Site icon Vistara News

Viral Video: ಅಣೆಕಟ್ಟಿನ ಅಂಚಿನಲ್ಲಿ ನಿಂತು ಸ್ಟಂಟ್ ಮಾಡಿದ; ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡ!

Viral Video


ಯುವಕರಿಗೆ ಸ್ಟಂಟ್ ಮಾಡುವ ಹುಚ್ಚು ಹೆಚ್ಚಾಗಿರುತ್ತದೆ. ಈ ರೀತಿ ಸ್ಟಂಟ್ ಮಾಡಲು ಹೋಗಿ ಅನೇಕರು ಅಪಾಯಕ್ಕೆ ಸಿಲುಕಿದ್ದಾರೆ. ಹಾಗೇ ಇನ್ನೂ ಅನೇಕರು ಸಾವನಪ್ಪಿದ್ದಾರೆ. ಇಷ್ಟಾದರೂ ಯುವ ಜನರು ಸ್ಟಂಟ್ ಮಾಡುವ ಹುಚ್ಚು ಬಿಡುತ್ತಿಲ್ಲ. ಈ ಸ್ಟಂಟ್ ಹುಚ್ಚಿನಿಂದ ಇತ್ತೀಚೆಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಅಣೆಕಟ್ಟಿನ ಅಂಚಿನಲ್ಲಿ ನಿಂತು ಸ್ಟಂಟ್ ಮಾಡಲು ಪ್ರಯತ್ನಿಸಿದ ಯುವಕನೊಬ್ಬ ನೀರಿಗೆ ಬಿದ್ದು ದುರಂತವಾಗಿ ಮುಳುಗಿ ಸಾವನಪ್ಪಿದ ಆಘಾತಕಾರಿ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ (Viral Video)ಆಗಿದೆ.

ವರದಿಗಳ ಪ್ರಕಾರ, ನಾಗ್ಪುರ ಜಿಲ್ಲೆಯ ಉಮ್ರೆಡ್ ಸಿಟಿ ಬಳಿಯ ಮಕರ್ಧೋಕಡ ಅಣೆಕಟ್ಟಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಜೆ (ಆಗಸ್ಟ್ 15) ಈ ಘಟನೆ ನಡೆದಿದೆ. 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಮಕರಧೋಕಡ ಅಣೆಕಟ್ಟಿನಲ್ಲಿ ಅನೇಕ ಪ್ರವಾಸಿಗರು ಬಂದಿದ್ದರು. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿದ್ದರು. ಅವರಲ್ಲಿ ಒಬ್ಬ ಯುವಕ ಡ್ಯಾಮ್ ಮೇಲೆ ಹತ್ತಲು ಪ್ರಯತ್ನಿಸಿದ್ದಾನೆ. ಆದರೆ ಯುವಕ ಸಾಹಸ ಮಾಡಲು ಹೋಗಿ ದುರದೃಷ್ಟಕರವಾಗಿ ಸಾವಿಗೀಡಾಗಿದ್ದಾನೆ.

ಇದನ್ನು ಅಲ್ಲಿಗೆ ಬಂದಿದ್ದ ಪ್ರವಾಸಿಗರೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಈಗ ವೈರಲ್ ಆಗಿದೆ. ಈ ವೈರಲ್ ವಿಡಿಯೊ 27 ಸೆಕೆಂಡುಗಳ ಕಾಲವಿದ್ದು, ಇದರಲ್ಲಿ ವ್ಯಕ್ತಿಯೊಬ್ಬರು ಅಣೆಕಟ್ಟಿನ ಗೋಡೆಯ ಮೇಲೆ ನಿಂತಿದ್ದಾನೆ. ಆಗ ಇಬ್ಬರು ಯುವಕರು ಅವನನ್ನು ರಕ್ಷಿಸಲು ಪ್ರಯತ್ನಿಸಿದರು, ಒಬ್ಬರು ಅವನನ್ನು ಕೆಳಗಿಳಿಸಲು ಸಹಾಯ ಮಾಡಲು ಕೈ ಚಾಚಿದರು. ಆದಾಗ್ಯೂ, ಅವನು ಅವರ ಸಹಾಯವನ್ನು ನಿರಾಕರಿಸಿದ. ನಂತರ ಸಹಾಯಕ್ಕೆ ಬಂದ ಯುವಕರು ಕೆಳಗೆ ಜಾರಿ ಬಿದ್ದಿದ್ದಾರೆ. ಆಮೇಲೆ ಆ ವ್ಯಕ್ತಿ ಇದ್ದಕ್ಕಿದ್ದಂತೆ ಸಮತೋಲನವನ್ನು ಕಳೆದುಕೊಂಡು ಅಣೆಕಟ್ಟಿನ ಇನ್ನೊಂದು ಬದಿಯಲ್ಲಿ, ನದಿಗೆ ಬಿದ್ದು ಮುಳುಗಿ ಸಾವಿಗೀಡಾಗಿದ್ದಾನೆ. ಘಟನಾ ಸ್ಥಳದಲ್ಲಿ ನೂರಾರು ಜನರಿದ್ದರೂ, ಯುವಕನನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

ಇದನ್ನೂ ಓದಿ:ಚಂದ್ರ ಮತ್ತು ದೆಹಲಿ; ಇವುಗಳಲ್ಲಿ ಯಾವುದು ದೂರದಲ್ಲಿದೆ? ಈ ಹುಡುಗನ ಉತ್ತರವನ್ನೊಮ್ಮೆ ಕೇಳಿ ಬಿಡಿ!

ಕೆಲವು ಸಮಯದ ಹಿಂದೆ ಮಹಾರಾಷ್ಟ್ರದ ಸತಾರಾದಲ್ಲಿ ಮಹಿಳೆಯೊಬ್ಬರು ಬೆಟ್ಟದ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಕಾಲು ಜಾರಿ 100 ಅಡಿ ಆಳದ ಕಮರಿಗೆ ಬಿದ್ದದ್ದಳು. ಆಶ್ಚರ್ಯಕರ ಸಂಗತಿಯೆಂದರೆ, ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದರಿಂದ ಸಾವಿನಿಂದ ಪಾರಾಗಿದ್ದಾರೆ ಮತ್ತು ಅದರ ವಿಡಿಯೊ ವೈರಲ್ ಆಗಿತ್ತು. ಮಹಾರಾಷ್ಟ್ರದ ಸತಾರಾದ ಉಂಗರ್ ರಸ್ತೆಯ ಬೋರ್ನ್ ಘಾಟ್ ನಲ್ಲಿ ಈ ಘಟನೆ ನಡೆದಿತ್ತು.

Exit mobile version