ದುಬೈ: ಹಣ ಜೀವನದಲ್ಲಿ ತುಂಬಾ ಮೌಲ್ಯಯುತವಾದುದು. ಹಾಗಾಗಿ ಹಣವನ್ನು ಖರ್ಚು ಮಾಡಲು ಜನರು ಮೀನಾಮೇಷ ಎಣಿಸುತ್ತಾರೆ. ಆದರೆ ಕೆಲವು ಹುಡುಗರು ಮಾತ್ರ ತಮ್ಮ ಹುಡುಗಿಗಾಗಿ ಏನು ಮಾಡಲು ಕೂಡ ಸಿದ್ಧರಿರುತ್ತಾರೆ. ಇದಕ್ಕೆ ನಿರ್ದಶನ ಎಂಬಂತೆ ಇಲ್ಲೊಂದು ಘಟನೆ ನಡೆದಿದ್ದು, ತನ್ನ ಪ್ರೇಯಸಿಗಾಗಿ ಪ್ರಿಯಕರನೊಬ್ಬ ಹಣದ ಹೊಳೆಯನ್ನೇ ಹರಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.
ವಿಡಿಯೊದಲ್ಲಿ ಶ್ರೀಮಂತ ಉದ್ಯಮಿಯೊಬ್ಬ ಪ್ರೇಯಸಿಯನ್ನು ಹೆಲಿಕಾಪ್ಟರ್ ಮೂಲಕ ಕರೆಸಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಆಕೆ ಹೆಲಿಕಾಪ್ಟರ್‌ನಿಂದ ಇಳಿಯಲು ಕಾರ್ಪೆಟ್ ಬದಲು ಹಣದ ನೋಟಿನ ಕಂತಿನ ಮೆಟ್ಟಿಲು ಮಾಡಿದ್ದಾನೆ. ಆ ಯುವತಿ ಹಣದ ಕಂತಿನ ಮೇಲೆ ರಾಣಿಯಂತೆ ಅವನ ಕೈ ಹಿಡಿದುಕೊಂಡು ನಡೆದುಬರುತ್ತಿದ್ದಾಳೆ. ಕಂತೆ ಕಂತೆ ಹಣ ನೋಡಿದರೆ ಯಾರಿಗೆ ತಾನೆ ದಂಗಾವುದಿಲ್ಲ ಹೇಳಿ. ಹಾಗಾಗಿ ಜನರು ಇದನ್ನು ಕಂಡು ಜನರು ಹೌಹಾರಿದ್ದಾರೆ.
ಆ ಐಷರಾಮಿ ಉದ್ಯಮಿ ದುಬೈನ ಸರ್ಗಿ ಕೊಸೆಂಕೋ ಎಂಬುದಾಗಿ ತಿಳಿದುಬಂದಿದೆ. ಈತ ತನ್ನ ಇನ್ ಸ್ಟಾಗ್ರಾಂನಲ್ಲಿ ಇದನ್ನು ಪೋಸ್ಟ್ ಮಾಡಿದ್ದಾನೆ. ಜನರು ಉದ್ಯಮಿಯ ಐಷಾರಾಮಿ ಜೀವನ ಕಂಡು ದಂಗಾಗಿದ್ದಾರೆ. ವರದಿ ಪ್ರಕಾರ, ಯುವತಿ ಹಾಗೂ ಸರ್ಗಿ ಕೊಸೆಂಕೋ ಒಬ್ಬರನೊಬ್ಬರು ಪ್ರೀತಿಸುತ್ತಿದ್ದು, ಯುವತಿಗೆ ತನ್ನ ಪ್ರಿಯತಮನನ್ನು ನೋಡುವ ಆಸೆಯಾಗಿ ಆತನಿಗೆ ಕಾಲ್ ಮಾಡಿ ವಿಚಾರ ತಿಳಿಸಿದ್ದಾಳೆ. ಆಗ ಆತ ಆಕೆಯನ್ನು ಕರೆದುಕೊಂಡು ಬರಲು ತನ್ನ ಹೆಲಿಕಾಪ್ಟರ್ ಕಳುಹಿಸಿದ್ದಲ್ಲದೇ ಮನೆಗೆ ಬಂದ ಆಕೆಗೆ ಹೆಲಿಕಾಪ್ಟರ್ ನಿಂದ ಇಳಿಯಲು ನೋಟಿನ ಕಂತಿನ ಮೆಟ್ಟಿಲು ಮಾಡಿದ್ದಾನೆ. ಅಷ್ಟೇ ಅಲ್ಲದೇ ಈ ಹಣದ ಮೆಟ್ಟಿಲು ಆತನ ಮನೆಯ ತನಕ ಹಾಕಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಸಿಮೆಂಟ್, ಕಲ್ಲಿನಿಂದ ವಾಷಿಂಗ್ ಮೆಷಿನ್ ತಯಾರಿಸಿದ ಮಹಿಳೆ; ಹೇಗೆ ಕೆಲಸ ಮಾಡುತ್ತೆ ನೋಡಿ!
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಜನರು ಆಶ್ಚರ್ಯಚಕಿತರಾಗಿದ್ದು, ನಮಗೆ ಆ ಕಂತೆ ಕಂತೆ ನೋಟು ಬೇಡ. ಅದರ ಅಕ್ಕಪಕ್ಕ ಬಿದ್ದಿರುವ ನೋಟುಗಳು ಸಿಕ್ಕರೆ ಸಾಕು, ನೆಮ್ಮದಿಯ ಜೀವನ ಕಟ್ಟಿಕೊಳ್ಳುವುದಾಗಿ ಆಸೆ ವ್ಯಕ್ತಪಡಿಸಿದ್ದಾರೆ.