Site icon Vistara News

Viral Video: ಚೀನಾದಲ್ಲಿ ಬಹಿರಂಗವಾಗಿ ಮಾರಾಟವಾಗುತ್ತದೆ ನಾಯಿ ಮಾಂಸದ ಖಾದ್ಯ; ಭಾರತೀಯ ಹುಡುಗಿ ಮಾಡಿದ ವಿಡಿಯೊ ವೈರಲ್

Viral Video


ಪ್ರಪಂಚದಾದ್ಯಂತ, ವಿವಿಧ ಸಮುದಾಯಗಳಿಗೆ ಸೇರಿದ ಜನರು ವಿವಿಧ ರೀತಿಯ ಆಹಾರಗಳನ್ನು ಸೇವಿಸುತ್ತಾರೆ. ಕೆಲವರು ತರಕಾರಿ, ಸೊಪ್ಪುಗಳನ್ನು ಮಾತ್ರ ಸೇವಿಸಿದರೆ, ಕೆಲವರು ಚಿಕನ್, ಮಟನ್, ಮೀನುಗಳನ್ನು ಸೇವಿಸುತ್ತಾರೆ. ಆದರೆ ಚೀನಾದಲ್ಲಿ ಜನರು ಆಹಾರವಾಗಿ ನಾಯಿ, ಬೆಕ್ಕಿನ ಮಾಂಸವನ್ನು ಸೇವನೆ ಮಾಡುತ್ತಾರಂತೆ. ಭಾರತೀಯ ಮಹಿಳೆಯೊಬ್ಬರು ಚೀನಾದ ಒಂದು ಭಾಗಕ್ಕೆ ಭೇಟಿ ನೀಡಿ ನಾಯಿ ಮಾಂಸವನ್ನು ಬಹಿರಂಗವಾಗಿ ಮಾರಾಟ ಮಾಡುತ್ತಿರುವುದನ್ನು ವಿಡಿಯೊ ಮಾಡಿದ್ದಾಳೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video)ಆಗಿದೆ.

@wanderingwithpaint ಎಂಬ ಖಾತೆಯು ಈ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಪೋಸ್ಟ್ ಮಾಡಲಾದ ವಿಡಿಯೊದಲ್ಲಿ ಹುಡುಗಿ ಚೀನಾದ ಒಂದು ಸ್ಥಳಕ್ಕೆ ಭೇಟಿ ನೀಡಿ, ಬೀದಿಗಳಲ್ಲಿ ನಾಯಿ ಮಾಂಸವನ್ನು ಹೇಗೆ ಬಹಿರಂಗವಾಗಿ ಮಾರಾಟ ಮಾಡಲಾಗುತ್ತದೆ ಎಂಬುದನ್ನು ವೀಕ್ಷಕರಿಗೆ ತೋರಿಸಿದ್ದಾಳೆ ಮತ್ತು ಇದು ಇಲ್ಲಿನ ಸ್ಥಳೀಯರಿಗೆ ಅಚ್ಚುಮೆಚ್ಚಿನದಾಗಿದೆ ಎಂಬುದಾಗಿ ತಿಳಿಸಿದ್ದಾಳೆ.

ಆಗೇ ಆಕೆ ಸುತ್ತಾಡುವಾಗ ಒಂದು ಮೂಲೆಯಲ್ಲಿ ಒಬ್ಬ ವ್ಯಕ್ತಿಯು ಅನುಮಾನಾಸ್ಪದವಾಗಿ ಕಾಣುವ ಮಾಂಸದ ಖಾದ್ಯವನ್ನು ಬೇಯಿಸುತ್ತಿರುವಾಗ, ಅವಳು ತನ್ನ ಚೀನೀ ಸ್ನೇಹಿತ ವಿಕ್ಕಿಯ ಬಳಿ ಅದು ಏನು ಎಂದು ಕೇಳುತ್ತಾಳೆ, ಅದಕ್ಕೆ ಆತ “ಇದು ನಾಯಿ ಮಾಂಸ” ಎಂದು ಉತ್ತರಿಸಿದ್ದಾನೆ. ಆ ವ್ಯಕ್ತಿ ದೊಡ್ಡ ಪಾತ್ರೆಯಲ್ಲಿ ಮಾಂಸವನ್ನು ಬೇಯಿಸುತ್ತಾ ಅದನ್ನು ನಿರಂತರವಾಗಿ ಮಿಕ್ಸ್ ಮಾಡುತ್ತಿದ್ದಾನೆ. ನಂತರ ಅವಳು ಕ್ಯಾಮೆರಾವನ್ನು ಟ್ರಕ್‍ ಕಡೆಗೆ ತೆಗೆದುಕೊಂಡು ಹೋಗಿ ಅಲ್ಲಿ ನಾಯಿಗಳನ್ನು ಒಂದು ಪಂಜರದಲ್ಲಿ ಬಂಧಿಸಿಟ್ಟಿದ್ದನ್ನು ತೋರಿಸಿದ್ದಾಳೆ.

ನಂತರ ಅವಳು ನಾಯಿ ಮಾಂಸ ಸೇವನೆಯ ಬಗ್ಗೆ ಹಾಗೂ ಅದಕ್ಕೆ ಸಂಬಂಧಪಟ್ಟ ಹೆಚ್ಚಿನ ವಿವರಗಳ ಬಗ್ಗೆ ವಿಕ್ಕಿಯೊಂದಿಗೆ ಮತ್ತೆ ಮಾತನಾಡಿದ್ದಾಳೆ. ಆತ ತಿಳಿಸಿದ ಪ್ರಕಾರ, ಇಲ್ಲಿ ಎಲ್ಲಾ ಜನರು ಈ ಮಾಂಸ ತಿನ್ನಲು ಇಷ್ಟಪಡುವುದಿಲ್ಲ. ಆದರೆ ಇಲ್ಲಿನ ಶೇಕಡಾ 20 ರಿಂದ 30 ರಷ್ಟು ಕೆಲವು ಸ್ಥಳೀಯರು,ಇದನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಇದನ್ನು ತಿನ್ನುತ್ತಿಲ್ಲ” ಎಂದು ಹೇಳಿದ್ದಾನೆ.

ನಂತರ ಹುಡುಗಿ ವಯಸ್ಸಾದ ಚೀನೀ ಮಹಿಳೆಯನ್ನು ಭೇಟಿಯಾಗುತ್ತಾಳೆ, ಅವರ ಬಳಿ ನೀವು ಮಾಂಸವನ್ನು ಇಷ್ಟಪಡುತ್ತೀರಾ ಎಂದು ಕೇಳುತ್ತಾಳೆ, ಇದಕ್ಕೆ ಮಹಿಳೆ ಮ್ಯಾಂಡರಿನ್ ಭಾಷೆಯಲ್ಲಿ “ರುಚಿಕರ” ಎಂದು ಉತ್ತರಿಸುತ್ತಾಳೆ. “ನಾಯಿ ಮಾಂಸವು ಚೀನಾದ ದಕ್ಷಿಣ ಭಾಗದಲ್ಲಿನ ಅನೇಕ ಸಂಸ್ಕೃತಿಗಳಲ್ಲಿ ಸಾಮಾನ್ಯ ಆಹಾರವಾಗಿದೆ. ಥೈಲ್ಯಾಂಡ್, ವಿಯೆಟ್ನಾಂ, ಭಾರತ ಮುಂತಾದ ಅನೇಕ ದೇಶಗಳಲ್ಲಿ ನಾಯಿ ಮಾಂಸವನ್ನು ಸೇವಿಸುತ್ತಾರೆ.

ಇದನ್ನೂ ಓದಿ: ಶಿಕ್ಷಕಿ, ಸಹಪಾಠಿಗಳ ಕಿರುಕುಳ ತಾಳಲಾರದೆ ನೇಣಿಗೆ ಶರಣಾದ ಬಾಲಕ

ಈ ವಿಡಿಯೊಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಮೊದಲ ಬಳಕೆದಾರರು “ಅವರ ಹೊಟ್ಟೆ, ಅವರ ಸಂಸ್ಕೃತಿ, ಅವರ ಆಯ್ಕೆ” ಎಂದು ಬರೆದಿದ್ದಾರೆ. “ಇದು ದುಃಖಕರ ವಿಷಯವಾಗಿದೆ” ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

Exit mobile version