ನು ಸುತ್ತಿಕೊಂಡಿತ್ತು. ಹಾವಿನ ಬಿಗಿಯಾದ ಹಿಡಿತದಿಂದ ಒದ್ದಾಡುತ್ತಾ ಆ ಹಲ್ಲಿ ತನ್ನ ಜೀವಕ್ಕಾಗಿ ಹೋರಾಡುತ್ತಿತ್ತು. ಆದರೆ ಹಾವಿನ ಬಿಗಿಯಾದ ಹಿಡಿತದೊಂದಿಗೆ ಹೋರಾಡುತ್ತಿರುವ ಹಲ್ಲಿಗೆ ಇನ್ನು ಆಯುಷ್ಯವಿದ್ದಿರಬೇಕು. ಹಾಗಾಗಿ ಈ ಸಮಯದಲ್ಲಿ ಅಲ್ಲಿಗೆ ಬಂದ ಮತ್ತೊಂದು ಹಲ್ಲಿ ಧೈರ್ಯದಿಂದ ತನ್ನ ಸ್ನೇಹಿತನಿಗೆ ಸಹಾಯ ಮಾಡಲು ಮುಂದಾಗುವುದನ್ನು ನೋಡಿದರೆ ಎಂತವರಿಗೂ ಆಶ್ಚರ್ಯವಾಗುವುದು ಖಂಡಿತ.
This lizard went on a rescue mission to save his friend pic.twitter.com/82Qx1xHh6A
— Nature is Amazing ☘️ (@AMAZlNGNATURE) October 31, 2023
ಹಲ್ಲಿ ಹಾವನ್ನು ಮುಖಾಮುಖಿಯಾಗಿ ಎದುರಿಸಿದೆ. ಹಾವು ಅದಕ್ಕೆ ಕಚ್ಚುತ್ತಿದ್ದರೂ ತನ್ನ ಸುರಕ್ಷತೆಯನ್ನು ಪಣಕ್ಕಿಟ್ಟು, ಸಿಕ್ಕಿಬಿದ್ದ ತನ್ನ ಸಹಚರನನ್ನು ಉಳಿಸಲು ಅದು ಧೈರ್ಯಶಾಲಿಯಾಗಿ ಹೋರಾಡಲು ಪ್ರಾರಂಭಿಸಿದೆ. ಆಗ ಹಾವು ತನ್ನ ಹಿಡಿತ ಕಳೆದುಕೊಂಡು ಕೆಳಗೆ ಬಿದ್ದಿದೆ. ಧೈರ್ಯಶಾಲಿ ಹಲ್ಲಿಯ ಪಟ್ಟುಬಿಡದ ದೃಢನಿಶ್ಚಯವು ಈ ಜಯಕ್ಕೆ ಕಾರಣವಾಗಿದೆ ಮತ್ತು ಇದರಿಂದ ಸ್ನೇಹಿತನ ಜೀವ ಉಳಿದಿದೆ. ಕೊನೆಗೂ ಸ್ನೇಹವು ಶತ್ರುವಿನ ಮೇಲೆ ಜಯ ಸಾಧಿಸಿದೆ.
ಇದನ್ನೂ ಓದಿ: ಕಚೇರಿಯ ಟೇಬಲ್‌ನೊಳಗೆ ಅಡಗಿದ್ದ ಬೃಹತ್ ಹಾವನ್ನು ಹಿಡಿದ ಮಹಿಳಾ ಸಿಬ್ಬಂದಿ! ವಿಡಿಯೊ ನೋಡಿ
ಈ ಅದ್ಭುತವಾದ ವಿಡಿಯೊವು ನಿಜವಾದ ಸ್ನೇಹಿತರು ಒಬ್ಬರಿಗೊಬ್ಬರು ಸಹಾಯ ಮಾಡಲು ಯಾವ ಮಟ್ಟಕ್ಕೂ ಬೇಕಾದರೂ ಹೋಗುತ್ತಾರೆ ಎಂಬುದನ್ನು ಸೂಚಿಸುತ್ತದೆ. ಸ್ನೇಹಕ್ಕಾಗಿ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಹಾಗೂ ಇತರ ಜೀವಿಗಳು ಕೂಡ ಹೋರಾಡುತ್ತವೆ ಎಂಬುದನ್ನು ಈ ವಿಡಿಯೊದಲ್ಲಿ ನಾವು ಕಾಣಬಹುದು. ಅಲ್ಲದೇ ಈ ವಿಡಿಯೊದಲ್ಲಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು ಸಹ ಸಾಬೀತಾಗಿದೆ. ಶತ್ರುವಿನ ಜೊತೆ ಜೊತೆಯಾಗಿ ನಿಂತು ಹೋರಾಡಿದರೆ ಅವರ ಮೇಲೆ ಜಯ ಸಾಧಿಸಬಹುದು ಎಂಬುದನ್ನು ಈ ವಿಡಿಯೊ ತಿಳಿಸುತ್ತದೆ.