ಆಸ್ಪತ್ರೆಗಳೆಂದರೆ ನೋವು, ಸಾವನ್ನು ದೂರ ಮಾಡುವಂತಹ ಸ್ಥಳವೆಂದು ಜನರು ಭಾವಿಸುತ್ತಾರೆ. ಹಾಗಾಗಿ ತಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇದ್ದರೂ ಅದನ್ನು ಪರಿಹರಿಸಿಕೊಳ್ಳಲು ಜನರು ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಆಸ್ಪತ್ರೆಯೊಳಗೆ ಕಾಲಿಟ್ಟಾಗ ಆತಂಕವಿದ್ದರೂ ಕೂಡ ನಮ್ಮ ನೋವು ಇಲ್ಲಿ ದೂರವಾಗುತ್ತದೆ ಎಂಬ ನಂಬಿಕೆ ಇರುತ್ತದೆ. ಆದರೆ ಇಂತಹ ಆಸ್ಪತ್ರೆಗಳಲ್ಲಿ ಜನರನ್ನು ಸರಿಯಾಗಿ ನೋಡಿಕೊಳ್ಳದೆ ಅವರ ನೋವಿನ ಮೇಲೆ ಬರೆ ಎಳೆಯುವಂತಹ ಕೆಲಸ ಮಾಡಿದರೆ ಜನರು ಹೋಗುವುದಾರೂ ಎಲ್ಲಿಗೆ? ಅಂತಹದೊಂದು ಘಟನೆ ಇದೀಗ ಆಸ್ಪತ್ರೆಯೊಂದರಲ್ಲಿ ನಡೆದಿದೆ. ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ವೈರಲ್ (Viral Video )ಆಗಿದೆ.
ಆಸ್ಪತ್ರೆಗೆ ದಾಖಲಾದ ವೃದ್ಧ ರೋಗಿಯ ಮೇಲೆ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಹಲ್ಲೆ ಮಾಡಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಈ ದೃಶ್ಯ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ಬಗ್ಗೆ ಕಿಡಿಕಾರಿದ್ದಾರೆ.
लोग डॉक्टर को भगवान का दर्जा दिए है
— Prof. Sudhanshu Trivedi (@Sudanshutrivedi) June 24, 2024
परंतु यहाँ डॉक्टर- शैतान का रूप में है देखिए 😳😳 pic.twitter.com/y8BrEj386x
ಈ ವಿಡಿಯೊ ಜೂನ್ 24ರಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದ್ದು, ಜೂನ್ 19ರಂದು ಘಟನೆ ನಡೆದಿರುವುದಾಗಿ ಸಿಸಿಟಿವಿ ದೃಶ್ಯವಾಳಿಗಳು ತೋರಿಸುತ್ತಿದೆ. ಹಾಗಾಗಿ ಆಸ್ಪತ್ರೆಯ ಹೆಸರು, ಸ್ಥಳ ನಿಖರವಾಗಿ ತಿಳಿದುಬಂದಿಲ್ಲ. ಆದರೆ ವಿಡಿಯೊದಲ್ಲಿ ಆಸ್ಪತ್ರೆಯ ಸಮವಸ್ತ್ರ ಧರಿಸಿರುವ ವಯೋವೃದ್ಧ ರೋಗಿ ಒಬ್ಬರು ಹಾಸಿಗೆಯ ಮೇಲೆ ಮಲಗಿದ್ದರು. ಅಲ್ಲಿಗೆ ಪರದೆ ಸರಿಸುತ್ತಾ ಬಂದ ಸಿಬ್ಬಂದಿ ಪರದೆಯನ್ನು ಮುಚ್ಚಿ ಆ ವೃದ್ಧನ ಹೊಟ್ಟೆಗೆ ಮೊಣಕೈಯಿಂದ ಹೊಡೆದಿದ್ದಾರೆ. ನಂತರ ಸಿಸಿಟಿವಿ ಕ್ಯಾಮರಾವನ್ನು ನೋಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಆ ದುಷ್ಟ ಸಿಬ್ಬಂದಿಯ ಗುರುತು ಪತ್ತೆಯಾಗಿಲ್ಲ.
ಇದನ್ನೂ ಓದಿ:Viral Video: ಶಾಪಿಂಗ್ ಮಾಲ್‌ನ ಆಟಿಕೆ ರೈಲು ಪಲ್ಟಿಯಾಗಿ ಬಾಲಕ ಸಾವು
ಆದರೆ ಈ ವಿಡಿಯೊವನ್ನು ಪ್ರೊ. ಸುಧಾಂಶು ತ್ರಿವೇದಿ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, “ಜನರು ವೈದ್ಯರಿಗೆ ದೇವರ ಸ್ಥಾನ ನೀಡಿದ್ದಾರೆ. ಆದರೆ ಇಲ್ಲಿ ವೈದ್ಯರು ದೆವ್ವದ ರೂಪದಲ್ಲಿದ್ದಾರೆ ನೋಡಿ” ಎಂದು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ. ಇದು ಪೋಸ್ಟ್ ಆಗುತ್ತಿದ್ದಂತೆ ಹಲವು ಜನರು ಸಿಬ್ಬಂದಿಯ ಅಮಾನವೀಯ ಕೃತ್ಯದ ವಿರುದ್ಧ ಕಿಡಿಕಾರಿದ್ದಾರೆ. ಮತ್ತು ಇದು ವೈದ್ಯರಲ್ಲ ಆಸ್ಪತ್ರೆ ಸಿಬ್ಬಂದಿ ಇರಬಹುದು ಎಂದು ಕೆಲವರು ಊಹಿಸಿದ್ದಾರೆ. ಹಾಗೇ ಇನ್ನೊಬ್ಬರು ಎಲ್ಲಾ ವೈದ್ಯರು ದೇವರಲ್ಲ, ಅವರಲ್ಲಿ ಕೆಟ್ಟವರಿದ್ದಾರೆ ಎಂದು ತಿಳಿಸಿದ್ದಾರೆ. ಮತ್ತೊಬ್ಬರು ಈ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರನ್ನು ಕೆಲಸದಿಂದ ತೆಗೆಯಬೇಕು. ಅವರು ದೆವ್ವಗಳೆಂದು ಕರೆಸಿಕೊಳ್ಳಲು ಅರ್ಹರು ಎಂದು ಕಿಡಿಕಾರಿದ್ದಾರೆ.ಇನ್ನೂ ಕೆಲವರು ಇದು ವೈದ್ಯರಲ್ಲ, ಸರಿಯಾಗಿ ತಿಳಿಯದೆ ವೈದ್ಯರನ್ನು ನಿಂದಿಸುವುದು ತಪ್ಪಾಗುತ್ತೆ ಎಂದು ತಿಳಿಸಿದ್ದಾರೆ.