ಟ್ರಾಫಿಕ್ ಸಮಸ್ಯೆ ಎಲ್ಲೆಂದರಲ್ಲಿ ಕಂಡುಬರುವುದು ಸಾಮಾನ್ಯ. ಕೆಲವೊಂದು ಕಡೆ ರಸ್ತೆಗಳ ಸಮಸ್ಯೆಯಿಂದಾಗಿ ವಾಹನಗಳು ಮುಂದೆ ಚಲಾಯಿಸಲಾಗದೆ ಗಂಟೆಗಟ್ಟಲೆ ಅಲ್ಲೇ ನಿಂತು ಕಾಯುವಂತಾಗುತ್ತದೆ. ಇದರಿಂದ ಕೆಲಸಕ್ಕೆ ಹೋಗುವವರು, ಶಾಲಾ ಮಕ್ಕಳಿಗೆ ತುಂಬಾ ಸಮಸ್ಯೆಯಾಗುತ್ತದೆ. ದೆಹಲಿ, ಬೆಂಗಳೂರಿನಂತಹ ಸಿಟಿಗಳಲ್ಲಿ ಈ ಸಮಸ್ಯೆ ಸಾಮಾನ್ಯ. ಇದೀಗ ಇಂತಹ ಟ್ರಾಫಿಕ್‌ನಿಂದಾಗಿ ರೊಚ್ಚಿಗೆದ್ದ ಯುವತಿಯೊಬ್ಬಳು ಆಟೋ ಚಾಲಕನ ಮೇಲೆ ಕಬ್ಬಿಣದ ಉಪಕರಣದಿಂದ ಹಲ್ಲೆ ಮಾಡಿದ ಘಟನೆ ದೆಹಲಿಯ ನಿಹಾಲ್ ವಿಹಾರ್‌ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದ ಪೋಸ್ಟ್ ಆಗಿದ್ದು, ಸಖತ್ ವೈರಲ್ (Viral Video) ಆಗಿ ಚರ್ಚೆಗೆ ಕಾರಣವಾಗಿದೆ.
ದೆಹಲಿಯ ನಿಹಾಲ್ ವಿಹಾರ್‌ನ ರಸ್ತೆಯೊಂದರಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಆಟೋ ಚಾಲಕ ಟ್ರಾಫಿಕ್‍ನಿಂದಾಗಿ ತನ್ನ ವಾಹನವನ್ನು ನಿಲ್ಲಿಸಿದಾನೆ. ಆಗ ಹಿಂದೆ ಬುಲೆಟ್‍ನಲ್ಲಿ ಬಂದ ಯುವತಿ ಆಟೋ ಚಾಲಕನಿಗೆ ಹಾರ್ನ್ ಮಾಡಿದ್ದಾಳೆ. ಆದರೆ ಆತನಿಗೆ ವಾಹನವೊಂದು ರಸ್ತೆಗೆ ತಡಲಾಗಿ ನಿಂತಿದ್ದರಿಂದ ತನ್ನ ಆಟೋವನ್ನು ಮುಂದೆ ಸಾಗಿಸಲು ಸಾಧ್ಯವಾಗಲಿಲ್ಲ. ನಂತರ ಯುವತಿ ತಾಳ್ಮೆ ಕಳೆದುಕೊಂಡು ಆಟೊ ಚಾಲಕನೊಂದಿಗೆ ಗಲಾಟೆಗೆ ಇಳಿದಿದ್ದಾಳೆ, ನಂತರ ಕೋಪಗೊಂಡು ಕಬ್ಬಿಣದ ಉಪಕರಣದಿಂದ ಆಟೋ ಚಾಲಕನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾಳೆ. ಇದರಿಂದ ಆತನ ತಲೆಗೆ ಗಾಯವಾಗಿ ರಕ್ತ ಸೋರಿದೆ.
Road-Rage kalesh, Girl on Bullet Beats up the Auto-Driver with some Tool Cause he was not Moving his Auto because of Traffic Nihal vihar Delhi kalesh (Yeh auto wala apne bacho ko school chodke aarha tha yeh ladki piche thi bullet pe horn dia toh aage rickshaw hone ki wajha se… pic.twitter.com/Jju3aKrB7I
— Ghar Ke Kalesh (@gharkekalesh) July 3, 2024
ವಿಡಿಯೊದಲ್ಲಿ ಯುವತಿ ಕಬ್ಬಿಣದ ಉಪಕರಣದಿಂದ ಆಟೋ ಚಾಲಕನನ್ನು ಅಟ್ಟಾಡಿಸಿಕೊಂಡು ಹೊಡೆಯುವುದನ್ನು ಕಾಣಬಹುದು. ಅಲ್ಲಿದ್ದವರು ಆಕೆಯನ್ನು ತಡೆದರೂ ಕೇಳದ ಯುವತಿ ಮತ್ತೆ ಆತನಿಗೆ ಹೊಡೆದಿದ್ದಾಳೆ. ಚಾಲಕನ ತಲೆಯಲ್ಲಿ ರಕ್ತ ಸೋರುತ್ತಿರುವುದು ಕಂಡುಬಂದಿದೆ. ಇಷ್ಟಾದರೂ ಯುವತಿ ವಾಗ್ದಾಳಿ ನಡೆಸುವುದನ್ನು ನಿಲ್ಲಿಸಿಲ್ಲ. ಈ ಘಟನೆಯನ್ನು ನೋಡುಗರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಜನರ ಗಮನ ಸೆಳೆದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಕಳ್ಳರು ಬ್ಯಾಗ್ ಕಸಿದು ಓಡುತ್ತಾರೆ! ಪೋಲಿಸ್ರು ಏನ್ ಮಾಡ್ತಿದ್ದಾರೋ!
ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ರಸ್ತೆ ಶಿಷ್ಟಾಚಾರ, ಸುರಕ್ಷತೆ ಮತ್ತು ಅಂತಹ ಘರ್ಷಣೆಗಳನ್ನು ತಡೆಗಟ್ಟುವಲ್ಲಿ ಕಾನೂನು ಜಾರಿಯ ಪಾತ್ರದ ಬಗ್ಗೆ ಜನರು ಚರ್ಚೆ ಮಾಡಿದ್ದಾರೆ. ದೆಹಲಿಯಂತಹ ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ರಸ್ತೆ ಮೂಲಸೌಕರ್ಯಗಳಲ್ಲಿ ಸಮಸ್ಯೆ ಎದುರಿಸುತ್ತಿರುವುದನ್ನು ಕಂಡು ಆಶ್ವರ್ಯವಾಗಿದೆ. ಕಿಕ್ಕಿರಿದ ರಸ್ತೆಗಳಲ್ಲಿ ಸಂಚರಿಸುವಾಗ ಸುರಕ್ಷತೆ ಮತ್ತು ಪರಸ್ಪರ ಗೌರವಕ್ಕೆ ಆದ್ಯತೆ ನೀಡುವಂತೆ ಚಾಲಕರಿಗೆ ಮನದಟ್ಟು ಮಾಡಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ರಸ್ತೆ ಸುರಕ್ಷತೆ ಮತ್ತು ಜವಾಬ್ದಾರಿಯುತ ಚಾಲನೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯಬೇಕಿದೆ ಎಂದು ಹೇಳಲಾಗಿದೆ.