Site icon Vistara News

Viral Video: ಸಿಮೆಂಟ್, ಕಲ್ಲಿನಿಂದ ವಾಷಿಂಗ್ ಮೆಷಿನ್ ತಯಾರಿಸಿದ ಮಹಿಳೆ; ಹೇಗೆ ಕೆಲಸ ಮಾಡುತ್ತೆ ನೋಡಿ!

Viral Video

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಪುರುಷರ ಜತೆ ಮಹಿಳೆಯರೂ ಕೆಲಸದ ನಿಮಿತ್ತ ಹೊರಗೆ ಹೋಗುವುದರಿಂದ ಮನೆಗೆಲಸಗಳು ಹಾಗೇ ಉಳಿದುಬಿಡುತ್ತವೆ. ಹಾಗಾಗಿ ಜನರು ಎಲೆಕ್ಟ್ರಾನಿಕ್ಸ್ ಮೆಷಿನ್ ಗಳ ಮೇಲೆ ಅವಲಂಬಿತರಾಗುತ್ತಿದ್ದಾರೆ. ಬಟ್ಟೆ ಒಗೆಯಲು, ಅಡುಗೆ ಮಾಡಲು, ನೆಲ ಗುಡಿಸಿ (Floor cleaning), ಒರೆಸಲು ಕೂಡ ಎಲೆಕ್ಟ್ರಾನಿಕ್ಸ್ ಮೆಷಿನ್ ಗಳು ಬಂದಿವೆ. ಅದರಲ್ಲೂ ಬಟ್ಟೆ (Cloth) ಒಗೆಯುವುದಂತು ಒಂದು ದೊಡ್ಡ ಕೆಲಸ ಎಂದೇ ಹೇಳಬಹುದು. ಹಾಗಾಗಿ ಎಲ್ಲರ ಮನೆಯಲ್ಲಿ ವಾಷಿಂಗ್ ಮೆಷಿನ್ ಇದ್ದೆ ಇರುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಬಟ್ಟೆ ಒಗೆಯಲು ಸಿಮೆಂಟ್ ಮತ್ತು ಕಲ್ಲಿನಿಂದ ವಾಷಿಂಗ್ ಮೆಷಿನ್ ತಯಾರಿಸಿದ್ದು, ಅದು ವೈರಲ್ (Viral Video )ಆಗಿದೆ.

ವಿಡಿಯೊದಲ್ಲಿ ಮಹಿಳೆ ಕಲ್ಲು ಮತ್ತು ಸಿಮೆಂಟ್ ಬಳಸಿ ವಾಷಿಂಗ್ ಮೆಷಿನ್ ರೆಡಿ ಮಾಡುತ್ತಿದ್ದಾಳೆ. ಅದಕ್ಕಾಗಿ ವಾಷಿಂಗ್ ಮೆಷಿನ್‌ನ ಅಂಚುಗಳನ್ನು ಪರಿಪೂರ್ಣಗೊಳಿಸುತ್ತಿರುವುದನ್ನು ನಾವು ಈ ವಿಡಿಯೊದಲ್ಲಿ ನೋಡಬಹುದು. ಈ ವಾಷಿಂಗ್ ಮೆಷಿನ್ ನ ಒಂದು ಬದಿಯಲ್ಲಿ ಸಿಂಕ್ ಅನ್ನು ಹೊಂದಿದ್ದು, ಅದಕ್ಕೆ ನಲ್ಲಿಯನ್ನು ಜೋಡಿಸಲಾಗಿದೆ. ಹಾಗೇ ಇನ್ನೊಂದು ಬದಿಯಲ್ಲಿ ನಿಂತು ಬಟ್ಟೆಗಳನ್ನು ಒಗೆಯಲು ಕಲ್ಲುಗಳನ್ನು ಇರಿಸಲಾಗಿದೆ. ಇದು ನೋಡಲು ತುಂಬಾ ವ್ಯವಸ್ಥಿತವಾಗಿ ಕಂಡುಬಂದರೂ ಕೂಡ ವಾಷಿಂಗ್ ಮೆಷಿನ್ ನ ಹಾಗೇ ಬಟ್ಟೆಯನ್ನು ತಾನೇ ವಾಶ್ ಮಾಡುವುದಿಲ್ಲ. ಬದಲಾಗಿ ಬಟ್ಟೆ ಮಹಿಳೆ ಕೈಯಿಂದ ತೊಳೆಯಬೇಕಾಗುತ್ತದೆ.

ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದೆ. ಆದರೆ ಜನರು ಹೆಚ್ಚು ಇದಕ್ಕೆ ಪ್ರಭಾವಿತರಾಗಿಲ್ಲ. ಯಾಕೆಂದರೆ ಇದರಲ್ಲಿ ಬಟ್ಟೆ ತಾವೇ ಕೈಯಿಂದ ತೊಳೆಯಬೇಕಾದ ಕಾರಣ ಇದು ಬಟ್ಟೆ ತೊಳೆಯುವ ಸಮಸ್ಯೆಗೆ ಪರಿಹಾರ ನೀಡುವುದಿಲ್ಲ ಒಂದು ಜನರು ಅಭಿಪ್ರಾಯ ತಿಳಿಸಿದ್ದಾರೆ. ಅಲ್ಲದೇ ಇದರಿಂದ ಹೆಚ್ಚು ನೀರು ಕೂಡ ವ್ಯರ್ಥವಾಗುತ್ತದೆ ಎಂಬುದಾಗಿ ಸೂಚಿಸಿದ್ದಾರೆ.

ಇದನ್ನೂ ಓದಿ: ಪೇಪರ್ ನೋಡದೆ ಪ್ರಮಾಣ ವಚನ ಸ್ವೀಕರಿಸಿ ಬೆರಗುಗೊಳಿಸಿದ ಅತ್ಯಂತ ಕಿರಿಯ ಸಂಸದೆ!

ಇದೇರೀತಿ ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬ ಎಸಿಯಿಂದ ನೀರನ್ನು ಕೂಲರ್‌ಗೆ ಮರು ನಿರ್ದೇಶಿಸುತ್ತಿರುವುದನ್ನು ತೋರಿಸುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿತ್ತು. ಅದರಲ್ಲಿ ವ್ಯಕ್ತಿ ಎಸಿಯಿಂದ ಒಂದು ಪೈಪ್ ಅನ್ನು ನೆಲಮಹಡಿಯಲ್ಲಿರುವ ಕೂಲರ್‌ಗೆ ಸಂಪರ್ಕಿಸಿರುವುದನ್ನು ತೋರಿಸುವುದು ಕಂಡುಬಂದಿದೆ. ಇದರಲ್ಲಿ ಎಸಿಯಿಂದ ನೀರು ಕೂಲರ್ ಗೆ ವರ್ಗಾಯಿಸಲಾಗುತ್ತದೆ. ಇದು ವೈರಲ್ ಆಗಿದೆ. ಈ ವಿಡಿಯೊಗೆ 2.9 ದಶಲಕ್ಷಕ್ಕೂ ಹೆಚ್ಚು ವೀವ್ಸ್ ಬಂದಿದೆ. ವ್ಯಕ್ತಿಯ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version