ಕಾಮುಕರ ಅಟ್ಟಹಾಸ ಉತ್ತರಪ್ರದೇಶದಲ್ಲಿ ಮಿತಿ ಮೀರುತ್ತಿದೆ. ತಮ್ಮ ಕಾಮದಾಟಕ್ಕೆ ಅಪ್ರಾಪ್ತ ಬಾಲಕಿಯರನ್ನು ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಕಾಮದಾಹವನ್ನು ತೀರಿಸಿಕೊಳ್ಳಲು ಮೂಕ ಪ್ರಾಣಿಗಳ ಮೇಲೂ ಕೂಡ ದೌರ್ಜನ್ಯ ಎಸಗುತ್ತಿದ್ದಾರೆ. ಇದೀಗ ಅಂತಹದೊಂದು ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಇದಕ್ಕೆ ಸಂಬಂಧಪಟ್ಟ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral Video)ಆಗುತ್ತಿದೆ.
ಸರ್ಕಾರಿ ನೌಕರ ಗಜೇಂದ್ರ ಸಿಂಗ್ ಎಂಬಾತ ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ಆರು ವರ್ಷದ ಮುಗ್ಧ ಬಾಲಕಿಯ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೇ ನಂತರ ಮೇಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ರಾಕ್ಷಸನಂತೆ ವರ್ತಿಸಿದ್ದಾನೆ. ಮೂಲಗಳ ಪ್ರಕಾರ, ಸಿಂಗ್ ಮೊದಲು 6 ವರ್ಷದ ಮಗುವನ್ನು ಪರಿಚಯಸ್ಥರ ಮನೆಗೆ ಕರೆದೊಯ್ದು ಅಪ್ರಾಪ್ತ ಬಾಲಕಿ ಒಬ್ಬಂಟಿಯಾಗಿದ್ದಾಗ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ. ಹಸ್ತಮೈಥುನ ಮಾಡಲು ಅವನು ಅಪ್ರಾಪ್ತ ಬಾಲಕಿಯನ್ನು ಬಳಸಿಕೊಂಡಿದ್ದಾನೆ ಎನ್ನಲಾಗಿದೆ. ಹಾಗೇ ಆತ ಮಗುವಿನ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಮೇಕೆಯ ಜೊತೆಗೂ ಕ್ರೂರವಾಗಿ ವರ್ತಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
⚠️ Disturbing Visual⚠️
— Sachin Gupta (@SachinGuptaUP) August 13, 2024
गजेंद्र सिंह की उम्र 50 पार होगी। कृषि विभाग में ADO पद पर कार्यरत है। अपने परिचित के घर गया था। बच्ची को अकेला देखकर नियत खराब हो गई। पहले बच्ची से दरिंदगी की, फिर एक बकरी से घिनौना काम किया।
📍बुलंदशहर, उत्तर प्रदेश https://t.co/9A5B9S2vZB pic.twitter.com/df2o6X82lI
ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ವಿಡಿಯೊದಲ್ಲಿ, ಆರೋಪಿ ಮೊದಲು ಮುಗ್ಧ ಹುಡುಗಿಯನ್ನು ಹಸ್ತಮೈಥುನ ಮಾಡಿಕೊಳ್ಳಲು ಬಳಸಿಕೊಳ್ಳುವುದರೊಂದಿಗೆ ಅವನು ಅವಳ ಖಾಸಗಿ ಭಾಗಗಳನ್ನು ಮುಟ್ಟಿ ಅವಳನ್ನು ಚುಂಬಿಸಿದ್ದಾನೆ. ಹುಡುಗಿ ಹೇಗೋ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಾಗ, ಆತನ ಕೆಟ್ಟ ಕಣ್ಣು ಮೇಕೆಯ ಮೇಲೆ ಬಿದ್ದಿದೆ. ನಂತರ ಆತನ ಕಾಮದಾಹಕ್ಕೆ ಮೇಕೆ ಬಲಿಪಶುವಾಗಿದೆ.
ಪೊಲೀಸರು ಈಗ ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಈ ನಡುವೆ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಜನರಲ್ಲಿ ಆಕ್ರೋಶ ವ್ಯಕ್ತವಾಗಿ ಅಂತಹ ಕ್ರೂರ ಪ್ರಾಣಿಗೆ ಘೋರ ಶಿಕ್ಷೆ ನೀಡುವಂತೆ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ಜನದಟ್ಟಣೆ ಪ್ರದೇಶದಲ್ಲೇ ಕಾರಿನಲ್ಲಿ ಇಬ್ಬರು ಮಹಿಳೆಯರ ಜೊತೆ ಯುವಕನ ಸರಸ! ವಿಡಿಯೊ ಇದೆ
ಈ ಘಟನೆ ಬಲಿಪಶುವಾದ ಬಾಲಕಿಯ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವುದು ಎಂಬ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಅಲ್ಲದೇ ಈ ಘಟನೆಯನ್ನು ಎಲ್ಲರಿಗಿಂತ ವಿಶೇಷವಾಗಿ ಹೆಣ್ಣು ಮಕ್ಕಳ ಪೋಷಕರು ಹೆಚ್ಚು ಗಮನಹರಿಸಬೇಕು. ಯಾಕೆಂದರೆ ತಮ್ಮ ಹೆಣ್ಣು ಮಕ್ಕಳಿಗೆ ಸುರಕ್ಷಿತ ಸಮಾಜವನ್ನು ಸೃಷ್ಟಿಸುವುದು ಅವರ ಕರ್ತವ್ಯವಾಗಿದೆ ಎಂಬುದನ್ನು ಈ ಘಟನೆ ತಿಳಿಸುತ್ತದೆ.