ಹರಿದ್ವಾರ: ತಾಯಿಯನ್ನು ದೇವರು ಎಂದು ಕರೆಯುತ್ತಾರೆ. ಯಾಕೆಂದರೆ ಆಕೆಯಿಂದ ಸಿಗುವ ಪ್ರೀತಿ, ವಾತ್ಸಲ್ಯ ಮತ್ತೆ ಜಗತ್ತಿನಲ್ಲಿ ಬೇರೆ ಯಾರಿಂದಲೂ ಸಿಗಲು ಸಾಧ್ಯವಿಲ್ಲ. ಹಾಗಾಗಿ ಮಕ್ಕಳು ತಾಯಿ ಎಷ್ಟೇ ಹೊಡೆದರೂ, ಬೈದರೂ ಅವಳ ಹಿಂದೆಯೇ ಓಡುತ್ತಾರೆ. ಆದರೆ ಇಲ್ಲೊಬ್ಬ ತಾಯಿ ದೇವರಲ್ಲ ದೆವ್ವದಂತೆ ವರ್ತಿಸಿದ್ದಾಳೆ. ತನ್ನ ಮಗನನ್ನು ಹೊಡಿದು ಬಡಿದು ಚಿತ್ರಹಿಂಸೆ ನೀಡುತ್ತಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ತಾಯಿಗೆ ತನ್ನ ಮಕ್ಕಳು ತಪ್ಪು ಮಾಡಿದರೆ ದಂಡಿಸುವ ಹಕ್ಕಿದೆ ನಿಜ. ಅಂದಮಾತ್ರಕ್ಕೆ ಅವರಿಗೆ ದಂಡಿಸುವ ನೆಪದಲ್ಲಿ ಚಿತ್ರಹಿಂಸೆ ನೀಡಬಾರದು. ಈ ವಿಡಿಯೊ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿ ಪ್ರದೇಶದ ಜಬ್ರೆಡಾ ಗ್ರಾಮದಲ್ಲಿ, ಮಹಿಳೆಯೊಬ್ಬಳು ತನ್ನ 8 ವರ್ಷದ ಮಗನ ಮೇಲೆ ಕುಳಿತು, ನಿರ್ದಯವಾಗಿ ಥಳಿಸಿ, ಕಚ್ಚಿದ ಆಘಾತಕಾರಿ ಘಟನೆ ನಡೆದಿದೆ. ಆಕೆ ತನ್ನ ಮಗನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಈ ದುಷ್ಕೃತ್ಯವನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.
क्या दुनिया में माँ ऐसी भी होती हैं?
— MANOJ SHARMA LUCKNOW UP🇮🇳🇮🇳🇮🇳 (@ManojSh28986262) July 17, 2024
रूह कंपा देने वाली वीडियो 😡😡
90 KG की महिला अपने छोटे 25 KG बेटे के ऊपर बैठकर उसे मुक्कों, दांतों सर पटकना गाला दबाना !!
एक मासूम छोटा बच्चा वहीं पर खड़ा देख रहा!
अगर ये सच है तो इसको जल्द गिरफ्तार करे !! #viralvideo #up #uttrakhand pic.twitter.com/NCZzsihfCw
ಈ ಆತಂಕಕಾರಿ ವೀಡಿಯೊ ತುಣುಕಿನಲ್ಲಿ ಮಹಿಳೆ ತನ್ನ ಮಗನ ಮೇಲೆ ಕುಳಿತು, ಪದೇ ಪದೇ ಆತನ ಬಾಯಿಗೆ, ಕೆನ್ನೆಗೆ ಹೊಡೆಯುವುದು, ಕಚ್ಚುವುದು ಮತ್ತು ಉಸಿರುಗಟ್ಟಿಸುವುದನ್ನು ತೋರಿಸುತ್ತದೆ. ಈ ಸಮಯದಲ್ಲಿ ಆಕೆ ಕೋಪದಿಂದ ತನ್ನ ಮಗನ ತಲೆಯನ್ನು ನೆಲಕ್ಕೆ ಅಪ್ಪಳಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೊ ನೋಡಿದವರಿಗೆ ಕರುಳು ಚುರುಕ್ ಅನ್ನುವುದಂತು ಸಹಜ. ಮಹಿಳೆಯ ಈ ಕೃತ್ಯ ವೈರಲ್ ಆದ ಹಿನ್ನಲೆಯಲ್ಲಿ ಮಾಹಿತಿ ಪಡೆದ ಅಧಿಕಾರಿಗಳು ಮಧ್ಯಪ್ರವೇಶಿಸಿ ಮಹಿಳೆಯ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮತ್ತು ತನಿಖೆ ಮುಂದುವರೆದಿರುವುದರಿಂದ ಮಹಿಳೆ ಈಗ ಪೊಲೀಸ್ ವಶದಲ್ಲಿದ್ದಾಳೆ ಎನ್ನಲಾಗಿದೆ.
ತಾಯಿ ತನ್ನ ಮಕ್ಕಳ ಮೇಲೆ ಹಲ್ಲೆ ಮಾಡುವಂತಹ ಘಟನೆ ಇದೆ ಮೊದಲಲ್ಲಾ. ಇದಕ್ಕೂ ಮೊದಲು ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರಿನ ಗಿರಿನಗರದ ವೀರಭದ್ರೇಶ್ವರ ನಗರದಲ್ಲಿ ಪತಿಯಿಂದ ದೂರವಿದ್ದು ತನ್ನ ಗೆಳೆಯನ ಜೊತೆ ಜೀವನ ನಡೆಸುತ್ತಿದ್ದ ಮಹಿಳೆಯೊಬ್ಬಳು ತನ್ನ 3 ವರ್ಷ ವಯಸ್ಸಿನ ಗಂಡು ಮಗುವಿಗೆ ನಿತ್ಯ ದೈಹಿಕ ಕಿರುಕುಳ ನೀಡುತ್ತಿದ್ದಳು. ಆಕೆಯ ಕುರಿತು ಅನುಮಾನಗೊಂಡ ಸ್ಥಳೀಯರು ಮನೆ ಬಳಿ ಹೋಗಿ ನೋಡಿದಾಗ ಮಗುವಿನ ಅಸಹಾಯಕ ಸ್ಥಿತಿ ಕಂಡುಬಂದಿದೆ.
ಇದನ್ನೂ ಓದಿ: ಇನ್‌ಸ್ಟಾಗ್ರಾಂನಲ್ಲಿಯೇ ಗಂಡನಿಗೆ ಡಿವೋರ್ಸ್ ನೀಡಿದ ದುಬೈ ರಾಜಕುಮಾರಿ! ಏನು ಬರೆದಿದ್ದಾಳೆ ನೋಡಿ!
ತಾಯಿ ಹಾಗೂ ಆಕೆಯ ಸ್ನೇಹಿತ ನೀಡುವ ಕಿರುಕುಳವನ್ನು ಅಕ್ಕಪಕ್ಕದವರ ಬಳಿ ಆ ಮಗು ಹೇಳಿಕೊಂಡಿದೆ. ಆಗ ಸಿಟ್ಟಿಗೆದ್ದ ಜನರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿ ಮಹಿಳೆಯನ್ನು ಠಾಣೆಗೆ ಕರೆಸಿ ಪೊಲೀಸರು ಬುದ್ಧಿವಾದ ಹೇಳಿದ್ದರು. ಮಗುವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿರುವ ಮಕ್ಕಳ ಆಯೋಗ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.