Site icon Vistara News

Viral Video: ನೋಡುಗರ ಕಣ್ಮನ ಸೆಳೆಯುತ್ತಿದೆ ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಆಮಂತ್ರಣ ಪತ್ರಿಕೆ

Viral Video

ಮುಂಬೈ : ಮದುವೆ ಜೀವನದಲ್ಲಿ ಬಹಳ ವಿಶೇಷವಾದದ್ದು. ಶ್ರೀಮಂತ ಕುಟುಂಬದವರು ಮದುವೆಗಳನ್ನು ಬಹಳ ಅದ್ಧೂರಿಯಾಗಿ ಮಾಡುತ್ತಾರೆ. ಅದರಲ್ಲಿ ಅಂಬಾನಿ ಕುಟುಂಬ ಕೂಡ ಒಂದು. ಸದ್ಯದಲ್ಲೇ ಅಂಬಾನಿ ಮನೆತನದ ಕುಡಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಹಸೆಮಣೆ ಏರಲಿದ್ದಾರೆ. ಹಾಗಾಗಿ ಅವರ ಮದುವೆ ಆಮಂತ್ರಣದ ವಿಡಿಯೊ ಇನ್ ಸ್ಟಾಗ್ರಾಂನಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್(Viral Video) ಆಗಿದೆ.

ರಿಲಯನ್ಸ್ ಕಂಪೆನಿಯ ಅಧ್ಯಕ್ಷ ಮುಖೇಶ್ ಅಂಬಾನಿ ಯವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ಎನ್ ಕೋರ್ ಹೆಲ್ತ್ ಕೇರ್‌ನ ಸಿಇಒ, ವೈಸ್ ಚೇರ್ಮನ್ ವಿರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರ ವಿವಾಹ ಜುಲೈ 12 ರಂದು ಮುಂಬೈನಲ್ಲಿ ನಡೆಯಲಿದೆ.

ಈ ಹಿಂದೆ ನಡೆದ ವಿವಾಹ ನಿಶ್ಚಿತಾರ್ಥ ಸಮಾರಂಭ ಕೂಡ ಬಹಳ ಸಡಗರದಿಂದ ಆಚರಿಸಲಾಗಿತ್ತು. ಇದೀಗ ಶ್ರೀಮಂತಿಕೆ ಹಾಗೂ ಸಾಂಸ್ಕೃತಿಕ ಪರಂಪರೆ ಎರಡನ್ನೂ ಒಳಗೊಂಡಿರುವ ಮದುವೆಯ ಆಮಂತ್ರಣ ಬಹಳ ಸದ್ದು ಮಾಡುತ್ತಿದೆ. ಇದಕ್ಕೆ ಅನೇಕ ಜನರು ಆಕರ್ಷಿತರಾಗಿದ್ದಾರೆ.

ಆಮಂತ್ರಣ ವಿನ್ಯಾಸವನ್ನು ಸಾಂಪ್ರದಾಯಿಕ ಭಾರತೀಯ ದೇವಾಲಯಗಳಿಗೆ ಗೌರವ ನೀಡುವಂತದಾಗಿದೆ. ಇದನ್ನು ಬೆಳ್ಳಿಯಲ್ಲಿ ರಚಿಸಲಾಗಿದೆ. ಮತ್ತು ಅದರಲ್ಲಿ ಹಿಂದೂ ದೇವರುಗಳಾದ ಗಣೇಶ, ವಿಷ್ಣು, ಲಕ್ಷ್ಮಿ, ರಾಧಾಕೃಷ್ಣ ಮತ್ತು ದುರ್ಗಾದೇವಿಯ ಚಿತ್ರಗಳಿಂದ ಅಲಂಕರಿಸಲಾಗಿದೆ. ಸಾಮಾನ್ಯವಾಗಿ ಈ ದೇವರುಗಳನ್ನು ಜನರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹಾಕುತ್ತಾರೆ. ಹಾಗಾಗಿ ಅಂಬಾನಿ ಕುಟುಂಬದವರು ಕೂಡ ಈ ಸಂಪ್ರದಾಯವನ್ನು ಶ್ರದ್ಧೆಯಿಂದ ಪಾಲಿಸಿದ್ದಾರೆ ಎನ್ನಲಾಗಿದೆ.

ಆಮಂತ್ರಣ ಪತ್ರಿಕೆಯ ಕೆಂಪು ಬಣ್ಣದ ಹೊರಭಾಗವನ್ನು ಹೊಂದಿದ್ದು, ಅದರಲ್ಲಿರುವ ವಿಷಯವನ್ನು ಬಹಿರಂಗಪಡಿಸಲು ತೆರೆಯುವ ಬಾಗಿಲಿನ ವಿನ್ಯಾಸ ಮಾಡಲಾಗಿದೆ. ಈ ಆಮಂತ್ರಣ ಪೆಟ್ಟಿಗೆಯಲ್ಲಿ ಬೆಳ್ಳಿಯ ದೇವಾಲಯದೊಳಗೆ ಚಿನ್ನದ ವಿಗ್ರಹಗಳನ್ನು ಒಳಗೊಂಡಿದೆ.

ಅದರಲ್ಲಿ ಜುಲೈ 12ರಂದು ಶುಭವಿವಾಹ, ಜುಲೈ 13ಕ್ಕೆ ಶುಭ ಆಶೀರ್ವಾದ ಮತ್ತು ಜುಲೈ14ಕ್ಕೆ ಮಂಗಲ್ ಉತ್ಸವದೊಂದಿಗೆ ಮುಕ್ತಾಯಗೊಳ್ಳುತ್ತದೆ. ಪ್ರತಿಯೊಂದು ಕಾರ್ಯಕ್ರಮಕ್ಕೂ ಆಮಂತ್ರಣ ಪತ್ರಿಕೆಯನ್ನು ಪ್ರತ್ಯೇಕವಾಗಿ ಆ ಪೆಟ್ಟಿಗೆಯಲ್ಲಿ ಇರಿಸಲಾಗಿದೆ.

ಒಟ್ಟಾರೆ ವಿವಾಹ ಸಮಾರಂಭ ಬಹುದಿನಗಳ ಕಾಲ ನಡೆಯಲಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಆಮಂತ್ರಣವು ನೀತಾ ಅಂಬಾನಿಯವರ ಕೈಬರಹದ ಟಿಪ್ಪಣಿಯನ್ನು ಒಳಗೊಂಡಿದೆ.

ಅದರಲ್ಲಿ ಅವರು ತಮ್ಮ ವೈಯಕ್ತಿಕ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಈ ಸಮಾರಂಭಕ್ಕೆ ಅತಿಥಿಗಳನ್ನು ಸಂತೋಷದಿಂದ ಆಹ್ವಾನಿಸಿದ್ದಾರೆ.

ಇದನ್ನೂ ಓದಿ: ಆರ್ಡರ್ ಮಾಡಿ 6 ವರ್ಷ ಕಳೆದರೂ ವಸ್ತು ಕಳುಹಿಸದ ಫ್ಲಿಪ್‌ಕಾರ್ಟ್!

ಒಟ್ಟಾರೆ ಈ ಆಮಂತ್ರಣ ಪತ್ರಿಕೆಯು ಅದರ ವಿನ್ಯಾಸದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಪ್ರಶಂಸೆಗೆ ಒಳಗಾಗಿದೆ. ಇದರಲ್ಲಿ ಹಿಂದೂದೇವರನ್ನು ಚಿತ್ರಿಸಿದ ಕಾರಣ ಅಂಬಾನಿ ಕುಟುಂಬವದರಿಗೆ ದೇವರ ಬಗ್ಗೆ ಇರುವ ಗೌರವ ವ್ಯಕ್ತವಾಗುತ್ತದೆ. ಒಟ್ಟಾರೆ ಈ ಮದುವೆಯು ಭವ್ಯವಾಗಿ, ಬಹಳ ಅದ್ಧೂರಿಯಿಂದ ನಡೆಯುವುದಂತೂ ಖಂಡಿತ ಎಂಬುದು ಈ ಆಮಂತ್ರಣದಿಂದ ತಿಳಿಯುತ್ತದೆ.

Exit mobile version