Viral Video: ಚೀನಾದಲ್ಲಿ ಬಹಿರಂಗವಾಗಿ ಮಾರಾಟವಾಗುತ್ತದೆ ನಾಯಿ ಮಾಂಸದ ಖಾದ್ಯ; ಭಾರತೀಯ ಹುಡುಗಿ ಮಾಡಿದ ವಿಡಿಯೊ ವೈರಲ್ - Vistara News

Latest

Viral Video: ಚೀನಾದಲ್ಲಿ ಬಹಿರಂಗವಾಗಿ ಮಾರಾಟವಾಗುತ್ತದೆ ನಾಯಿ ಮಾಂಸದ ಖಾದ್ಯ; ಭಾರತೀಯ ಹುಡುಗಿ ಮಾಡಿದ ವಿಡಿಯೊ ವೈರಲ್

Viral Video: ಭಾರತೀಯ ಮಹಿಳೆಯೊಬ್ಬರು ಚೀನಾದ ಒಂದು ಭಾಗಕ್ಕೆ ಭೇಟಿ ನೀಡಿ ನಾಯಿ ಮಾಂಸವನ್ನು ಬಹಿರಂಗವಾಗಿ ಮಾರಾಟ ಮಾಡುತ್ತಿರುವುದನ್ನು ವಿಡಿಯೊ ಮಾಡಿದ್ದಾಳೆ. ವಿಡಿಯೊದಲ್ಲಿ ಹುಡುಗಿ ಚೀನಾದ ಒಂದು ಸ್ಥಳಕ್ಕೆ ಭೇಟಿ ನೀಡಿ, ಬೀದಿಗಳಲ್ಲಿ ನಾಯಿ ಮಾಂಸವನ್ನು ಹೇಗೆ ಬಹಿರಂಗವಾಗಿ ಮಾರಾಟ ಮಾಡಲಾಗುತ್ತದೆ ಎಂಬುದನ್ನು ವೀಕ್ಷಕರಿಗೆ ತೋರಿಸಿದ್ದಾಳೆ ಮತ್ತು ಇದು ಇಲ್ಲಿನ ಸ್ಥಳೀಯರಿಗೆ ಅಚ್ಚುಮೆಚ್ಚಿನದಾಗಿದೆ ಎಂಬುದಾಗಿ ತಿಳಿಸಿದ್ದಾಳೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಪ್ರಪಂಚದಾದ್ಯಂತ, ವಿವಿಧ ಸಮುದಾಯಗಳಿಗೆ ಸೇರಿದ ಜನರು ವಿವಿಧ ರೀತಿಯ ಆಹಾರಗಳನ್ನು ಸೇವಿಸುತ್ತಾರೆ. ಕೆಲವರು ತರಕಾರಿ, ಸೊಪ್ಪುಗಳನ್ನು ಮಾತ್ರ ಸೇವಿಸಿದರೆ, ಕೆಲವರು ಚಿಕನ್, ಮಟನ್, ಮೀನುಗಳನ್ನು ಸೇವಿಸುತ್ತಾರೆ. ಆದರೆ ಚೀನಾದಲ್ಲಿ ಜನರು ಆಹಾರವಾಗಿ ನಾಯಿ, ಬೆಕ್ಕಿನ ಮಾಂಸವನ್ನು ಸೇವನೆ ಮಾಡುತ್ತಾರಂತೆ. ಭಾರತೀಯ ಮಹಿಳೆಯೊಬ್ಬರು ಚೀನಾದ ಒಂದು ಭಾಗಕ್ಕೆ ಭೇಟಿ ನೀಡಿ ನಾಯಿ ಮಾಂಸವನ್ನು ಬಹಿರಂಗವಾಗಿ ಮಾರಾಟ ಮಾಡುತ್ತಿರುವುದನ್ನು ವಿಡಿಯೊ ಮಾಡಿದ್ದಾಳೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video)ಆಗಿದೆ.

@wanderingwithpaint ಎಂಬ ಖಾತೆಯು ಈ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಪೋಸ್ಟ್ ಮಾಡಲಾದ ವಿಡಿಯೊದಲ್ಲಿ ಹುಡುಗಿ ಚೀನಾದ ಒಂದು ಸ್ಥಳಕ್ಕೆ ಭೇಟಿ ನೀಡಿ, ಬೀದಿಗಳಲ್ಲಿ ನಾಯಿ ಮಾಂಸವನ್ನು ಹೇಗೆ ಬಹಿರಂಗವಾಗಿ ಮಾರಾಟ ಮಾಡಲಾಗುತ್ತದೆ ಎಂಬುದನ್ನು ವೀಕ್ಷಕರಿಗೆ ತೋರಿಸಿದ್ದಾಳೆ ಮತ್ತು ಇದು ಇಲ್ಲಿನ ಸ್ಥಳೀಯರಿಗೆ ಅಚ್ಚುಮೆಚ್ಚಿನದಾಗಿದೆ ಎಂಬುದಾಗಿ ತಿಳಿಸಿದ್ದಾಳೆ.

ಆಗೇ ಆಕೆ ಸುತ್ತಾಡುವಾಗ ಒಂದು ಮೂಲೆಯಲ್ಲಿ ಒಬ್ಬ ವ್ಯಕ್ತಿಯು ಅನುಮಾನಾಸ್ಪದವಾಗಿ ಕಾಣುವ ಮಾಂಸದ ಖಾದ್ಯವನ್ನು ಬೇಯಿಸುತ್ತಿರುವಾಗ, ಅವಳು ತನ್ನ ಚೀನೀ ಸ್ನೇಹಿತ ವಿಕ್ಕಿಯ ಬಳಿ ಅದು ಏನು ಎಂದು ಕೇಳುತ್ತಾಳೆ, ಅದಕ್ಕೆ ಆತ “ಇದು ನಾಯಿ ಮಾಂಸ” ಎಂದು ಉತ್ತರಿಸಿದ್ದಾನೆ. ಆ ವ್ಯಕ್ತಿ ದೊಡ್ಡ ಪಾತ್ರೆಯಲ್ಲಿ ಮಾಂಸವನ್ನು ಬೇಯಿಸುತ್ತಾ ಅದನ್ನು ನಿರಂತರವಾಗಿ ಮಿಕ್ಸ್ ಮಾಡುತ್ತಿದ್ದಾನೆ. ನಂತರ ಅವಳು ಕ್ಯಾಮೆರಾವನ್ನು ಟ್ರಕ್‍ ಕಡೆಗೆ ತೆಗೆದುಕೊಂಡು ಹೋಗಿ ಅಲ್ಲಿ ನಾಯಿಗಳನ್ನು ಒಂದು ಪಂಜರದಲ್ಲಿ ಬಂಧಿಸಿಟ್ಟಿದ್ದನ್ನು ತೋರಿಸಿದ್ದಾಳೆ.

ನಂತರ ಅವಳು ನಾಯಿ ಮಾಂಸ ಸೇವನೆಯ ಬಗ್ಗೆ ಹಾಗೂ ಅದಕ್ಕೆ ಸಂಬಂಧಪಟ್ಟ ಹೆಚ್ಚಿನ ವಿವರಗಳ ಬಗ್ಗೆ ವಿಕ್ಕಿಯೊಂದಿಗೆ ಮತ್ತೆ ಮಾತನಾಡಿದ್ದಾಳೆ. ಆತ ತಿಳಿಸಿದ ಪ್ರಕಾರ, ಇಲ್ಲಿ ಎಲ್ಲಾ ಜನರು ಈ ಮಾಂಸ ತಿನ್ನಲು ಇಷ್ಟಪಡುವುದಿಲ್ಲ. ಆದರೆ ಇಲ್ಲಿನ ಶೇಕಡಾ 20 ರಿಂದ 30 ರಷ್ಟು ಕೆಲವು ಸ್ಥಳೀಯರು,ಇದನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಇದನ್ನು ತಿನ್ನುತ್ತಿಲ್ಲ” ಎಂದು ಹೇಳಿದ್ದಾನೆ.

ನಂತರ ಹುಡುಗಿ ವಯಸ್ಸಾದ ಚೀನೀ ಮಹಿಳೆಯನ್ನು ಭೇಟಿಯಾಗುತ್ತಾಳೆ, ಅವರ ಬಳಿ ನೀವು ಮಾಂಸವನ್ನು ಇಷ್ಟಪಡುತ್ತೀರಾ ಎಂದು ಕೇಳುತ್ತಾಳೆ, ಇದಕ್ಕೆ ಮಹಿಳೆ ಮ್ಯಾಂಡರಿನ್ ಭಾಷೆಯಲ್ಲಿ “ರುಚಿಕರ” ಎಂದು ಉತ್ತರಿಸುತ್ತಾಳೆ. “ನಾಯಿ ಮಾಂಸವು ಚೀನಾದ ದಕ್ಷಿಣ ಭಾಗದಲ್ಲಿನ ಅನೇಕ ಸಂಸ್ಕೃತಿಗಳಲ್ಲಿ ಸಾಮಾನ್ಯ ಆಹಾರವಾಗಿದೆ. ಥೈಲ್ಯಾಂಡ್, ವಿಯೆಟ್ನಾಂ, ಭಾರತ ಮುಂತಾದ ಅನೇಕ ದೇಶಗಳಲ್ಲಿ ನಾಯಿ ಮಾಂಸವನ್ನು ಸೇವಿಸುತ್ತಾರೆ.

ಇದನ್ನೂ ಓದಿ: ಶಿಕ್ಷಕಿ, ಸಹಪಾಠಿಗಳ ಕಿರುಕುಳ ತಾಳಲಾರದೆ ನೇಣಿಗೆ ಶರಣಾದ ಬಾಲಕ

ಈ ವಿಡಿಯೊಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಮೊದಲ ಬಳಕೆದಾರರು “ಅವರ ಹೊಟ್ಟೆ, ಅವರ ಸಂಸ್ಕೃತಿ, ಅವರ ಆಯ್ಕೆ” ಎಂದು ಬರೆದಿದ್ದಾರೆ. “ಇದು ದುಃಖಕರ ವಿಷಯವಾಗಿದೆ” ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Latest

Viral Video: ಜನದಟ್ಟಣೆ ಪ್ರದೇಶದಲ್ಲೇ ಕಾರಿನಲ್ಲಿ ಇಬ್ಬರು ಮಹಿಳೆಯರ ಜೊತೆ ಯುವಕನ ಸರಸ! ವಿಡಿಯೊ ಇದೆ

Viral Video: ಉತ್ತರ ಪ್ರದೇಶದ ಬಾರಾಬಂಕಿ ಪ್ರದೇಶದ ಲಕ್ನೋ-ಅಯೋಧ್ಯೆ ಎನ್ಎಚ್ 27 ರಲ್ಲಿ ಇನ್ನೋವಾ ಕಾರಿನೊಳಗೆ ಇಬ್ಬರು ಮಹಿಳೆಯರ ಜೊತೆ ಪುರುಷನೊಬ್ಬ ಸರಸಸಲ್ಲಾಪದಲ್ಲಿ ತೊಡಗಿರುವ ಆಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿಟಿ ಕೊಟ್ವಾಲಿ ಪ್ರದೇಶದ ವ್ಯಾಪ್ತಿಯಲ್ಲಿರುವ ಸಫೇದಾಬಾದ್‌ನಲ್ಲಿರುವ ಕಾಳಿಕಾ ಹವೇಲಿ ರೆಸ್ಟೋರೆಂಟ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

VISTARANEWS.COM


on

Viral Video
Koo


ನವದೆಹಲಿ: ಇತ್ತೀಚೆಗೆ ಕಾರಿನೊಳಗೆ ಹಲವಾರು ಕೃತ್ಯಗಳು ನಡೆಯುತ್ತಿರುವುದು ದಾಖಲಾಗುತ್ತಿರುತ್ತದೆ. ಕಾರಿನೊಳಗೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ, ಸೆಕ್ಸ್‌ನಲ್ಲಿ ತೊಡಗುವುದು ಹೀಗೆ ಹಲವಾರು ಘಟನೆಗಳು ಕೇಳಿಬಂದಿದೆ. ಇದೀಗ ಉತ್ತರ ಪ್ರದೇಶದ ಬಾರಾಬಂಕಿ ಪ್ರದೇಶದ ಲಕ್ನೋ-ಅಯೋಧ್ಯೆ ಎನ್ಎಚ್ 27 ರಲ್ಲಿ ಇನ್ನೋವಾ ಕಾರಿನೊಳಗೆ ಇಬ್ಬರು ಮಹಿಳೆಯರ ಜೊತೆ ಪುರುಷನೊಬ್ಬ ಸರಸಸಲ್ಲಾಪದಲ್ಲಿ ತೊಡಗಿರುವ ಆಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ನಿಶಾಂತ್ ಶರ್ಮಾ (ಭಾರದ್ವಾಜ್) ಎಂಬ ಬಳಕೆದಾರರು ತಮ್ಮ ಎಕ್ಸ್ ಖಾತೆಯಲ್ಲಿ ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಪೋಸ್ಟ್ ಮಾಡಿದ್ದು, ‘ಅರೆ ಭಾಯ್, ಓಯೋ ಮೇ ಹೆ ಚಲಾ ಜಾತಾ!’ ಎಂಬ ವ್ಯಂಗ್ಯದ ಶೀರ್ಷಿಕೆ ನೀಡಿದ್ದಾರೆ. ಸಿಟಿ ಕೊಟ್ವಾಲಿ ಪ್ರದೇಶದ ವ್ಯಾಪ್ತಿಯಲ್ಲಿರುವ ಸಫೇದಾಬಾದ್‍ನಲ್ಲಿರುವ ಕಾಳಿಕಾ ಹವೇಲಿ ರೆಸ್ಟೋರೆಂಟ್‍ನ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಯುಪಿ 33 ಎಎಲ್ 0011 ಲೈಸೆನ್ಸ್ ಬೋರ್ಡ್ ನಂಬರ್ ಅನ್ನು ಹೊಂದಿರುವ ಈ ಕಾರಿನೊಳಗೆ ವ್ಯಕ್ತಿಯೊಬ್ಬ ಇಬ್ಬರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ. ಆಘಾತಕಾರಿ ಸಂಗತಿಯೆಂದರೆ, ಇಂತಹ ನಾಚಿಗೇಡಿನ ಕೃತ್ಯ ಕುಟುಂಬಗಳು ಆಗಾಗ್ಗೆ ಭೇಟಿ ನೀಡುವ ಸ್ಥಳದಲ್ಲಿ ಹಾಡಹಗಲೇ ನಡೆದಿವೆ ಎನ್ನಲಾಗಿದೆ.

ಈ ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿದ ಬಾರಾಬಂಕಿ ಪೊಲೀಸರು ಎನ್ಎಚ್ -27ರ ರೆಸ್ಟೋರೆಂಟ್ ಮುಂದೆ ಈ ಘಟನೆ ನಡೆದಿದೆ ಎಂದು ದೃಢಪಡಿಸಿದ್ದಾರೆ. ಈ ವಾಹನವು ರಾಯ್ಬರೇಲಿ ಜಿಲ್ಲೆಯಲ್ಲಿ ನೋಂದಣಿಯಾಗಿದೆ ಎಂದು ತಿಳಿಸಿದ್ದಾರೆ. ಬಾರಾಬಂಕಿಯ ನಗರ ಮ್ಯಾಜಿಸ್ಟ್ರೇಟ್ ಈ ಕೃತ್ಯದಲ್ಲಿ ಭಾಗಿಯಾಗಿರುವವರ ಉದ್ದೇಶ ಮತ್ತು ಚಟುವಟಿಕೆಗಳ ಬಗ್ಗೆ ಮಾಹಿತಿ ತಿಳಿಯಲು ತನಿಖೆಯನ್ನು ಪ್ರಾರಂಭಿಸಿದ್ದಾರೆ, ತನಿಖೆಯ ಆಧಾರದ ಮೇಲೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಪತ್ನಿಯ ಮರ್ಮಾಂಗದೊಳಗೆ ಲಟ್ಟಣಿಗೆ ತುರುಕಿ ಭೀಕರವಾಗಿ ಕೊಂದ ಪತಿ

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದು, ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅನೇಕರು ಸಮಾಜದಲ್ಲಿ ಸಭ್ಯತೆಯ ಕೊರತೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. “ಸಭ್ಯತೆ ಇಲ್ಲದ ಜನರು ಜಗತ್ತಿನಲ್ಲಿ ಯಾವ ರೀತಿಯ ಜನರು?” ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರರು “ಕಲಿಯುಗ್ ಬಹುತ್ ತೇಜ್ ಆ ಗ್ಯಾ ಹೈ” ಎಂದು ಕಾಮೆಂಟ್ ಮಾಡಿದ್ದಾರೆ.

Continue Reading

ದೇಶ

Pralhad Joshi: ಪ್ರತಿ ಜಿಲ್ಲೆಗೊಂದು ‘ಮಾದರಿ ಸೌರ ಗ್ರಾಮ’ ಅನುಷ್ಠಾನಕ್ಕೆ ಕ್ರಮ; ಪ್ರಲ್ಹಾದ್‌ ಜೋಶಿ

Pralhad Joshi: ಪಿಎಂ ಸೂರ್ಯ ಘರ್ ಯೋಜನೆಯಡಿ ಪ್ರತಿ ಜಿಲ್ಲೆಗೊಂದು ‘ಮಾದರಿ ಸೌರ ಗ್ರಾಮ’ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿರುವ ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ, ಮಾದರಿ ಸೌರ ಗ್ರಾಮ ಅನುಷ್ಠಾನಕ್ಕೆ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ಕಾರ್ಯಾಚರಣೆ ಮಾರ್ಗಸೂಚಿ ಸಹ ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

VISTARANEWS.COM


on

Pralhad Joshi
Koo

ನವದೆಹಲಿ: ಪಿಎಂ ಸೂರ್ಯ ಘರ್ ಯೋಜನೆಯಡಿ ಪ್ರತಿ ಜಿಲ್ಲೆಗೊಂದು ‘ಮಾದರಿ ಸೌರ ಗ್ರಾಮ’ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ. ಮಾದರಿ ಸೌರ ಗ್ರಾಮ ಅನುಷ್ಠಾನಕ್ಕೆ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ಕಾರ್ಯಾಚರಣೆ ಮಾರ್ಗಸೂಚಿ ಸಹ ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Tungabhadra Dam: ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಿಸಲು ಬೊಮ್ಮಾಯಿ ಆಗ್ರಹ

800 ಕೋಟಿ ರೂ. ನಿಗದಿ

ದೇಶಾದ್ಯಂತ ಪ್ರತಿ ಜಿಲ್ಲೆಗೆ ಒಂದು ಮಾದರಿ ಸೌರ ಗ್ರಾಮವನ್ನು ರಚಿಸಲು ಒತ್ತು ನೀಡಿದ್ದು, ಇದಕ್ಕಾಗಿ ಒಟ್ಟು ರೂ. 800 ಕೋಟಿ ಆರ್ಥಿಕ ವೆಚ್ಚವನ್ನು ನಿಗದಿಪಡಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಮಾದರಿ ಗ್ರಾಮಕ್ಕೆ 1 ಕೋಟಿ ನೆರವು

ಸೌರ ಮಾದರಿ ಗ್ರಾಮದಲ್ಲಿ ಪ್ರತಿ ಜಿಲ್ಲೆಯ ವಿಜೇತ ಗ್ರಾಮವು ಕೇಂದ್ರದಿಂದ ಹಣಕಾಸು ನೆರವಾಗಿ ರೂ. 1 ಕೋಟಿ ಅನುದಾನ ಪಡೆಯುತ್ತದೆ ಎಂದು ಮಾಹಿತಿ ನೀಡಿರುವ ಸಚಿವ ಪ್ರಲ್ಹಾದ್‌ ಜೋಶಿ, ಸೌರಶಕ್ತಿ ಅಳವಡಿಕೆಯನ್ನು ಉತ್ತೇಜಿಸುವ ಮತ್ತು ಗ್ರಾಮ ಸಮುದಾಯಗಳನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಈ ಹೆಜ್ಜೆ ಇರಿಸಿ ಮಾದರಿ ಸೌರ ಗ್ರಾಮ ರಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.

ಸೌರ ಮೇಲ್ಛಾವಣಿಯ ಸೂರ್ಯ ಘರ್ ಯೋಜನೆ 75,021 ಕೋಟಿ ರೂ. ವೆಚ್ಚವನ್ನು ಹೊಂದಿದ್ದು, 2026-27ರ ಆರ್ಥಿಕ ವರ್ಷದವರೆಗೆ ಅನ್ವಯಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಮಾರ್ಗಸೂಚಿ ವಿವರ

ಮಾದರಿ ಸೌರ ಗ್ರಾಮವೆಂದು ಪರಿಗಣಿಸಲು, ಗ್ರಾಮವು 5,000 (ವಿಶೇಷ ವರ್ಗದ ರಾಜ್ಯಗಳಿಗೆ 2,000) ಜನಸಂಖ್ಯೆಯುಳ್ಳ ಕಂದಾಯ ಗ್ರಾಮವಾಗಿರಬೇಕು.

ಆಯ್ಕೆ ಪ್ರಕ್ರಿಯೆ ಸ್ಪರ್ಧಾತ್ಮಕವಾಗಿದ್ದು, ಅಲ್ಲಿ ಜಿಲ್ಲಾ ಮಟ್ಟದ ಸಮಿತಿಯು (DLC) ಸಂಭಾವ್ಯ ಅಭ್ಯರ್ಥಿಯ ಘೋಷಣೆಯ ನಂತರ 6 ತಿಂಗಳ ನಂತರ ಸ್ಥಾಪಿಸಲಾದ ಒಟ್ಟಾರೆ ವಿತರಿಸಿದ ನವೀಕರಿಸಬಹುದಾದ ಶಕ್ತಿ (RE) ಸಾಮರ್ಥ್ಯದ ಮೇಲೆ ಗ್ರಾಮಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.

ಅತಿ ಹೆಚ್ಚು ಆರ್‌ಇ ಸಾಮರ್ಥ್ಯ ಹೊಂದಿರುವ ಪ್ರತಿ ಜಿಲ್ಲೆಯ ವಿಜೇತ ಗ್ರಾಮಕ್ಕೆ ರೂ.1 ಕೋಟಿ ಕೇಂದ್ರ ಹಣಕಾಸು ನೆರವು ಸಿಗಲಿದೆ.

ಇದನ್ನೂ ಓದಿ: Namma Metro: ಹಸಿರು ಮಾರ್ಗದಲ್ಲಿ ಆ.13ರಿಂದ 15ರವರೆಗೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ

ಈ ಯೋಜನೆಯ ಅನುಷ್ಠಾನವನ್ನು ರಾಜ್ಯ/UT ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿಯು ಜಿಲ್ಲಾ ಮಟ್ಟದ ಸಮಿತಿಯ (DLC) ಮೇಲ್ವಿಚಾರಣೆಯಲ್ಲಿ ಮಾಡುತ್ತದೆ. ಆಯ್ದ ಗ್ರಾಮಗಳು ಸೌರಶಕ್ತಿ-ಚಾಲಿತ ಸಮುದಾಯಗಳಿಗೆ ಪರಿಣಾಮಕಾರಿಯಾಗಿ ಪರಿವರ್ತನೆಯಾಗುವುದನ್ನು ಖಚಿತಪಡಿಸುತ್ತದೆ ಮತ್ತು ದೇಶದಾದ್ಯಂತ ಇತರ ಹಳ್ಳಿಗಳಿಗೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತದೆ.

Continue Reading

ಕರ್ನಾಟಕ

CM Siddaramaiah: 6000ಕ್ಕೂ ಹೆಚ್ಚು ಗ್ರಂಥಾಲಯ ಮೇಲ್ಚಿಚಾರಕರು ಕನಿಷ್ಠ ವೇತನ ವ್ಯಾಪ್ತಿಗೆ; ಸಿದ್ದರಾಮಯ್ಯ ಮಹತ್ವದ ಘೋಷಣೆ

CM Siddaramaiah: ನಮ್ಮ ಸರ್ಕಾರ ಸಚಿವ ಪ್ರಿಯಾಂಕ ಖರ್ಗೆ ಅವರ ನೇತೃತ್ವದಲ್ಲಿ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರನ್ನು ಕನಿಷ್ಠ ವೇತನಕ್ಕೆ ಒಳಪಡಿಸಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಂಥ ಪಾಲಕರ ದಿನಾಚರಣೆ ಮತ್ತು ಮೇಲ್ವಿಚಾರಕರ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ, ರಾಜ್ಯದಲ್ಲಿ 6599 ಹೊಸ ಗ್ರಾಮ ಗ್ರಂಥಾಲಯ ಕಾರ್ಯಕ್ರಮ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

VISTARANEWS.COM


on

CM Siddaramaiah
Koo

ಬೆಂಗಳೂರು: ನಮ್ಮ ಸರ್ಕಾರ ಸಚಿವ ಪ್ರಿಯಾಂಕ ಖರ್ಗೆ ಅವರ ನೇತೃತ್ವದಲ್ಲಿ ಎಲ್ಲಾ 6000ಕ್ಕೂ ಹೆಚ್ಚು ಗ್ರಂಥಾಲಯ ಮೇಲ್ವಿಚಾರಕರನ್ನು ಕನಿಷ್ಠ ವೇತನಕ್ಕೆ ಒಳಪಡಿಸಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಘೋಷಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಂಥ ಪಾಲಕರ ದಿನಾಚರಣೆ ಮತ್ತು ಮೇಲ್ವಿಚಾರಕರ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ, ರಾಜ್ಯದಲ್ಲಿ 6599 ಹೊಸ ಗ್ರಾಮ ಗ್ರಂಥಾಲಯ ಕಾರ್ಯಕ್ರಮ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಪುಸ್ತಕಗಳು ಒಳ್ಳೆಯ ಸ್ನೇಹಿತನಿದ್ದಂತೆ. ಗ್ರಂಥಾಲಯಗಳಿಗೆ ಹೋಗುವುದು ಅತ್ಯಂತ ಉತ್ತಮ ಹವ್ಯಾಸ. ಗ್ರಾಮಗಳಲ್ಲಿ 6599 ಗ್ರಾಮ‌ಮಟ್ಟದ ಗ್ರಂಥಾಲಯಗಳನ್ಮು ತೆರೆಯುವ ನಿರ್ಧಾರ ಮಾಡಿ ಘೋಷಣೆ ಮಾಡಿದ್ದೇವೆ ಎಂದರು.

ಜ್ಞಾನ ವಿಕಾಸ ಕೇವಲ ಶಾಲಾ ಶಿಕ್ಷಣದಿಂದ ಮಾತ್ರ ಸಾಧ್ಯವಿಲ್ಲ. ಶಾಲೆಗಳ ಹೊರಗೂ ಕಲಿಕೆ ಅಗತ್ಯ. ಸಾವಿರಾರು ವರ್ಷಗಳ ಕಾಲ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದ ಸಮುದಾಯಗಳಿಗೆ ಅಂಬೇಡ್ಕರ್ ಅವರ ಸಂವಿಧಾನದ ಕಾರಣದಿಂದ ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿದೆ. ನಾವು 78 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಬಂದು ಇಷ್ಡು ವರ್ಷಗಳಾದರೂ ನೂರಕ್ಕೆ ನೂರು ಸಾಕ್ಷರತೆ ಸಾಧ್ಯವಾಗಿಲ್ಲ. ಇದನ್ನು ಸಾಧಿಸುವ ದಿಕ್ಕಿನಲ್ಲಿ ನಾವು ಶ್ರಮಿಸಬೇಕಿದೆ ಎಂದರು.

ಇದನ್ನೂ ಓದಿ: Part Time Lecturers: ಅರೆಕಾಲಿಕ ಉಪನ್ಯಾಸಕರಿಗೆ ಗುಡ್ ನ್ಯೂಸ್; ಗೌರವಧನದಲ್ಲಿ ಭಾರಿ ಹೆಚ್ಚಳ

ಮೌಢ್ಯ, ಕಂದಾಚಾರಗಳು ತೊಲಗಬೇಕಾದರೆ ಓದು ಮುಖ್ಯ. ಮೌಢ್ಯದ ಕಾರಣದಿಂದ ಗ್ರಾಮೀಣ ಜನರ ಬದುಕು ಬಹಳ ಹಿಂದುಳಿಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರತಿಯೊಬ್ಬ ಯುವಕ, ಯುವತಿಯರು ಹಾಗೂ ಮಕ್ಕಳು ಗ್ರಂಥಾಲಯಗಳ ಸದುಪಯೋಗ ಪಡಿಸಿಕೊಂಡು ಜ್ಞಾನಾರ್ಜನೆ ಮಾಡಬೇಕು. ಇದೇ ಅಂಬೇಡ್ಕರ್ ಅವರ ಕನಸಾಗಿತ್ತು ಎಂದು ಸಿಎಂ ತಿಳಿಸಿದರು.

ಜ್ಞಾನ ಪಡೆಯುವುದು ಎಂದರೆ ಮನುಷ್ಯರಾಗಿ ಬಾಳುವುದು. ಎಲ್ಲಾ ಮಕ್ಕಳೂ ವಿಶ್ವ ಮಾನವರಾಗಿ ಹುಟ್ಟುತ್ತಾರೆ. ಸಾಮಾಜಿಕ ಪ್ರಭಾವದಿಂದ ಬೆಳೆಯುತ್ತಾ ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ ಎಂದು ಕುವೆಂಪು ಅವರು ಹೇಳಿದ್ದಾರೆ. ಆದ್ದರಿಂದ ಬೆಳೆಯುತ್ತಲೂ ನಾವು ವಿಶ್ವ ಮಾನವರಾಗಿ ಉಳಿಯುವಂತಹ ಪ್ರಯತ್ನ ಮಾಡಬೇಕು. ಆಗ ಮಾತ್ರ ಮಾನವನ ಹುಟ್ಟು ಸಾರ್ಥಕ ಆಗುತ್ತದೆ ಎಂದರು.

ಓದುವ ಹವ್ಯಾಸ ಬೆಳೆಸುವ ಉದ್ದೇಶದಿಂದಲೇ ಗ್ರಾಮ ಮಟ್ಟದಲ್ಲೂ ಉತ್ತಮ ಗ್ರಂಥಾಲಯಗಳನ್ನು ಆರಂಭಿಸುತ್ತಿದೆ ಎಂದು ತಿಳಿಸಿದ ಅವರು, ನಮ್ಮ ಸರ್ಕಾರ ಸಚಿವ ಪ್ರಿಯಾಂಕ ಖರ್ಗೆ ಅವರ ನೇತೃತ್ವದಲ್ಲಿ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರನ್ನು ಕನಿಷ್ಠ ವೇತನಕ್ಕೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಘೋಷಿಸಿದರು.

ಇದನ್ನೂ ಓದಿ: Government Employees Sports: ಆ.17ರಿಂದ 19ರವರೆಗೆ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ

ಈ ವೇಳೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನ‌ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಉಪಸ್ಥಿತರಿದ್ದರು.

Continue Reading

ದೇಶ

Independence day speech in Kannada: ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧ ಭಾಷಣ!

Independence day speech in Kannada: ಆಗಸ್ಟ್ 15 ದೇಶಾದ್ಯಂತ ಎಲ್ಲರಿಗೂ ಹೊಸ ಉತ್ಸಾಹ, ಸಂತೋಷವನ್ನು ತರುವ ದಿನ. ಯಾಕೆಂದರೆ ಪ್ರತಿ ವರ್ಷದಂತೆ ಮತ್ತೆ ಈ ಬಾರಿಯೂ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ಇದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಪ್ರಾರಂಭಿಸಿದ್ದೇವೆ. ವಿದ್ಯಾರ್ಥಿಗಳಂತೂ ಭಾಷಣ, ಗಾಯನ, ನೃತ್ಯಕ್ಕೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈಗಾಗಲೇ ಶಾಲೆ, ಕಾಲೇಜು ಸೇರಿದಂತೆ ವಿವಿಧೆಡೆ ಭಾಷಣಕ್ಕೆ ಹೆಸರು ನೋಂದಾಯಿಸಿದ್ದರೆ ಇದಕ್ಕಾಗಿ ಎರಡು ಸಿದ್ಧ ಭಾಷಣಗಳು ಇಲ್ಲಿವೆ.

VISTARANEWS.COM


on

By

Independence day speech in Kannada
Koo

ಭಾರತ ಸ್ವಾತಂತ್ರ್ಯ ಪಡೆದ ದಿನವನ್ನು (Independence day speech in Kannada) ಆಗಸ್ಟ್ 15ರಂದು (independence day 2024) ದೇಶಾದ್ಯಂತ ಆಚರಿಸಲು ಸಿದ್ಧತೆ ನಡೆಯುತ್ತಿದೆ. ಈ ದಿನವು ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲು, ವಸಾಹತುಶಾಹಿ ಆಳ್ವಿಕೆಯಿಂದ ದೇಶದ ವಿಮೋಚನೆಯನ್ನು ಗುರುತಿಸುತ್ತದೆ. ಈ ದಿನ ನಾವು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದವರನ್ನು ಮತ್ತು ದೇಶಕ್ಕೆ ದಣಿವರಿಯಿಲ್ಲದೆ ಸೇವೆ ಸಲ್ಲಿಸಿದವರನ್ನು ಗೌರವಿಸುತ್ತೇವೆ. ಅವರ ಶೌರ್ಯ ಮತ್ತು ಸಮರ್ಪಣೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಲಿ ಎಂದು ಆಶಿಸುತ್ತೇವೆ.

78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ನಾವು ಸಜ್ಜಾಗುತ್ತಿರುವಾಗ ಈ ದಿನದ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ನಮ್ಮ ಪೂರ್ವಜರು ಮಾಡಿದ ತ್ಯಾಗವನ್ನು ನೆನಪಿಸಿಕೊಳ್ಳಬೇಕು. ಇದಕ್ಕಾಗಿ ವಿದ್ಯಾರ್ಥಿಗಳಿಗೆ ದೀರ್ಘ ಮತ್ತು ಸಣ್ಣ ಭಾಷಣದ ಸಿದ್ಧ ಪಾಠಗಳು ಇಲ್ಲಿವೆ.


ಸ್ವಾತಂತ್ರ್ಯೋತ್ಸವದ ದಿನ ವಿದ್ಯಾರ್ಥಿಗಳು ಮಾಡಬಹುದಾದ ದೀರ್ಘ ಭಾಷಣ:

ಶುಭೋದಯ ಗುರುಗಳೇ, ಗಣ್ಯ ಅತಿಥಿಗಳೇ ಹಾಗೂ ನನ್ನ ಎಲ್ಲಾ ಆತ್ಮೀಯ ಸಹಪಾಠಿಗಳೇ…

ಪ್ರತಿ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವುದು ನಮಗೆಲ್ಲ ಸಂಭ್ರಮದ ಕ್ಷಣ. ದೇಶವು ತನ್ನ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಗಳಿಸಿದ ದಿನವನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತೇವೆ.

ಇಂದು ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಒಂದು ಮಹತ್ವದ ಸಂದರ್ಭವನ್ನು ಆಚರಿಸಲು ನಾವೆಲ್ಲರೂ ಒಟ್ಟುಗೂಡಿದ್ದೇವೆ. ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯ ಅನೇಕ ವರ್ಷಗಳ ಬಳಿಕ ಭಾರತವು ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು. ಅಂದಿನಿಂದ ನಮ್ಮ ದೇಶವು ಕೈಗೊಂಡ ಪ್ರಯಾಣಕ್ಕೆ ಕೃತಜ್ಞತೆಯನ್ನು ಸಲ್ಲಿಸಬೇಕಿದೆ. ಇದು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಸ್ವರಾಜ್ಯವನ್ನು ಸಾಧಿಸುವ ರಾಷ್ಟ್ರದ ಸಂಕಲ್ಪವನ್ನು ಪ್ರತಿನಿಧಿಸುತ್ತದೆ.

ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಸುಭಾಸ್ ಚಂದ್ರ ಬೋಸ್ ಅವರಂತಹ ಪ್ರಮುಖ ನಾಯಕರು ನಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಸಹಕಾರ ಚಳವಳಿ, ಉಪ್ಪಿನ ಯಾತ್ರೆ, ಭಾರತ ಬಿಟ್ಟು ತೊಲಗಿ ಚಳವಳಿಗಳು ನಮ್ಮ ಸ್ವಾತಂತ್ರ್ಯಕ್ಕೆ ದಾರಿಮಾಡಿಕೊಟ್ಟ ಕೆಲವು ಮೈಲುಗಲ್ಲುಗಳು.

ಸ್ವಾತಂತ್ರ್ಯ ದಿನವು ಕೇವಲ ರಾಷ್ಟ್ರೀಯ ರಜಾ ದಿನವಲ್ಲ. ಇದು ಪ್ರಜಾಪ್ರಭುತ್ವ, ಏಕತೆ ಮತ್ತು ನ್ಯಾಯದ ತತ್ತ್ವಗಳ ಆಚರಣೆಯಾಗಿದೆ. ರಾಷ್ಟ್ರದ ಸಾರ್ವಭೌಮತ್ವವನ್ನು ಬಿಂಬಿಸಲು ಸ್ವಾತಂತ್ರ್ಯ ದಿನದಂದು ವಿವಿಧ ಸಂಪ್ರದಾಯಗಳನ್ನು ಆಚರಿಸಲಾಗುತ್ತದೆ. ಸಾಮಾನ್ಯ ಚಟುವಟಿಕೆಗಳಲ್ಲಿ ಧ್ವಜಾರೋಹಣ ಸಮಾರಂಭ, ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸುವ ಮೆರವಣಿಗೆ, ಸಾಂಸ್ಕೃತಿಕ ಪ್ರದರ್ಶನ ಸೇರಿವೆ. ಇದು ನಾಗರಿಕರನ್ನು ಏಕತೆ ಮತ್ತು ದೇಶಭಕ್ತಿಯಲ್ಲಿ ಒಟ್ಟುಗೂಡಿಸುವ ದಿನವಾಗಿದೆ. ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರದ ಸ್ವಾತಂತ್ರ್ಯದ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ ಮತ್ತು ಉಜ್ವಲ ಭವಿಷ್ಯವನ್ನು ಎದುರು ನೋಡುತ್ತಿದೆ ಎಂಬುದನ್ನು ಸಾರುತ್ತದೆ.

ಎಲ್ಲರೂ ಈ ದಿನವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಜನರು ರಾಷ್ಟ್ರೀಯ ಬಣ್ಣಗಳನ್ನು ಧರಿಸುತ್ತಾರೆ. ಕಟ್ಟಡಗಳನ್ನು ಧ್ವಜ ಮತ್ತು ಬ್ಯಾನರ್‌ಗಳಿಂದ ಅಲಂಕರಿಸುತ್ತಾರೆ. ದೇಶದ ಪರಂಪರೆ ಮತ್ತು ಸಾಧನೆಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಇಂಥ ಚಟುವಟಿಕೆಗಳಲ್ಲಿ ಭಾಗವಹಿಸುವುದೇ ನಮಗೆಲ್ಲ ಹೆಮ್ಮೆಯ ಕ್ಷಣ.

ಸ್ವಾತಂತ್ರ್ಯ ದಿನವು ರಾಷ್ಟ್ರದ ಇತಿಹಾಸದಲ್ಲಿ ಎದುರಾದ ಸವಾಲುಗಳು ಮತ್ತು ವಿಜಯಗಳನ್ನು ನಮಗೆ ನೆನಪಿಸುತ್ತದೆ. ದೇಶದಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಮೂಡುವಂತೆ ಮಾಡುತ್ತದೆ. ದೇಶದ ರಕ್ಷಣೆಗಾಗಿ ಒಟ್ಟಾಗುವಂತೆ ಮಾಡುತ್ತದೆ. ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಏಕತೆಯ ತತ್ತ್ವಗಳ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಸ್ವಾತಂತ್ರ್ಯ ದಿನವಾದ ಇಂದು ಹಿಂದಿನದನ್ನು ನೆನಪಿಸಿಕೊಳ್ಳೋಣ, ವರ್ತಮಾನವನ್ನು ಪಾಲಿಸಿ ಶಾಂತಿ ಮತ್ತು ಸಮೃದ್ಧಿಯ ಭವಿಷ್ಯಕ್ಕಾಗಿ ಹಾರೈಸೋಣ. ಮತ್ತಷ್ಟು ಸದೃಢ ದೇಶವನ್ನು ಕಟ್ಟಲು ನಾವೆಲ್ಲ ಪಣ ತೊಡೋಣ.

ಜೈ ಹಿಂದ್!


ಸ್ವಾತಂತ್ರ್ಯೋತ್ಸವದ ದಿನ ವಿದ್ಯಾರ್ಥಿಗಳು ಮಾಡಬಹುದಾದ ಸಂಕ್ಷಿಪ್ತ ಭಾಷಣ:

ಶುಭೋದಯ ಗುರುಗಳೇ, ಗಣ್ಯ ಅತಿಥಿಗಳೇ ಮತ್ತು ನನ್ನ ಎಲ್ಲಾ ಆತ್ಮೀಯ ಸಹಪಾಠಿಗಳೇ,

ಪ್ರತಿ ವರ್ಷದಂತೆ ಈ ಬಾರಿಯೂ ನಾವು ಸ್ವಾತಂತ್ರ್ಯ ದಿನವನ್ನು ಅಭಿಮಾನದಿಂದ ಮತ್ತು ಹೆಮ್ಮೆಯಿಂದ ಆಚರಿಸುತ್ತಿದ್ದೇವೆ. ದೇಶವು ತನ್ನ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಗಳಿಸಿದ ಈ ದಿನವನ್ನು ಗೌರವಿಸುವ ಸಲುವಾಗಿ ಅತ್ಯಂತ ಸಂಭ್ರಮದಿಂದ ಈ ದಿನವನ್ನು ಆಚರಿಸಲಾಗುತ್ತದೆ.

ಸ್ವಾತಂತ್ರ್ಯ, ಏಕತೆ ಮತ್ತು ಸಮಾನತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ದಿನವನ್ನು ಗೌರವಿಸಬೇಕಿದೆ. ನಮ್ಮ ದೇಶವನ್ನು ಎಲ್ಲರಿಗೂ ಸೌಹಾರ್ದಯುತ ಸ್ಥಳವನ್ನಾಗಿ ಮಾಡಲು ನಾವು ಶ್ರಮಿಸಬೇಕಿದೆ. ನಮ್ಮ ಪೂರ್ವಜರು ಪ್ರಾರಂಭಿಸಿದ ಪ್ರಯಾಣವನ್ನು ಮುಂದುವರಿಸುವ ಪ್ರತಿಜ್ಞೆಯನ್ನು ನಾವು ಕೈಗೊಳ್ಳಬೇಕಿದೆ.

ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳನ್ನು ಆಚರಿಸಲು ಈ ವಿಶೇಷ ದಿನದಂದು ನಾವೆಲ್ಲರೂ ಒಂದಾಗುತ್ತೇವೆ. ಇದಕ್ಕಾಗಿ ವಿವಿಧ ಚಟುವಟಿಕೆಗಳ ಮೂಲಕ ನಾವು ನಮ್ಮ ವೈವಿಧ್ಯಮಯ ರಾಷ್ಟ್ರದ ಸೌಂದರ್ಯವನ್ನು ಪ್ರದರ್ಶಿಸುತ್ತೇವೆ. ಈ ಮೂಲಕ ನಾಗರಿಕರಲ್ಲಿ ಸಾಮರಸ್ಯ ಮತ್ತು ಏಕತೆಯನ್ನು ಬೆಳೆಸುವ ಉದ್ದೇಶವಿದೆ.

ಸ್ವಾತಂತ್ರ್ಯ ದಿನಾಚರಣೆ 2024 ಕೇವಲ ಆಚರಣೆಯ ಸಮಯವಲ್ಲ. ಸ್ವತಂತ್ರ ರಾಷ್ಟ್ರದ ನಾಗರಿಕರಾಗಿ ನಮ್ಮ ಕರ್ತವ್ಯಗಳನ್ನು ನೆನಪಿಸುವ ದಿನವಾಗಿದೆ. ನಮ್ಮ ಸ್ವಾತಂತ್ರ್ಯವನ್ನು ಗೌರವಿಸೋಣ. ಅದರ ತತ್ವಗಳನ್ನು ಎತ್ತಿ ಹಿಡಿಯೋಣ. ಎಲ್ಲರಿಗೂ ಉಜ್ವಲವಾದ, ಹೆಚ್ಚು ಒಳಗೊಳ್ಳುವ ಭವಿಷ್ಯಕ್ಕಾಗಿ ಕೆಲಸ ಮಾಡೋಣ.

ಜೈ ಹಿಂದ್!

ಭಾಷಣದ ವಿಷಯಗಳ ಆಯ್ಕೆ ಹೇಗಿರಬೇಕು?

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾಡುವ ದೀರ್ಘ ಭಾಷಣದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಅನುಭವಿಸಿದ ಕಷ್ಟಗಳನ್ನು ಹೇಳಬಹುದು. ನಮ್ಮ ದೇಶದಲ್ಲಿ ಏಕತೆ ಮತ್ತು ವೈವಿಧ್ಯತೆಯ ಮಹತ್ವವನ್ನು ತಿಳಿಸಬಹುದು. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ನಾಗರಿಕರಾಗಿ ನಾವು ಹೊಂದಿರುವ ಕರ್ತವ್ಯಗಳ ಬಗ್ಗೆ ಮಾತನಾಡಬಹುದು. ಈ ಭಾಷಣವು ವಿದ್ಯಾರ್ಥಿಗಳು ತಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವಂತೆ ಮತ್ತು ರಾಷ್ಟ್ರದ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುವಂತೆ ಪ್ರೇರೇಪಿಸಬೇಕು.

ಕಿರು ಭಾಷಣದಲ್ಲಿ ದೇಶಭಕ್ತಿ, ಏಕತೆ ಮತ್ತು ರಾಷ್ಟ್ರವನ್ನು ನಿರ್ಮಿಸುವಲ್ಲಿ ಯುವಜನರ ಪಾತ್ರದಂತಹ ಅಗತ್ಯ ವಿಷಯಗಳ ಮೇಲೆ ಬೆಳಕು ಚೆಲ್ಲಬಹುದು. ಸ್ವಾತಂತ್ರ್ಯ ಪಡೆದ ಅನಂತರ ಭಾರತ ಸಾಧಿಸಿದ ಪ್ರಗತಿ ಮತ್ತು ನಾವು ಇನ್ನೂ ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಬಹುದು. ಚಿಕ್ಕ ಭಾಷಣವು ಕೇಳುಗರಲ್ಲಿ ಸ್ಮರಣೀಯವಾದ ಪ್ರಭಾವವನ್ನು ಬಿರುವಂತಿರಬೇಕು.

ಇದನ್ನೂ ಓದಿ: Independence Day 2024: ಈ ಬಾರಿ ಆಚರಿಸುತ್ತಿರುವುದು ಎಷ್ಟನೇ ಸ್ವಾತಂತ್ರ್ಯೋತ್ಸವ? 77 or 78?

ಸ್ವಾತಂತ್ರ್ಯ ದಿನವು ಕೇವಲ ಆಚರಣೆಯಲ್ಲ. ಇದು ಸ್ಮರಣೆ ಮತ್ತು ಪ್ರತಿಬಿಂಬದ ಸಮಯ. ನಮ್ಮ ಸ್ವಾತಂತ್ರ್ಯವನ್ನು ಗೆಲ್ಲಲು ತ್ಯಾಗ ಮಾಡಿದ ಅನೇಕ ಜೀವಗಳನ್ನು ನೆನಪಿಸುತ್ತದೆ. ಈ ದಿನ ನಾವು ಮಾಡುವ ಭಾಷಣಗಳು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರಾಗಿ ಸಮಾಜಕ್ಕೆ ಧನಾತ್ಮಕ ಕೊಡುಗೆ ನೀಡಲು ಋಣಿಯಾಗಿರುವಂತೆ ಮಾಡುತ್ತದೆ. ನಾವು ಆನಂದಿಸುತ್ತಿರುವ ಸ್ವಾತಂತ್ರ್ಯಕ್ಕಾಗಿ 2024ರ ಸ್ವಾತಂತ್ರ್ಯ ದಿನವನ್ನು ಹೆಮ್ಮೆ ಮತ್ತು ಕೃತಜ್ಞತೆಯಿಂದ ಆಚರಿಸೋಣ.

Continue Reading
Advertisement
Ishan Kishan
ಕ್ರೀಡೆ1 min ago

Ishan Kishan: ಬುಚ್ಚಿ ಬಾಬು ಕ್ರಿಕೆಟ್ ಟೂರ್ನಿ; ಜಾರ್ಖಂಡ್ ತಂಡಕ್ಕೆ ಇಶಾನ್ ಕಿಶನ್ ನಾಯಕ

Self harming
ಕರ್ನಾಟಕ5 mins ago

Self harming : ಶಿವಮೊಗ್ಗದಲ್ಲಿ ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

Patanjali ads
ದೇಶ11 mins ago

Patanjali Ayurved Ads: ನ್ಯಾಯಾಂಗ ನಿಂದನೆ ಪ್ರಕರಣ ರದ್ದು; ಬಾಬಾ ರಾಮದೇವ್‌ಗೆ ಬಿಗ್‌ ರಿಲೀಫ್

Gold Rate Today
ಚಿನ್ನದ ದರ19 mins ago

Gold Rate Today: ಮತ್ತೆ ಕೈ ಸುಡುತ್ತಿದೆ ಚಿನ್ನ; ಬಂಗಾರ ದರದಲ್ಲಿ ಇಂದು ಭಾರಿ ಏರಿಕೆ

ಬೆಂಗಳೂರು22 mins ago

Assault Case: ಪಾರ್ಕಿಂಗ್‌ ವಿಚಾರಕ್ಕೆ ಡಿಶುಂ ಡಿಶುಂ; ಮಹಿಳೆಗೆ ಕಪಾಳಮೋಕ್ಷ!

Muda Scam
ಕರ್ನಾಟಕ31 mins ago

Muda Scam: ಸಿಎಂ ವಿರುದ್ಧದ ಅರ್ಜಿ ವಿಚಾರಣೆಗೆ ಸ್ವೀಕರಿಸದಂತೆ ಕೋರ್ಟ್‌ಗೆ ಅರ್ಜಿ

Tungabhadra Dam
ಪ್ರಮುಖ ಸುದ್ದಿ42 mins ago

Tungabhadra Dam: ಗೇಟ್‌ ರಿಪೇರಿಗಾಗಿ 60 ಟಿಎಂಸಿ ನೀರು ಖಾಲಿ, 8 ಜಿಲ್ಲೆಗಳ ರೈತರಿಗೆ ನೀರಿಲ್ಲ!

Naga Chaitanya
ಸಿನಿಮಾ44 mins ago

Naga Chaitanya: ನಾಗ ಚೈತನ್ಯ-ಶೋಭಿತಾ ನಿಶ್ಚಿತಾರ್ಥದ ಫೋಟೊ ಹಂಚಿಕೊಂಡ ಸಮಂತಾ

Paris Paralympic 2024
ಕ್ರೀಡೆ54 mins ago

Paris Paralympic 2024: ಪ್ಯಾರಾಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತ; ಹಾಲಿ ಚಾಂಪಿಯನ್‌ ಪ್ರಮೋದ್ ಭಗತ್‌ಗೆ ಅಮಾನತು ಶಿಕ್ಷೆ

kolkata doctor murder case
ದೇಶ54 mins ago

Kolkata Doctor Murder Case: ನೋ ಸೇಫ್ಟಿ…ನೋ ಡ್ಯೂಟಿ- ವೈದ್ಯೆ ಕೊಲೆ ಖಂಡಿಸಿ ದೇಶವ್ಯಾಪಿ ಭಾರೀ ಪ್ರತಿಭಟನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ5 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ5 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ5 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು7 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ7 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌