Site icon Vistara News

Viral Video: ಮೃಗಾಲಯದ ಸಿಬ್ಬಂದಿ ಮೇಲೆ ಸಿಂಹದ ದಾಳಿ; ತಡೆದು ನಿಲ್ಲಿಸಿದ ಸಿಂಹಿಣಿ!

Viral Video


ಬೆಂಗಳೂರು: ನೀವು ಸಾಮಾನ್ಯವಾಗಿ ಯಾರಾದರೂ ದಂಪತಿಯನ್ನು ನೋಡಿದಾಗ ಅಲ್ಲಿ ಪತಿ ಕೋಪಗೊಂಡು ಆಕ್ರಮಣಕಾರಿಯಾಗಿ ವರ್ತಿಸಿದರೆ ಆಗ ಆತನ ಪತ್ನಿ ಆತನನ್ನು ತಡೆದು ಸಮಾಧಾನಪಡಿಸುತ್ತಾಳೆ! ಈ ಗುಣ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಕಾಣಸಿಗುತ್ತದೆ. ಇದಕ್ಕೆ ವಿದೇಶದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ನೋಡುಗರಲ್ಲಿ ಆಶ್ವರ್ಯವನ್ನುಂಟುಮಾಡಿದೆ.

ಸಿಂಹವು ಮೃಗಾಲಯದ ಸಿಬ್ಬಂದಿಯ ಮೇಲೆ ದಾಳಿ ಮಾಡಿದಾಗ ಒಂದು ಸಿಂಹಿಣಿಯು ಮಧ್ಯ ಪ್ರವೇಶ ಮಾಡಿ ಸಿಂಹವನ್ನು ತಡೆದಿದೆ. ಇತ್ತೀಚೆಗೆ ಸಿಂಹ – ಸಿಂಹಿಣಿಯ ಈ ವಿಡಿಯೊವನ್ನು “ನೇಚರ್ ಈಸ್ ಅಮೇಜಿಂಗ್” ಎಂಬ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೊ ವೈರಲ್ ಆಗಿದೆ. ಈ ವಿಡಿಯೊದಲ್ಲಿ, ಸಿಂಹದೊಂದಿಗೆ ಆಟವಾಡುತ್ತಿದ್ದಾಗ ಮೃಗಾಲಯ ಸಿಬ್ಬಂದಿಯೊಬ್ಬರ ಮೇಲೆ ಸಿಂಹವು ಆಕ್ರಮಣಕಾರಿಯಾಗಿ ದಾಳಿ ಮಾಡಲು ಮುಂದಾಗಿದೆ. ಇದರಿಂದ ಆತ ಅಪಾಯಕಾರಿ ಪರಿಸ್ಥಿತಿಯಲ್ಲಿರುವುದನ್ನು ಕಂಡು ಮತ್ತೊಬ್ಬ ಸಿಬ್ಬಂದಿ ಸಿಂಹವನ್ನು ತಡೆಯಲು ಮುಂದಾಗುತ್ತಾನೆ. ಆದರೆ ಅವನಿಗೆ ಅದನ್ನು ತಡೆಯಲು ಸಾಧ್ಯವಾಗಲಿಲ್ಲ, ಆಗ ಸ್ವಲ್ಪ ದೂರದಲ್ಲಿದ್ದ ಸಿಂಹಿಣಿಯು ನಿಂತು ತನ್ನ ಸಂಗಾತಿಯನ್ನು ನೋಡುತ್ತಿರುತ್ತದೆ. ನಂತರ ಘಟನೆ ಕೈಮೀರಿ ಹೋಗಬಹುದು ಎಂದು ತೋರಿದಾಗ, ಸಿಂಹಿಣಿ ಈ ತುರ್ತುಸ್ಥಿತಿಯನ್ನು ನಿಯಂತ್ರಿಸಲು ಹೋರಾಟಕ್ಕೆ ಇಳಿಯುತ್ತದೆ. ಅದು ಆಕ್ರಮಣಕಾರಿ ಸಿಂಹದ ಬಳಿಗೆ ಬಂದು ಅದನ್ನು ತಡೆಯುತ್ತದೆ. ಇದರಿಂದ ಮೃಗಾಲಯದಲ್ಲಿ ನಡೆಯಲಿದ್ದ ಅಪಾಯಕಾರಿ ಘಟನೆಯನ್ನು ಸಿಂಹಿಣಿ ತಡೆದು ತನ್ನ ಪಾಲಕನನ್ನು ರಕ್ಷಿಸಿದೆ.

ಈ ವಿಡಿಯೊ ಸಿಂಹಿಣಿಯ ಅದ್ಭುತ ಪ್ರವೃತ್ತಿಯನ್ನು ತೋರಿಸುತ್ತದೆ. ಸಿಂಹಿಣಿಯ ಈ ಪ್ರವೃತ್ತಿ ಅನೇಕರಲ್ಲಿ ಆಶ್ಚರ್ಯವನ್ನುಂಟುಮಾಡಿದೆ. ಅಲ್ಲದೇ ಇದು ಅಪಾಯಕಾರಿ ಪರಿಸ್ಥಿತಿಯಲ್ಲೂ ತನ್ನ ಪಾಲಕನನ್ನು ಮತ್ತೊಂದು ಪ್ರಾಣಿಯಿಂದ ರಕ್ಷಿಸಿದ್ದನ್ನು ಕಂಡು ಪ್ರಕೃತಿ ಪ್ರಿಯರು ಮತ್ತು ಪ್ರಾಣಿ ಪ್ರೇಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೂ ಈ ಸಿಂಹಿಣಿಯ ವೀರೋಚಿತ ಕಾರ್ಯವನ್ನು ಹೊಗಳಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಿಂಹಿಣಿ ಪ್ರದರ್ಶಿಸಿದ ಧೈರ್ಯ ಮತ್ತು ಈ ಘಟನೆಯ ಬಗ್ಗೆ ವೀಕ್ಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 10,000 ಶೂ, ಚಪ್ಪಲಿ ಕದ್ದ ಖತರ್‌ನಾಕ್‌ ಕಳ್ಳರ ಬಂಧನ!

ಈ ಘಟನೆಯು ಮೃಗಾಲಯದ ಸುರಕ್ಷತಾ ವ್ಯವಸ್ಥೆಗಳು ಮತ್ತು ಇಂತಹ ಕ್ರೂರ ಪ್ರಾಣಿಗಳನ್ನು ನಿರ್ವಹಿಸುವಲ್ಲಿ ಮೃಗಾಲಯಪಾಲಕರಿಗೆ ನೀಡಲಾಗುವ ತರಬೇತಿಯ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ.

Exit mobile version