Site icon Vistara News

Viral Video: ಎರಡು ಮುಖ, ನಾಲ್ಕು ತೋಳು, ನಾಲ್ಕು ಕಾಲುಗಳ ಮಗು ಜನನ!

Viral Video


ಸೀತಾಪುರ: ಹಿಂದೆಯೂ ವಿಚಿತ್ರ ಎನಿಸುವ ಆಕೃತಿಯ ಮಕ್ಕಳು ಜನಿಸುತ್ತಿದ್ದರು. ಆದರೆ ಇಂದು ತಂತ್ರಜ್ಞಾನ ಬಹಳ ಮುಂದುವರಿದ ಕಾರಣ ಇಂತಹ ಪ್ರಕರಣಗಳು ಬಹಳ ಕಡಿಮೆಯಾಗಿದೆ. ಆದರೆ ಇದೀಗ ಉತ್ತರ ಪ್ರದೇಶದ ಸೀತಾಪುರದ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ವಿಶಿಷ್ಟವಾದ ಮಗುವಿಗೆ ಜನ್ಮ ನೀಡಿದ್ದಾರೆ. ಆಕೆಯ ಮಗು ಹುಟ್ಟುವಾಗ ಎರಡು ಮುಖಗಳು, ನಾಲ್ಕು ತೋಳುಗಳು ಮತ್ತು ನಾಲ್ಕು ಕಾಲುಗಳೊಂದಿಗೆ ಜನಿಸಿದೆ. ಮಗುವಿನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಈ ಅಸಾಧಾರಣ ಮಗುವನ್ನು ನೋಡಲು ಅನೇಕ ಜನರು ಆಸ್ಪತ್ರೆಗೆ ಬರುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಕ್ರಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಕಿರಾತಾಪುರ ಗ್ರಾಮದ ಕೊರಿಯನ್ ಪುರ್ವಾ ಮೂಲದ ರಮಾ ದೇವಿ (40) ಈ ವಿಶಿಷ್ಟವಾದ ಮಗುವಿಗೆ ಜನ್ಮ ನೀಡಿದ ತಾಯಿ. ಅವರಿಗೆ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಪಿಎಚ್‍ಸಿ ರೇವಾನ್‍ಗೆ ಕರೆದೊಯ್ಯಲಾಯಿತು. ಮುಂಜಾನೆ 5 ಗಂಟೆ ಸುಮಾರಿಗೆ ಮಹಿಳೆ ಈ ಅಸಾಧಾರಣ ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಗ್ರಾಮಸ್ಥರು ಪವಾಡಸದೃಶ ಮಗುವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಬಂದರು. ಆದರೆ, ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮಗು ಮೃತಪಟ್ಟಿದೆ.

ಮಗುವಿನ ದೇಹವು ಮತ್ತೊಂದು ದೇಹಕ್ಕೆ ಅಂಟಿಕೊಂಡಿದೆ. ಅದರಲ್ಲಿ ಒಂದು ದೇಹವು ಅಭಿವೃದ್ಧಿಗೊಂಡಿದೆ ಮತ್ತು ಇನ್ನೊಂದು ದೇಹವು ಕಡಿಮೆ ಅಭಿವೃದ್ಧಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ದೇಹವು ಮತ್ತೊಂದು ದೇಹಕ್ಕೆ ಜೋಡಿಸಲ್ಪಟ್ಟಿದ್ದರಿಂದ, ಮಗುವಿಗೆ ಎರಡು ಮುಖಗಳು, ನಾಲ್ಕು ಕಾಲುಗಳು ಮತ್ತು ನಾಲ್ಕು ತೋಳುಗಳು ಇದ್ದವು.
ಆದರೆ ಈ ಅಸಾಧಾರಣ ಲಕ್ಷಣಗಳನ್ನು ಹೊಂದಿರುವ ಮಗುವನ್ನು ನೋಡಿ ಆಸ್ಪತ್ರೆಯ ಸಿಬ್ಬಂದಿ ಭಯಭೀತರಾಗಿದ್ದರು, ಆದ್ದರಿಂದ ಅವರು ಮಗುವನ್ನು ಹೊರಗೆ ಕರೆದೊಯ್ದರು, ಇದರಿಂದ ಆಸ್ಪತ್ರೆಯಲ್ಲಿ ಆಕ್ರೋಶ ಭುಗಿಲೆದ್ದಿತು. ಆದರೆ, ಮಗು ಜನಿಸಿದ ಐದು ಗಂಟೆಗಳ ನಂತರ ಸಾವನ್ನಪ್ಪಿದೆ.

ಇದನ್ನೂ ಓದಿ: ಅಂಬಾನಿ ಸ್ಕೂಲ್‌ನಲ್ಲಿ ಎಲ್‌ಕೆಜಿ ವಾರ್ಷಿಕ ಶುಲ್ಕವೇ 5 ಲಕ್ಷ ದಾಟುತ್ತದೆ!

ಮಗುವಿನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಮತ್ತು ಮಗುವಿನ ಮುಖ ಮತ್ತು ಕೈಕಾಲುಗಳನ್ನು ನೋಡಿ ಜನರು ಆಘಾತಕ್ಕೊಳಗಾಗಿದ್ದಾರೆ. ಮಗು ಜನಿಸಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ್ದರಿಂದ ಆಸ್ಪತ್ರೆಯ ಅಧಿಕಾರಿಗಳಿಗೆ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ. ನವಜಾತ ಶಿಶುವನ್ನು ಕಳೆದುಕೊಂಡಿದ್ದರಿಂದ ಕುಟುಂಬ ವರ್ಗವು ದುಃಖಿತರಾಗಿದ್ದಾರೆ ಎನ್ನಲಾಗಿದೆ.

Exit mobile version