Site icon Vistara News

Viral Video: ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್‌ ಆದ 5 ವಿಡಿಯೊಗಳು ಇಲ್ಲಿವೆ; ಮಿಸ್‌ ಮಾಡದೇ ನೋಡಿ!


ತ್ತೀಚಿನ ದಿನಗಳಲ್ಲಿ ನಮಗೆ ಪ್ರಪಂಚದೆಲ್ಲೆಡೆ ನಡೆಯುವಂತಹ ಘಟನೆಗಳು ಸೋಶಿಯಲ್ ಮೀಡಿಯಾಗಳಲ್ಲಿ ತಾಣ ಸಗುತ್ತವೆ. ಇದರಲ್ಲಿ ಕೆಲವೊಂದು ಘಟನೆಗಳು ಜನರ ಗಮನ ಸೆಳೆದು ಹೆಚ್ಚು ವೈರಲ್ ಆಗುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಆಗಿ ಸಖತ್ ವೈರಲ್ (Viral Video) ಆಗಿರುವ ವಿಡಿಯೊಗಳ ಬಗ್ಗೆ ಇಲ್ಲಿದೆ ಮಾಹಿತಿ.

ವಿರಾಟ್ ಕೊಹ್ಲಿಯ ಅಲಿಬಾಗ್ ಬಂಗಲೆ :

ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮುಂಬಯಿಯ ಅಲಿಬಾಗ್‍ನಲ್ಲಿರುವ ತಮ್ಮ ಐಷಾರಾಮಿ ಬಂಗಲೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಸಖತ್ ವೈರಲ್ ಆಗಿದ್ದು, ವೈರಲ್ ವೀಡಿಯೊದಲ್ಲಿ, ಕೊಹ್ಲಿ ತಮ್ಮ ಅಭಿಮಾನಿಗಳಿಗೆ ತಮ್ಮ ಬಂಗಲೆಯನ್ನು ನಿರ್ಮಿಸುವ ತಮ್ಮ ಪ್ರಯಾಣದ ಸಣ್ಣ ತುಣುಕನ್ನು ತೋರಿಸಿದ್ದಾರೆ.

ವಿದ್ಯುತ್ ಕಂಬದ ಮೇಲೆ ಮಹೀಂದ್ರಾ ಥಾರ್ :

ಹರಿಯಾಣದ ಗುರುಗ್ರಾಮದ ಸೈಬರ್ ಸಿಟಿ ಪ್ರದೇಶದಲ್ಲಿ ವೇಗವಾಗಿ ಬರುತ್ತಿದ್ದ ಮಹೀಂದ್ರಾ ಥಾರ್‌ವೊಂದು ಹೋಂಡಾ ಅಮೇಜ್‌ಗೆ ಡಿಕ್ಕಿ ಹೊಡೆದ ನಂತರ ವಿದ್ಯುತ್ ಕಂಬದ ಮೇಲೆರಿದೆ. ಈ ಅಪಘಾತದ ಸ್ಥಳದಲ್ಲಿ ಹಲವಾರು ಜನರು ಮತ್ತು ಪೊಲೀಸರು ಜಮಾಯಿಸಿದ್ದರಿಂದ ಥಾರ್ ವಿದ್ಯುತ್ ಕಂಬದ ಮೇಲೆ ಓಲಾಡುತ್ತಿರುವುದನ್ನು ವಿಡಿಯೊ ಮಾಡಿ ಪೋಸ್ಟ್ ಮಾಡಿದ್ದರು, ಇದು ಸಖತ್ ವೈರಲ್ ಆಗಿದೆ.

ಚಟ್ನಿಯಲ್ಲಿ ಇಲಿಯ ಈಜು:

ಸುಲ್ತಾನ್ಪುರದ ಜವಾಹರಲಾಲ್ ನೆಹರು ಟೆಕ್ನಿಕಲ್ ಯುನಿವರ್ಸಿಟಿಯ ಹಾಸ್ಟೆಲ್‍ನ ಕ್ಯಾಂಟಿನ್‍ನಲ್ಲಿ ನೀಡಿದ ಚಟ್ನಿಯಲ್ಲಿ ಇಲಿಯೊಂದು ತೇಲುತ್ತಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಹಳದಿ ಚಟ್ನಿ ತುಂಬಿದ ಕಂಟೇನರ್‌ನಲ್ಲಿ ಇಲಿ ಈಜುತ್ತಿರುವುದನ್ನು ವ್ಯಕ್ತಿಯೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಅದು ಹೆಚ್ಚು ಜನರ ಗಮನ ಸೆಳೆದಿದೆ.

ಮುಂಬೈ ಸ್ಥಳೀಯ ರೈಲುಗಳ ಸಾಹಸ :

ಭಾರೀ ಮಳೆಯಿಂದಾಗಿ ಜಲಾವೃತಗೊಂಡು ರೈಲ್ವೆ ಹಳಿಗಳು ಕಾಣಿಸದೆ ಇರುವಾಗ ಅದರ ಮೂಲಕ ಹಾದುಹೋಗುವ ಸ್ಥಳೀಯ ರೈಲಿಗೆ ಮುಂದೆ ಚಲಿಸಲು ಸಮಸ್ಯೆಯಾಗಿದ್ದು, ರೈಲಿನ ಈ ಸಾಹಸವನ್ನು ಪ್ರಯಾಣಿಕರೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:ಮೈನಡುಗಿಸುವ ಆಕ್ಸಿಡೆಂಟ್ ವಿಡಿಯೊ; ಸೈಕಲ್‌ ಸವಾರನ ಜೀವ ತೆಗೆದ ಬಸ್

ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಬುಡಕಟ್ಟು ಬಾಲಕಿ :

ತಮಿಳುನಾಡಿನ ತಿರುಚಿರಾಪಳ್ಳಿಯ ಪಚಮಲೈ ಬೆಟ್ಟಗಳ ಬುಡಕಟ್ಟು ಸಮುದಾಯದ 18 ವರ್ಷದ ರೋಹಿಣಿ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ. ಆಕೆಗೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ವೀಡಿಯೊದಲ್ಲಿ, ರೋಹಿಣಿ ತನ್ನ ಹಳ್ಳಿಯ ಮನೆಯಲ್ಲಿ ಕಟ್ಟಿಗೆಯ ಒಲೆಯಲ್ಲಿ ಬೆಂಕಿ ಹಚ್ಚಿ ಅಡುಗೆ ಮಾಡುತ್ತಿರುವುದು ಕಂಡುಬಂದಿದೆ.

Exit mobile version