ಹುಡುಗಿಯರು ಯಾವುದೇ ಕಾರ್ಯಕ್ರಮಕ್ಕೆ ಹೋಗುವಾಗ ಬ್ಯೂಟಿ ಪಾರ್ಲರ್‌ಗೆ ಹೋಗಿ ವಿವಿಧ ರೀತಿಯ ಸ್ಟೈಲಿಶ್ ಆಗಿರುವಂತಹ ಕೇಶ ವಿನ್ಯಾಸಗಳನ್ನು ಮಾಡಿಸಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಹಲವು ರೀತಿಯ ಆಕರ್ಷಕವಾದ ಕೇಶ ವಿನ್ಯಾಸಗಳನ್ನು ನಾವು ಕಾಣಬಹುದು. ಆದರೆ ಇರಾನಿನ ಕೇಶ ವಿನ್ಯಾಸಕಿಯೊಬ್ಬರು ತನ್ನ ವಿಭಿನ್ನವಾದ ಕೇಶ ವಿನ್ಯಾಸವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಅದು ವೈರಲ್ (Viral Video )ಆಗಿದೆ.
ಇತ್ತೀಚೆಗೆ, ಇರಾನಿನ ಕೇಶ ವಿನ್ಯಾಸಕಿ ಸೈದೇಹ್ ಅರಿಯಾಯಿ ತಮ್ಮ ಮಾಡೆಲ್ ಸಬುರ್ ನಗರ್ ಅವರ ಕೂದಲನ್ನು ‘ಟೀಪಾಟ್’ ಆಕಾರದಲ್ಲಿ ವಿನ್ಯಾಸಗೊಳಿಸಿದ್ದು, ಈ ವೀಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ‘ಟೀಪಾಟ್’ ಆಕಾರದಲ್ಲಿ ವಿನ್ಯಾಸವನ್ನು ಯಾವ ರೀತಿಯಲ್ಲಿ ಮಾಡಿದರು ಎಂಬುದನ್ನು ಹಂತ ಹಂತವಾಗಿ ತೋರಿಸಿದ್ದಾರೆ.
ವಿಡಿಯೊದಲ್ಲಿ ಕೇಶ ವಿನ್ಯಾಸಕಿ ಮಾಡೆಲ್ ಕೂದಲನ್ನು ಎಲ್ಲಾ ಒಟ್ಟಿಗೆ ಸೇರಿಸಿ ಎತ್ತರದಲ್ಲಿ ಹೇರ್ ಬ್ಯಾಂಡ್ ಹಾಕಿ ಕಟ್ಟಿದ್ದಾರೆ. ನಂತರ ಟೀ ಪಾಟ್ ಆಕಾರದಲ್ಲಿ ತಂತಿಗಳನ್ನು ಸಿದ್ಧಪಡಿಸಿ ಅದನ್ನು ಆಕೆಯ ನೆತ್ತಿಯ ಮೇಲೆ ಗಮ್ ಹಾಕಿ ಅಂಟಿಸಿದ್ದಾರೆ. ಇಲ್ಲಿ ಅವರು ಬ್ಯಾಕ್ಕೋಂಬಿಂಗ್ ತಂತ್ರವನ್ನು ಬಳಸುವುದನ್ನು ಕಾಣಬಹುದು. ನಂತರ, ಅವರು ಹೇರ್ ಸ್ಪ್ರೇ ಸಹಾಯದಿಂದ ಟೀಪಾಟ್ ಗೆ ಮೆಟಾಲಿಕ್ ಫ್ರೇಮ್ ಸುತ್ತಿದ್ದಾರೆ, ನಂತರ ಕೂದಲಿನಿಂದ ಜಡೆ ಹಾಕಿ ಅದನ್ನು ಟೀ ಪಾಟ್ ಸುತ್ತಲೂ ಸುತ್ತಿದ್ದಾರೆ. ಆದರೆ ಇದರಲ್ಲಿ ಆಶ್ಚರ್ಯವೆನೆಂದರೆ ಹೇರ್ ಸ್ಟೈಲ್ ಟೀಪಾಟ್ ನಲ್ಲಿ ನೀರನ್ನು ತುಂಬಿಸಿ ಅದರಿಂದ ಒಂದು ಕಪ್ ನೀರನ್ನು ತೆಗೆದು ಕುಡಿದಿದ್ದಾರೆ.
ಈ ಕೇಶ ವಿನ್ಯಾಸ ಮಾಡಲು ಅವರಿಗೆ ಹಲವು ಗಂಟೆಗಳ ಸಮಯ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ವಿಡಿಯೊಗೆ ಈಗಾಗಲೇ 4 ಮಿಲಿಯನ್ ವೀವ್ಸ್ ಬಂದಿದೆ. ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ಕೆಲವರು ಇದು ಟೈಮ್ ವೇಸ್ಟ್ ಎಂದು ಹೇಳಿದರೆ ಕೆಲವರು ಅವರ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಕಳ್ಳರು ಬ್ಯಾಗ್ ಕಸಿದು ಓಡುತ್ತಾರೆ! ಪೋಲಿಸ್ರು ಏನ್ ಮಾಡ್ತಿದ್ದಾರೋ!
ಈ ವಿಡಿಯೊದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕೇಶ ವಿನ್ಯಾಸಕಿ ಸೈದೇಹ್ ಅರಿಯಾಯಿ ತನಗೆ ಏನಾದರೂ ನೈಸರ್ಗಿಕವಾದುದನ್ನು ಮಾಡಬೇಕೆನಿಸುತ್ತು. ಹಾಗಾಗಿ ಟೀ ಪಾಟ್ ಮಾಡುವ ನಿರ್ಧಾರ ಮಾಡಿದೆ. ಇದಕ್ಕೆ ತನ್ನ ಮಾಡೆಲ್ ಸಬುರ್ ನಗರ್ ಸಹಾಯ ಮಾಡಿದರು. ಅವರಿಬ್ಬರ ಎರಡು ದಿನದ ಪ್ರಯತ್ನದಿಂದ ಉತ್ತಮ ಫಲಿತಾಂಶ ಸಿಕ್ಕಿದೆ ಎಂದು ಶೀರ್ಷಿಕೆ ಬರೆದಿದ್ದಾರೆ. ಸೈದೇಹ್ ಅರಿಯಾಯಿ ಇನ್‌ಸ್ಟಾಗ್ರಾಂನಲ್ಲಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಮತ್ತು ಇಂತಹ ಕೇಶವಿನ್ಯಾಸವನ್ನು ಮಾಡುವಲ್ಲಿ ಹೆಸರುವಾಸಿಯಾಗಿದ್ದಾರೆ ಎನ್ನಲಾಗಿದೆ.